Advertisements

ಇನ್ನೇನು ಮಗು ಹುಟ್ಟಲು ಎರಡು ದಿನ ಮಾತ್ರ ಬಾಕಿ ಇತ್ತು, ಆದ್ರೆ ಹೆಣ್ಣು ಮಗು ಜನಿಸಿದ್ರೆ ಅತ್ತೆ ಮನೆಯಿಂದ ಆಚೆ ಕಳಿಸುತ್ತಾರೆ ಎಂಬ ಭಯಕ್ಕೆ ತುಂಬು ಗರ್ಭಿಣಿ ಎಂತಹ ಕೆಲಸ ಮಾಡಿಕೊಂಡಿದ್ದಾಳೆ ಗೊತ್ತಾ?

Kannada News

ಸ್ನೇಹಿತರೆ, ನಮ್ಮ ಜೀವನದಲ್ಲಿ ಕೆಲವೊಮ್ಮೆ ಆತುರದಿಂದ ತೆಗೆದುಕೊಳ್ಳುವಂತಹ ನಿರ್ಧಾರಗಳು ಎಷ್ಟೆಲ್ಲಾ ಸಮಸ್ಯೆಗಳು ಉಂಟು ಮಾಡುತ್ತದೆ ಎಂಬುದಕ್ಕೆ ನಾವಿವತ್ತು ತಿಳಿಸುತ್ತಿರುವ ನೈಜ ಘಟನೆಯೇ ಕಾರಣ. ಹೌದು ಫ್ರೆಂಡ್ಸ್ ರಮ್ಯಾ ಎಂಬ 28 ವರ್ಷದ ಮಹಿಳೆಗೆ ಅದಾಗಲೇ ಎರಡು ಹೆಣ್ಣುಮಕ್ಕಳು ಜನಿಸಿದ್ದು, ಗಂಡು ಮಗುವಿಗಾಗಿ ಆಸೆಪಟ್ಟು ಮತ್ತೊಮ್ಮೆ ಗರ್ಭಿಣಿಯಾಗಿದ್ದಳು. ಅಲ್ಲದೆ ಜನವರಿ 6 ನೇ ತಾರೀಖಿನಂದು ಡೆಲಿವರಿ ದಿನಾಂಕವನ್ನು ಕೂಡ ವೈದ್ಯರು ನಿಗದಿಪಡಿಸಿದ್ದರು. ಹೆರಿಗೆ ಮಾಡಿಸಲು ಇನ್ನೇನು ಒಂದು ದಿನ ಇದೆ ಎನ್ನುವಾಗ ಆಕೆ ಆತುರಪಟ್ಟು..

ಮತ್ತೊಮ್ಮೆ ಹೆಣ್ಣು ಮಗು ಆದರೆ ನನ್ನ ಅತ್ತೆ ಮನೆಯವರು ಮನೆಯಿಂದ ಹೊರ ಹಾಕುವುದಂತೂ ಖಂಡಿತ ಎಂಬ ಭಯದಿಂದ ಎಂತಹ ಕೆಲಸ ಮಾಡಿಕೊಂಡಿದ್ದಾಳೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಫ್ರೆಂಡ್ಸ್ ಮೂಲತಹ ದಂಡಿ ಪಲ್ಲಿ ಮಂಡಲದ ನರಸಾಪುರ ಗ್ರಾಮದ ರಮ್ಯಾ ಎಂಬಾಕೆಗೆ ಐದು ವರ್ಷಗಳ ಹಿಂದಷ್ಟೇ ಎನ್ ಟಿ ಆರ್ ನಗರದ ಆನಂದ್ ಎಂಬುವವನ ಜೊತೆ ವಿವಾಹವಾಗಿದ್ದು, ಮದುವೆಯಾಗಿ ಅತ್ತೆ ಮನೆಯಲ್ಲಿ ಸುಖ ಸಂಸಾರವನ್ನು ನಡೆಸುತ್ತಿದ್ದ ರಮ್ಯಾ ಮೊದಲ ಹೆಣ್ಣು ಮಗುವಿಗೆ ಜನ್ಮ ನೀಡಿದಳು.

