Advertisements

ಗೀತಾ ದೊಡ್ಮನೆ ಸೊಸೆ ಆಗಿದ್ದು ಹೇಗೆ? ಯಾರು ಈ ಸಂಬಂಧ ತಂದರು ನೋಡಿ..

Cinema

ಪ್ರಿಯ ಓದುಗರೇ ದೊಡ್ಡಮನೆ ಬಗ್ಗೆ ಎಷ್ಟು ಹೇಳಿದರು ಕಡಿಮೆ. ಯಾಕೆಂದರೆ ಇವರೆಲ್ಲರೂ ಚಿನ್ನದ ಸ್ಪೂನ್ ಅನ್ನು ಬಾಯಲ್ಲಿ ಇಟ್ಟುಕೊಂಡು ಬೆಳೆದವರು. ಆದರೂ ಅಭಿಮಾನಿಗಳ ಮುಂದೆ ಸಾರ್ವಜನಿಕವಾಗಿ, ಅತಿ ಸರಳವಾಗಿ ಇರುವಂಥವರು. ತಂದೆಗೆ ತಕ್ಕ ಮಕ್ಕಳು ಎಂದು ಹೆಸರಾದವರು. ದೊಡ್ಡ ಸ್ಟಾರ್ ಆದ್ರೂ ಸರಳತೆ, ಸಜ್ಜನಿಕೆಯಿಂದ ಇರುವ ಕುಟುಂಬ. ಇಂತಹ ಮನೆಗೆ ಸೊಸೆ ಆಗುವುದು ಎಂದರೆ ಸುಲಭವಲ್ಲ…! ಈ ಮನೆಯ ಹಿರಿ ಸೊಸೆಯಾಗಿ ಗೀತಾ ಹೇಗೆ ಬಂದ್ರು? ಯಾರು ಈ ಸಂಬಂಧ ತಂದವರು? ಇದನ್ನು ಈ ಲೇಖನದ ಮೂಲಕ ತಿಳಿಯೋಣ.

[widget id=”custom_html-5″]

ಅದಕ್ಕೆ ಇದನ್ನು ಪೂರ್ಣವಾಗಿ ಓದಿ. ರಾಜಕುಮಾರ್ ಕುಟುಂಬದಲ್ಲಿ ಸಿನಿಮಾ ಇಂಡಸ್ಟ್ರಿಗೆ ಹೋಗುವುದಾದರೆ ಮೊದಲು ವಿವಾಹವಾಗಬೇಕು ಎಂಬ ಶರತು ಇತ್ತು. ವಿವಾಹವಾದ ನಂತರ ಮಾತ್ರ ಸಿನಿಮಾದಲ್ಲಿ ನಟಿಸುವಂತೆ ರಾಜಕುಮಾರ್ ಅವರ ಸಲಹೆ ನೀಡುತ್ತಿದ್ದರು. ಶಿವರಾಜ್ ಕುಮಾರ್ ಅವರಿಗೆ ಬಣ್ಣದ ಲೋಕ ಕೈಬೀಸಿ ಕರೆದಿತ್ತು. ತಂದೆಯಿಂದ ನಟನೆ ಬಳುವಳಿಯಾಗಿ ಬಂದಿತ್ತು. ಅದೇ ರೀತಿ ಇವರ ಮೊದಲ ಚಿತ್ರ ಆನಂದ್. ಈ ಚಿತ್ರದ ಮೂಲಕ ಸಿನಿರಂಗಕ್ಕೆ ಪದಾರ್ಪಣೆ ಮಾಡಿದ ಶಿವಣ್ಣ ಇನ್ನೂ ಮದುವೆ ಆಗಿರಲಿಲ್ಲ.

[widget id=”custom_html-5″]

[widget id=”custom_html-5″]

Advertisements
Advertisements

[widget id=”custom_html-5″]

