Advertisements

ದುಬೈ ಹುಡುಗ ಅಂದ್ರೆ ಸುಮ್ನೇನಾ ಹೆಣ್ಣು ಕೊಡಲೇಬೇಕು ಅಲ್ವಾ? ಚೆಂದುಳ್ಳಿ ಚೆಲುವೆ ಹುಡುಗಿ, ಕೇಳಿದಷ್ಟು ಚಿನ್ನ ಹಣ ಕೊಟ್ಟು ಮದುವೆ ಮಾಡಿಕೊಟ್ಟರು! ಹುಡುಗಿಯನ್ನು ದುಬೈಗೆ ಕರೆದೊಯ್ದ ಈತ ನಂತರ ಮಾಡಿದ್ದೇನು ನೋಡಿ ಸ್ವಾಮಿ!!

Kannada News

ಹೆಣ್ಣು ಹೆತ್ತ ಪೋಷಕರಿಗೆ ತನ್ನ‌ ಮಗಳ ಮದುವೆ ಬಗ್ಗೆ ಕೊಂಚ ಹೆಚ್ಚಾಗಿಯೇ ಯೋಚನೆ ಇರುತ್ತದೆ. ತಾವು‌ ಮುದ್ದಾಗಿ ಸಾಕಿದ ಮಗಳು ಒಳ್ಳೆಯ ಮನೆಗೆ ಹೋಗಬೇಕು, ಆಕೆಯನ್ನು ಪ್ರೀತಿಯಿಂದ ನೋಡುವ ಗಂಡ ಸಿಗಬೇಕು ಎಂದು ಬಯಸುತ್ತಾರೆ. ಅದರಲ್ಲೂ ವಿದೇಶದಲ್ಲಿ ಇರುವ ಅಳಿಯ ಸಿಕ್ಕಿದ್ರೆ ಫುಲ್ ಖುಷಿಯಿಂದ ಮದುವೆ ಮಾಡಿ ಬಿಡುತ್ತಾರೆ. ಇದೇ ರೀತಿ ಕೇರಳದ ಪರಕ್ಕಲ್ ಅನ್ನುವವರು ತನ್ನ ಮುದ್ದಾದ ಮಗಳು ಆನ್ಲಿಯಾ ಜಸ್ಟೀನ್ ಳನ್ನು ದುಬೈನಲ್ಲಿ ನೆಲೆಸಿರುವ ವಿವಿ ಜಸ್ಟೀನ್ ಅನ್ನುವಾತನಿಗೆ ಮದುವೆ ಮಾಡಿಸಿಕೊಡುತ್ತಾರೆ. ಆನ್ಲಿಯಾ ಮದುವೆ ಸಮಯದಲ್ಲಿ ಬಿಎಸ್ಸಿ ಮುಗಿಸಿದ್ದಳು, ಆಕೆಗೆ ಎಂ ಎಸ್ಸಿ ಮಾಡಿ ನರ್ಸಿಂಗ್ ಮಾಡುವ ಆಸೆ ಇತ್ತು.

ಆದರೆ ತಂದೆಯ ಆಸೆಯಂತೆ ಮದುವೆಗೆ ಒಪ್ಪಿ ಗಂಡನ‌ ಜೊತೆ ವಿದೇಶಕ್ಕೆ ಹಾರಿ ಹೋದಳು. ಆದರೆ ಅಲ್ಲಿಂದ ಅವಳ‌ ಜೀವನ ಸುಖವಾಗಿರುವ ಬದಲು ನರ-ಕವಾಗಲು ಆರಂಭವಾಗಿತ್ತು. ಆಕೆಯ ಗಂಡ ಧನದಾ-ಹಿ ಯಾಗಿದ್ದ. ಪದೇ ಪದೇ ಮಾವನಿಗೆ ಕರೆ ಮಾಡಿ ಹಣ ಕೇಳುತ್ತಿದ್ದ. ಮಗಳಿಗಾಗಿ ಪರಕ್ಕಲ್ ಅಳಿಯ ಕೇಳಿದಂತೆ ಹಣ ಕೊಡುತ್ತಿದ್ದರು. ಇಷ್ಟೇ ಅಲ್ಲ ಆನ್ಲಿಯಾ ಳಿಗೆ ತನ್ನ‌ ಗಂಡನಿಗೆ ಬೇರೆ ಆ-ಫೇರ್ ಇರುವುದು ಕೂಡ ಗೊತ್ತಾಗಿ ಆಕೆ ಮಾನಸಿಕ ವಾಗಿ ಕೊರಗಿದ್ದಳು.

