Advertisements

ವಿಮಾನದಲ್ಲಿ ಅಂಗವಿಕಲನಿಗೆ ಅವಮಾನ ಮಾಡಿದ ಹುಡುಗೀಗೆ ಎಂಥ ಸ್ಥಿತಿ ಬಂತು ನೋಡಿ ಶಾಕ್ ಆಗ್ತೀರಾ!

Kannada News

ನಮಸ್ಕಾರ ವೀಕ್ಷಕರೆ ನೋಡಲು ಮುದ್ದು ಮುದ್ದಾಗಿದ್ದ ಹುಡುಗಿ ಒಮ್ಮೆ ಹೊರದೇಶಕ್ಕೆ ಹೋಗಲು ವಿಮಾನ ಹತ್ತಿದಳು ಈ ಸೌಂದರ್ಯ ವತಿಯ ಹೆಸರು ಸಂಗೀತ ವಿಮಾನ ಹತ್ತಿದ ನಂತರ ತನ್ನ ಸೀಟ್ ಎಲ್ಲಿದೆ ಎಂದು ಹುಡುಕಿ ಅಲ್ಲಿ ಹೋಗಿ ನೋಡಿದರೆ
ಸಂಗೀತಾಳ ಸೀಟಿನ ಪಕ್ಕದ ಸೀಟಿನಲ್ಲಿ ಎರಡು ಕೈಗಳು ಇಲ್ಲದಂತಹ ವ್ಯಕ್ತಿಯೊಬ್ಬರು ಕುಳಿತಿದ್ದರು ಈ ವ್ಯಕ್ತಿಯನ್ನು ನೋಡಿದ ತಕ್ಷಣ ಸಂಗೀತಾಗೆ ತುಂಬಾ ಬೇಸರವಾಯಿತು ಈ ಕ್ಯೆ ಇಲ್ಲದ ವ್ಯಕ್ತಿಯ ಪಕ್ಕದಲ್ಲಿ ನಾನು ಹೇಗೆ ಕೂತುಕೊಳ್ಳುವುದು ಛೇ ಇವನನ್ನು ನೋಡಿದರೆನೆ ಅಸಹಾಯ ಆಗುತ್ತೆ ಅಂತ ಮನಸ್ಸಿನಲ್ಲೆ ಮಾತಾಡಿಕೊಂಡ ಸಂಗೀತ ಗಗನಸಖಿಯನ್ನು ಕರೆದು
ನಾನು ಈ ಸೀಟಿನಲ್ಲಿ ಕುಳಿತು ಕೊಳ್ಳುವುದಿಲ್ಲ ನನಗೆ ಬೇರೆ ಸೀಟ್ ವ್ಯವಸ್ಥೆ ಮಾಡಿ ಮಾಡಿಕೊಡಿ ಎಂದು ಸಂಗೀತ ಕೇಳಿದಳು , ಯಾಕೆ ಮೇಡಮ್ ಏನಾಯಿತು ನಿಮ್ಮ ಈ ಸೀಟಿನಲ್ಲಿ ಏನು ಪ್ರಾಬ್ಲಮ್ ಇದೆ ಇಲ್ಲೇ ಆರಾಮಾಗಿ ನೀವು ಕುಳಿತುಕೊಳ್ಳಬಹುದಲ್ವಾ ಅಂತಾ ಗಗನಸಖಿ ಸಂಗೀತಾನ ಕೇಳಿದಳು ನನಗೆ ಈ ಎರಡು ಕೈಗಳು ಇಲ್ಲದಿರೋ ವ್ಯಕ್ತಿ ಪಕ್ಕದಲ್ಲಿ ಕುಳಿತು ಪ್ರಯಾಣ ಮಾಡುವುದು ಇಷ್ಟ ಇಲ್ಲ ಇವರ ಪಕ್ಕ ಕುಳಿತರೆ ನನಗೆ ಅವಮಾನ ಆಗುತ್ತೆ ಅಂತಾ ಸಂಗೀತ ಹೇಳಿದಳು..

