Advertisements

ಮೇಘನಾ ಜೀವನದ ಬಗ್ಗೆ ಧೃವಸರ್ಜಾ ದೊಡ್ಡ ನಿರ್ಧಾರ ! ರಾಯನ್ ಬಗ್ಗೆ ಹೇಳಿದ್ದಕ್ಕೆ ಕಣ್ಣೀರಿಟ್ಟ ಮೇಘನಾ‌!

Cinema

ನಮಸ್ಕಾರ ವೀಕ್ಷಕರೇ ಸ್ಯಾಂಡಲ್ ವುಡ್ ನ ಆಕ್ಷನ್ ಪ್ರಿನ್ಸ್ ಎಂದೆ ಖ್ಯಾತರಾಗಿರುವ ನಟ ಧ್ರುವ ಸರ್ಜಾ
,ಧ್ರುವ ನಟಿಸಿರುವುದು ನಾಲ್ಕೇ ಸಿನಿಮಾವಾದರೂ ಕರ್ನಾಟಕದಲ್ಲಿ ಬಹುದೊಡ್ಡ ಅಭಿಮಾನಿ ಬಳಗ ಗಳಿಸಿದ್ದಾರೆ ಅಣ್ಣ ಚಿರಂಜೀವಿ ಸರ್ಜಾ ನಿಧನರಾಗಿ ಎರಡು ವರ್ಷವಾದರೂ ಅಣ್ಣ ಇಲ್ಲದ ನೋವು ಇನ್ನು ಧ್ರುವ ಸರ್ಜಾ ಅವರಿಗೆ ಕಡಿಮೆಯಾಗಿಲ್ಲ ಧ್ರುವ ಸರ್ಜಾ ಮಾತ್ರವಲ್ಲದೆ ಇಡಿ ಕುಟುಂಬ ಚಿರು ಇಲ್ಲದ ನೋವನ್ನು ಮರೆಯಲು ಇನ್ನೂ ಸಾಧ್ಯವಾಗಿಲ್ಲ
ಈಗಲೂ ಸಹ ಮನಸ್ಸಿಗೆ ಅನಿಸಿದಾಗಲೆಲ್ಲ ಧ್ರುವ ಸರ್ಜಾ ಅಣ್ಣನ ಸ’ಮಾ’ಧಿ ಬಳಿ ಹೋಗಿ ಸಾಕಷ್ಟು ಸಮಯ ಕಳೆದು ಬರುತ್ತಾರೆ
ಧ್ರುವ ಅವರ ತಾಯಿ ಸಹ ಹೀಗೆಯೇ ಮಾಡುತ್ತಾರೆ ಅಣ್ಣನ ನೆನಪಿನಲ್ಲಿರುವ ಧ್ರುವ ಸರ್ಜಾ ಅವರು ಅಣ್ಣನ ಮಗ ರಾಯನ್ ರಾಜ್ ಸರ್ಜಾ ಹಾಗೂ ಅತ್ತಿಗೆ ಮೇಘನಾ ರಾಜ್ ಸರ್ಜಾ ಅವರಿಗೆ ಬೆನ್ನೆಲುಬಾಗಿ ನಿಂತಿದ್ದಾರೆ..

Advertisements
Advertisements

ಇನ್ನು ಧ್ರುವ ಸರ್ಜಾ ಅವರು ರಾಯನ್ ಬಗ್ಗೆ ಮಾತನಾಡಿದ್ದಾರೆ ಒಂದು ಮಗುವಿಗೆ ಜೀವನದಲ್ಲಿ ತಂದೆ-ತಾಯಿ ಅಣ್ಣ-ತಮ್ಮ ಅಕ್ಕ-ತಂಗಿ ಎಲ್ಲರ ಪ್ರೀತಿನೂ ಗೊತ್ತಾಗಬೇಕು ಅಜ್ಜ-ಅಜ್ಜಿ ಎಲ್ಲವೂ ಗೊತ್ತಾಗಬೇಕು.. ಎಲ್ಲವನ್ನು ಹೇಳಿಕೊಟ್ಟು ಬರಲ್ಲ ರಾಯನ್ ರಾಜ್ ಈಗ ಬಾಯಲ್ಲಿ ಬೆರಳಿಟ್ಟು ಕೊಳ್ಳುತ್ತಾನೆ ನಮ್ಮ ಅಣ್ಣ ಕೂಡ ಚಿಕ್ಕವಯಸ್ಸಿನಲ್ಲಿ ಹಾಗೆಯೇ ಮಾಡುತ್ತಿದ್ದ ಅದನ್ನೆಲ್ಲ ನೋಡಿದರೆ ಇದನ್ನು ಯಾರು ಹೇಳು ಕೊಟ್ಟಿಲ್ಲವಲ್ಲ ಹೇಗೆ ಇದೆಲ್ಲ ಅಂತ ಅನಿಸುತ್ತೆ ರಾಯನ್ ರಾಜ್ ಗೆ ರೇಗಿಸುತ್ತಾ ಇರುತ್ತೀನಿ ಹುಡುಗರು ಎತ್ತು ಕೊಂಡರೆ ಅಳುವುದಕ್ಕೆ ಶುರು ಮಾಡುತ್ತಾನೆ

ಹುಡುಗಿಯರು ಎತ್ತು ಕೊಂಡರೆ ಸೈಲೆಂಟಾಗಿ ಇರುತ್ತಾನೆ ಅಂತ ರೇಗಿಸುತ್ತಾ ಇರುತ್ತೀನಿ ನಮ್ಮ ಅಣ್ಣ ಇಲ್ಲದಿರಬಹುದು ಆದರೆ ನಮ್ಮ ಅತ್ತಿಗೆ ರಾಯನ್ ಜೊತೆ ನಾನು ಕೊನೆತನಕ ಜೊತೆಯಲ್ಲಿ ಇರುತ್ತೇನೆ ಅವನ ವಿದ್ಯಾಭ್ಯಾಸ ನಾನು ನೋಡಿಕೊಳ್ಳುತ್ತೇನೆ ಎನ್ನುವ ಮಾತು ಹೇಳಿದ್ದಾರೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಪ್ರೀತಿಯ ಮೈದುನ ಹೇಳಿದ ಮಾತು ಕೇಳಿ ಮೇಘನಾ ರಾಜ್ ಸರ್ಜಾ ಕೂಡ ಕಣ್ಣೀರು ಹಾಕಿದ್ದಾರೆ.. ಧ್ರುವ ಸರ್ಜಾ ಅವರ ಮಾತಿನ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..