Advertisements

ಇಪ್ಪತ್ತು ಲಕ್ಷದ ಚಿನ್ನ, ಒಂದು ಕಾರು, ಕೈತುಂಬಾ ಹಣ ಕೊಟ್ಟು ಗೊಂಬೆಯಂತಹ ಹೆಣ್ಣನ್ನು ಕೊಟ್ಟು ಮದುವೆ ಮಾಡಿಕೊಟ್ಟರು! ಗಂಡ ಕೆಲಸಕ್ಕೆಂದು ಬೇರೆ ಕಡೆ ಹೋದ, ಇತ್ತ ಮನೆಯಲ್ಲಿ ಈಕೆಗೆ ಏನು ಮಾಡಿದ್ದಾರೆ ನೋಡಿ!!

Kannada News

ಇವತ್ತು ನಾವು ದೇವರ ನಾಡು ಅಂತಲೇ ಹೆಸರು ಪಡೆದ ಕೇರಳದಲ್ಲಿ ನಡೆದಿರುವ ಒಂದು ಘಟನೆ ಬಗ್ಗೆ ಹೇಳಲಿದ್ದೇವೆ. ಇದು ನಿಜಕ್ಕೂ ಮನಃಕಲಕುವಂತಹ‌ ಘಟನೆ. ಅದಾಗಲೇ ಅಲ್ಲಿ ಜೂನ್ 21 ರಲ್ಲಿ ನಡೆದ ವಿಸ್ಮಯ ಆತ್ಮ-ಹತ್ಯೆ ಪ್ರಕರಣದ ಬಿಸಿ ಇತ್ತು. ಈ ಸುದ್ದಿಯನ್ನು ಸುನೀತಾ ಅನ್ನುವವರು ನೋಡ್ತಾ ಕೂತಿದ್ದರು. ಆ‌ ಪ್ರಕ-ರಣ ನೋಡಿದ ಸುನೀತಾ ರಿಗೆ ಭಯ ಆಗಿ ಕೇವಲ ಮೂರು ತಿಂಗಳ ಹಿಂದಷ್ಟೆ ಮದುವೆ ಆಗಿದ್ದ ಮಗಳು ಸುಚಿತ್ರಾಳಿಗೆ ರಾತ್ರಿ ಫೋನ್ ಮಾಡಿ ಮಾತನಾಡಿದ್ದರು. ಆದರೆ ಮಾರನೇ ದಿನ ಬೆಳಗ್ಗೆ ಸುನೀತಾರ ಮೊಬೈಲ್ ಗೆ ಕರೆ ಬಂದು ಅದರಲ್ಲಿ ನಿಮ್ಮ‌ ಮಗಳು ರಾತ್ರಿ ಆತ್ಮ-ಹತ್ಯೆ ಮಾಡಿಕೊಂಡಿದ್ದಾಳೆ ಅನ್ನುವ ಸುದ್ದಿ ಬರುತ್ತದೆ.

Advertisements
Advertisements

ರಾತ್ರಿ ಮಾತನಾಡಿದ್ದ ಮಗಳು ಈಗ ಇಲ್ಲ ಅನ್ನುವುದನ್ನು ಆಕೆಗೆ ನಂಬಲಾಗುತ್ತಿರಲಿಲ್ಲ. ಸುನೀತಾ ಹಾಗೂ ಸುನೀಲ್ ಅವರ‌‌ ಮುದ್ದಿನ ಮಗಳು ಸುಚಿತ್ರಾ, ಈಕೆಗೆ 20 ವರ್ಷದ ಒಳಗೆ ಮದುವೆ ಮಾಡಿಸಬೇಕು ಇಲ್ಲದೇ ಹೋದರೆ ನಂತರ ಸುಮಾರು ವರ್ಷ ಕಂಕಣ ಭಾಗ್ಯ ಇಲ್ಲ, ಬೇಗ‌ ಮದುವೆ ಆದರೆ ಆಕೆಯ ಜೀವನ‌ ಚೆನ್ನಾಗಿರುತ್ತದೆ ಎಂದು ಜ್ಯೋತಿಷಿಯೊಬ್ಬರು ಹೇಳಿದ್ದರು.‌ ಹೀಗಾಗಿ ತನ್ನ ಮಗಳು ಸುಖವಾಗಿ ಇರಬೇಕು ಎಂದು ತಕ್ಷಣ ಗಂಡು ಹುಡುಕುವ ಕೆಲಸ ಮಾಡಿದ್ದರು.