ತಂದೆ ಆಸೆ ಶಿವರಾಜ್ ಕುಮಾರ್ ಅವರಿಗೆ ಮದುವೆ ಮಾಡಿಸಬೇಕು ಎಂದು. ಆದ್ರೆ ಶಿವರಾಜ್ಕುಮಾರ್ ಅವರಿಗೆ ತನ್ನ ಹೊಸ ಚಿತ್ರ ಬಿಡುಗಡೆಯ ಮಾಡುವ ತಯಾರಿಯಲ್ಲಿದ್ದರು. ತಂದೆ-ತಾಯಿ ಶಿವರಾಜ್ ಕುಮಾರ್ ಅವರಿಗೆ ಹೆಣ್ಣನ್ನು ಸಹ ಹುಡುಕುತ್ತಿದ್ದರು. ಬಂಗಾರಪ್ಪ ಅವರಿಗೆ ಈ ವಿಷಯ ತಿಳಿಯಿತು. ಅವರು ರಾಜಕುಮಾರ್ ಅವರ ಬಳಿ ನೇರವಾಗಿ ಹೋಗಿ, ತಮ್ಮ ಎರಡನೇ ಮಗಳು ಗೀತಾಳನ್ನು ತಮ್ಮ ಮನೆಯ ಸೊಸೆಯಾಗಿ, ಶಿವಣ್ಣನಿಗೆ ತಂದುಕೊಳ್ಳುವಂತೆ ಮನವಿಯನ್ನು ಇಡುತ್ತಾರೆ. ರಾಜಕುಮಾರ್ ಕುಟುಂಬದ ಬಗ್ಗೆ ಅತೀವ ಗೌರವವನ್ನು ಹೊಂದಿರುವ ಬಂಗಾರಪ್ಪ ಅವರು ರಾಜಕೀಯದಲ್ಲಿ ದೊಡ್ಡ ಹೆಸರು ಮಾಡಿದ್ದರು. ಇವರ ಮಾತನ್ನು ಕೇಳಿ ರಾಜಕುಮಾರ್ ತಕ್ಷಣವೇ ಅವರ ಮನವಿಯನ್ನು ಸ್ವೀಕರಿಸಿ ಮದುವೆಗೆ ಸಮ್ಮತಿಸಿದ್ದರು. ಸಾವಿರ 1986 ಮೇ 19ರಂದು ಶಿವನ ಜೊತೆ ಗೀತಾರ ವಿವಾಹ ಮಾಡಿದರು.

[widget id=”custom_html-5″]

ಗೀತಾರನ್ನು ವಿವಾಹವಾದ ಎರಡು ತಿಂಗಳ ಬಳಿಕ ಶಿವರಾಜ್ ಕುಮಾರ್ ಅಭಿನಯದ ಮೊದಲ ಸಿನಿಮಾ ಆನಂದ ರಿಲೀಸ್ ಆಯಿತು. ನಂತರ ‘ರಥಸಪ್ತಮಿ’, ‘ಮನಮೆಚ್ಚಿದ ಹುಡುಗಿ’, ಹೀಗೆ ಅವರು ಅಭಿನಯಿಸಿದ ಪ್ರತಿಯೊಂದು ಚಿತ್ರವೂ ಬಾಕ್ಸ್ ಆಫೀಸನ್ನು ಕೊಳ್ಳೆ ಹೊಡೆದವು. ಶಿವರಾಜ್ ಕುಮಾರ್ ಅವರಿಗೆ “ಹ್ಯಾಟ್ರಿಕ್ ಹೀರೋ “ಎಂಬ ಬಿರುದು ಕೂಡ ಬಂದಿತು. ದೊಡ್ಡಮನೆಯ ಹಿರಿ ಸೊಸೆಯಾಗಿ ಗೀತಾ ಅವರು ಬೇಗನೆ ಹೊಂದಿಕೊಂಡರು. ಮನೆಯ ಸಂಪ್ರದಾಯಗಳನ್ನು ಅರಿತು ಅದರಂತೆ ನಡೆದರು. ಕುಟುಂಬದ ಎಲ್ಲ ಜವಾಬ್ದಾರಿಯನ್ನು ಹೊತ್ತರು. ಕಾಲಕ್ರಮೇಣ ಸಹೋದರ ಮತ್ತು ತಂದೆಯ ಪ್ರೋತ್ಸಾಹ ಪತಿ ಶಿವರಾಜ್ ಕುಮಾರ್ ಅವರ ಬೆಂಬಲದೊಂದಿಗೆ ರಾಜಕೀಯವನ್ನು ಸಹ ಪ್ರವೇಶ ಮಾಡಿದರು. ಆದರೆ ರಾಜಕೀಯ ಅವರ ಕೈಹಿಡಿಯಲಿಲ್ಲ. ಇದೀಗ ಮತ್ತೊಮ್ಮೆ ರಾಜಕೀಯ ರಂಗಕ್ಕೆ ಕಾಲಿಡುವ ಸಾಧ್ಯತೆಗಳು ಇವೆ ಎನ್ನಲಾಗಿದೆ.

[widget id=”custom_html-5″]