ನಮಸ್ತೆ ಸ್ನೇಹಿತರೆ, ಭಾರತದಲ್ಲಿ ಟಿವಿ ಆರಂಭವಾದಾಗ ಇದ್ದುದ್ದು ಒಂದೇ ಚಾನೆಲ್ ಅದು ದೂರದರ್ಶನ ಅಥವಾ ಡಿಡಿ ನ್ಯಾಷನಲ್. 1959 ರಲ್ಲಿ ಪ್ರ’ಯೋಗಾ’ತ್ಮಕ ಪ್ರಸಾರ ಪ್ರಾರಂಭವಾದರೂ ಪರಿ’ಣಾಮಕಾರಿಯಾಗಿ ಪ್ರಸಾರ ಆರಂಭವಾಗಿದ್ದು 1970 ರ ನಂತರವೇ. ಡಿಡಿ ನ್ಯಾಶನಲ್ ಹಿಂದಿ ಭಾಷೆಯಲ್ಲಿ ಶುರುವಾಗಿತ್ತು. ಸು’ದ್ದಿಗಳು, ಕಾರ್ಯಕ್ರಮಗಳು ಬಹುತೇಕ ಹಿಂದಿಯಲ್ಲಿಯೇ ಇರುತ್ತಿದ್ದವು. ಇತರ ಭಾಷೆಯ ಕಾರ್ಯಕ್ರಮಗಳು ಪ್ರಸಾರವಾಗುತ್ತಿದ್ದುದು ಬಹಳ ಅಪರೂಪ ಎಂದರೆ ತ’ಪ್ಪಲ್ಲ. ಭಾರತದ ಮೊಟ್ಟ ಮೊದಲು ಟಿವಿ ಚಾನೆಲ್ನಲ್ಲಿ ಮೊದಲ ಬಾರಿಗೆ ಕನ್ನಡದ ಸಿನಿಮಾ ಪ್ರಸಾರವಾಗಿದ್ದು ಬಹಳ ವಿಶೇಷ ಸಂದರ್ಭದಲ್ಲಿ. ಮೊದಲ ಬಾರಿಗೆ ಕನ್ನಡಿಗರು ಟಿವಿಯಲ್ಲಿ ನೋಡಿದ ಕನ್ನಡ ಸಿನಿಮಾ ಡಾ.ರಾಜ್ಕುಮಾರ್ ಅವರದ್ದು ಎಂಬುದು ವಿಶೇಷ.

1981ರ ಕನ್ನಡ ರಾಜ್ಯೋತ್ಸವದ ದಿನದಂದು ಮೊಟ್ಟ ಮೊದಲ ಬಾರಿಗೆ ಕನ್ನಡ ಸಿನಿಮಾವನ್ನು ದೂರದರ್ಶನದಲ್ಲಿ ಪ್ರಸಾರ ಮಾಡಲಾಯಿತು. ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಉಡುಗೊರೆಯಾಗಿ ಅಣ್ಣಾವ್ರ ‘ಶಂಕರ್-ಗುರು’ ಸಿನಿಮಾವನ್ನು ಪ್ರಸಾರ ಮಾಡಲಾಯಿತು. ಟಿವಿಗಳು ಬಹಳ ಅಪರೂಪವಾಗಿದ್ದ ಆ ಕಾಲದಲ್ಲಿಯೂ ಊರುಗಳಲ್ಲಿ, ನಗರ, ಪಟ್ಟಣಗಳಲ್ಲಿ ಟಿವಿಗಳನ್ನು ಹೊರಗೆ ಇಟ್ಟು ಎಲ್ಲರೂ ಸೇರಿ ಅಣ್ಣಾವ್ರ ಸಿನಿಮಾವನ್ನು ನೋಡಿ ಸಂಭ್ರಮಿಸಿದ್ದರು. ರಾಜ್ ಕುಮಾರ್ ಅವರು ನಮ್ಮ ಊರಿಗೆ ಬಂದಿದ್ದಾರೆ’ ಎಂದು ಹಾರಗಳನ್ನು ಹಾಕಿ, ಆರತಿ ಮಾಡಿ ಜನ ಸಂಭ್ರಮಿಸಿದ್ದರು.

ಆ ನಂತರ ಕನ್ನಡಿಗರಿಗಾಗಿಯೇ ಡಿಡಿ ಚಂದನ ಚಾನೆಲ್ ಅನ್ನು 1991 ರ ಆಗಸ್ಟ್ 15ರಂದು ಪ್ರಾರಂಭಿಸಿ ಪ್ರಸಾರ ಮಾಡಲಾಯಿತು. ಆ ನಂತರ ಪ್ರತಿ ವಾರ ರಾಜ್ಕುಮಾರ್ ಸಿನಿಮಾಗಳು ಸೇರಿದಂತೆ ಹಲವಾರು ಕನ್ನಡ ಸಿನಿಮಾಗಳನ್ನು ಕನ್ನಡಿಗರು ನೋಡಿ ಖುಷಿ ಪಡುವಂತಾಯಿತು. ಕನ್ನಡದಲ್ಲಿಯೇ ವಾರ್ತೆ ಕೇಳುವ, ಇತರೆ ಕಾರ್ಯಕ್ರಮಗಳನ್ನು ನೋಡುವ ಅವಕಾಶ ಕನ್ನಡ ಜನರಿಗೆ ಪ್ರಾಪ್ತಿಯಾಯಿತು.

ನಂತರದ ದಿನಗಳಲ್ಲಿ ಡಿಡಿ ಚಂದನ ಬಹುಬೇಗ ಖ್ಯಾತಿಗಳಿಸಲು ಹಾಗೂ ಅನೇಕ ಜನರವರೆಗೂ ತಲುಪಲು ಡಾ.ರಾಜ್ಕುಮಾರ್ ಅವರು ಹಾಗೂ ಅವರ ಸಿನಿಮಾಗಳು ಪ್ರಮುಖ ಕಾರಣವೆಂದರೆ ಅನುಮಾನವೇ ಇಲ್ಲ. ಅದೇ ಸಮಯದಲ್ಲಿ ಸ್ಟಾರ್ ಮತ್ತು ಸನ್ ನೆಟ್ವರ್ಕ್ಗಳು ಭಾರತದಲ್ಲಿ ಖಾಸಗಿ ಚಾನೆಲ್ ಆರಂಭಿಸಿ ಬಹುಬೇಗ ಖ್ಯಾತಿ ಗಳಿಸಿದವು. ಡಿಡಿ ಚಾನೆಲ್ ಬಗ್ಗೆ ನೀವೇನಂತೀರಿ ಸ್ನೇಹಿತರೆ. ಕಮೆಂಟ್ ಮಾಡಿ ತಿಳಿಸಿ.