Advertisements

ಈ ಫೋಟೋದಲ್ಲಿರುವ ನಟ ಯಾರು ಅಂತ ಹೇಳಿ ನೋಡೋಣ.. ಭಾರತ ಸಿನಿಮಾರಂಗವನ್ನು ಆಳಿದ ಸ್ಟಾರ್ ನಟ ಈತ..!

Cinema Entertainment

ನಮಸ್ತೆ ಸ್ನೇಹಿತರೆ, ಸ್ಟಾರ್ ನಾಯಕಿ,ನಾಯಕರ ಬಾಲ್ಯದ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಹರಿದಾಡುತ್ತಿವೆ. ಕೊ’ರೊನಾದ ಲಾ’ಕ್‌ಡೌನ್ ಸಮಯದಲ್ಲಿ, ಸೆಲೆಬ್ರಿಟಿಗಳು ತಮ್ಮ ವೈಯಕ್ತಿಕ ವಿವರಗಳನ್ನು ಲೈವ್ ಚಾಟ್‌ಗಳ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ, ರಾಕಿಂಗ್ ಸ್ಟಾರ್ ಯಶ್, ರಶ್ಮಿಕಾ ಮಂದಣ್ಣ, ಕಾಜಲ್, ಅಲ್ಲು ಅರ್ಜುನ್, ರೆಬೆಲ್ ಸ್ಟಾರ್ ಪ್ರಭಾಸ್ ನಂತಹ ಸ್ಟಾರ್ ಹೀರೋಗಳ ಬಾಲ್ಯದ ಫೋಟೋಗಳನ್ನು ಜನರು ನೋಡಿ ಖುಷಿ ಪಡುತ್ತಿದ್ದಾರೆ. ಅಷ್ಟಕ್ಕೂ ಈ ಮೇಲಿನ ಫೋಟೋಗಳಲ್ಲಿ ಕಾಣುವ ಹುಡುಗ ಒಂದು ಕಾಲದಲ್ಲಿ ಭಾರತ ಸಿನಿ ರಂಗವನ್ನು ಆಳಿದ ಸ್ಟಾರ್ ಹೀರೋ ಎಂದರೆ ನೀವು ನಂಬಲೇಬೇಕು. ಈ ಸ್ಟಾರ್ ಹೀರೋ ಯಾರು ಅಂತ ನೋಡೋಣ ಬನ್ನಿ..

Advertisements
Advertisements

ಈ ಸ್ಟಾರ್ ಹೀರೋ ಬೇರೆ ಯಾರು ಅಲ್ಲ, ಅವರೇ ನಟಸಾರ್ವಭೌಮ ಸೀನಿಯರ್ ಎನ್ಟಿಆರ್. ನಂದಮುರಿ ತಾರಕ ರಾಮರಾವ್ ಅವರನ್ನು ಎನ್.ಟಿ.ರಾಮರಾವ್ ಅಥವಾ ಎನ್.ಟಿ.ಆರ್ ಎಂದು ಅಭಿಮಾನಿಗಳು ಪ್ರೀತಿಯಿಂದ ಕರೆಯುತ್ತಾರೆ. ಎನ್.ಟಿ.ಆರ್ ಅವರು ಭಾರತದ ಒಬ್ಬ ಚಲನಚಿತ್ರ ನಟ, ಬರಹಗಾರ,ನಿರ್ದೇಶಕ, ನಿರ್ಮಾಪಕರು ಹೌದು. ಎನ್ಟಿಆರ್ ಅವರು ಹನ್ನೆರಡು ವರ್ಷಗಳ ಕಾಲ ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿ ಆಳ್ವಿಕೆ ನಡೆಸಿದ್ದರು. ತೆಲುಗು ಜನರು “ಅನ್ನಗಾರು” ಎಂದು ಪ್ರೀತಿಯಿಂದ ಕರೆಯುವ ನಂದಮೂರಿ ತಾರಕ ರಾಮಾರಾವ್ ರವರು ಒಬ್ಬ ಮಹಾನಟ ಹಾಗೂ ಪ್ರಜೆಗಳ ನಾಯಕರಾಗಿ ಗುರುತಿಸಿಕೊಂಡಿದ್ದರು.

ಎನ್.ಟಿ.ರಾಮಾರಾವು ಅವರು ತೆಲುಗು, ತಮಿಳು ಹಾಗೂ ಹಿಂದೀ ಭಾಷೆಗಳಲ್ಲಿ 400ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ನಂದಮೂರಿ ತಾರಕ ರಾಮಾರಾವ್ ಅನೇಕ ಪೌರಾಣಿಕ, ಜಾನಪದ ಹಾಗೂ ಸಾಂಘಿಕ ಚಿತ್ರಗಳಲ್ಲಿ ವಿವಿಧ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ, ಇದಲ್ಲದೆ ರಾಮ, ಕೃಷ್ಣ ಎಂಬ ಪೌರಾಣಿಕ ಪಾತ್ರಗಳಲ್ಲಿ ನಟಿಸಿ ತೆಲುಗು ಜನರ ಮನಸ್ಸುಗಳನ್ನು ಗೆದ್ದಿದ್ದಾರೆ. ತಮ್ಮ 44 ವರ್ಷಗಳ ಸಿನಿಮಾ ಜೀವನದಲ್ಲಿ ನಂದಮೂರಿ ತಾರಕ ರಾಮಾರಾಮ್ ಅವರು 13 ಚಾರಿತ್ರಿಕ, 55 ಜಾನಪದ, 146 ಸಾಂಘಿಕ ಹಾಗೂ 44 ಪೌರಾಣಿಕ ಚಿತ್ರಗಳಲ್ಲಿ ನಟಿಸಿದ್ದಾರೆ.

ತಾರಕ ರಾಮಾರಾವ್ ಮತ್ತು ಬಸವ ತಾರಕಂ ದಂಪತಿಗಳಿಗೆ 11 ಮಕ್ಕಳು, ಅಂದರೆ 4 ಹೆಣ್ಣು ಮಕ್ಕಳು ಹಾಗು 7 ಗಂಡು ಮಕ್ಕಳು. ಜಯಕೃಷ್ಣ, ಸಾಯಿಕೃಷ್ಣ, ಹರಿಕೃಷ್ಣ, ಮೋಹನಕೃಷ್ಣ, ಬಾಲಕೃಷ್ಣ, ರಾಮಕೃಷ್ಣ ಮತ್ತು ಜಯಶಂಕರ್ ಕೃಷ್ಣ ಇವರ ಪುತ್ರರು. ಗಾರಪಾಟಿ ಲೋಕೇಶ್ವರಿ, ದಗ್ಗುಬಾಟಿ ಪುರಂದರೇಶ್ವರಿ, ನಾರ ಭುವನೇಶ್ವರಿ, ಕುಂಟಮನೇನಿ ಉಮಾಮಹೇಶ್ವರಿ ಇವರ ಪುತ್ರಿಯರು. ಎನ್ಟಿಆರ್ ಅವರ ಪುತ್ರರಾದ ಬಾಲಕೃಷ್ಣ ಮತ್ತು ಹರಿಕೃಷ್ಣ ಇಬ್ಬರೂ ಸಹ ತೆಲುಗಿನ ಖ್ಯಾತ ನಟರು. ಎನ್ಟಿಆರ್ ಅವರ ಬಗ್ಗೆ ನೀವೇನಂತಿರಾ ಸ್ನೇಹಿತರೆ. ಕಮೆಂಟ್ ಮಾಡಿ ತಿಳಿಸಿ.