Advertisements
Advertisements

ಸಂಗೀತಾಳ ಈ ಮಾತು ಕೇಳಿ ಗಗನಸಖಿ ಶಾಕ್ ಆದಳು ನೋಡೋಕ್ಕೆ ಇಷ್ಟೂ ಸುಂದರವಾಗಿ ಡಿಸೆಂಟ್ ಹುಡುಗಿ ತರ ಕಾಣಿಸುತ್ತಾಳೆ ಇಷ್ಟು ಅನಾಗರಿಕವಾಗಿ ಮಾತಾಡುತ್ತಿದ್ದಾಳೆ ಅಲ್ವಾ ಅಂತಾ ಸಂಗೀತ ಮೇಲೆ ಗಗನಸಖಿಗೆ ಕೋಪ ಬಂದರು ಏನೂ ಮಾಡದ ಪರಿಸ್ಥಿತಿ ಆ ಗಗನಸಖಿದು ವಿಧಿಯಿಲ್ಲದೆ ಇರಿ ಮೇಡಂ ನಾನು ಯಾವುದಾದರೂ.. ಬೇರೆ ಸೀಟ್ ಇದಿಯಾ ಎಂದು ನೋಡಿಕೊಂಡು ಬರ್ತೀನಿ ಎಂದು ಹೇಳಿ ಗಗನಸಖಿ ಚೆಕ್ ಮಾಡಿ ನೋಡಿದಳು ಆದರೆ ಗೋಶ್ ನಲ್ಲಿ ಯಾವ ಸೀಟು ಕೂಡ ಖಾಲಿ ಇರಲಿಲ್ಲ ಪ್ರಯಾಣಿಕರಿಂದ ಎಲ್ಲಾ ಸೀಟುಗಳು ಭರ್ತಿಯಾಗಿತ್ತು ವಾಪಸ್ ಸಂಗೀತ ಹತ್ತಿರಬಂದ ಗಗನಸಖಿ ಮೇಡಂ ಇಲ್ಲಿ ಬೇರೆ ಸೀಟ್ ಖಾಲಿ ಇಲ್ಲ ಇರಿ ನಮ್ಮ ಕ್ಯಾಪ್ಟನ್ ಹತ್ತಿರ ಮಾತಾಡಿ ನಿಮಗೆ ಬೇರೆ ಯಾವುದಾದರೂ ಸೀಟ್ ವ್ಯವಸ್ಥೆ ಮಾಡಕ್ಕಾಗುತ್ತಾ ಅಂತ ಕೇಳಿಕೊಂಡು ಬರ್ತೀನಿ ಅಲ್ಲಿವರೆಗೂ ಸಮಾಧಾನವಾಗಿರಿ ಎಂದು ಹೇಳಿ ಗಗನಸಖಿ ಕ್ಯಾಪ್ಟನ್ ರೂಮಿನ ಒಳಗೆ ಹೋದಳು ಸ್ವಲ್ಪ ಹೊತ್ತಿನ ನಂತರ ಹೊರಗೆ ಬಂದ ಗಗನಸಖಿ ಸಂಗೀತ ಹತ್ತಿರ ಬಂದು ಮೇಡಂ ನೀವು ತೆಗೆದು ಕೊಂಡಿರೋಧು ಎಕನಾಮಿ ಕ್ಲಾಸ್ ಟಿಕೆಟ್ ಆದರೆ ಎಕನಾಮಿ ಕ್ಲಾಸ್ ನಲ್ಲಿ ನಿಮಗೆ ಅಡ್ಜೆಸ್ಟ್ ಮಾಡೋಕೆ ಬೇರೆ ಸೀಟು ಖಾಲಿ ಇಲ್ಲ

