Advertisements

ಲಕ್ಷ ಲಕ್ಷ ಸಂಬಳದ ಕೆಲಸ ಬಿಟ್ಟು ಈ ಯುವತಿ ಮಾಡಿದ ಕೆಲಸಕ್ಕೆ ಇಡೀ ದೇಶವೇ ಫಿದಾ!

Kannada News

ನಮ್ಮ ಮನಸ್ಸಿನಲ್ಲಿ ಸಾಧನೆ ಮಾಡಬೇಕು ಎಂಬ ಧೃಢನಿರ್ಧಾರ ತೆಗೆದುಕೊಂಡರೆ ಸಾಕು ನಾವು ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು. ಆದರೆ ಅದಕ್ಕೆ ತಕ್ಕಂತೆ ಪರಿಶ್ರಮ ಕೂಡ ಮುಖ್ಯ.. ಅಷ್ಟೇ ಅಲ್ಲ ಕನಸು ಇದ್ದಾರೆ ಸಾಲದು ಅದನ್ನ ನನಸು ಮಾಡುವ ಛಲ ಕೂಡ ನಮ್ಮಲಿರಬೇಕು. ಜೊತೆಗೆ ಸತತ ಪ್ರಯತ್ನ ಇದ್ದಾರೆ ಮಾತ್ರ ಕಂಡ ಕನಸು ನನಸಾಗಲು ಸಾಧ್ಯ.ನಮ್ಮಲ್ಲಿ ೯೦ ಭಾಗದಷ್ಟು ರೈತರು ತಮ್ಮಂತೆ ತಮ್ಮ ಮಕ್ಕಳಿ ಕೂಡ ರೈತರಾಗಲಿ ಎಂದು ಬಯೋಸೋದಿಲ್ಲ. ಅದಕ್ಕೆ ಮೂಲ ಕಾರಣ ವ್ಯವಸಾಯ ಎಂದರೆ ನಷ್ಟ, ಹಗಲಿರುಳು ಕಷ್ಟ.

ಎಷ್ಟೇ ಕಷ್ಟ ಪಟ್ಟು ದುಡಿದರು ಕಾಸು ಕೈಗ್ಗೆ ಎಟುಕೋದಿಲ್ಲ. ಇದರಿಂದ ಜೀವನ ಕಷ್ಟ, ಉತ್ತಮವಾಗಿರೋದಿಲ್ಲ ಎಂಬ ಹಲವಾರು ಕಾರಣಗಳು ನಮ್ಮಂತಯೇ ನಮ್ಮ ಮಕ್ಕಳು ಕೃಷಿ ಮಾಡುವುದು ಬೇಡ ಎಂದು ರೈತರು ಬಯಸುತ್ತಾರೆ. ಆದರೆ ಹರಿಯಾಣ ರಾಜ್ಯದ ರೈತರು ವ್ಯವಸಾಯ ಮಾಡಿಕೊಂಡೆ ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಹೇಗೆ ಇಸ್ರೇಲ್, ನ್ಯೂಜಿಲೆಂಡ್, ಅಮೇರಿಕಾದಂತಹ ದೇಶಗಳಲ್ಲಿ ರೈತರು ಕೃಷಿಯಿಂದ ಕೋಟ್ಯಂತರ ಸಂಪಾದನೆ ಮಾಡಿ ಉದ್ಯಮಿಗಳಂತೆ ಜೀವನ ನಡೆಸುತ್ತಿದ್ದಾರೆ. ಏಕೆಂದರೆ ಅವರು ಕಾಲಕ್ಕೆ ತಕ್ಕಂತೆ ಬೇಸಾಯ ಪದ್ದತ್ತಿಯನ್ನ ಅನುಸರಿಸುತ್ತಿದ್ದಾರೆ. ಆದರೆ ನಾವು ೭೦ ವರ್ಷಗಳಿಂದ ಮಾಡುತ್ತಿರುವ ಬೇಸಾಯದ ವಿಧಾನವನ್ನೇ ಬಳಸುತ್ತಾ ಹಿಂದೆ ಉಳಿದಿದ್ದೇವೆ.

