Advertisements

ಚಿನ್ನದ ಹುಡುಗನಿಗೆ ಈ ಬಹುಮಾನ ಕೊಡುವ ಅವಶ್ಯಕತೆ ಏನಿತ್ತು? ಈ ಸಂಸ್ಥೆಯ ವಿರುದ್ಧ ನೆಟ್ಟಿಗರು ಗರಂ.. ಅವರೇನು ದೊಡ್ಡ…..

Kannada News

ನಮಸ್ತೆ ಸ್ನೇಹಿತರೆ, ಭಾರತದ 121 ವರ್ಷಗಳ ಕನಸಿಗೆ ಈಗ ನನಸಾಗಿದೆ 23 ವರ್ಷದ ನೀರಜ್ ಚೋಪ್ರಾ ಶನಿವಾರ ನಡೆದ ಜಾವಲಿನ್ ತ್ರೊ ಫೈನಲ್ ಸ್ಪರ್ಧೆಯಲ್ಲಿ 86.58ಮೀಟರ್ ದೂರ ಎಸೆದು ಚಿನ್ನದ ಮುಕುಟ ಧರಿಸಿದ್ದಾರೆ ಇದರಿಂದ 138 ಕೋಟಿ ಭಾರತೀಯ ಮನಸ್ಸುಗಳನ್ನು ಗೆದ್ದಿದ್ದಾರೆ. ನೀರಜ್ ಚೋಪ್ರಾ ಮೂಲತ ಹರಿಯಾಣ ಪಾಣಿಪತ್ ಕಂಡ್ರೆ ಗ್ರಾಮದವರು. ನೀರಜ್ ಚೋಪ್ರಾ ಬಡ ರೈತರೊಬ್ಬರ ಮಗ 16 ಮುಂದಿ ಇರುವ ಕುಟುಂಬಕ್ಕೆ ಕೃಷಿಯ ಮೂಲ ಆಧಾರ ಸಾಕಷ್ಟು ಕಷ್ಟಗಳ ನಡುವೆ ಅಂತಾರಾಷ್ಟ್ರೀಯ ಸ್ಪರ್ಧೆಗಳಿಗೆ ಸ್ಪರ್ಧಿಸಿ ಪದಕಗಳನ್ನು ಗೆದ್ದಿದ್ದಾರೆ. ಖುದ್ದು ಕುಲುಮೆ ಒಳಗೆ ಧುಮುಕಿ ತಾನೇ ಬೆಂದು ತನ್ನ ಬೆವರನ್ನು ಬಸಿದು ಎರಕಹೊಯ್ದ ಅಪರಂಜಿ ಚಿನ್ನವಿದು. ಇಂತಹ ಚಿನ್ನದ ಹುಡುಗನಿಗೆ ಅನೇಕ ಸಂಸ್ಥೆಗಳು ಅನೇಕ ಬಹುಮಾನಗಳನ್ನು ಘೋಷಿಸಿದ್ದಾರೆ. ಅದರಂತೆ ಈ ಒಂದು ಸಂಸ್ಥೆಯು ಸಹ ನೀರಜ್ ಚೋಪ್ರಾಗೆ ಒಂದು ಬಹುಮಾನವನ್ನು ಘೋಷಿಸಿತ್ತು. ಆ ಸಂಸ್ಥೆ ಯಾವುದು ಅಂತ ನೋಡೋಣ ಬನ್ನಿ.

Advertisements
Advertisements

ನೀರಜ್ ಚೋಪ್ರಾ ಅವರಿಗೆ ವಿವಿಧ ಕಂಪನಿಗಳು ಹಾಗೂ ಸರ್ಕಾರಗಳು ಬಹುಮಾನವನ್ನು ಘೋಷಣೆ ಮಾಡಿದ ಬೆನ್ನಲ್ಲೇ, ಕರ್ನಾಟಕದ ಸಾರಿಗೆ ಸಂಸ್ಥೆ ನೀರಜ್ ಚೋಪ್ರಾ ಅವರಿಗೆ ಗೋಲ್ಡನ್ ಪಾಸ್ ನೀಡುವುದಾಗಿ ಘೋಷಿಸಿದ್ದಾರೆ. ಗೋಲ್ಡನ್ ಪಾಸ್ ಅಂದರೆ ನೀರಜ್ ಚೋಪ್ರಾ ಅವರಿಗೆ ಜೀವನಪರ್ಯಂತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವಾಹನಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಅವಕಾಶವನ್ನು ಸಾರಿಗೆ ಸಂಸ್ಥೆಯವರು ಕಲ್ಪಿಸಿದ್ದಾರೆ. ಆದರೆ ಸಾರಿಗೆ ಸಂಸ್ಥೆಯ ಈ ಘೋಷಣೆಯ ವಿರುದ್ಧ ನೆಟ್ಟಿಗರು ಗರಮ್ ಆಗಿದ್ದಾರೆ.

ನೀರಜ್ ಚೋಪ್ರಾ ಅವರು ಕರ್ನಾಟಕದವರೇ ಅಲ್ಲ, ಅವರಿಗೆ ಸಾರಿಗೆ ಗೋಲ್ಡನ್ ಪಾಸ್ ನ ಅವಶ್ಯಕತೆ ಏನು??? ಅವರು ಕರ್ನಾಟಕಕ್ಕೆ ಬಂದರೂ, ಸಾರ್ವಜನಿಕ ಸಾರಿಗೆ ಅವಶ್ಯಕತೆ ಇಲ್ಲ. ಹಾಗಿದ್ದ ಮೇಲೆ ಇಂತಹ ಅರ್ಥವಿಲ್ಲದ ಬಹುಮಾನವನ್ನು ಕೊಡುವ ಅವಶ್ಯಕತೆಯಾದರೂ ಏನು?? ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. ನಮ್ಮ ರಾಜ್ಯದಲ್ಲಿ ಹಲವಾರು ಪ್ರತಿಭಾವಂತ ಕ್ರೀಡಾಪಟುಗಳು ಅಭ್ಯಾಸಕ್ಕಾಗಿ ಎಲ್ಲೆಲ್ಲೋ ಸುತ್ತಾಡುತ್ತಾರೆ, ಅಂತಹವರಿಗೆ ಪ್ರೋತ್ಸಾಹ ನೀಡಲು ಉಚಿತ ಪಾಸ್ ಕೊಡಬೇಕಿತ್ತು ಎಂದು ನೆಟ್ಟಿಗರು ಸಾರಿಗೆ ಸಂಸ್ಥೆಗೆ ಸಲಹೆ ಕೊಟ್ಟಿದ್ದಾರೆ. ಇದು ನಿಜ ಅಲ್ವಾ ಸ್ನೇಹಿತರೆ, ನಮ್ಮ ರಾಜ್ಯದ ಪ್ರತಿಭಾನ್ವಿತ ಕ್ರೀಡಾಪಟುಗಳಿಗೆ ಉಚಿತ ಪಾಸ್ ನೀಡಿದರೆ ಅವರಿಗಾದರೂ ಉಪಯೋಗವಾಗುತ್ತದೆ. ಇದರ ಬಗ್ಗೆ ನೀವೇನಂತೀರಿ ಸ್ನೇಹಿತರೆ. ಕಮೆಂಟ್ ಮಾಡಿ ತಿಳಿಸಿ.