Advertisements

ನಟಿ ಸಮಂತಾ ಯಾವ ಯಾವ ಜಾಗದಲ್ಲಿ ಟ್ಯಾಟೂ ಹಾಕಿಸಿಕೊಂಡಿದ್ದಾರೆ ಗೊತ್ತಾ? ನೀವೇ ನೋಡಿ ಸ್ವಾಮಿ ಅಬ್ಬಬ್ಬಾ!!

Kannada News

ಹೆಚ್ಚಿನ ಜನರಿಗೆ ಈ ಟ್ಯಾಟೂ ಮೇಲೆ ಸಿಕ್ಕಾಪಟ್ಟೆ ಕ್ರೇಜ್ ಇರುತ್ತದೆ. ಕೆಲವರಿಗೆ ದೇಹದ ಮೇಲೆ ಯಾವುದಾದರೂ ಒಂದು ಭಾಗದಲ್ಲಿ ಟ್ಯಾಟೂ ಹಾಕಿದರೆ ಇನ್ನು ಕೆಲವರು ದೇಹ ಪೂರ್ತಿ ಟ್ಯಾಟೂ ಹಾಕಿಸಿಕೊಳ್ಳುತ್ತಾರೆ. ಇನ್ನು ಟ್ಯಾಟೂ ಅನ್ನುವುದು ಫ್ಯಾಷನ್ ಕೂಡ ಹೌದು. ಇನ್ನು ಕೆಲವರು ತಮ್ಮ ಪ್ರಿಯ ಪಾತ್ರರ ಹೆಸರನ್ನು, ಅಥವಾ ಅವರ ಫೋಟೋಗಳನ್ನು ತಮ್ಮ ಮೈ ಮೇಲೆ ಹಚ್ಚೆ ಹಾಕಿಸಿಕೊಳ್ಳುತ್ತಾರೆ. ಪ್ರೇಮಿಗಳು ಹಾಕಿಸಿಕೊಳ್ಳುವ ಟ್ಯಾಟೂ ಒಂದು ರೀತಿಯಾದರೆ, ಅಭಿಮಾನಿಗಳು ತಮ್ಮ ನೆಚ್ಚಿನ ಸ್ಟಾರ್ ಗಳ ಹೆಸರು ಅಥವಾ ಫೋಟೋಗಳನ್ನು ಮೈ ಮೇಲೆ ಟ್ಯಾಟೂ ಹಾಕಿಸಿಕೊಳ್ಳುತ್ತಾರೆ.

ಇದೇ ರೀತಿ ಇದೀಗ ಒಬ್ಬ ನಟಿ ತನ್ನ ಮೈ ಮೇಲಿ‌ನ ಟ್ಯಾಟೂ ಮೂಲಕ ಸುದ್ದಿಯಲ್ಲಿ ಇದ್ದಾರೆ. ಹೌದು, ಅದು ಬೇರಾರೂ ಅಲ್ಲ,ದಕ್ಷಿಣ ಭಾರತದ ಬಹು ಬೇಡಿಕೆಯ ನಟಿ ಸಮಂತಾ ರುತ್ ಪ್ರಭು.ಸಿನಿಮಾ ಇಂಡಸ್ಟ್ರಿ ಯಲ್ಲಿ ಇದೀಗ ಟಾಕ್ ಆಫ್ ದಿ ಟೌನ್ ಆಗಿರುವ ನಟಿ ಅಂದರೆ ಅದು ಸಮಂತಾ ರುತ್ ಪ್ರಭು.ಅದು ಯಾವ ಹೊಸ ನಟಿಯರೇ ಬರಲಿ ಅವರೆಲ್ಲರಿಗಿಂತ‌ ಒಂದು ಹೆಜ್ಜೆ ಮುಂದೆಯೇ ಬೇಡಿಕೆಯಲ್ಲಿ ಇರುವ ನಟಿಯಾಗಿದ್ದಾರೆ.

ಸಾಮಾನ್ಯವಾಗಿ ಒಬ್ಬ ನಟಿ ಮದುವೆ ಆದರೆ ಆಕೆಯ ಕೆರಿಯರ್ ಗೆ ದೊಡ್ಡ ಪೆಟ್ಟು ಬೀಳುತ್ತದೆ‌. ಆದರೆ ಸಮಂತಾ ರುತ್ ಪ್ರಭು ಅವರ ವಿಷಯದಲ್ಲಿ ಇದು ತದ್ವಿರುದ್ಧ ‌‌ ತನ್ನ ಕೋ ಸ್ಟಾರ್ ಆಗಿದ್ದ ನಾಗ ಚೈತನ್ಯ ಅವರನ್ನು ಪ್ರೀತಿಸಿ ಮದುವೆಯಾಗಿ ಕೇವಲ ನಾಲ್ಕೇ ವರ್ಷದಲ್ಲಿ ಇಬ್ಬರೂ ದೂರ ಆಗಿದ್ದಾರೆ.ಆ ನಂತರದಲ್ಲಿ ಸಮಂತಾ ಅವರು ಹಾಟ್ ಲುಕ್, ಬೋಲ್ಡ್ ಲುಕ್ ನಲ್ಲೇ ಹೆಚ್ಚಾಗಿ ಕಾಣಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ಬಿಕಿನಿ ಫೋಟೋ ಶೇರ್ ಮಾಡಿ ಹಲ್ ಚಲ್ ಎಬ್ಬಿಸುತ್ತಿರುತ್ತಾರೆ.

