ನಮಸ್ತೆ ಸ್ನೇಹಿತರೆ, ಮೊದಲಿನಿಂದಲೂ ಈ ನಟಿ ಜನರ ಕಷ್ಟಗಳಿಗೆ ಸ್ಪಂದಿಸಿದ ಎಷ್ಟೋ ಉದಾಹರಣೆಗಳಿವೆ ನಮ್ಮ ಕಣ್ಣಮುಂದೆ ಕಾಣುತ್ತವೆ. ಮಾಡೆಲ್ ಕಮ್ ನಟಿ ನಟಿಯಾಗಿರುವ ಸನ್ನಿಲಿಯೋನ್ ಅವರ ಈ ಮಾನವೀಯ ಕಾರ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕೊ’ರೋನ ವೈ’ರಸ್ ಎರಡನೇ ಅಲೆಯ ಪರಿಣಾಮ ದೇಶದ ಹಲವು ರಾಜ್ಯಗಳಲ್ಲಿ ಕೋ’ವಿಡ್ ನಿಯಂತ್ರಣಕ್ಕಾಗಿ ಲಾಕ್ಡೌನ್ ಮಾಡಲಾಗಿದೆ. ಲಾಕ್ಡೌನ್ ನಿಂದ ಲಕ್ಷಾಂತರ ಮಂದಿಗೆ ಉದ್ಯೋಗವಿಲ್ಲದೆ ನಿರ್ಗತಿಕರಾಗಿದ್ದಾರೆ, ಇವರಿಗೆ ಒಂದು ಹೊತ್ತಿನ ಊಟಕ್ಕೂ ಸಹ ಕಷ್ಟಕರವಾಗಿದೆ. ಇಂತಹ ಸಂಧರ್ಭದಲ್ಲಿ ಭಾರತೀಯ ಚಿತ್ರರಂಗದ ಬಹುತೇಕ ನಟ ನಟಿಯರು ನಿ’ರ್ಗತಿಕರಿಗೆ ಊಟದ ವ್ಯವಸ್ಥೆ ಮತ್ತು ಬಡ ಕುಟುಂಬಗಳಿಗೆ ಆಹಾರ ಧಾನ್ಯ ಕಿಟ್ ನೀಡುವುದರ ಮೂಲಕ ಅಸಹಾಯಕರಿಗೆ ನೆರವು ನೀಡುವುದರ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಬಾಲಿವುಡ್ ನ ಖ್ಯಾತ ನಟಿ ಆಗಿರುವ ಸನ್ನಿಲಿಯೋನ್ ಹೊರ ರಾಜ್ಯಗಳಿಂದ ಬಂದಿರುವ ಹಾಗೂ ಸ್ಥಳೀಯ ಕೂಲಿ ಕಾರ್ಮಿಕರಿಗೆ ಊಟದ ವ್ಯವಸ್ಥೆ ಮಾಡಿ ಕೊಟ್ಟಿದ್ದಾರೆ. ಅದೂ ಕೂಡ ಒಬ್ಬರಲ್ಲ ಇಬ್ಬರಲ್ಲ ಬರೋಬ್ಬರಿ ಹತ್ತು ಸಾವಿರಕ್ಕೂ ಹೆಚ್ಚು ವಲಸೆ ಕಾರ್ಮಿಕರ ಹೊಟ್ಟೆ ತುಂಬಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಕಳೆದ ಬಾರಿ ಒಂದಷ್ಟು ಅನಾಥ ಮಕ್ಕಳನ್ನು ದತ್ತು ಪಡೆದುಕೊಂಡು ಅವರ ಸಂಪೂರ್ಣ ವಿಧ್ಯಾಭ್ಯಾಸ ಹಾಗೂ ಅವರ ಅಗತ್ಯ ಖರ್ಚುಗಳನ್ನು ತಾವೇ ಸ್ವತಃ ನೋಡಿಕೊಳ್ಳುವುದಾಗಿ ಮಾತುಕೊಟ್ಟಿದ್ದಾರೆ. ಇದೀಗ ಹತ್ತು ಸಾವಿರಕ್ಕೂ ಹೆಚ್ಚು ಕಾರ್ಮಿಕರಿಗೆ ಊಟ ನೀಡುವುದರ ಮೂಲಕ ಮಾನವೀಯತೆ ಮರೆದಿದ್ದಾರೆ. ಸನ್ನಿಲಿಯೋನ್ ಅವರ ಈ ಒಳ್ಳೆಯ ಕಾರ್ಯಕ್ಕೆ ಪೇಟಾ ಎಂಬ ಎನ್.ಜಿ.ಓ ಸಂಸ್ಥೆ ಕೂಡ ಕೈ ಜೋಡಿಸಲು ಮುಂದೆ ಬಂದಿತ್ತು.

ಕಾರ್ಮಿಕರಿಗೆ, ಬೀದಿ ಬದಿ ನಿ’ರ್ಗತಿಕರಿಗೆ ಕೇವಲ ಆಹಾರವಲ್ಲದೆ ಅವರಿಗೆ ಹಣ್ಣು ಹಂಪಲುಗಳನ್ನು ಕೂಡ ಹಂಚಿಕೆ ಮಾಡುತ್ತಿದ್ದಾರೆ. ಈಗಾಗಲೇ ಅವರು ಟ್ರಕ್ ಗಳ ಮೂಲಕ ವರ್ಲಿ ಮತ್ತು ಜುಹು ಪ್ರದೇಶಗಳಿಗೆ ಆಹಾರ ಪೂರೈಕೆ ಮಾಡಿದ್ದಾರೆ. ಇನ್ನು ಸನ್ನಿಲಿಯೋನ್ ತಮ್ಮ ಈ ಒಳ್ಳೆಯ ಕೆಲಸಕ್ಕೆ ಕೈ ಜೋಡಿಸಿದ ಪೇಟಾ ಸಂಸ್ಥೆಯವರಿಗೆ ಧನ್ಯವಾದ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ಭಾರತದಲ್ಲಿ ಕೋ’ವಿಡ್ ಸಂ’ಕಷ್ಟ ಉಂಟಾಗಿರುವ ಹಿನ್ನೆಲೆಯಲ್ಲಿ ನಾವೆಲ್ಲರೂ ಒಗ್ಗಟ್ಟಿನಿಂದ ಕೊ’ರೋನ ವೈ’ರಸ್ ವಿರುದ್ದ ಹೋರಾಟ ಮಾಡಬೇಕಿದೆ ಎಂದು ಹೇಳಿದ್ದಾರೆ. ಸಧೃಡ ಭಾರತ ನಿರ್ಮಾಣ ಮಾಡುವುದಕ್ಕೆ ನಿಮ್ಮೆಲ್ಲರ ಸಹಕಾರ ಅತ್ಯಗತ್ಯ ಎಂದು ಹೇಳಿದ್ದಾರೆ. ಇವರ ಮಾನವೀಯತೆಯ ಬಗ್ಗೆ ನಿಮಗೇನು ಅನಿಸಿತು ಸ್ನೇಹಿತರೆ.