Advertisements

ಇಲ್ಲಿ ಹೈಸ್ಕೂಲ್ ಯುವತಿಯರು ಪ್ರೆಗ್ನೆಂಟ್ ಆಗುತ್ತಿದ್ದಾರೆ! ಸರ್ಕಾರಕ್ಕೆ ಗ್ರಾಮಸ್ಥರಿಗೆ ತಲೆನೋವು ತರಿಸಿತ್ತಿರುವ ಪ್ರಕರಣ!!

Kannada News

ಈ ಜಗತ್ತಿಗೆ ಕ-ರೋನಾ ಅನ್ನುವ ಮಹಾಮಾರಿ ಬಂದು ಆರ್ಥಿಕತೆ, ವ್ಯಾಪಾರ – ವಹಿವಾಟು ಕುಸಿದಿದ್ದು ಈಗಲೂ ಅದರಿಂದ‌ ಮೇಲೆಳಲು ಹೆಚ್ಚಿನ‌ ಮಂದಿ ಒದ್ದಾಡುತ್ತಿದ್ದಾರೆ. ಆಗಾಗ್ಗೆ ಈ ಲಾಕ್ ಡೌನ್, ಕರ್ಫ್ಯೂ ಅನ್ನುವ ನಿಯಮ ಜಾರಿಯಾಗಿ ಜನರು ಯಾವ ಕೆಲಸಕ್ಕೆ ಕೈ ಹಾಕಲೂ ಹಿಂದೆ ಮುಂದೆ ನೋಡುವಂತಾಗಿದೆ. ಇದು ಪ್ರತಿಯೊಬ್ಬರೂ ಅನುಭವಿಸುವ ಸಾಮಾನ್ಯ ಸಮಸ್ಯೆ. ಆದರೆ ಇದೊಂದು ದೇಶದಲ್ಲಿ ಮಾತ್ರ ಈ‌ ಮಹಾ‌ ಮಾರಿ ಇಂದಾಗಿ ಅಪ್ರಾಪ್ತ ಹೆಣ್ಣು ಮಕ್ಕಳು ಗರ್ಭಿಣಿ ಆಗುತ್ತಿದ್ದಾರಂತೆ.‌ ಹೌದು‌, ಈ ಸಮಸ್ಯೆ ತಲೆದೋರಿರುವುದು ಜಿಂಬಾಬ್ವೆ ದೇಶದಲ್ಲಿ.‌

Advertisements
Advertisements

ಇದು ಬಡ ದೇಶ, ತಾಂತ್ರಿಕವಾಗಿ, ವೈಜ್ಞಾನಿಕವಾಗಿ, ವೈದ್ಯಕೀಯವಾಗಿ ತುಂಬಾ ಹಿಂದೆ ಉಳಿದಿರುವ ದೇಶ ಅನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ವಿಷಯ.‌ ಹೀಗಾಗಿಯೇ ಇಲ್ಲಿ ಕಾನೂನು ಕೂಡ ಸರಿಯಾಗಿ ಇಲ್ಲ. ‌ಹೆಣ್ಣು ಅಥವಾ ಗಂಡಿಗೆ ಇದೇ ವಯಸ್ಸಿನಲ್ಲಿ ಮದುವೆ ಮಾಡಬೇಕು ಅನ್ನುವ ನಿಯಮವಾಗಲಿ ಕಾನೂನಾಗಲಿ ಯಾವುದೂ ಇಲ್ಲ.‌ ನಡ ಹೆತ್ತವರು ತಮ್ಮ ಮಗಳಿಗೆ ಮದುವೆ ಮಾಡಿಕೊಟ್ಟರೆ ಸಾಕು ಅನ್ಬುವುದನ್ನು ಮಾತ್ರ ಯೋಚಿಸುತ್ತಾರೆ. ಅದೇ ರೀತಿ ಈ ಕ-ರೋನಾ ಸಮಯದಲ್ಲಿ ಇಲ್ಲಿಯೂ 2020 ಮಾರ್ಚ್ ನಿಂದಲೇ ಲಾಕ್ ಡೌನ್ ಜಾರಿ‌ ಮಾಡಲಾಗಿತ್ತು.‌

