Advertisements

ಮಾಲೀಕನ ಮೇಲೆ ಹುಚ್ಚು ಪ್ರೀತಿ ಇಟ್ಟಿದ್ದ ಈ ಎತ್ತು ಮಾಡಿದ ವಿಚಿತ್ರ ಕೆಲಸ ನೋಡಿ

Kannada News

ನಮಸ್ಕಾರ ವೀಕ್ಷಕರೆ ತೆಲಂಗಾಣದ ಕುಕ್ಕಟ್ ಪೆಲ್ಲಿ ಎಂಬ ಊರಿನಲ್ಲಿ ನಡೆದ ಒಂದು ಎತ್ತು ಮತ್ತು ಅದರ ಮಾಲೀಕನ ನಡುವೆ ನಡೆದಂತ ಒಂದು ಮನಕಲಕುವ ಘಟನೆ ಬಗ್ಗೆ ಸಂಪೂರ್ಣವಾಗಿ ಮಾಹಿತಿ ಓದಿ ನೋಡಿ ಕುಕ್ಕಟ್ ಪೆಲ್ಲಿ ಎಂಬ ಸಣ್ಣ ಹಳ್ಳಿಯಲ್ಲಿ ರಾಮಸ್ವಾಮಿ ಎಂಬ ರೈತನೊಬ್ಬನು ಹಳ್ಳಿಯಲ್ಲಿ ವಾಸ ಮಾಡುತ್ತಿದ್ದರು, ರಾಮಸ್ವಾಮಿ ತುಂಬಾ ಪ್ರೀತಿಯಿಂದ ಒಂದು ಎತ್ತನ್ನು ಸಾಕುತ್ತಿದ್ದರು ಮೊದಲೆಲ್ಲ ರಾಮಸ್ವಾಮಿ ಇದೇ ಎತ್ತನ್ನು ಬಳಸಿ ವ್ಯವಸಾಯ ಮಾಡುತ್ತಿದ್ದರು ಆದರೆ ಈಗ ಹೊಸ ಟ್ರಾಕ್ಟರ್ ಖರೀದಿ ಮಾಡಿದ್ದರಿಂದ ತನ್ನ ಎತ್ತನ್ನು ವ್ಯವಸಾಯಕ್ಕೆ ರಾಮಸ್ವಾಮಿ ಬಳಸುತ್ತಿರಲಿಲ್ಲ ಅಕ್ಕ ಪಕ್ಕದವರೆಲ್ಲಾ ರಾಮಸ್ವಾಮಿಗೆ ಈ ಎತ್ತು ಇನ್ನೇನಕ್ಕೋ ಪ್ರಯೋಜನ ಬರಲ್ಲ ಹೀಗಾಗಿ ಕಸಾಯಿಖಾನೆಗೆ ಎತ್ತನ್ನು ಮಾರಿಬಿಡು ಸ್ವಲ್ಪ ಹಣನಾದರೂ ನಿಮಗೆ ಸಿಗುತ್ತೆ ಅಂತ ಹೇಳುತ್ತಿದ್ದರು ಆದರೆ ಕಸಾಯಿಖಾನೆಗೆ ತಾನು ಪ್ರೀತಿಯಿಂದ ಸಾಕಿದ್ದ ಎತ್ತನ್ನು ಮಾರಲು ರಾಮಸ್ವಾಮಿಗೆ ಮನಸ್ಸು ಬರಲಿಲ್ಲ ಆ ಎತ್ತು ಆರಾಮಾಗಿ ಹುಲ್ಲು ತಿನ್ನುತ್ತಾ ರಾಮಸ್ವಾಮಿ ಕುಟುಂಬಸ್ಥರ ಜೊತೆ ಆಟ ಆಡುತ್ತಾ ಕಾಲ ಕಳೆಯುತಿತ್ತು ರಾಮಸ್ವಾಮಿ ಹೊರಗೆ ಕೆಲಸಕ್ಕೆ ಹೋಗಿ ಸಂಜೆ ಬರುವುದು ಸ್ವಲ್ಪ ತಡವಾದರೆ ಮುಗಿತು ಈ ಎತ್ತು ಅಂಬಾ ಅಂಬಾ ಅಂತ ರಾಮಸ್ವಾಮಿ ಬರೋವರೆಗೂ ಕೂಗಿಕೊಳ್ಳುತ್ತಲೆ ಇರುತಿತ್ತು