ಹೀಗೆ ಸುನೀತಾ ದಂಪತಿಯವರಿಗೆ ಕೇರಳದ ಅಲ್ಲಾಪೂಲಂ ನಿವಾಸಿ ಉತ್ತರ ಖಾಂಡ್ ನಲ್ಲಿ ಆರ್ಮಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ವಿಷ್ಣು ಅನ್ನುವ 27 ವರ್ಷದ ಯುವಕನ ಜಾತಕ ಕೂಡಿ ಬಂತು. ಅವರ ಜೊತೆ ಮದುವೆ ಪ್ರಸ್ತಾಪ ಮಾಡುತ್ತಾರೆ. ಗಂಡಿನ‌ ಕಡೆಯವರು, 80 ಸವರನ್ ಚಿನ್ನ‌ ಹಾಗು ಕಾರಿನ ಬೇಡಿಕೆ ಇಡುತ್ತಾರೆ. ಆದರೆ ಸುಚಿತ್ರಾ ಅವರಿಗೆ 50 ಸವರನ್ ಚಿನ್ನ ಹಾಗೂ ಟೂ ವ್ಹೀಲರ್ ಕೊಡುವುದಾಗಿ ಹೇಳಿದರು. ಆದರೆ ವಿಷ್ಣು ಕಡೆಯವರು ಬಂಗಾರ ಬೇಕಾದರೆ ಅಷ್ಟೇ ಕೊಡಿ, ಆದರೆ ಕಾರು ಮಾತ್ರ ಬೇಕೇ ಬೇಕು ಎಂದು ಪಟ್ಟು ಹಿಡಿದಿದ್ರು.

ಹಾಗೋ ಹೀಗೋ ಮಗಳಿಗಾಗಿ 20 ಲಕ್ಷದ ಚಿನ್ನ ಹಾಗೂ ಟಾಟಾ ಸುಮೋನ 7 ಲಕ್ಷದ ಕಾರು ಕೊಟ್ಟರು. ಆದರೆ, ವಿಷ್ಣು ತಾಯಿ ಮದುವೆ ಮಂಟಪದಲ್ಲಿ ಇಗಲೇ 10 ಲಕ್ಷ ರೂಪಾಯಿ ಬೇಕು ಎಂದು ಹಠ ಹಿಡಿದಿದ್ರು.‌ ಆದರೆ ಆಗಲೇ ದುಡ್ಡೆಲ್ಲವನ್ನೂ ಖಾಲಿ ಮಾಡಿಕೊಂಡ ಅವರು ಮುಂದಿನ‌ ದಿನಗಳಲ್ಲಿ ಕೊಡುವುದಾಗಿ ಹೇಳಿದ್ದರು. ಸುಚಿತ್ರಾ ಹಾಗೂ ವಿಷ್ಣು ಅವರ ಮದುವೆ 2021 ಮಾರ್ಚ್ ನಲ್ಲಿ ನಡೆದು, ನಂತರ ಎಪ್ರಿಲ್ ನಲ್ಲಿ ವಿಷ್ಣು ಉತ್ತರಖಾಂಡ್ ಗೆ ತೆರಳಿದ್ದ.‌ ಅಲ್ಲಿಂದ‌ ಸುಚಿತ್ರಾ ಬಾಳಲ್ಲಿ ಕತ್ತಲು ಕವಿದಿತ್ತು.

ವಿಷ್ಣು ತಾಯಿ ಧನ‌ಪಿಶಾಚಿ, ಆಕೆ ಪ್ರತಿ ದಿನ ಸೊಸೆಗೆ ಹಣಕ್ಕಾಗಿ ಪೀಡಿಸುತ್ತಿದ್ದಳು, ಚಿತ್ತ ಹಿಂಸೆ ಕೊಡುತ್ತಿದ್ದಳು.‌ ಇದೆಲ್ಲಾ ನೆರೆಹೊರೆಯವರಿಗೆ ಗೊತ್ತಿತ್ತು. ಹೀಗಾಗಿ‌ ನೇ-ಣು ಬಿಗಿದ ಸ್ಥಿತಿಯಲ್ಲಿದ್ದ ಸುಚಿತ್ರಾಳ ಆತ್ಮ-ಹತ್ಯೆಗೆ ಆಕೆಯ ಅತ್ತೆಯೇ ಕಾರಣ ಎಂದು ಆಕೆಯನ್ನು ಬಂಧಿಸಲಾಗಿದೆ. ಆದರೆ ಇನ್ನೂ‌ ಜೀವನ‌ ಏನು ಅನ್ನುವುದನ್ನು ನೋಡದ ಸುಚಿತ್ರಾ ಜೀವನದಲ್ಲಿ ನಡೆದ ಘಟನೆ ಬಗ್ಗೆ ನಿಮ್ಮ‌ ಅನಿಸಿಕೆ‌ ಏನು ಅನ್ನುವುದನ್ನು ಕಾಮೆಂಟ್ ಮೂಲಕ ತಿಳಿಸಿ.‌