Advertisements
Advertisements

ಇದರ ಜೊತೆ ಆತ ತನ್ನ ಕಂಪೆನಿಗೆ ಫೇಕ್ ಸರ್ಟಿಫಿಕೇಟ್ ಕೊಟ್ಟ ವಿಷಯ ಗೊತ್ತಾಗಿ ಆತನನ್ನು ಕಂಪೆನಿಯಿಂದ ಕಿತ್ತು ಹೊರಹಾಕುತ್ತಾರೆ. ಹಾಗಾಗಿ ವಿದೇಶದಿಂದ ಮತ್ತೆ ಕೇರಳಕ್ಕೆ ಬರುವಂತಾಗುತ್ತದೆ. ಈ ವೇಳೆ ಆನ್ಲಿಯಾ ಒಂದು ಮಗುವಿಗೂ ಜನ್ಮ ನೀಡಿರುತ್ತಾಳೆ. ಆದರೆ ಅತ್ತೆ ಮನೆಯಲ್ಲಿ ಗಂಡ ಹಾಗೂ ಅತ್ತೆಯಿಂದ ಪ್ರತಿ ದಿನ ಚಿತ್ರ ಹಿಂ-ಸೆ ಅನುಭವಿಸಿರುತ್ತಾಳೆ. ಕೊನೆಗೆ ತನ್ನ ತಂದೆಗೆ ಕರೆ ಮಾಡಿ ತಾನು ಎಂ ಎಸ್ಸಿ ಮುಂದುವರಿಸುವುದಾಗಿ ಹೇಳಿ ಮಗುವನ್ನು ಅತ್ತೆ ಮನೆಯಲ್ಲಿ ಬಿಟ್ಟು ಬೆಂಗಳೂರಿಗೆ ಹೋಗುತ್ತಾಳೆ.

ಆದರೆ ಅತ್ತೆ ಹಾಗೂ ಗಂಡ ಮಗುವಿನ ಜೊತೆ ಮಾತನಾಡಲು ಅವಕಾಶ ಕೊಡದೇ ಹೋದಾಗ ಮತ್ತೆ ಕೇರಳಕ್ಕೆ ಹೋದ ಆನ್ಲಿಯಾ, ಕೆಲ ತಿಂಗಳಲ್ಲೇ ತನ್ನ ಸಹೋದರನಿಗೆ ಕರೆ ಮಾಡಿ ತನಗೆ ಬದುಕಲು ಆಗುತ್ತಿಲ್ಲ, ಮಗುವನ್ನೂ ತನ್ನಿಂದ ದೂರ ಮಾಡಿ ಹಿಂ-ಸೆ ಕೊಡುತ್ತಿದ್ದಾರೆ, ನಾನು ಸಾ-ಯುತ್ತೇನೆ ಎಂದು ಹೇಳಿದ ಅರ್ಧ ಗಂಟೆಯಲ್ಲಿಯೇ ಪೊಲೀಸರಿಂದ ಆನ್ಲಿಯಾ ನಾ-ಪತ್ತೆಯಾಗಿರುವ ಬಗ್ಗೆ ಕರೆ ಬರುತ್ತದೆ. ಕೆಲ ದಿನಗಳ ನಂತರ ಆಕೆಯ ಶ-ವ ಪೆರಿಯಾರ್ ನದಿಯಲ್ಲಿ ಸಿಗುತ್ತದೆ.

ತನ್ನ ಮಗಳ ಸಾ-ವಿನ ಬಗ್ಗೆ ಪರಕ್ಕಲ್ ಪ್ರತಿ-ಭಟನೆ ನಡೆಸಿ, ಆನ್ಲಿಯಾಳ ಅತ್ತೆ ಹಾಗೂ ಗಂಡನನ್ನು ಪೊ-ಲೀಸರು ಬಂಧಿಸುವಂತೆ ಮಾಡುತ್ತಾರೆ. ಮೊಮ್ಮಗುವನ್ನು ತಾವೇ ಸಾಕುತ್ತಾರೆ. ಆದರೆ ಉತ್ತಮ ಭವಿಷ್ಯ ಕಾಣಬೇಕಾಗಿದ್ದ ಆನ್ಲಿಯಾ ಮಾತ್ರ ಧನ ಪಿಶಾಚಿಗಳ ಕೈಗೆ ಬಿದ್ದು ಜೀವನ ಕಳೆದುಕೊಂಡಿದ್ದಳು. ಈ ಘಟನೆ ಬಗ್ಗೆ ನಿಮ್ಮ ಅನಿಸಿಕೆ ಏನು ಅನ್ನುವುದನ್ನು ಕಾಮೆಂಟ್ ಮೂಲಕ ತಿಳಿಸಿ.