ಆದರೆ ಛತ್ತೀಸ್ ಘಡದ ವಲ್ಲರಿ ಚಂದ್ರಾಕರ ಎಂಬ ಯುವತಿ ಎಂ.ಟೆಕ್ ಮಾಡಿದ್ದೂ ಲಕ್ಷ ಲಕ್ಷ ಸಂಪಾದನೆ ಮಾಡುವ ಕೆಲಸ ಸಿಕ್ಕಿತ್ತು. ಆದರೆ ಇದು ಇಷ್ಟವಿಲ್ಲದ ಚಂದ್ರಾಕರ ಒಂದುಷ್ಟು ವರ್ಷ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದರು. ಇದರ ನಡುವೆ ರಾಯಪುರದಿಂದ ತಮ್ಮ ಹಳ್ಳಿಗೆ ಆಗಾಗ ಬರುತ್ತಿದ್ದ ಇವರಿಗೆ ವ್ಯವಸಾಯದಲ್ಲಿ ಹೆಚ್ಚಿನ ಆಸಕ್ತಿ ಉಂಟಾಯಿತು. ಬಳಿಕ ತಮ್ಮ ತಂದೆಯ ಬಳಿ ನನಗೆ ಸ್ಸ್ವಲ್ಪ ಭೂಮಿ ತೆಗೆದುಕೊಡಿ ನಾನು ಕೃಷಿಯನ್ನ ಆರಂಭಿಸುತ್ತೇನೆ ಎಂದು ಹೇಳಿದ್ರು. ಆಗ ಈ ಹುಡುಗಿ ವಿದ್ಯಾವಂತ ದಡ್ಡಿ, ಅನಕ್ಷರಸ್ಥೆ ಎಂದು ಅಲ್ಲಿನವರು ಗೇಲಿ ಮಾಡುತ್ತಾರೆ. ಆದರೆ ಮಗಳಿಗೆ ಬೆನ್ನುಲುಬಾಗಿ ನಿಂತ ಅವರ ತಂದೆ ೧೦ ಎಕರೆಗಿಂತ ಹೆಚ್ಚು ಜಮ್ಮಿನನ್ನ ಖರೀದಿ ಮಾಡಿ ಮಗಳು ವ್ಯವಸಾಯ ಮಾಡುವುದಕ್ಕೆ ಸಪೋರ್ಟ್ ಮಾಡುತ್ತಾರೆ.

ಈಗಾಗಲೇ ರೈತರು ಹಳೆ ಪದ್ದತಿಗಳಿಂದ ನಷ್ಟ ಅನುಭವಿಸುತ್ತಿದ್ದು ಆಧುನಿಕ ಪದ್ದತಿಯ ಬಗ್ಗೆ ಮಾಹಿತಿ ಸಂಗ್ರಹ ಮಾಡಿದ ವಲ್ಲರಿ ಥೈಲ್ಯಾಂಡ್, ಇಸ್ರೇಲ್ ಮಾಡುತ್ತಿದ್ದ ಆಧುನಿಕ ತಂತ್ರಜ್ಯ್ನಾದ ಬಗ್ಗೆ ಇಂಟೆರೆನೆಟ್ ನಲ್ಲಿ ನೋಡಿ ತಿಳಿದುಕೊಂಡು ಅದೇ ಪದ್ದತಿಯನ್ನ ಅಳವಡಿಸಿಕೊಂಡು ವ್ಯವಸಾಯ ಮಾಡಲು ಪ್ರಾರಂಭ ಮಾಡುತ್ತಾರೆ. ಸತತ ಪ್ರಯತ್ನಕ್ಕೆ ಫಲ ಇದ್ದೆ ಇರುತ್ತದೆ. ಇನ್ನುಶುರುವಿನ ಒಂದೆರಡು ತಿಂಗಳಿನಲ್ಲಿ ವಲ್ಲರಿಗೆ ಕೃಷಿಯಲ್ಲಿ ಕಷ್ಟ ಆಗುತ್ತದೆ. ಇದೆಲ್ಲವನ್ನು ಸಾವರಿಸಿಕೊಂಡು ಲಯವನ್ನ ಕಂಡುಕೊಂಡ ವಲ್ಲರಿ ಮುಂದುವರಿದ ತಂತ್ರಜ್ನ್ಯಾದ ಪದ್ದತಿಯಲ್ಲಿ ಬೀನ್ಸ್,

ಟೊಮೊಟೊ, ಮೆಣಸಿನಕಾಯಿ, ಕ್ಯಾಪ್ಸಿಕಂ ಗಳನ್ನ ಬೆಳೆಯಲು ಮುಂದಾಗಿದ್ದು ಅದರಲ್ಲಿ ಯಶಸ್ವಿ ಕೂಡ ಆದರು. ಹೀಗೆ ಕೃಷಿಯಲ್ಲಿ ಬಂಪರ್ ಇಳುವರಿ ತೆಗೆಯುತ್ತಿದ್ದು ತರಕಾರಿಗಳನ್ನ ದೊಡ್ಡ ದೊಡ್ಡ ಮಹಾನಗರಗಳಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಇನ್ನು ಇವರು ಬೆಳೆಯುತ್ತಿರುವ ತರಕಾರಿಗಳು ಉತ್ತಮ ಇಳುವರಿ ಜೊತೆಗೆ ಕ್ವಾಲಿಟಿ ಒಂದಿದ್ದು ದುಬೈ, ಇಸ್ರೇಲ್ ನಂತಹ ವಿದೇಶಗಳಿಂದ ಕೂಡ ಆರ್ಡರ್ಸ್ ಬರ್ತಾ ಇದ್ದು ಅಲ್ಲಿಗೂ ಕೂಡ ರಫ್ತು ಮಾಡುತ್ತಿದ್ದಾರೆ ವಲ್ಲರಿ ಚಂದ್ರಾಕರ ಅವರು. ನಂಬಿಕೆ ಪರಿಶ್ರಮ ನಮ್ಮಲ್ಲಿ ಇದ್ದಲ್ಲಿ ಯಾವುದೇ ಕ್ಷೇತ್ರದಲ್ಲಾದರೂ ಎತ್ತರಕ್ಕೆ ಬೆಳೆಯಬಹುದು ಎಂಬುದಕ್ಕೆ MTech ಮಾಡಿರುವ ವಲ್ಲರಿಯವರೇ ನೈಜ ನಿದರ್ಶನ.