Advertisements

ಹಲ್ಲುಜ್ಜುವ ಬ್ರಷ್‌ನ ಇತಿಹಾಸ ನಿಮಗೆ ಗೊತ್ತಾ..? ಮೊದಲ ಬ್ರಷ್ ಅನ್ನು ಹಂದಿ ಕೂದಲಿನಿಂದ ಮಾಡಲಾಗಿತ್ತು..! ಅದು ಹೇಗಿತ್ತು ಎಂದು ನೀವೇ ನೋಡಿ..

Kannada News

ನಾವು ಪ್ರತಿದಿನ ಬೆಳಿಗ್ಗೆ ಎದ್ದು ಮಾಡುವ ಮೊದಲ ಕೆಲಸವೆಂದರೆ ಹಲ್ಲು ಉಜ್ಜುವುದು. ಎಲ್ಲರೂ ಟೂತ್ ಪ್ರೆಸ್ ಸಹಾಯದಿಂದ ತಮ್ಮ ಹಲ್ಲನ್ನು ಸ್ವಚ್ಛ ಮಾಡಿಕೊಳ್ಳುತ್ತಾರೆ. ನಮ್ಮ ಭಾರತದಲ್ಲಿ ಮೊದಲು ಟೂತ್ ಬ್ರಷ್ ಇರಲಿಲ್ಲ.. ಆಗಿನ ಕಾಲದ ಜನರು ಬೇವಿನ ಕಡ್ಡಿಯ ಸಹಾಯದಿಂದ ತಮ್ಮ ಹಲ್ಲನ್ನು ಸ್ವಚ್ಛ ಮಾಡಿಕೊಳ್ಳುತ್ತಿದ್ದರು, ಹಾಗೂ ಇದ್ದಲಿನ ಪುಡಿಯ ಸಹಾಯದಿಂದ ಹಲ್ಲನ್ನು ಉಜ್ಜುತ್ತಿದ್ದರು. ಟೂತ್ ಬ್ರಷ್ ಬಂದ ನಂತರದ ದಿನಗಳಲ್ಲಿ ಎಲ್ಲರೂ ಟೂತ್ ಬ್ರಷ್ ಅನ್ನು ರೂಡಿ ಮಾಡಿಕೊಂಡರು. ಆದರೆ ವಿಶ್ವದ ಮೊದಲ ಟೂತ್ ಬ್ರಷ್ ಯಾವಾಗ ತಯಾರಿಸಲ್ಪಟ್ಟಿದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ.. ನೋಡೋಣ ಬನ್ನಿ.

Advertisements
Advertisements

ಹಲ್ಲು ಉಜ್ಜುವ ವಿಧಾನವನ್ನು ಚೀನಾ ಮೊದಲ ಬಾರಿಗೆ ಜಗತ್ತಿಗೆ ಪರಿಚಯ ಮಾಡಿತು. 1498 ರ ಜೂನ್ 26 ರಂದು ಚೀನಾದ ದೊರೆ ಹ್ಯಾಂಗ್ಜಿ ಮೊದಲು ಹಲ್ಲುಜ್ಜುವ ಬ್ರಷ್ ಬಳಸಿದ್ದಾರೆ ಎಂದು ಇತಿಹಾಸಕಾರರು ಹೇಳುತ್ತಾರೆ. ಅದಕ್ಕೂ ಮೊದಲು ಜನರು ಇದ್ದಿಲ ಪುಡಿ, ಇತ್ಯಾದಿಗಳಿಂದ ಹಲ್ಲುಗಳನ್ನು ಸ್ವಚ್ಛ ಗೊಳಿಸುತ್ತಿದ್ದರು. ವಿಶ್ವದ ಮೊದಲ ಟೂತ್ ಬ್ರಷ್ ಹಂದಿ ಕೂದಲಿನಿಂದ ತಯಾರಿಸಲ್ಪಟ್ಟಿದೆ. ಈ ಮುಳ್ಳಿನ ಬ್ರಷ್‌ನಿಂದ ಹಲ್ಲುಜ್ಜುವುದು ಕಷ್ಟ ಕಾರ್ಯವಾಗಿದೆ. ಹಂದಿಯ ಕತ್ತಿನ ಹಿಂಭಾಗದಿಂದ ತೆಗೆದ ಒರಟಾದ ಕೂದಲಿನಿಂದ ಇವುಗಳನ್ನು ತಯಾರಿಸಲಾಗುತ್ತದೆ.

ಈ ಹಂದಿ ಕೂದಲನ್ನು ಬಿದಿರಿನ ಕೋಲಿನಿಂದ ಕಟ್ಟಿ ಹಲ್ಲುಜ್ಜುವ ಬ್ರಷ್‌ಗಳ ರೀತಿ ಮಾಡಲಾಗಿತ್ತು. 1938 ರವರೆಗೆ ಹಂದಿ ಕೂದಲಿನಿಂದ ಮಾಡಿದ ಹಲ್ಲು ಉಜ್ಜುವ ಬ್ರಷ್‌ಗಳನ್ನು ಬಳಸಲಾಗುತ್ತಿತ್ತು. ಆಧುನಿಕ ಯುಗದ ಹಲ್ಲು ಉಜ್ಜುವ ಬ್ರಷ್ ಅನ್ನು 1780 ರಲ್ಲಿ ವಿಲಿಯಂ ಎಡ್ಡೀಸ್ ಎಂಬ ಇಂಗ್ಲಿಷ್ ಖೈದಿ ಕಂಡುಹಿಡಿದನು. ವಿಲಿಯಂ ಮಾಡಿದ ಬ್ರಷ್ ಸಹ ಹಂದಿ ಕೂದಲಿನಿಂದ ಮಾಡಲಾಗಿತ್ತು. ಡುಪಾಂಟ್ ಡಿ ನೆಮೊರ್ಸ್ 1950 ರ ದಶಕದಲ್ಲಿ ‘ನೈಲಾನ್ ಟೂತ್ ಬ್ರಷ್’ ಅನ್ನು ರಚಿಸಿದರು. ಈಗ ನಾವು ಬಳಸುವ ಟೂತ್ ಬ್ರಷ್ ಸಹ ನೈಲಾನ್ ನಿಂದ ಮಾಡುತ್ತಾರೆ. ಪ್ರಸ್ತುತ ಈಗ ಹಲವಾರು ರೀತಿಯ ಬ್ರಷ್ ಗಳು ನಮಗೆ ಮಾರುಕಟ್ಟೆಯಲ್ಲಿ ಸಿಗುತ್ತವೆ.