Advertisements

ತಾನೊಬ್ಬಳು ಗರ್ಭಿಣಿ ಅಂತ ಗೊತ್ತಿದ್ರು ತನ್ನ ಆಸೆಗೋಸ್ಕರ ಎಂಥಹ ಕೆಲಸ ಮಾಡಿದ್ದಾರೆ ಗೊತ್ತಾ? ಹೊಟ್ಟೆಯಲ್ಲಿ ಮಗು ಇದೆ ಎಂಬ ಪರಿಜ್ಞಾನ ಬೇಡ್ವ ಈಕೆಗೆ..!!

Kannada News

ಸ್ನೇಹಿತರೆ, ಈ ಕ’ರೋನವೈ’ರ’ಸ್ ಬಂದಮೇಲಂತೂ ಜನರು ಮತ್ತೆ ತಮ್ಮ ಒಂದು ವರ್ಷಕಾಲ ಅನುಭವಿಸಿದಂತಹ ನಷ್ಟವನ್ನು ತುಂಬಲು ರಾತ್ರಿ ಹಗಲು ಎನ್ನದೆ ಕತ್ತೆಯಂತೆ ದುಡಿಯುತ್ತಾರೆ. ಕೆಲಸದ ಮೇಲೆ ಶ್ರದ್ಧೆ ಪ್ರೇಮ ಇರಬೇಕು ನಿಜ ಆದರೆ ಈ ರೇಂಜಿಗೆ ಮಾತ್ರ ಇರಬಾರದು. ಹೆಣ್ಣುಮಕ್ಕಳು ಈ ಪ್ರಪಂಚದಲ್ಲಿ ಸ್ವಾವಲಂಬಿಗಳಾಗಿ ಬದುಕಬೇಕು ಎಂದರೆ ಸ್ವಲ್ಪ ರಿಸ್ಕ್ ತೆಗೆದುಕೊಳ್ಳಬೇಕೇ ಹೊರತು ಜೀವನ ಹಾಳು ಮಾಡಿಕೊಳ್ಳಬಾರದು.

ನಾವಿವತ್ತು ತಿಳಿಸುವ ಈ ಮಹಿಳೆಯ ಕಥೆ ಕೇಳಿದರೆ ಎಂಥವರಿಗಾದರೂ ಅಯ್ಯೋ ಪಾಪ ಅನ್ಸುತ್ತೆ. ಅಷ್ಟಕ್ಕೂ ಈಕೆ ಯಾರು? ಗರ್ಭಿಣಿಯಾಗಿದ್ದಾಗ ಯಾವ ಕೆಲಸ ಮಾಡಿದ್ದಾಳೆ ಎಂದು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಫ್ರೆಂಡ್ಸ್ ಮೂಲತಹ ಬಿಹಾರ ಜಿಲ್ಲೆಯ ನಿವಾಸಿಯಾಗಿರುವ ಅಶ್ವಿನಿ ಸಂತೋಷ್ ಕೋರೆ ತಮ್ಮ 24 ವರ್ಷಕ್ಕೆ ಇಂಜಿನಿಯರಿಂಗ್ ಮುಗಿಸಿ ಪದವಿ ಪಡೆದುಕೊಳ್ಳುತ್ತಾರೆ.

ಓದಿನ ಮೇಲೆ ಅಪಾರವಾದ ಶ್ರದ್ಧೆ ಇದ್ದ ಕಾರಣ ಅತ್ಯುತ್ತಮ ಅಂಕ ಗಳಿಸಿದ ಈಕೆಗೆ ಹಲವಾರು ದೊಡ್ಡ ಕಂಪನಿಗಳಿಂದ ಕೆಲಸದ ಆಫರ್ ಕೂಡ ಬರುತ್ತದೆ. ಆದರೆ ಅಶ್ವಿನಿಗೆ ಮಾತ್ರ ಪೊಲೀಸ್ ಇಲಾಖೆಯಲ್ಲಿ ಕಾರ್ಯ ಸಾಧಿಸಬೇಕು ಎಂಬ ಕನಸಿರುತ್ತದೆ. ಐಪಿಎಸ್ ಆಗದಿದ್ದರೂ ಪಿಎಸ್ಐ ಆದರೂ ಆಗಲೇಬೇಕು ಎಂಬ ಕನಸನ್ನು ಕಂಡಿರುತ್ತಾಳೆ.

ಆದರೆ ಕನಸನ್ನು ನನಸಾಗಿಸಿಕೊಳ್ಳುವಷ್ಟರಲ್ಲಿ ಮನೆಯವರು ಈಕೆಗೆ ಮದುವೆ ಮಾಡಿ ಬಿಡುತ್ತಾರೆ. ಮದುವೆಯಾದ ನಂತರವೂ ತನ್ನ ಪೊಲೀಸ್ ಕೆಲಸಕ್ಕೆ ಅರ್ಜಿ ಹಾಕಿ ಓದಲು ತೊಡಗಿದ ಅಶ್ವಿನಿ ಎಕ್ಸಾಮ್ ನಲ್ಲಿ ಪಾಸ್ ಆಗಿ ಪಿಜಿಕಲ್ಗೆ ಹೋಗುವಾಗ ಗರ್ಭವತಿಯಾಗುತ್ತಾಳೆ. ಏನಾದರೂ ಮಾಡಿ ಪೊಲೀಸ್ ಕೆಲಸವನ್ನು ಗಿಟ್ಟಿಸಿಕೊಳ್ಳಬೇಕು ಎಂಬ ಕಾರಣಕ್ಕೆ ನಾನೊಬ್ಬಳು ಗರ್ಭಿಣಿ ಎನ್ನುವುದನ್ನು ಮರೆತು ನಾಲ್ಕು ನೂರು ಮೀಟರ್ ಓಟವನ್ನು ಕೇವಲ ಒಂದು ನಿಮಿಷ 36 ಸೆಕೆಂಡ್ಗಳಲ್ಲಿ ಓಡಿ ಮುಗಿಸಿದ್ದಾಳೆ.

ನಂತರ ಆಕೆ ಗರ್ಭಿಣಿ ಎಂದು ತಿಳಿದ ಪೊಲೀಸ್ ಇಲಾಖೆ ಬೆಚ್ಚಿಬಿದ್ದಿದೆ. ಈ ಬಗ್ಗೆ ಮಾಹಿತಿ ತಿಳಿದ ಐಜಿಪಿ ಮನೀಶ್ ಕರ್ಬಿಕರ್ ಆಕೆಯನ್ನು ಕೂರಿಸಿಕೊಂಡು ವಾರ್ನಿಂಗ್ ನೀಡಿದ್ದಾರೆ. ಸದ್ಯ ತಾಯಿ-ಮಗು ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದೇ ಹೇಳಬಹುದು. ಈ ಘಟನೆಯ ಬಗ್ಗೆ ನಿಮ್ಮ ಅನಿಸಿಕೆ ಏನು ಎಂಬುದನ್ನು ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.