Advertisements

ಅತ್ತ ಗಂಡ ಜೀವ ಕಳೆದುಕೊಂಡ ಸುದ್ದಿ ಕೇಳುತ್ತಿದ್ದಂತೆ ಈಕೆ ಮಾಡಿರುವ ಕೆಲಸ ನೋಡಿ.. ಈ ಮಗು ಏನಾಯ್ತು ಗೊತ್ತಾ.. ದಯವಿಟ್ಟು ಇಂತಹ ಕೆಲಸ ಯಾರೂ ಮಾಡಬೇಡಿ..

Kannada News

ಗಂಡ ಹೆಂಡತಿ ನಡುವಿನ ಪ್ರೀತಿ ಸಂಬಂಧ ನಿಜಕ್ಕೂ ಅದು ಸಿನಿಮಾಗಳಲ್ಲಿ ತೋರುವುದು ಮಾತ್ರವಲ್ಲ.. ನಿಜ ಜೀವನದಲ್ಲಿಯೂ ಅಂತಹ ನೂರಾರು ಪತಿ ಪತ್ನಿಯರು ಯಾರಿಗೇನು ಕಡಿಮೆ ಇಲ್ಲದಂತೆ ಪರಸ್ಪರ ಪ್ರೀತಿಯಿಂದ ಇರುತ್ತಾರೆ.. ಅದರಲ್ಲೂ ಒಬ್ಬರಗೊಬ್ಬರು ಜೀವ ಎನ್ನುವಂತೆ ಇರುತ್ತಾರೆ.. ಆದರೆ ಅದ್ಯಾಕೋ ಕೆಲವೊಮ್ಮೆ ಪರಸ್ಪರ ಪ್ರೀತಿಯಿಂದ ಇರುವ ಗಂಡ ಹೆಂಡತಿಯ ಮೇಲೆ ಭಗವಂತನ ದಯೆ ಇಲ್ಲದಾಗಿ ಹೋಗುತ್ತದೆ.. ಹೌದು ನನ್ನ ಗಂಡ ನನ್ನನ್ನು ಪ್ರೀತಿಸೋದಿಲ್ಲ ಅಂತ ಸಾಕಷ್ಟು ಜನರು ಹೇಳೋದು ನೋಡಿದ್ದೀವಿ.. ಇತ್ತ ನನ್ನ ಹೆಂಡತಿ ನನ್ನನ್ನು ಪ್ರೀತಿಸೋದಿಲ್ಲ ಅಂತ ಗಂಡ ಹೇಳೋದನ್ನು ನೋಡಿದ್ದೇವೆ..

ಆದರೆ ಒಬ್ಬತಿಗೊಬ್ಬರು ಪರಸ್ಪರ ಪ್ರೀತಿ ಗೌರವದಿಂದ ಇರುವ ಕೆಲವರನ್ನು ಮಾತ್ರ ನೋಡಿರುತ್ತೇವೆ.. ಆದರೆ ಅಂತಹ ಸಾಕಷ್ಟು ಜೋಡಿಗಳನ್ನು ವಿಧಿಯೇ ದೂರ ಮಾಡಿಬಿಟ್ಟಿರುವ ಘಟನೆಗಳು ನಡೆದಿದ್ದು ನಿಜಕ್ಕೂ ಮನಕಲಕುವಂತಿದೆ.. ಹೌದು ಅಂತಹುದೇ ಒಂದು ಘಟನೆ ನಮ್ಮದೇ ರಾಜ್ಯದ ರಾಯಚೂರಿನಲ್ಲಿ ನಡೆದಿದ್ದು ಪರಿ ರಸ್ತೆಯಲ್ಲಿ ಅಗಲಿದ ವಿಚಾರ ಕೇಳುತ್ತಿದ್ದಂತೆ ಇತ್ತ ಪತ್ನಿ ಮಾಡಿರುವ ಕೆಲಸ ನೋಡಿದರೆ ನಿಜಕ್ಕೂ ಬೇಸರವನ್ನುಂಟು ಮಾಡುತ್ತದೆ.. ಅದಕ್ಕೂ‌ಮೀರಿ ಆ ಕಂದ ಏನಾಯಿತು ಎಂದು ತಿಳಿದರೆ ಸಂಕಟವಾಗುತ್ತದೆ..