Advertisements
Advertisements

ಹೀಗೆ ಒಂದು ದಿನ ಯಾವುದೋ ಕೆಲಸದ ನಿಮಿತ್ತ ರಾಮಸ್ವಾಮಿ ಹಳ್ಳಿಬಿಟ್ಟು ಹೈದ್ರಾಬಾದ್ ಗೆ ಹೋಗಿದ್ದರು ಎರಡು ದಿನಗಳಲ್ಲಿ ಕೆಲಸ ಮುಗಿಸಿ ವಾಪಸ್ ಹಳ್ಳಿಗೆ ಬಂದು ಬಿಡೋಣ ಅಂತ ಹೋಗಿದ್ದ ರಾಮಸ್ವಾಮಿಗೆ ಅಲ್ಲಿ ಕೆಲಸ ಲೇಟ್ ಆಗಿದ್ದರಿಂದ ಒಂದು ವಾರವಾದರೂ ರಾಮಸ್ವಾಮಿ ಹಳ್ಳಿ ಮನೆಗೆ ವಾಪಸ್ ಬರಲಿಲ್ಲ ರಾಮಸ್ವಾಮಿ ಹೆಂಡತಿ ಫೋನ್ ಮಾಡಿ ರೀ ನೀವು ಯಾಕೋ ಹೋದಾಗಿನಿಂದ ಎತ್ತು ಸರಿಯಾಗಿ ಆಹಾರ ತಿನ್ನುತ್ತಿಲ್ಲ ಸ್ವಲ್ಪ ಬೇಗ ಬನ್ನಿ ಅಂತ ಹೇಳಿದಳು ಬರ್ತೀನಿ ಬರ್ತೀನಿ ಆದರೆ ಸ್ವಲ್ಪ ಲೇಟ್ ಆಗುತ್ತೆ ಎತ್ತನ್ನು ಹುಷಾರಾಗಿ ನೋಡಿಕೊಳ್ಳಿ ಅಂತ ಹೇಳಿ ರಾಮಸ್ವಾಮಿ ಫೋನ್ ಕಟ್ ಮಾಡುತ್ತಿದ್ದ ಎರಡು ದಿನಗಳ ಬಳಿಕ ಆ ಎತ್ತು ನೀರು ಕುಡಿಯುವುದನ್ನೆ ನಿಲ್ಲಿಸಿಬಿಟ್ಟಿತು ಒಂದೇ ಸಮನೆ ಅಂಬಾ ಅಂಬಾ ಅಂತಾ ಕೂಗಿಕೊಳ್ಳುತ್ತಿತ್ತು ಯಾಕೋ ಎತ್ತಿನ ಕಂಡೀಶನ್ ಸೀರಿಯಸ್ ಆಗುತ್ತಿರುವುದು ನೋಡಿ!ರಾಮಸ್ವಾಮಿ ಹೆಂಡತಿ ಹಳ್ಳಿಯಲ್ಲಿದ ಪಶುವೈದ್ಯಗೆ ಕರೆ ಮಾಡಿ ಬರುವಂತೆ ಹೇಳಿದಳು ರಾಮಸ್ವಾಮಿ ಮನೆಗೆ ಬಂದ ಪಶುವೈದ್ಯರು ಎತ್ತನ್ನು ಚೆಕ್ ಮಾಡಿ ಒಂದು ಇಂಜೆಕ್ಷನ್ ಕೊಟ್ಟು ಏನು ಆಗಲ್ಲ ಎತ್ತು ನಾಳೆ ಬೆಳಗ್ಗೆ ಅಷ್ಟರಲ್ಲಿ ಹುಷಾರಾಗುತ್ತೆ ಎಂದು ಹೇಳಿ ಹೋದರೂ ಆದರೆ ಮಾರನೆಯ ದಿನ ಆ ಎತ್ತಿನ ಆರೋಗ್ಯ ಮತ್ತಷ್ಟು ಗಂಭೀರವಾಯಿತು

