Advertisements

ರಹಸ್ಯವಾಗಿ ಬಡ ಹುಡುಗಿ ಮದುವೆಗೆ ಬಂದ 100 ಕಮಾಂಡೋ ಸೈನಿಕರು ಆಮೇಲೆ ಏನಾಯ್ತು ನೋಡಿದ್ರೆ ಶಾಕ್ ಆಗ್ತೀರಾ.!

Kannada News

ನಮಸ್ಕಾರ ವೀಕ್ಷಕರೆ ಹುತಾತ್ಮ ಕಮಾಂಡೋ ಯೋಧನ ತಂಗಿ ಮದುವೆಗೆ ಬಂದ ನೂರು ಜನ ಕಮಾಂಡೋಗಳು ಸ್ನೇಹಿತರೆ ಪ್ರತಿಯೊಬ್ಬಳು ಹುಡುಗಿಯ ಕನಸು ಏನಿರುತ್ತೆ ಅಂದರೆ ತನ್ನ ಮದುವೆ ದಿನದಂದು ಅಣ್ಣ ಮತ್ತು ಅಪ್ಪ ಜೊತೆಯಲ್ಲಿ ಇದ್ದು ಗಂಡನ ಮನೆಗೆ ತನ್ನನ್ನು ಕಳುಹಿಸಿಕೊಡಬೇಕು ಎಂಬುದಾಗಿ ಇರುತ್ತೆ ಹಾಗೆ ಪ್ರತಿಯೊಬ್ಬ ಅಣ್ಣ ತಾನು ಮುಂದೆ ನಿಂತು ಖುಷಿಯಿಂದ ತಂಗಿನ ಮಾವನ ಮನೆಗೆ ಕಳುಹಿಸಿಕೊಡಬೇಕು ಎಂದು ಆಸೆ ಪಟ್ಟಿರುತ್ತಾನೆ ಆದರೆ ಹಲವು ಹುಡುಗಿಯರ ಹಣೆಬರಹದಲ್ಲಿ ಈ ರೀತಿ ಅದೃಷ್ಟ ಬರೆದಿರಲ್ಲ ಇದೇ ತರಹದ ಒಂದು ಘಟನೆ ನಡೆದಿದೆ ಇಲ್ಲಿ ತನ್ನ ಜೊತೆಯಲ್ಲಿದ್ದ ಸೈನಿಕ ಸತ್ತು ಹೋದ ನಂತರ ಆ ಟೀಮ್ ನ ಎಲ್ಲಾ ಸೈನಿಕರು ಹುತಾತ್ಮ ಕಮಾಂಡರ್ ನ ತಂಗಿ ಮದುವೆಗೆ ಹೋಗಿ ಕಲ್ಯಾಣ ಮಂಟಪವೆಲ್ಲ ಶಾಕ್ ಆಗುವಂತ ಕೆಲಸ ಮಾಡಿದ್ದಾರೆ ಈ ಘಟನೆ ವಿವರ ಈ ರೀತಿ ಇದೆ ನೀವೀಗ ಫೋಟೋದಲ್ಲಿ ನೋಡುತ್ತಿರುವ ಮದುವೆ ಹೆಣ್ಣಿನ ಹೆಸರು ಶಶಿಕಲಾ, ಈ ಶಶಿಕಲಾಳ ಅಣ್ಣನ ಹೆಸರು ಜ್ಯೋತಿಪ್ರಕಾಶ್, ಜ್ಯೋತಿಪ್ರಕಾಶ್ ಅಪ್ಪ-ಅಮ್ಮನಿಗೆ ಒಬ್ಬನೇ ಗಂಡುಮಗ

Advertisements
Advertisements

ಈತನೊಬ್ಬ ಮಾತ್ರ ಕೆಲಸ ಮಾಡಿ ತನ್ನ ಕುಟುಂಬವನ್ನು ಸಾಕುತ್ತಿದ್ದ ಆದರೆ ಜ್ಯೋತಿಪ್ರಕಾಶ್ ಹುತಾತ್ಮನಾದ ನಂತರ ಇವರ ಕುಟುಂಬದ ಆರ್ಥಿಕ ಪರಿಸ್ಥಿತಿ ತುಂಬಾ ಹದಗೆಟ್ಟಿ ಹೋಗಿತ್ತು ಶಶಿಕಲಾಳ ಮದುವೆ ಮಾಡಲು ಕೂಡ ಅಪ್ಪ ಅಮ್ಮನಿಗೆ ಕಷ್ಟವಾದ ಕೆಲಸ ಆಗಿತ್ತು ಆದರೆ ಜ್ಯೋತಿಪ್ರಕಾಶ್ ಜೊತೆ ಕೆಲಸ ಮಾಡುತ್ತಿದ್ದ ಸ್ನೇಹಿತರು ಶಶಿಕಲಾಳ ಮದುವೆಗೆ ತುಂಬಾ ಸಹಾಯ ಮಾಡಿದರು, ಶಶಿಕಲಾ ಮದುವೆ ಜವಾಬ್ದಾರಿ ವಹಿಸಿಕೊಳ್ಳುವ ಜೊತೆಗೆ ಜ್ಯೋತಿಪ್ರಕಾಶ್ ಸ್ನೇಹಿತರೆಲ್ಲ ಸೇರಿ ಒಟ್ಟಿಗೆ ಐದು ಲಕ್ಷ ಹಣ ಸಂಗ್ರಹಿಸಿ ಶಶಿಕಲಾ ಮದುವೆ ಖರ್ಚಿಗೆ ಕೊಟ್ಟರು ಶಶಿಕಲಾಳನ್ನು ಅತ್ತೆಮನೆಗೆ ಕಳುಹಿಸಿಕೊಡುವಾಗ ಈ ನೂರು ಜನ ಕಮಾಂಡರ್ ಗಳು ಮಾಡಿದ ಕೆಲಸ ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿತ್ತು ಮದುವೆಗೆ ಬಂದಿದ್ದ ಈ ನೂರು ಜನ ಕಮಾಂಡರ್ ಗಳು ತಮ್ಮ ಎಲ್ಲರ ಕೈಗಳನ್ನು ಶಶಿಕಲಾ ಕಾಲಿನ ಮುಂದೆ ಇಟ್ಟು ತಮ್ಮ ಎಲ್ಲರ ಕೈಗಳ ಮೇಲೆ ನಡೆದುಕೊಂಡು ಶಶಿಕಲಾ ಮನೆಗೆ ಹೋಗಬೇಕು ಎಂಬುದು ಕಮಾಂಡರ್ ಗಳ ಆಸೆಯಾಗಿತ್ತು ಜ್ಯೋತಿಪ್ರಕಾಶ್ ಮತ್ತು ಶಶಿಕಲಾಳ ತಂದೆ ನಾರಾಯಣ ಸಿಂಗ್ ರವರು ಈ ಮದುವೆಯ ಬಗ್ಗೆ ಮಾತನಾಡುತ್ತಾ ಈ ರೀತಿ ಹೇಳುತ್ತಾ ಭಾವುಕರಾದರು,