ಆದರೆ ಫಸ್ಟ್ ಕ್ಲಾಸ್ ನಲ್ಲಿ ಮಾತ್ರ ಒಂದು ಸೀಟು ಖಾಲಿ ಇದೆ ಆದರೆ ನೀವು ನಮ್ಮ ಪ್ರೀತಿಯ ಪ್ರಯಾಣಿಕ ರಾಗಿರುವ ಕಾರಣ ನಿಮ್ಮ ಡಿಮ್ಯಾಂಡ್ ನ ಪೂರೈಸಲೇಬೇಕು ಹೀಗಾಗಿ ಮೊಟ್ಟಮೊದಲ ಬಾರಿಗೆ ಐದು ಸಾವಿರ ಟಿಕೆಟ್ ಖರೀದಿ ಮಾಡಿದ ಒಬ್ಬ ಪ್ರಯಾಣಿಕನನ್ನು ಇಪ್ಪತ್ತೈದು ಸಾವಿರ ಬೆಲೆಯ ಟಿಕೆಟ್ ಸೀಟ್ ಇರುವ ಫಸ್ಟ್ ಕ್ಲಾಸ್ ನಲ್ಲಿ ಕೂರಿಸಿದ್ದೀವಿ ಸ್ವಲ್ಪ ಇರಿ ಮೇಡಮ್ ಅಂತ ಗಗನಸಖಿ ಹೇಳಿದಳು, ಗಗನಸಖಿ ಹೇಳಿದ ಮಾತು ಕೇಳಿ ಸಂಗೀತ ಫುಲ್ ಖುಷಿಯಾದಳು ಆಹಾ ಇದಲ್ವಾ ಲಾಟರಿ ಇಪ್ಪತ್ತೈದು ಸಾವಿರ ಬೆಲೆಯ ಪಸ್ಟ್ ಕ್ಲಾಸ್ ಸೀಟ್ ಹೇಗಿರುತ್ತೋ ಇವತ್ತು ನೋಡೋಣ ಅಂತ ಗಗನಸಖಿ ಇನ್ನು ತನ್ನ ಮಾತು ಮುಗಿಸೋಕೋ ಮುಂಚೆನೆ ಸಂಗೀತ ತನ್ನ ಲಗ್ಗೇಜ್ ಬ್ಯಾಗ್ ಎಲ್ಲವನ್ನು ಎತ್ತುಕೊಂಡು ಫಸ್ಟ್ ಕ್ಲಾಸ್ ಕಡೆಗೆ ಹೊರಟಳು ಆದರೆ ಅಲ್ಲಿ ನಡೆದಿದ್ದೇ ಬೇರೆ ಸ್ನೇಹಿತರೆ ಗಗನಸಖಿ ನೇರವಾಗಿ ಎರಡು ಕೈಗಳು ಇಲ್ಲದ ವ್ಯಕ್ತಿ ಬಳಿ ಬಂದು ಸರ್ ದಯವಿಟ್ಟು ನಮ್ಮನ್ನು ಕ್ಷಮಿಸಿ ನಿಮ್ಮ ಎಲ್ಲ ಲಗ್ಗೇಜುಗಳನ್ನು ಎತ್ತುಕೊಂಡು ನಾನು ಬರ್ತೀನಿ ನೀವು ಫಸ್ಟ್ ಕ್ಲಾಸ್ ಗೆ ಹೋಗಿ ಸರ್ ಅಂತ ಗಗನಸಖಿ ಹೇಳಿದಳು, ನಿಮ್ಮ ಪಕ್ಕದಲ್ಲಿ ಸಂಗೀತ ಅಂತಹ ಹುಡುಗೀನ ಕೂರಿಸಲು ನಮ್ಮ ಮನಸ್ಸು ಒಪ್ಪೋದಿಲ್ಲ ಅಂತ ಗಗನಸಖಿ ಕೈ ಇಲ್ಲದ ವ್ಯಕ್ತಿನಾ ಎಕನಾಮಿ ಕ್ಲಾಸ್ ನಿಂದ ಫಸ್ಟ್ ಕ್ಲಾಸ್ ಗೆ ಶಿಫ್ಟ್ ಆಗುವಂತೆ ಮನವಿ ಮಾಡಿಕೊಂಡಳು

