ಈ ಜಗತ್ತಿನ ಸೃಷ್ಟಿಯೇ ಒಂದು ಅದ್ಭುತ. ಪ್ರತಿಯೊಂದು ಜೀವಿಗೂ ಒಂದು ಜೊತೆ ಅಂತ ಇದ್ದೇ ಇರುತ್ತದೆ. ಅದೇ ರೀತಿ ಮನುಷ್ಯನು ಕೂಡ ಒಂಟಿ ಬದುಕು ನಡೆಸಲು ಸಾಧ್ಯವೆ ಇಲ್ಲ. ಹೆಣ್ಣಾಗಲಿ ಗಂಡಾಗಲಿ ಇಬ್ಬರಿಗೂ ಸಂಗಾತಿಯ ಅಗತ್ಯ ಇದ್ದೇ ಇರುತ್ತದೆ. ಗಂಡಿಗೆ ಹೆಣ್ಣು, ಹೆಣ್ಣಿಗೆ ಗಂಡು ಇದು ಪ್ರಕೃತಿಯ ನಿಯಮ. ಮಾನವ ಸಂಕುಲ ಬೆಳೆಯಬೇಕೆಂದರೆ ಗಂಡು ಹೆಣ್ಣು ಇರಲೇ ಬೇಕು.
ಇನ್ನು ಈಗಿನ ಕಾಲದ ಗಂಡು ಮಕ್ಕಳಿಗೆ ಅದೇ ರೀತಿ ಹೆಣ್ಣು ಮಕ್ಕಳಿಗೆ ತನ್ನ ಬಾಳ ಸಂಗಾತಿಯ ಬಗ್ಗೆ ಅನೇಕ ಕನಸುಗಳು ಇರುತ್ತವೆ. ತನ್ನ ಹುಡುಗಿ ಇದೇ ರೀತಿ ಇರಬೇಕು ಅನ್ನುವ ಕನಸು ಕಂಡಿರುತ್ತಾರೆ. ಅದೇ ರೀತಿ ಹೆಣ್ಣು ಮಕ್ಕಳು ಕೂಡ ತಮ್ಮ ಹುಡುಗನ ಬಗ್ಗೆ ನಾನಾ ರೀತಿಯ ಆಸೆಗಳನ್ನು ಹೊಂದಿರುತ್ತಾರೆ. ಒಂದು 20 ವರ್ಷ ದಾಟಿದ ಹೆಣ್ಣು ಮಕ್ಕಳು ತಮ್ಮ ಹುಡುಗನ ಬಗ್ಗೆ ಗಂಭೀರವಾಗಿ ಯೋಚನೆ ಮಾಡುತ್ತಾರೆ. ಅದರಲ್ಲೂ ಸಾಮಾನ್ಯವಾಗಿ ಹೆಣ್ಣು ಎಷ್ಟೇ ಆಧುನಿಕವಾಗಿದ್ದರೂ, ಮದುವೆಯಾಗಲು ಬಯಸುವ ಹುಡುಗನ ಬಗ್ಗೆ ಕೇಳಿದರೆ, ತುಸುವೇ ನಾಚಿ ಕೆಂಪಾಗುತ್ತಾಳೆ.

ನನ್ನನ್ನು ವರಿಸುವವ ಶ್ರೀಮಂತನಾಗಬೇಕಿಲ್ಲ, ಹೃದಯ ಶ್ರೀಮಂತಿಕೆ ಇದ್ದರೆ ಸಾಕು ಎಂದು ಬಯಸುತ್ತಾರೆ. ತನ್ನನ್ನು ಪ್ರೀತಿಯಿಂದ ನೋಡಿಕೊಂಡರೆ ಸಾಕು ಎಂದು ಆಶಿಸುತ್ತಾರೆ. ಹುಡುಗನಲ್ಲಿ ಒಳ್ಳೆಯ ಗುಣ, ನಡತೆ, ಸಂಸ್ಕಾರ ಇರಬೇಕು. ನೋಡಲು ಲಕ್ಷಣವಾಗಿದ್ದರೆ ಸಾಕು. ತನ್ನ ಕನಸುಗಳಿಗೆ ಆದ್ಯತೆ ಕೊಡುವವನು ಬೇಕು ಎಂದು ಬಯಸುತ್ತಾರೆ.
