Advertisements

ತುಂಬು ಗರ್ಭಿಣಿ ಆಗಿದ್ದರೂ ಜಿಮ್ ನಲ್ಲಿ ಬೆವರಿಳಿಸಿದ ನಟಿ ಕಾಜಲ್ ಅಗರವಾಲ್! ವೀಡಿಯೋ ಈಗ ಎಲ್ಲೆಡೆ ವೈರಲ್ ನೋಡಿ!!

Kannada News

ಇದೀಗ ಬೇಬಿ ಬಂಪ್ ಫೋಟೋ ಶೂಟ್ ಅನ್ನುವುದು ಒಂದು ಕ್ರೇಜ್ ಹಾಗೂ ಟ್ರೆಂಡ್ ಆಗಿ ಬಿಟ್ಟಿದೆ. ಅನೇಕ ಮಂದಿ ಅದ್ರಲ್ಲೂ ಸಿನಿ ತಾರೆಯರು ಏಳು ತಿಂಗಳು ತುಂಬಿದ ನಂತರ ಆಕರ್ಷಣೀಯ ಬಟ್ಟೆಗಳನ್ನು ಹಾಕಿ ಸುಂದರವಾದ ಜಾಗದಲ್ಲಿ ಫೋಟೋ ಶೂಟ್ ಮಾಡಿ ಅದನ್ನು ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡುತ್ತಾರೆ. ಆದರೆ ಇವೆಲ್ಲಕ್ಕಿಂತ ನಟಿ‌ ಕಾಜಲ್ ಅಗರ್ವಾಲ್ ಅವರು ಭಿನ್ನವಾದ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. ಹೌದು, ಚೊಚ್ಚಲ ಮಗುವಿನ‌ ನಿರೀಕ್ಷೆಯಲ್ಲಿರುವ ನಟಿ ಕಾಜಲ್ ಅಗರ್ವಾಲ್ ವರ್ಕೌಟ್ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು ಇದು ಭಾರೀ ಲೈಕ್ಸ್ ಪಡೆದಿದೆ.

Advertisements
Advertisements

ಕಾಜಲ್ ಅಗರ್ವಾಲ್ ಬಹು ಬೇಡಿಕೆಯ ನಟಿಯಾಗಿ‌ ಮಿಂಚಿದವರು. ಆಕೆಯ ನಟನೆ, ಸೌಂದರ್ಯಕ್ಕೆ ಅವರದ್ದೇ ಆದ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.ಕಾಜಲ್ ಅಗರ್ವಾಲ್ ಅವರು ​ ಲಕ್ಷ್ಮಿ ಕಲ್ಯಾಣಂ ಸಿನೆಮಾ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಇವರು ​​ ತೆಲುಗು, ತಮಿಳು, ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ. ಮಗಧೀರ ಚಿತ್ರದಲ್ಲಿ ರಾಮ್​ ಚರಣ್​ ತೇಜಾ ಹೀರೊಯಿನ್​ ಆಗಿ ಕಾಜಲ್​ ನಟಿಸಿದ್ದರು. ಆ ಚಿತ್ರದಿಂದ ಕಾಜಲ್​ ಫ್ಯಾನ್​ ಕ್ಲಬ್​ ಇನ್ನೂ ದೊಡ್ಡದಾಯ್ತು. ಅದೇ ರೀತಿ ಸಿಂಗಂ ಚಿತ್ರದಲ್ಲಿ ‌ನಟಿಸಿದ ಕಾಜಲ್ ಅಗರ್ವಾಲ್ ಇನ್ನಷ್ಟು ಫೇಮ್ ತನ್ನದಾಗಿಸಿಕೊಂಡಿದ್ದರು.

ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿರುವಾಗಲೇ ಕಾಜಲ್ ಅವರು ತಮ್ಮ ಸ್ನೇಹಿತ ಗೌತಮ್ ಕಿಚ್ಲು ಜೊತೆ 2020ರ ಅಕ್ಟೋಬರ್ 30ರಂದು ವಿವಾಹವಾಗಿದ್ದರು. ಅದಾಗಿ ಸಿನಿಮಾ ರಂಗದಿಂದ ಬ್ರೇಕ್ ತೆಗೆದುಕೊಂಡಿದ್ದ ಕಾಜಲ್ ಕೆಲ ತಿಂಗಳ ಹಿಂದಷ್ಟೇ ತಾನು ತಾಯಿಯಾಗುತ್ತಿರುವ ಸಂತಸದ ವಿಚಾರವನ್ನು ಹಂಚಿಕೊಂಡಿದ್ದರು.‌ ಸದ್ಯ ತಮ್ಮ ಪ್ರೆಗ್ನೆನ್ಸಿ ದಿನಗಳನ್ನು ಎಂಜಾಯ್ ಮಾಡುತ್ತಿದ್ದಾರೆ. ಇತ್ತೀಚೆಗೆ ದುಬೈನಲ್ಲಿ ತಮ್ಮ ಪ್ರೆಗ್ನೆನ್ಸಿ ಫೋಟೋ ಶೂಟ್ ಮಾಡಿಸಿಕೊಂಡಿದ್ದರು.

ಅದರಲ್ಲಿ ತಾವು ತಂಗಿದ್ದ ಹೋಟೆಲ್​ನಲ್ಲಿ ಬಿಸಿಲಿಗೆ ಮೈಯೊಡ್ಡಿರುವ ಚಿತ್ರಗಳನ್ನು ಅವರು ಹಂಚಿಕೊಂಡಿದ್ದರು. ಫೋಟೋದಲ್ಲಿನ ಬೇಬಿ ಬಂಪ್, ಹೋಟೆಲ್ ಎದುರಿರುವ ವಿಶಾಲ ಸಾಗರದ ಜೊತೆ ಅವರ ಫೋಟೋಗಳಿ ಅಭಿಮಾನಿಗಳ ಮನಸೂರೆಗೊಂಡಿದ್ದವು.‌ಇದೀಗ ಕೊಂಚ ಭಿನ್ನವಾದ ವಿಡಿಯೋ ಅಪ್ಲೋಡ್ ಮಾಡಿದ್ದಾರೆ.‌ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೀಲೆಟ್ಸ್ ಸೆಷನ್ ನಡೆಸುತ್ತಿರುವ ವಿಡಿಯೋ ಶೇರ್ ಮಾಡಿದ್ದಾರೆ.