Advertisements

ನಾನು ಆ ನಟಿಯನ್ನ ಕರೆದುಕೊಂಡು ಬರೋದಕ್ಕೆ ತುಂಬಾ ಕಷ್ಟ ಪಟ್ಟಿದ್ದೇನೆ! ದ್ವಾರಕೀಶ್ ಹೇಳಿದ್ದು ಯಾವ ನಟಿಯ ಬಗ್ಗೆ ಗೊತ್ತಾ? ನೋಡಿ..

Kannada News

ನಮಸ್ಕಾರ ಪ್ರಿಯ ವೀಕ್ಷಕರೆ ತಮ್ಮ ನಟನೆಯ ಮೂಲಕ ಕನ್ನಡ ಸಿನಿಮಾ ಜಗತ್ತನ್ನು ಉತ್ತುಂಗಕ್ಕೆ ಕೊಂಡೊಯ್ದ‌ ನಟರಲ್ಲಿ ಡಾ. ರಾಜಕುಮಾರ, ಶಂಕರ‌ನಾಗ, ಡಾ. ವಿಷ್ಣುವರ್ಧನ್, ಅಂಬರೀಶ ಹೀಗೆ ಹಲವರು. ಪ್ರಮುಖ ಪಾತ್ರಕ್ಕೂ ಸೈ, ಹಾಸ್ಯ ಅಭಿನಯಕ್ಕೂ ಜೈ ಎಂದು ಸಿಂಗಾಪುರದಲ್ಲಿ ರಾಜಾಕುಳ್ಳ ಚಿತ್ರದ ಮೂಲಕ ಕನ್ನಡ ಸಿನಿ ರಂಗದ ಕುಳ್ಳನೆಂದೆ ಹೆಸರು ಗಳಿಸಿದ ನಟ ಎಂದರೆ ಅದು ದ್ವಾರಕೀಶ್.

ತಮ್ಮ ಎಳೆ ವಯಸ್ಸಿನಲ್ಲೆ ಚಿತ್ರರಂಗಕ್ಕೆ ಕಾಲಿಟ್ಟು ಒಂದಾದ ಮೇಲೊಂದು ಚಿತ್ರಗಳಲ್ಲಿ ಅಭಿನಯಿಸುವುದರ ಜೊತೆಗೆ ತಮ್ಮದೆ ಅಭಿಮಾನಿ ಬಳಗವನ್ನು ಹುಟ್ಟು ಹಾಕಿದ್ದಾರೆ. ತಮ್ಮ ಜೀವನದಲ್ಲಿ ಸಾಕಷ್ಟು ಸವಾಲುಗಳನ್ನು ಎದಿರಿಸಿ, ಯಶಸ್ಸು ಗಳಿಸಿ ಸದ್ಯ, ಚಿತ್ರರಂಗದಿಂದ ದೂರ ಸರಿದಿರುವ ನಟ ದ್ವಾರಕೀಶ ಅವರು‌ ಸಂದರ್ಶನದಲ್ಲಿ ತಮ್ಮ ಬದುಕಿನ ಜರ್ನಿ ಕುರಿತು ಕೆಲವು ಅಂಶಗಳನ್ನು ಹಂಚಿಕೊಂಡಿದ್ದಾರೆ.