ಎತ್ತಿಗೆ ತನ್ನ ತಲೆ ಕೂಡ ಮೇಲೆಕ್ಕೆ ಎತ್ತುವಷ್ಟು ಶಕ್ತಿ ಇರಲಿಲ್ಲ ಮತ್ತೆ ಡಾಕ್ಟರ್ ಗೆ ಫೋನ್ ಮಾಡಿ ಕರೆಸಿದರು ಡಾಕ್ಟರ್ ನೆನ್ನೆ ನೀವು ಇಂಜೆಕ್ಷನ್ ಕೊಟ್ಟು ಹೋದ ನಂತರ ಸ್ವಲ್ಪ ಚೇತರಿಸಿಕೊಂಡಿದ್ದ ಎತ್ತು ಈಗ ಫುಲ್ ಸುಸ್ತಾಗಿ ಹೋಗಿದೆ ದಯವಿಟ್ಟು ಎತ್ತನ್ನು ಕಾಪಾಡಿ ಡಾಕ್ಟರ್ ಅಂತ ರಾಮಸ್ವಾಮಿ ಹೆಂಡತಿ.. ಕೈಮುಗಿದು ಬೇಡಿಕೊಂಡಳು ಡಾಕ್ಟರ್ ಎತ್ತಿಗೆ ಗ್ಲೂಕೋಸ್ ಹಾಕಿ ಚಿಕಿತ್ಸೆ ಕೊಟ್ಟರು ಆದರೆ ಎತ್ತು ಚೇತರಿಸಿಕೊಳ್ಳಲೇ ಇಲ್ಲ, ಡಾಕ್ಟರ್ ವೈದ್ಯ ಈ ರೀತಿ ಹೇಳಿದರು ಇನ್ನು ಈ ಎತ್ತಿನ ಕಥೆ ಮುಗಿಯಿತು ಇನ್ನು ಹೆಚ್ಚು ದಿನ ಈ ಎತ್ತು ಬದುಕಲ್ಲ ಈಗಲೇ ಕಸಾಯಿಖಾನೆಗೆ ಕೊಟ್ಟು ಸ್ವಲ್ಪ ದುಡ್ಡು ಮಾಡಿಕೊಳ್ಳಿ ಎಂದು ಹೇಳಿ ಡಾಕ್ಟರ್ ಹೊರಟುಹೋದರು ಡಾಕ್ಟರ್ ಹೇಳಿದ ಮಾತು ಕೇಳಿ ರಾಮಸ್ವಾಮಿ ಕುಟುಂಬಸ್ಥರೆಲ್ಲಾ ಕಣ್ಣೀರು ಹಾಕಲು ಶುರು ಮಾಡಿದರು ತಕ್ಷಣ ರಾಮಸ್ವಾಮಿ ಗೆ ಕಾಲ್ ಮಾಡಿ ರೀ ಬೇಗ ಬನ್ನಿ ಬೇಗ ಬನ್ನಿ ರೀ ನಮ್ಮ ಪ್ರೀತಿಯ ಎತ್ತು ಬದುಕಲ್ಲ ವಂತೆ ಡಾಕ್ಟರ್ ಹೇಳಿ ಹೋದರು ಅಂತ ಅಳುತ್ತಾ ರಾಮಸ್ವಾಮಿ ಹೆಂಡತಿ ಫೋನ್ ಕಟ್ ಮಾಡಿದಳು ಹೆಂಡತಿ ಹೇಳಿದ್ದು ಕೇಳಿ ರಾಮಸ್ವಾಮಿ ಗೆ ತನ್ನ ಹೃದಯ ಬಡಿತವೇ ನಿಂತು ಹೋದಂತೆ ಆಯಿತು ತಕ್ಷಣ ಇರುವ ಇದ್ದ ಕೆಲಸಗಳನ್ನು ಅರ್ಧಕ್ಕೆ ಬಿಟ್ಟು ರಾಮಸ್ವಾಮಿ ಹಳ್ಳಿಗೆ ಓಡೋಡಿ ಬಂದರು