ಇದು ಒಂದು ಪ್ರಭುದ್ಧತೆ ಬಂದಿರುವಂತಹ ಹೆಣ್ಣು ಮಕ್ಕಳ ವಿಚಾರವಾದರೆ ಈ ಹದಿಹರೆಯದ ಹೆಣ್ಣು ಮಕ್ಕಳು ಎಂತಹ ಹುಡುಗರ ಮೇಲೆ ಪ್ರಭಾವಿತರಾಗುತ್ತಾರೆ ಅನ್ನುವುದನ್ನು ಆಸ್ಟ್ರೇಲಿಯಾ ಮೂಲದ ಪ್ರತಿಷ್ಠಿತ ಕಂಪೆನಿಯೊಂದು ರಿಸರ್ಚ್ ಮಾಡಿದೆ. ಅದರ ಪ್ರಕಾರ ಫಲಿತಾಂಶ ಹೊರಬಂದಿದೆ. ಈ ರಿಸರ್ಚ್ ನಲ್ಲಿ 18 ರಿಂದ 80 ವಯಸ್ಸಿನ 41000 ಸಾವಿರಕ್ಕೂ ಅಧಿಕ ಮಹಿಳೆಯರನ್ನು ಬಳಸಿಕೊಳ್ಳಲಾಗಿದ್ದು ಶಾಕಿಂಗ್ ಫಲಿತಾಂಶ ಬಂದಿದೆ.
ಹೌದು, ಈಕಡಿಮೆ ವಯಸ್ಸಿನ ಅಂದರೆ 18 -25 ವಯಸ್ಸಿನ ಹುಡುಗಿಯರಿಗೆ ಸುಂದರವಾಗಿ ಕಾಣುವಂತಹ ಹಾಗೂ ಆರ್ಥಿಕವಾಗಿ ಸಬಲರಾಗಿ ಇರುವಂತಹ ಅತ್ಯಂತ ಸುಶಿಕ್ಷಿತ ಸ್ವತಂತ್ರ ಮನೋಭಾವವನ್ನು ಹೊಂದಿರುವ ಹುಡುಗರು ಇಷ್ಟ ಆಗುತ್ತಾರೆ. ಇನ್ನು ಅವರು ತನಗಿಂತ ಸ್ವಲ್ಪ ಹೆಚ್ಚು ವಯಸ್ಸಿನ ಹುಡುಗರನ್ನು ಇಷ್ಟಪಡುತ್ತಾರಂತೆ. ಇದಕ್ಕೆ ಕಾರಣ ಅವರೊಂದಿಗೆ ನಾವು ಸುರಕ್ಷಿತವಾಗಿದ್ದೇವೆ ಎನ್ನುವ ಭಾವನೆ ಇರುತ್ತದೆಯಂರೆ.

ಇನ್ನು ಸ್ವಲ್ಪ ಜಾಸ್ತಿ ವಯಸ್ಸಿನ ಮಹಿಳೆಯರಿಗೆ ಅಂದರೆ 35 ಪ್ಲಸ್ ವಯಸ್ಸಿನ ಮಹಿಳೆಯರು ಸ್ವಲ್ಪ ಕಡಿಮೆ ಶಿಕ್ಷಿತ ಪುರುಷರನ್ನು ಇಷ್ಟ ಪಡುತ್ತಾರಂತೆ. ಇದಕ್ಕೆ ಕಾರಣ ಅವರು ತಮ್ಮೊಂದಿಗೆ ಹೆಚ್ಚು ಸಮಯ ಕಳೆಯುತ್ತಾರೆ ಅನ್ನುವುದಾಗಿದೆ ಎಂದು ಹೇಳಲಾಗಿದೆ. ಇನ್ನು ಮುಖ್ಯವಾಗಿ ಅಂದ, ಚಂದ, ಗುಣ, ಲಕ್ಷಣಗಳನ್ನು ಕೂಡ ನೋಡುತ್ತಾರೆ.
ತಮ್ಮ ಅಭಿರುಚಿಗಳಿಗೆ ಅವರು ಹೊಂದಾಣಿಕೆ ಆಗುತ್ತಾರಾ ಅನ್ನುವುದನ್ನು ಗಮನದಲ್ಲಿ ಇಟ್ಟುಕೊಂಡು ಹುಡುಗರ ಆಯ್ಕೆ ಮಾಡುತ್ತಾರೆ. ಯಾಕಂದರೆ ಜೀವನ ಸಂಗಾತಿಯ ಆಯ್ಕೆ ಸರಿಯಾಗಿ ಇದ್ದರೆ ಮಾತ್ರ ಜೀವನ ಚೆನ್ನಾಗಿ ಸಾಗಲು ಸಾಧ್ಯ. ಅಲ್ಲಿ ಎಡವಿದರೆ ಜೀವನವೇ ನರಕ. ಈ ಕುರಿತಾಗಿ ನಿಮ್ಮ ಅನಿಸಿಕೆ ಏನು ಅನ್ನುವುದನ್ನು ಕಾಮೆಂಟ್ ಮೂಲಕ ತಿಳಿಸಿ.