Advertisements
Advertisements

ಇದೀಗ ಸಮಂತಾ ರುತ್ ಪ್ರಭು ಅವರು ಟ್ಯಾಟೂ ನಿಂದ ಸುದ್ದಿ ಯಲ್ಲಿ ಇದ್ದಾರೆ‌. ಅವರು ಇತ್ತೀಚೆಗೆ ಬಿಕಿನಿ ಹಾಕಿ ಬ್ಯಾಕ್ ಫೋಸ್ ಕೊಟ್ಟು ಫೋಟೋ ತೆಗೆಸಿಕೊಂಡಿದ್ದರು. ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು. ಅದರಲ್ಲಿ ಅವರ ಕುತ್ತಿಗೆಯ ಕೆಳಗೆ ವೈ ಎಂ ಸಿ ಎಂಬ ಟ್ಯಾಟೂ ಇದೆ. ಇದು ಅವರ ನಟನೆಯ ಚೊಚ್ಚಲ ಚಿತ್ರ ‘ಯೇ ಮಾಯಾ ಚೆಸಾವೆ’ಯ ಶಾರ್ಟ್ ಫಾರ್ಮ್. ಇನ್ನು ಈ ಸಿನಿಮಾದಲ್ಲಿ ನಾಗ ಚೈತನ್ಯ ಅವರ ಜೊತೆ ನಟಿಸಿದ್ದರು.

ಅದೇ ರೀತಿ ಸಮಂತಾ ಅವರು ತನ್ನ ಪಕ್ಕೆಲುಬಿನ ಹತ್ತಿರ ಚಾಯ್ ಎಂಬ ಹಚ್ಚೆ ಇದೆ.ಅದು ಸಮಂತಾ ಅವರು ನಾಗ ಚೈತನ್ಯ ಅವರನ್ನು ಪ್ರೀತಿಯಿಂದ ಕರೆಯುತ್ತಿದ್ದ ಅಡ್ಡ ಹೆಸರು. ಇದೀಗ ಈ ಟ್ಯಾಟು ಸುದ್ದಿ ಆಗಲು ಕಾರಣ, ನಾಗ ಚೈತನ್ಯ ಹಾಗೂ ಸಮಂತಾ ರುತ್ ಪ್ರಭು ದೂರ ಆದರೂ ಇನ್ನೂ ಆ ಟ್ಯಾಟೂ ಇದೆ ಅಂದರೆ ಈಗಲೂ ಪ್ರೀತಿ ಇದೆಯಾ ಅನ್ನುವ ಪ್ರಶ್ನೆ ಹುಟ್ಟಿಕೊಂಡಿದೆ. ನೆಟ್ಟಿಗರು ಈ ಬಗ್ಗೆ ನಾನಾ ಕಾಮೆಂಟ್ ಗಳನ್ನು ಹಾಕುತ್ತಿದ್ದಾರೆ.

ಇವರಿಬ್ಬರು ಮತ್ತೆ ಒಂದಾಗುತ್ತಾರಾ ಅನ್ನುವ ಪ್ರಶ್ನೆ ಕೂಡ ಹಾಕಿದ್ದಾರೆ.ಸಮಂತಾ ಅವರು ಇದೀಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇದ್ದರೂ ಸೋಶಿಯಲ್ ಮೀಡಿಯಾಗಳಲ್ಲಿ ಮಾತ್ರ ಯಾವಾಗಲೂ ಆಕ್ಟೀವ್ ಆಗಿದ್ದು ಅವರ ಹೆಚ್ಚಿನ ಫೋಟೋಗಳು ಇದೇ ರೀತಿ ಸುದ್ದಿ ಆಗುತ್ತದೆ. ಈ ಬಗ್ಗೆ ನಿಮ್ಮ ಅನಿಸಿಕೆ ಏನು ಅನ್ನುವುದನ್ನು ಕಾಮೆಂಟ್ ಮೂಲಕ ತಿಳಿಸಿ.