Advertisements

ಅಪ್ಪ ಮಗಳು ಸೇರಿ ತಮ್ಮ ಪ್ರಾ’ಣವನ್ನು ಪಣಕ್ಕಿಟ್ಟು ಸುಮಾರು 2 ಸಾವಿರ ಜನರ ಪ್ರಾಣವನ್ನ ಉಳಿಸಿದ್ದಾರೆ.! ಅದು ಹೇಗೆ ಎಂದು ತಿಳಿದರೆ ಬೆ’ಚ್ಚಿಬೀಳ್ತಿರಾ.!

Inspiration

ನಮಸ್ತೆ ಸ್ನೇಹಿತರೆ, ಭೂಮಿಯ ಮೇಲೆ ಹುಟ್ಟುವ ಎಲ್ಲಾ ಪ್ರಾಣಿಗಳಿಗೂ ಸಹ ಸಾ’ವು ಎನ್ನುವುದು ಖಚಿತವಾಗಿ ಇರುತ್ತದೆ. ಮನುಷ್ಯನಿಗೆ ಬರುವ ಸಾವಿನ ಆ ಒಂದು ಕ್ಷಣ ಮಾತ್ರ ಯಾರಿಂದಲೂ ತಪ್ಪಿಸಲು ಸಾದ್ಯವಿಲ್ಲ, ಆದರೆ ಕೆಲವು ಬಾರಿ ಯಾರಿಗೂ ತಿಳಿಯದಂತೆ ಈ ಸಾವು ನಮ್ಮನ್ನು ಸಮೀಪಿಸಿದಾಗ ಎಚ್ಚರಿಕೆ ಕೊಡಲು ದೇವರ ರೂಪದಲ್ಲಿ ಯಾರಾದರೂ ಬರುತ್ತಾರೆ. ಆದರೆ ರೀತಿ ಇಲ್ಲಿಯೂ ಕೂಡ ಯಾಗಿದೆ, ಅಪ್ಪ-ಮಗಳು ದೇವರ ರೂಪದಲ್ಲಿ ಬಂದು ಸಾವಿರಾರು ಜನರ ಪ್ರಾ’ಣವನ್ನು ಕಾಪಾಡಿದ್ದಾರೆ.. ಅಷ್ಟಕ್ಕೂ ಅಪ್ಪ-ಮಗಳು ಹೇಗೆ ಈ‌‌ ಸಾವಿರಾರು ಜನರ ಪ್ರಾ’ಣವನ್ನು ಕಾಪಾಡಿದರು ಅನ್ನೋದನ್ನು ತಿಳಿಯೋಣ ಬನ್ನಿ..

Advertisements
Advertisements

ಬುಡಕಟ್ಟು ಜನಾಂಗದ ಈ ವ್ಯಕ್ತಿ ತನ್ನ ಸೂಕ್ಷ್ಮ ಬುದ್ದಿ ಹಾಗು ತನ್ನ ಒಂದು ಆಲೋಚನೆಯಿಂದ, ಎರಡು ಸಾವಿರ ಜನರ ಪ್ರಾ’ಣವನ್ನು ಕಾಪಾಡಿದ್ದಾನೆ.. ಈ ವ್ಯಕ್ತಿಯ ಹೆಸರು ಸ್ವಪನ್, ತ್ರಿಪುರ ರಾಜ್ಯದ ದಂಚಾರ ಎನ್ನುವ ಅರಣ್ಯ ಪ್ರದೇಶದ ಬುಡಕಟ್ಟು ಜನಾಂಗದವರಾಗಿ ಗುರುತಿಸಿಕೊಂಡಿದ್ದಾರೆ.. ಈ ವ್ಯಕ್ತಿ ಒಂದು ದಿನ ತನ್ನ ಮಗಳ ಜೊತೆಗೆ ಬೇರೊಂದು ಹಳ್ಳಿಗೆ ಹೋಗಬೇಕಾದ ಸಮಯದಲ್ಲಿ ರೈಲ್ವೆ ಟ್ರ್ಯಾಕ್ ದಾಟಿ ಮುಂದೆ ಹೋಗುತ್ತಿದ್ದರು.. ಆ ಸಮಯದಲ್ಲಿ ಬಲಗಡೆ ತಿರುಗಿ ನೋಡಿದ ಸ್ವಪನ್ ಗೆ ಒಂದು ಕ್ಷಣ ಬೆಚ್ಚಿ ಬೀಳುವ ದೃಶ್ಯ ಕಾಣಿಸಿತ್ತು.. ಅದು ಏನೆಂದರೆ ಮೂರು ದಿನಗಳ ಕಾಲ ಸತತವಾಗಿ ಬಿದ್ದ ಮಳೆಯಿಂದ ಸುಮಾರು ಒಂದು ಕಿಲೋಮೀಟರ್ ದೂರದ ವರೆಗೆ ರೈಲ್ವೆ ಟ್ರ್ಯಾಕ್ ಮು’ರಿದು ಬಿದ್ದಿತ್ತು.