ಕುಟುಂಬದವರೆಲ್ಲರೂ ಹೆಣ್ಣುಮಗುವನ್ನು ಆಧಾರದಿಂದ ಮನೆಗೆ ಸ್ವಾಗತಿಸಿದರು. ಇನ್ನು ಎರಡನೇ ಬಾರಿ ರಮ್ಯ ಗರ್ಭಿಣಿಯಾದಾಗ ಖಂಡಿತವಾಗಿಯೂ ವಂಶೋಧಾರಕ ಜನಿಸುತ್ತಾನೆ ಎಂಬ ಆಸೆಯಲ್ಲಿದ್ದರು. ಆದರೆ ಎರಡನೆಯದು ಕೂಡಾ ಹೆಣ್ಣುಮಗು ಆದ ಕಾರಣಕ್ಕೆ ಆಕೆಯನ್ನು ಕೊಂಚ ದೂರಲಾಗಿತ್ತು. ಇದರಿಂದ ಮನಸ್ಸನ್ನು ತಳಮಳಗೊಳಿಸಿಕೊಂಡು ಮೂರನೇ ಮಗುವಿಗಾಗಿ ಸಿದ್ಧವಾದ ರಮ್ಯಾ ಹಲವಾರು ಗುಡಿಗೋಪುರಗಳನ್ನು ಸುತ್ತಿ ಈ ಬಾರಿ ಗಂಡು ಮಗುವೊಂದನ್ನು ಕರುಣಿಸು ಎಂದು ದೇವರಲ್ಲಿ ಪ್ರಾರ್ಥಿಸಿದ್ದಾಳೆ. ಹೆರಿಗೆ ದಿನಾಂಕ ಹತ್ತಿರ ಬರುತ್ತಿದ್ದ ಹಾಗೆ ಆಕೆಯ ಮನಸ್ಸಿನಲ್ಲಿ ಆತಂಕ ಎಂಬುದು ಮನೆ ಮಾಡಿ.

ಈ ಬಾರಿಯೂ ಹೆಣ್ಣುಮಗು ಜನಿಸಿದರೆ ನನ್ನ ಅತ್ತೆ ಮನೆಯವರು ನನ್ನನ್ನು ಕಂಡಿತವಾಗಿಯೂ ಮನೆಯಿಂದ ಆಚೆ ಕಳುಹಿಸುತ್ತಾರೆ ಎಂಬ ಹೆದರಿಕೆಯಿಂದ ನೇಣುಬಿಗಿದುಕೊಂಡು ತುಂಬು ಗರ್ಭಿಣಿ ಸಾ’ವನ್ನಪ್ಪಿದ್ದಾಳೆ. ವಿಪರ್ಯಾಸ ಏನಪ್ಪಾ ಅಂದ್ರೆ ಪೋಸ್ಟ್ಬಾಟಮ್ನಲ್ಲಿ ಆಕೆಯ ಹೊಟ್ಟೆಯಲ್ಲಿ ಇದ್ದದ್ದು ಗಂಡು ಮಗು ಎಂಬುದು ತಿಳಿದುಬಂದಿದೆ. ಈ ವಿಷಯ ತಿಳಿದ ಅತ್ತೆ ಮನೆಯವರು ಮತ್ತು ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ಆತುರದಿಂದ ಜೀವ ಕಳೆದುಕೊಳ್ಳ ಬೇಕಾದಂತಹ ಪರಿಸ್ಥಿತಿ ಎದುರಾಗುತ್ತದೆ ಎಂಬುವುದಕ್ಕೆ ಈ ನೈಜ ಘಟನೆಯೇ ಸಾಕ್ಷಿ. ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.