ಹೌದು ಈ ಹೆಣ್ಣು ಮಗಳ ಹೆಸರು ಶೃತಿ ವಯಸ್ಸಿನ್ನು ಕೇವಲ ಮೂವತ್ತು.. ಇನ್ನು ಈಕೆಯ ಪತಿಯ ಹೆಸರು ಗಂಗಾಧರ್.. ರಾಯಚೂರಿನ ಲಿಂಗಸಗೂರಿನಲ್ಲಿ ವಾಸವಾಗಿದ್ದರು.. ಇತ್ತ ಗಂಗಾಧರ್ ಮಂಗಳೂರು ಜಿಲ್ಲೆಯ ಅಗ್ನಿಶಮಾಕ ದಳದಲ್ಲಿ ಕೆಲಸ ಮಾಡುತ್ತಿದ್ದರು.. ಶೃತಿ ಹಾಗೂ ಗಂಗಾಧರ್ ಅವರದ್ದು ಸುಂದರ ಸಂಸರಾವಾಗಿತ್ತು ಕೆಲ ವರ್ಷಗಳ ಹಿಂದಷ್ಟೇ ಮದುವೆಯಾಗಿದ್ದ ಈ ಜೋಡಿಗೆ ಕಳೆದ ಐದು ತಿಂಗಳ ಹಿಂದಷ್ಟೇ ಗಂಡು ಮಗುವಾಗಿತ್ತು.. ಮನೆಗೆ ಮಗು ಬಂದ ಸಂತೋಷದಲ್ಲಿದ್ದ ಗಂಗಾಧರ್ ಹಾಗೂ ಶೃತಿ ಅವರ ಸಂಭ್ರಮಕ್ಕೆ ಪಾರವೇ ಇರಲಿಲ್ಲ.. ಇತ್ತ ತಮ್ಮ ಮುದ್ದು ಕಂದನಿಗೆ ಅಭಿರಾಮ್ ಎಂದು ಹೆಸರಿಟ್ಟು ನಾಮಕರಣವನ್ನೂ ಸಹ ಮಾಡಿದ್ದರು.. ಆದರೆ ಮಗು ಆಗಮನವಾದ ಐದೇ ತಿಂಗಳಿಗೆ ಇಂತಹ ಘಟನೆ ನಡೆಯುವುದೆಂದು ಯಾರೂ ಸಹ ಊಹಿಸಿರಲಿಲ್ಲ..

ಹೌದು ಕಳೆದ ಶನಿವಾರ ಮಂಗಳೂರಿನಲ್ಲಿ ಗಂಗಾಧರ್ ರಸ್ತೆಯಲ್ಲಿ ನಡೆದ ಘಟನೆಯಿಂದಾಗಿ ಗಾಯಗೊಂಡು ಕೊನೆಯುಸಿರೆಳೆದು ಬಿಟ್ಟಿದ್ದರು.. ಇತ್ತ ಲಿಂಗಸಗೂರಿನಲ್ಲಿ ಇದ್ದ ಶೃತಿಗೆ ಪತಿ ಅಗಲಿರುವ ವಿಚಾರ ತಿಳಿಯುತ್ತಿದ್ದಂತೆ ಆಕಾಶವೇ ಕಳಚಿದಂತಾಯ್ತು..‌ ಆದರೆ ಅದೇ ನೋವಿನಲ್ಲಿ ನಿಜಕ್ಕೂ ಯಾರೂ ಊಹಿಸಿರದ ನಿರ್ಧಾರ ತೆಗೆದುಕೊಂಡು ಬಿಟ್ಟಳು.. ಹೌದು ಶೃತಿ ಮಗುವಿನ ಬಗ್ಗೆ ಯೋಚಿಸದೇ ಈ ರೀತಿ ಮಾಡಿದ್ದು ನೂರಕ್ಕೆ ನೂರು ತಪ್ಪು.. ಹೌದು ಗಂಡ ಅಗಲಿದ ಸುದ್ದಿ ಕೇಳುತ್ತಿದಣ್ತೆ ಶೃತಿ ತಾನೂ ಸಹ ಮನೆಯ ರೂಮಿನಲ್ಲಿಯೇ ಜೀವ ಕಳೆದುಕೊಂಡಿದ್ದಾಳೆ.. ಆದರೆ ಅಷ್ಟೇ ಆಗಿದ್ದರೆ ಒಂದು ಪಕ್ಷ ನೋವು ತಡೆದು ಸುಮ್ಮನಾಗಿರುತಿತ್ತು ಆ ಕುಟುಂಬ.. ಆದರೆ ಐದು ತಿಂಗಳ ಎಳೆ ಕಂದನನ್ನು ಸಹ ಇನ್ನಿಲ್ಲವಾಗಿಸಿಬಿಟ್ಟಿದ್ದಾಳೆ..