ಹುಣಸೂರು ಕೃಷ್ಣಮೂರ್ತಿ ಅವರ ನಿರ್ದೇಶನದ ವೀರ ಸಿನೆಮಾದ ಮೂಲಕ ಮೊಟ್ಟ ಮೊದಲ ಬಾರಿಗೆ ದ್ವಾರಕೀಶ್ ತರೆಯ ಮೇಲೆ ಅಭಿನಯಿಸಿದ್ದರು. 1962 ರಲ್ಲಿ ತೆರೆಕಂಡ ವೀರ ಸಂಕಲ್ಪ‌ ಚಿತ್ರ ಇಂದು‌ ದ್ವಾರಕೀಶ್ ಅವರು‌ ಒಬ್ಬ ನಟ ಹಾಗೂ ನಿರ್ದೇಶಕನಾಗಲು ದಾರಿ ಮಾಡಿಕೊಟ್ಟಿತ್ತು. ಯಾರಿಗಾದರೂ ತಮ್ಮ‌ ಜೀವನದ ದಿಕ್ಕನ್ನು ಬದಲಾಯಿಸಿದ ಘಟನೆಗಳು ಮರೆಯಲು ಅಸಾಧ್ಯವಾಗಿರುತ್ತದೆ. ಅದೇ ರೀತಿ ದ್ವಾರಕೀಶ್ ಅವರಿಗೆ ಹೊಸ ಬದುಕನ್ನು ಕಟ್ಟಿಕೊಟ್ಟ ಸಿನೆಮಾ ವೀರ ಸಂಕಲ್ಪ. ಹೀಗಾಗಿ ಅಂದಿನ ಕಾಲದಲ್ಲಿ ಅವರು ಮೊದಲ ಬಾರಿಗೆ ಸಿನಿಮಾದಲ್ಲಿ ನಟಿಸಿದ್ದು, ಅವರು ಎದಿರಿಸಿ ಅಡೆತಡೆ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ವೀರ ಸಂಕಲ್ಪ‌ ಚಿತ್ರದ ಚೀತ್ರಿಕರಣ ಪೂರ್ಣಗೊಳ್ಳಲು ಬರೊಬ್ಬರಿ 3 ವರ್ಷ ಸಮಯವನ್ನು ತೆಗೆದುಕೊಂಡಿತ್ತು. ಆ ಚಿತ್ರದ‌ ಮೊದಲ ಸಿನ್ ನಲ್ಲಿ ನಾನು ಸಿಂಗಾಸನ ಏರಿ ಇಳಿಯುವ ದೃಶ್ಯ ಮಾಡಿದ್ದೆ, ಅದೇ ‌ರೀತಿ‌ ಜೀವನದಲ್ಲಿ ಸಹ ಮೇಲೆರಿ‌ ಮತ್ತೆ ಕೆಳಗಿಳಿದ್ದಿದ್ದೇನೆ ಎಂದರು. ವೀರ ಸಂಕಲ್ಪ ಚಿತ್ರಕ್ಕೆ ನಾಯಕಿಯನ್ನಾಗಿ ಆಯ್ಕೆ ಮಾಡಿದ್ದು ವಾಣಿಶ್ರೀ ಅವರನ್ನು. ಅವರ ಮೂಲ ಹೆಸರು ರತ್ನಕುಮಾರಿ, ಇವರೆನು ಶ್ರೀಮಂತ ಕುಟುಂಬದಲ್ಲಿ ಜನಿಸಿದವರಲ್ಲ. ಬಡತನದಿಂದಲೆ ದ್ವಾರಕೀಶ್ ಅವರ ಸಹಾಯದಿಂದ ಸಿನಿಮಾ ರಂಗಕ್ಕೆ ಪ್ರವೇಶ ಪಡೆಯುತ್ತಾರೆ. ನೋಡಲು ಸುಂದರವಾಗಿದ್ದ ವಾಣಿಶ್ರೀ ಅವರು ನಟನೆ ಮಾಡುವುದರಲ್ಲಿ ಸೈ ಎನಿಸಿಕೊಳ್ಳುತ್ತಾರೆ. ವೀರ ಸಂಕಲ್ಪ ಸಿನಿಮಾದ ನಂತರ ಸೂಪರ್ ನಟಿಯಾಗಿ ಹೊರಹೊಮ್ಮಿದ ಇವರು ಮುಂದೆ ಪರಭಾಷಾ ಸಿನೆಮಾಗಳಲ್ಲಿ ಅಭಿನಯಿಸಿ ಮೆಚ್ಚುಗೆ, ಯಶಸ್ಸು ಪಡೆಯುತ್ತಾರೆ.

ಅಂದಿನ ಕಾಲದಲ್ಲಿ ತೆಲುಗು ಹಾಗೂ ತಮಿಳು ಸಿನಿಮಾ ರಂಗದಲ್ಲಿ ಟಾಪ್ ನಟರಾದ ಎನ್ ಟಿ ರಾಮರಾವ್, ಎ. ಶಿವಾಜಿ ಗಣೇಶನ್, ಎಂ ಡಿ ರಾಮಚಂದ್ರನ್ ಮೊದಲ ನಟರು ವಾಣಿಶ್ರೀ ಜೊತೆ ನಟಿಸುವುದಕ್ಕಾಗಿ ತಿಂಗಳಾನುಗಟ್ಟಲೆ ಕಾಯುತ್ತಿದ್ದರಂತೆ, ಅವರನ್ನು ಚಿತ್ರದಲ್ಲಿ ನಾಯಕಿಯನ್ನಾಗಿ ಕರೆತರುವುದು ಹಲವು ನಿರ್ಮಾಪಕರ ಆಶಯ ವಾಗಿರುತಂತೆ. ಅಂತಹ ಅದ್ಭುತ ನಟಿಯೊಂದಿಗೆ ನಟಿಸಿದ್ದು ನಿಜಕ್ಕೂ ನನಗೆ ಒಳ್ಳೆಯ ಅನುಭವ ನೀಡಿತ್ತು ಎಂದು ದ್ವಾರಕೀಶ್ ಹೇಳಿಕೊಂಡಿದ್ದಾರೆ.

ತಮ್ಮ ಮೊದಲ ಚಿತ್ರ ವೀರ ಸಂಕಲ್ಪ ಚಿತ್ರದ ಕಥೆ, ನಾಯಕಿ ತಮ್ಮ ಅನುಭವಗಳನ್ನು ಸಂದರ್ಶನದಲ್ಲಿ ದ್ವಾರಕೀಶ್ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಸದ್ಯ ಚಿತ್ರದಿಂದ ದೂರ ಉಳಿದ ನಟ ದ್ವಾರಕೀಶ್ ಆದಷ್ಟು ಬೇಗ ತರೆಯ ಮೇಲೆ ಮತ್ತೊಮ್ಮೆ ಕಾಣಿಸಿಕೊಳ್ಳಲ್ಲಿ ಎಂಬುವುದು ಅಭಿಮಾನಿಗಳ ಆಶಯ

Leave a Reply

Your email address will not be published.