ನನ್ನ ಮಗ ಜ್ಯೋತಿಪ್ರಕಾಶ್ ಬದುಕಿಲ್ಲ ಆದರೆ ಶಶಿಕಲಾಗೆ ತನ್ನ ಅಣ್ಣ ಇಲ್ಲದಿರೋ ನೋವು ಆಗದಂತೆ ಮದುವೆಗೆ ಬಂದ ನೂರು ಕಮಾಂಡರ್ ಗಳು ಅಣ್ಣನ ಸ್ಥಾನದಲ್ಲಿ ನಿಂತು ಶಶಿಕಲಾ ಮದುವೆ ಮಾಡಿದ್ದಾರೆ ಎಂದು ಹೇಳಿದರು ಇವರ ಮಾತು ಕೇಳಿ ಅಲ್ಲಿದ್ದವರ ಕಣ್ಣುಗಳೆಲ್ಲ ಒದ್ದೆಯಾಯಿತು, ಜ್ಯೋತಿ ಪ್ರಕಾಶ್ ರವರು ಇಂಡಿಯನ್ ಏರ್ ಫೋರ್ಸ್ ನ ಅಂಡನ್ ನಲ್ಲಿರುವ ಗರುಡಾ ಕಮಾಂಡರ್ ಗಳಲ್ಲಿ ಒಬ್ಬರಾಗಿದ್ದರು 12 ನವೆಂಬರ್ 2017 ನೇ ಇಸವಿಯಲ್ಲಿ ಜಮ್ಮು-ಕಾಶ್ಮೀರದ ಚಂದನ್ ನಗರದಲ್ಲಿ ಉಗ್ರಗಾಮಿಗಳು ಅಟ್ಯಾಕ್ ಮಾಡಿದ್ದರು ಆಗ ಸೈನಿಕರ ಜೊತೆ ಗರುಡಾ ಕಮಾಂಡರ್ ಗಳ ಒಂದು ಟೀಮ್ ನ ಕೂಡ ಉಗ್ರಗಾಮಿಗಳ ಜೊತೆ ಹೋರಾಡಲು ಕಳುಹಿಸಲಾಗಿತ್ತು ಈ ಟೀಮ್ ನಲ್ಲಿ ಜ್ಯೋತಿ ಪ್ರಕಾಶ್ ಕೂಡ ಹೋಗಿದ್ದರು.. ಇದೇ ಯುದ್ಧದಲ್ಲಿ ಉಗ್ರಗಾಮಿಗಳು ಹೊಡೆದ ಗುಂಡಿಗೆ ಜ್ಯೋತಿಪ್ರಕಾಶ್ ಹುತಾತ್ಮರಾಗಿದ್ದರು ಮರಣದ ನಂತರ ಜ್ಯೋತಿಪ್ರಕಾಶ್ ರವರಿಗೆ ಅಶೋಕ ಚಕ್ರ ಅವಾರ್ಡ್ ಕೂಡ ಕೊಡಲಾಯಿತು ಜ್ಯೋತಿಪ್ರಕಾಶ್ ನ ತಾಯಿ ಮತ್ತು ಹೆಂಡತಿ ಈ ಅವಾರ್ಡ್ ಅನ್ನು ಸ್ವೀಕಾರ ಮಾಡಿದರು ಈ ಸಮಯದಲ್ಲಿ ರಾಷ್ಟ್ರಪತಿ ಕೋವಿಂದ್ ಅವರ ಕಣ್ಣುಗಳು ಕೂಡ ಒದ್ದೆಯಾಗಿತ್ತು ಸ್ನೇಹಿತರೆ ಜ್ಯೋತಿಪ್ರಕಾಶ್ ಅವರ ಸ್ನೇಹಿತರು ಶಶಿಕಲಾಗೆ ಅಣ್ಣಂದಿರ ರೀತಿ ಮುಂದೆ ನಿಂತು ಮದುವೆ ಮಾಡಿಸಿದ್ದು ನಿಮಗೆ ಇಷ್ಟವಾಗಿದ್ದರೆ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