ಹೌದು ತಾನು ಹೋಗುವ ಮುನ್ನ ತಾನೇ ಹೆತ್ತ ಕಂದನನ್ನು ಇಲ್ಲವಾಗಿಸಿ ನಂತರ ತಾನೂ ಸಹ ಕೊನೆಯುಸಿರೆಳೆದು ಬಿಟ್ಟಿದ್ದಾಳೆ.. ಐದು ತಿಂಗಳ ಹಿಂದಷ್ಟೇ ಭೂಮಿಗೆ ಬಂದ ಆ ಕಂದಮ್ಮ ತನ್ನ ಹೆತ್ತ ತಾಯಿ ಇಂದಲೇ ತನ್ನ ಜೀವನ ಮುಕ್ತಾಯ ಮಾಡಿದ್ದು ನಿಜಕ್ಕೂ ಸಂಕಟ ತರುತ್ತದೆ.. ಹೌದು ಶೃತಿ ಗಂಡ ಅಗಲಿದ ನೋವಿನಲ್ಲಿದ್ದಳು ನಿಜ.. ಆದರೆ ಆ ಮಗು ಮಾಡಿದ್ದ ತಪ್ಪಾದರೂ ಏನು.. ಭೂಮಿಗೆ ಬರಬೇಕು ಎಂದು ಕೇಳಲಿಲ್ಲ.. ಈಗ ಯಾರಿಂದ ಜನ್ಮ ತಾಳಿತೋ ಅವರಿಂದಲೇ ಜೀವನ ಮುಗಿಸಿದ್ದು ಹೃದಯ ಕಿವಿಚಿದಂತಾಗುತ್ತದೆ.. ಶೃತಿ ನಿಜಕ್ಕೂ ತಪ್ಪು ಮಾಡಿಬಿಟ್ಟಳು.. ಇಂತಹ ಕೆಲಸ ಯಾರಿಂದಲೂ ಆಗದಿರಲಿ.. ಜೀವನದಲ್ಲಿ ಸವಾಲುಗಳು ನೋವುಗಳು ದುಃಖಗಳು ಎಲ್ಲವೂ ಸಹ ಬರುವುದು ಸಹಜ..

ನಾವುಗಳು ಸಹ ಶಾಶ್ವತವಲ್ಲ ನಿಜ.. ಆದರೆ ಅಂತಹ ನೋವಿನ ಸಂದರ್ಭಗಳು ಎದುರಾದಾಗ ನಮ್ಮನ್ನೇ ನಂಬಿಕೊಂಡು ಬಂದ ಮಕ್ಕಳನ್ನು ಮರೆತು ನಮ್ಮ ಸ್ವಾರ್ಥಕ್ಕೆ ಜೀವನ ಮುಗಿಸಿ ಕೊಳ್ಳುವುದೆಷ್ಟು ಸರಿ.. ಆ ಕಂದನಿಗೆ ಹಾಗೂ ಆ ಗಂಡ ಹೆಂಡತಿಗೆ ಶಾಂತಿ ಸಿಗಲಿ.. ಸಾಧ್ಯವಾದರೆ ಆ ಕಂದಮ್ಮ‌ಮತ್ತೆ ಹುಟ್ಟಿ ದೀರ್ಘಾಯುಷಿಯಾಗಿ ಬಾಳುವಂತಾಗಲಿ.. ಮಗುವಿಗಾಗಿ ಮಗುವಿನ ಸುಖಕ್ಕಾಗಿ ಮಗುವಿನ ಜೀವನಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧರಾಗುವ ತಾಯಿಯಾಗಬೇಕು.. ಒಂದು ನೋವು ತಡೆಯಲಾಗದೇ ಆ ಮಗುವನ್ನೇ ಮುಗಿಸಬಾರದು.. ಒಂದೇ ದಿನ ಮಗಳು ಮೊಮ್ಮಗ ಅಳಿಯ ಎಲ್ಲರನ್ನೂ ಕಳೆದುಕೊಂಡ ಆ ಕುಟುಂಬದ ಆಕ್ರಂದನ ನಿಜಕ್ಕೂ ನೋಡಲಾಗದಂತಿತ್ತು.. ಯಾರೂ ಸಹ ಇಂತಹ ನಿರ್ಧಾರಗಳನ್ನು‌ ಮಾಡದಿರಿ..