Advertisements

ಫಸ್ಟ್ ರಾಂಕ್ ರಾಜು ಗುರುನಂದನ್ ಅವರ ಐಷಾರಾಮಿ ಕಟ್ಟಡ ಹೇಗಿದೆ ಗೊತ್ತಾ..? ಮೊದಲ ಬಾರಿಗೆ ನೋಡಿ..

Cinema Entertainment

ನಮಸ್ತೆ ಸ್ನೇಹಿತರೆ, ನಟ ಗುರುನಂದನ್ ಅಂದ ತಕ್ಷಣ ನಾವು ಯೋಚನೆ ಮಾಡ್ತಿವಿ.. ಅದೇ ಫಸ್ಟ್ ರಾಂಕ್ ರಾಜು ಅಂತ ಕಣ್ಮುಂದೆ ಬಂದ್ಬಿಡ್ತಾರೆ.. ಫಸ್ಟ್ ರಾಂಕ್ ರಾಜು ಸಿನೆಮಾ ಮಾಡಿದ ಹವಾ ಅಷ್ಟೀಷ್ಟಲ್ಲ ಬಿಡಿ. ನಟ ಗುರುನಂದನ್ ಸಿನೆಮಾ ಎಂಬ ಮಾಯಾ ಕುದುರೆ ಬೆನ್ನು ಹತ್ತಿದಾಗ ಸಖತ್ ನೇಮ್ ಮತ್ತೆ ಪೆಮ್ ಕೊಟ್ಟ ಸಿನೆಮಾ ಇದು. ಸಿನೆಮಾ ಕ್ಷೇತ್ರದಲ್ಲಿ ಒಂದು ಹೆಸರು ಮಾಡಲು ಇವರು ಪಟ್ಟ ಕಷ್ಟ ಅಷ್ಟೀಷ್ಟಲ್ಲ. ಈ ನಟ ತಮ್ಮ ಕನಸಿನ ಅರಮನೆಯನ್ನು ಹೇಗೆ? ಮತ್ತೆ ಎಲ್ಲಿ ಕಟ್ಟಿದ್ದಾರೆ ಎಂಬುದರ ಬಗ್ಗೆ ಕಂಪ್ಲೀಟ್ ಆಗಿ ನಾವು ಹೇಳ್ತಿವಿ..

Advertisements
Advertisements

ಗುರುನಂದನ್ ಅವರು ಡಿಸೆಂಬರ್ 30 1987 ರಲ್ಲಿ ಚಿಕ್ಕಮಗಳೂರಿನ ಮುಡಗೇರಿಯಲ್ಲಿ ಜನಿಸುತ್ತಾರೆ..‌ ಚಿಕ್ಕಂದಿನಿಂದಲೂ ಇವರ ಆಸಕ್ತಿದಾಯಕ ಕ್ಷೇತ್ರ ಸಿನಿಮಾ ಆಗಿತ್ತು.. 8 ನೇ ತರಗತಿ ಓದುವಾಗ್ಲೇ ನಟನೆಗೆ ಮನಸು ವಾಲಿ ಮನೆ ಬಿಟ್ಟು ಬೆಂಗಳೂರಿಗೆ ಬಂದರು ಆದರೆ ಆಗ ಅಂದುಕೊಂಡದ್ದು ಸಾಧ್ಯವಾಗ್ಲಿಲ್ಲ.. ವಿಧಿ ಇಲ್ಲದೆ ಮತ್ತೆ ಊರ ಬಸ್ ಹತ್ತಿದ್ರು… ಡಿಗ್ರಿ ಮುಗಿದ ನಂತರ ನಟನೆ ಮಾಡ್ಬೇಕು ಅಂತ ಎಲ್ಲಿಲ್ಲದ ಕಷ್ಟ ಪಟ್ಟು ಕೊನೆಗೆ ಗುರಿ ಮುಟ್ಟಿದ್ರು.

ಇಂತಹ ಟೈಂನಲ್ಲಿ ಇವರ ಕೈ ಹಿಡಿದದ್ದು ಫಸ್ಟ ರ್ಯಾಂಕ್ ರಾಜು. ಈಗ ಅವರು ತಮ್ಮ ಹುಟ್ಟೂರಲ್ಲಿ ತಮ್ಮ ಕನಸಿನ ಮನೆ ಕಟ್ಟಿ ಇತ್ತೀಚಿಗೆ ಗೃಹ ಪ್ರವೇಶವೂ ಮಾಡಿದ್ದಾರೆ..‌ ಸುತ್ತಲೂ ಭೂತಾಯಿಯ ಹಸಿರು ನೋಟ.. ದೃಷ್ಟಿ ಬೊಟ್ಟು ಇಟ್ಟ ಹಾಗೇ ಮನೆ ಕಟ್ಟಿದ್ದಾರೆ. ಸತತ ವೈಪಲ್ಯದಿಂದ ಇಂದು ಹಿಟ್ ಆದ ಗುರುನಂದನ್ ಅವರು ಆಸೆಯಂತೆ ಪ್ರಕೃತಿಯ ಮಧ್ಯ ಸುಂದರ ಮನೆ ನಿರ್ಮಿಸಿದ್ದು ನಿಜಕ್ಕೂ ಮೆಚ್ಚುಗೆಗೆ ಪಾತ್ರವಾಗಿದೆ… ಗುರುನಂದನ್ ಅವರ ಬಗ್ಗೆ ನೀವೇನಂತಿರಾ ಸ್ನೇಹಿತರೆ. ಕಮೆಂಟ್ ಮಾಡಿ ತಿಳಿಸಿ.