ಇದನ್ನು ಗಮನಿಸಿದ ಸ್ವಪನ್ ಆ ಜಾಗದಲ್ಲಿ ಇನ್ನು ಸ್ವಲ್ಪ ಸಮಯಕ್ಕೆ ಟ್ರೈನ್ ಬರುತ್ತದೆ ಎಂದು ತಿಳಿದಿತ್ತು. ಸ್ವಪನ್ ಗೆ ಆ ಕ್ಷಣದಲ್ಲಿ ದಿ’ಕ್ಕುತೋ’ಚದೆ ಆಗುತ್ತದೆ. ಹೇಗಾದರೂ ಮಾಡಿ ಜೋರಾಗಿ ಬರುವ ಟ್ರೈನ್ ಅನ್ನು ನಿಲ್ಲಿಸಬೇಕು, ಇಲ್ಲಿ ಆಗುವ ದೊಡ್ಡ ಅ’ನಾಹು’ತವನ್ನು ತಡೆಯಬೇಕು ಎಂದು ಯೋಚನೆ ಶುರುವಾಗಿ, ಸ್ವಪನ್ ತಕ್ಷಣವೇ ಒಂದು ಉಪಾಯ ಮಾಡುತ್ತಾನೆ. ಸ್ವಪನ್ ತನ್ನ ಮೈಮೇಲೆ ಇದ್ದ ಅಂಗಿಯನ್ನು ಬಿಚ್ಚಿ, ತಾನು ಹಾಗೂ ನನ್ನ ಮಗಳು ಬಟ್ಟೆಯನ್ನು ಕೈಯಲ್ಲಿ ಹಿಡಿದು ರೈಲ್ವೆ ಟ್ರ್ಯಾಕ್ ಮಧ್ಯೆ ಜೋರಾಗಿ ಬಟ್ಟೆಯನ್ನು ಅಲುಗಾಡಿಸುತ್ತಾ, ಶಬ್ದ ಮಾಡುತ್ತಾ ಟ್ರೈನ್ ಎದುರುಗಡೆ ಓಡಲು ಪ್ರಾರಂಭ ಮಾಡಿದರು.. ಇನ್ನೂ ರೈಲ್ವೆ ಟ್ರ್ಯಾಕ್ ನಲ್ಲಿ ಬಟ್ಟೆ ತೋರಿಸಿ ಓಡಿ ಬರುತ್ತಿದ್ದ ಇಬ್ಬರನ್ನೂ ನೋಡಿದ ಟ್ರೈನ್ ಚಾಲಕ, ಮುಂದೆ ಏನೂ ಅನಾಹುತ ಆಗಿದೆ ಅದಕ್ಕೆ ಇವರು ತಮ್ಮ ಬಟ್ಟೆಯನ್ನು ತೋರಿಸಿ ಟ್ರೈನ್ ನಿಲ್ಲಿಸುವಂತೆ ಸನ್ನೆ ಮಾಡುತ್ತಿದ್ದಾರೆ ಎಂದು ತಿಳಿದರು.

ತಕ್ಷಣ ರೈಲಿನ ಚಾಲಕ ರೈಲನ್ನು ಹಂತ ಹಂತವಾಗಿ ನಿಲ್ಲಿಸುತ್ತಾ ಬಂದರು, ರೈಲನ್ನು ನಿಲ್ಲಿಸಿ ಮುಂದೆ ಬಂದು ನೋಡಿದ ಚಾಲಕ ಬೆ’ಚ್ಚಿಬಿ’ದ್ದರು. ಇನ್ನೂ ಆ ಟ್ರೈನ್ ನಲ್ಲಿ ಬರೋಬ್ಬರಿ ಎರಡು ಸಾವಿರ ಜನರು ಪ್ರಯಾಣ ಮಾಡುತ್ತಿದ್ದರು, ಸ್ವಪನ್ ಹಾಗೂ ಅವರ ಮಗಳ ಈ ಸಾಹಸ ಸಾವಿರಾರು ಜನರ‌ ಪ್ರಾ’ಣವನ್ನು ಉಳಿಸಿತು. ಇನ್ನು ತಂದೆ ಹಾಗೂ ಮಗಳ ಧೈರ್ಯವನ್ನು ನೋಡಿದ ತ್ರಿಪುರ ರಾಜ್ಯದ ಮುಖ್ಯಮಂತ್ರಿ ತಂದೆ ಮಗಳನ್ನು ತಮ್ಮ ಮನೆಗೆ ಕರೆದುಕೊಂಡು ಬಂದು ಅವರಿಗೆ ಊಟದ ವ್ಯವಸ್ಥೆ ಮಾಡಿ, ನಂತರ ಸ್ವಪನ್ ಅವರು ಜೀವನ ನಡೆಸಲು ಒಂದು ಮನೆ ಹಾಗೂ ನಗದು ಬಹುಮಾನ ನೀಡಿದರು.. ಅಲ್ಲದೇ ಅವರು ಮಾಡಿದ ಕೆಲಸಕ್ಕೆ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.. ಪ್ರಾಣವನ್ನು ಪಣಕ್ಕಿಟ್ಟು ಜನರನ್ನು ಕಾಪಾಡಿದ ಸ್ವಪನ್ ಅವರ ಬಗ್ಗೆ ನಿಮ್ಮ ಅಭಿಪ್ರಾಯ ಏನು ಸ್ನೇಹಿತರೆ.