ಹೀಗಾಗಿ ಈ ಸಮಯದಲ್ಲಿ ಹೆಚ್ಚಿನ ಅಪ್ರಾಪ್ತ ಹೆಣ್ಣು ಮಕ್ಕಳಿಗೆ ಮದುವೆ ಮಾಡಿಕೊಡಲಾಗಿತ್ತು. ಆದರೆ ಲಾಕ್ ಡೌನ್‌ ಮುಗಿದು ಇದೀಗ ಶಾಲಾ ಕಾಲೇಜು ಆರಂಭವಾಗುವಾಗ ಹೆಚ್ಚಿನ ಹೆಣ್ಣುಮಕ್ಕಳು ಗರ್ಭವತಿಯಾಗಿಯೇ ಶಾಲೆಗಳಿಗೆ ಬರುತ್ತಿದ್ದಾರೆ.‌ ಇದು ಶಾಲಾ ಆಡಳಿತ ಮಂಡಳಿ ಹಾಗೂ ಸರ್ಕಾರಕ್ಕೆ ದೊಡ್ಡ ತಲೆ ನೋವಾಗಿದೆ. ಲಾಕ್ ಡೌನ್ ಸಮಯದಲ್ಲಿ ಗರ್ಭ ನಿರೋಧಕ‌ ಮಾತ್ರೆಗಳನ್ನು ತೆಗೆದುಕೊಳ್ಳಲು ಸಾಧ್ಯವಾಗದೇ ಇದ್ದ ಕಾರಣ ಈ ಸಮಸ್ಯೆ ಆಗಿದೆ.‌ ಇಲ್ಲಿ ಮಾಡಿರುವ ಗಣತಿ ಪ್ರಕಾರ 2018 ಮತ್ತು 19 ರಲ್ಲಿ ಸುಮಾರು ಮೂರುಸಾವುರ ಹುಡುಗಿಯರು ಗರ್ಭವತಿಯಾಗಿ ಶಾಲೆ ತೊರೆದಿದ್ದರು.

ಅದೇ 2020 ರಲ್ಲಿ 4770 ವಿದ್ಯಾರ್ಥಿನಿಯರು ಶಾಲೆ ಬಿಟ್ಟಿದ್ದು, 2021 ರಲ್ಲಿ 5000 ವಿದ್ಯಾರ್ಥಿನಿಯರು ಶಾಲೆ ಇಂದ ಹೊರ ಬಂದಿದ್ದಾರೆ. ಇದಕ್ಕೆ ಕಾರಣ ಗರ್ಭವತಿಯಾಗಿರುವುದು. ಈ ಸಮಸ್ಯೆ ಹೆಚ್ಚಾದ ಕಾರಣ ಇದೀಗ ಸರ್ಕಾರ ಕೂಡ ಇನ್ನು ಮುಂದೆ ಶಾಲೆಗಳಿಗೆ ಗರ್ಭ ಧರಿಸಿರುವ ಅಪ್ರಾಪ್ತ ಹೆಣ್ಷು ಮಕ್ಕಳಿಗೆ ಪ್ರವೇಶ ಇಲ್ಲ ಅನ್ನುವ ನಿಯಮ‌ಕೂಡ ಜಾರಿ ಮಾಡಿದೆ. ಆದರೆ ಇದರ ಬದಲು ಮದುವೆ ವಯಸ್ಸು ಕನಿಷ್ಠ 18 ವರ್ಷ ಆಗಬೇಕು ಅನ್ನುವ‌ ಕಡ್ಡಾಯ ನಿಯಮ ತಂದರೆ ಈ ಸಮಸ್ಯೆ ಬರಲ್ಲ ಅನ್ನುವುದೇ ಎಲ್ಲರ ಅಭಿಪ್ರಾಯ. ಈ‌ ಮಾಹಿತಿಯ ಬಗ್ಗೆ ನಿಮ್ಮ‌ ಅನಿಸಿಕೆ ಏನು ಅನ್ನವುದನ್ನು ನಮಗೆ ತಪ್ಪದೇ ಕಾಮೆಂಟ್ ಮೂಲಕ ತಿಳಿಸಿ.‌