ಹೈದರಾಬಾದ್ ನಿಂದ ಹಳ್ಳಿಗೆ ರಾಮಸ್ವಾಮಿ ಬರೋವಷ್ಟರಲ್ಲಿ ಆಗಲೇ ಐದು ಗಂಟೆ ಸಮಯ ಕಳೆದಿತ್ತು ರಾಮಸ್ವಾಮಿ ಮನೆಗೆ ಬಂದರೂ ರಾಮಸ್ವಾಮಿ ಹೆಜ್ಜೆಯ ಶಬ್ದ ಮತ್ತು ವಾಯ್ಸ್ ಕೇಳಿ ಸುಸ್ತಾಗಿ ಮಲಗಿದ್ದ ಎತ್ತು ಒಂದು ಬಾರಿ ಕಣ್ಣುಗಳು ಬಿಟ್ಟು ಕಾಲುಗಳನ್ನು ಅಲ್ಲಾಡಿಸಿತು ಎತ್ತಿನ ಬಳಿ ಬಂದ ರಾಮಸ್ವಾಮಿ ಎತ್ತನ್ನು ಜೋರಾಗಿ ತಬ್ಬಿಕೊಂಡು ಎತ್ತಿನ ಹಣೆಗೆ ಒಂದು ಮುತ್ತು ಕೊಟ್ಟು ಕಂದ ಯಾಕಪ್ಪಾ ಏನಾಯ್ತಪ್ಪಾ ನಿನಗೆ ಈ ರೀತಿ ಯಾಕೆ ಮಲಗಿದ್ದೀಯಾ ಎದ್ದೇಳು ಮೇಲೆ ನಾನು ಬಂದಿದ್ದೀನಿ ನೋಡು ಅಂತ ರಾಮಸ್ವಾಮಿ ಎತ್ತಿನ ಬಳಿ ಪ್ರೀತಿಯಿಂದ ಮಾತನಾಡಿದರು ಚಮತ್ಕಾರ ಅದ್ಭುತ ಚಮತ್ಕಾರ ಸಾಯುವ ಸ್ಥಿತಿ ತಲುಪಿದ್ದ ಎತ್ತು ತನ್ನ ಪ್ರೀತಿಯ ಯಜಮಾನ ಹೇಳಿದ ಮಾತು ಕೇಳಿ ದಿಡೀರನೆ ಖಡಕ್ಕಾಗಿ ಎದ್ದು ನಿಂತುಕೊಂಡಿತು ಒಂದು ಬಕೆಟ್ ನಲ್ಲಿ ನೀರು ತಂದು ಎತ್ತಿನ ಮುಂದೆ ರಾಮಸ್ವಾಮಿ ಇಟ್ಟ ಎತ್ತು ಘಟ ಘಟ ಅಂತ ಒಂದು ಬಕೆಟ್ ನೀರು ಕುಡಿಯಿತು ಸ್ವಲ್ಪ ಹುಲ್ಲು ತಂದು ಎತ್ತಿಗೆ ರಾಮಸ್ವಾಮಿ ತನ್ನ ಕೈಯಾರೆ ತಿನ್ನಿಸಿದ ಎತ್ತು ಹುಲ್ಲು ತಿಂತು ಅಬ್ಬಬ್ಬ ಏನಿದು ಆಶ್ಚರ್ಯ ಅಂತ ರಾಮಸ್ವಾಮಿ ಕುಟುಂಬಸ್ಥರು ಬಾಯಿ ಮೇಲೆ ಬೆರಳಿಟ್ಟುಕೊಂಡರು.. ಅಲ್ಲಾ ಡಾಕ್ಟರ್ ಬಂದು ಇಂಜೆಕ್ಷನ್ ಕೊಟ್ಟು ಗ್ಲುಕೋಸ್ ಹಾಕಿದರು ಮೇಲಕ್ಕೆ ಹೇಳದ ಎತ್ತು ರಾಮಸ್ವಾಮಿ ಹಾಡಿದ ಪ್ರೀತಿಯ ಮಾತಿಗೆ ಮೇಲೆ ಎದ್ದು ಬಿಡುತ್ತಲ್ಲ ಇದೇ ಅಲ್ವಾ ನಿಜವಾದ ಪ್ರೀತಿ ಎಂದರೆ ಈ ನಿಜವಾದ ಘಟನೆ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..