ವಿಮಾನದಲ್ಲಿ ಕೂತಿದ್ದ ಬೇರೆ ಪ್ರಯಾಣಿಕರೆಲ್ಲ ಜೋರಾಗಿ ಚಪ್ಪಾಳೆ ಹೊಡೆಯುವ ಮೂಲಕ ಗಗನಸಖಿ ಮಾಡಿದ ಕೆಲಸ ಸರಿ ಇದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು ಸುಂದರ ಹುಡುಗಿ ಸಂಗೀತಾಗೆ ಇಷ್ಟೊಂದು ಜನಗಳ ಎದುರು ಅವಮಾನ ಆಗಿಹೋಯಿತು.. ನನಗೆ ಆ ವ್ಯಕ್ತಿಯ ಪಕ್ಕದಲ್ಲಿ ಕೂರುವ ಯೋಗ್ಯತೆ ಇಲ್ಲ ಅಂತಾ ಹೇಳಿಬಿಟ್ಟರಲ್ಲ ಎಂದು ಸಂಗೀತ ಮುಖ ಸಪ್ಪಗೆ ಮಾಡಿಕೊಂಡು ಅಲ್ಲೆ ನಿಂತುಕೊಂಡಳು ಆಗ ಕೈಗಳು ಇಲ್ಲದ ವ್ಯಕ್ತಿ ಎದ್ದು ನಿಂತು ನಾನು ಒಬ್ಬ ರಿಟರ್ಡ್ ಮಿಲ್ಟ್ರಿ ಸೈನಿಕ ಕಾರ್ಗಿಲ್ ಯುದ್ಧದಲ್ಲಿ ನಾನು ನನ್ನ ಎರಡು ಕೈಗಳನ್ನು ಕಳೆದುಕೊಂಡೆ ಮೊದಲ ಬಾರಿ ಸಂಗೀತ ನನ್ನ ಬಗ್ಗೆ ಆಡಿದ ಮಾತುಗಳನ್ನು ಕೇಳಿ ಛೇ ಇವಳ ಅಂತಹ ಜನಗಳಿಗೋಸ್ಕರನ ನಾನು ಕಾರ್ಗಿಲ್ ಯುದ್ದದಲ್ಲಿ ಅಷ್ಟೊಂದು ಕಷ್ಟಪಟ್ಟು ಶತ್ರುಗಳ ಜೊತೆ ಹೋರಾಡಿದ್ದು ಅಂತ ಮನಸ್ಸಿಗೆ ತುಂಬಾ ನೋವಾಯಿತು ಆದರೆ ಈಗ ನೀವೆಲ್ಲ ಚಪ್ಪಾಳೆ ಹೊಡೆದು ನನಗೆ ಸಪೋರ್ಟ್ ಕೊಟ್ಟಿದ್ದು ನೋಡಿ ನನಗೆ ತುಂಬಾ ಹೆಮ್ಮೆಯಾಗುತ್ತಿದೆ..

ನಿಮ್ಮಂತಹ ಒಳ್ಳೆ ಮನಸ್ಸಿರುವ ಪ್ರಜೆಗಳಿಗೋಸ್ಕರ ನನ್ನ ಕೈಗಳನ್ನು ಕಳೆದುಕೊಂಡಿದ್ದಕ್ಕಾಗಿ ತುಂಬಾ ಸಂತೋಷ ಪಡುತ್ತಿದ್ದೇನೆ ಎಂದು ಹೇಳಿ ಫಸ್ಟ್ ಕ್ಲಾಸ್ ಕಡೆ ನಿಧಾನವಾಗಿ ಈ ಮಿಲ್ಟ್ರಿ ಮ್ಯಾನ್ ನಡೆದು ಹೋದರು ಸಂಗೀತಾಗೆ ತುಂಬಾನೇ ಅವಮಾನವಾಗಿ ಯಾರನ್ನೋ ತಲೆಯೆತ್ತಿ ನೋಡದ ಹಾಗೆ ಆಗಿತ್ತು ಸೌಂದರ್ಯ ಎಂಬುವುದು ನಮ್ಮ ಕಣ್ಣಿಗೆ ಕಾಣಿಸುವ ಹೊರಗಿನ ಸೌಂದರ್ಯ ಅಲ್ಲ ಸ್ನೇಹಿತರೆ ಮನಸಿನಲ್ಲಿ ಸೌಂದರ್ಯ ಇರುತ್ತೆ ಈ ಕಾರಣಕ್ಕಾಗಿ ದೇಹದ ಆಕಾರ ನೋಡಿ ಒಬ್ಬ ವ್ಯಕ್ತಿಯ ಯೋಗ್ಯತೆಯನ್ನು ಅಳೆಯಬಾರದು ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..