ನಮಸ್ತೆ ಸ್ನೇಹಿತರೆ, ಕಾಲವೇ ಹಾಗೆಯೇ ಅಲ್ಲ ಇಂದು ಮೆರೆದವರು ನಾಳೆ ಏನಾಗುತ್ತಾರೆ ಎಂದು ಯಾರಿಗೂ ಸಹ ಊಹಿಸಲಾಗುವುದಿಲ್ಲ. ಮೇಲಿದ್ದವರು ಕೆಳಗೆ ಬರಲೇಬೇಕು ಕೆಳಗಿದ್ದವರು ಮೇಲೆ ಬರಲೇಬೇಕು. ಇನ್ನು ನಾನು ನನ್ನದು ಎಂದು ಮೆರೆದವರ ಎಷ್ಟೋ ದುರಂತ ಅಂತ್ಯಗಳನ್ನು ನಾವು ನೀವೆಲ್ಲರೂ ಸಹ ಕೇಳಿರುತ್ತೀರ. ಇದೀಗ ನಾವು ಇಂತಹದ್ದೇ ಒಂದು ಘ’ಟನೆಯನ್ನು ಹೇಳಲು ಹೊರಟಿದ್ದೇವೆ. ಹೌದು ಚಿನ್ನ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಅದರಲ್ಲೂ ಕೆಲವರಿಗೆ ಚಿನ್ನದ ಮೇಲಿನ ಮೋಹ ಸ್ವಲ್ಪ ಜಾಸ್ತಿಯೇ ಇರುತ್ತದೆ. ಚಿನ್ನದ ಮೇಲಿನ ಆಸೆಯಿಂದ ಕೆಲವರು ಚಿನ್ನದ ಸರ ಬ್ರೇಸ್ಲೆಟ್ ಉಂಗುರಗಳನ್ನು ಮಾಡಿಸಿಕೊಂಡು ಧರಿಸುತ್ತಾರೆ.

ಆದರೆ ಚಿನ್ನದ ಷರ್ಟನ್ನು ಧರಿಸುವುದರ ಬಗ್ಗೆ ಎಂದಾದರೂ ಕೇಳಿದ್ದೀರ ? ಮುಂಬೈನ ದತ್ತಾತ್ರೆಯ ಎಂಬ ವ್ಯಕ್ತಿಯೊಬ್ಬರು ಚಿನ್ನದ ಷರ್ಟನ್ನು ಧರಿಸುತ್ತಿದ್ದರು. ಇದರ ಬೆಲೆ ಬರೋಬ್ಬರಿ 1 ಕೋಟಿ 27 ಲಕ್ಷ. ಅಂದಹಾಗೆ ಮುಂಬೈನಲ್ಲಿ ಶ್ರೀಮಂತ ಉದ್ಯಮಿ ಹಾಗೂ ಕೋಟ್ಯಾಧಿಪತಿಯಾಗಿದ್ದ ದತ್ತಾತ್ರೇಯ ಚಿನ್ನದ ಮೇಲಿನ ಮೋಹ ದಿನದಿಂದ ದಿನಕ್ಕೆ ಹೆಚ್ಚಾಗಿ ಈ ವ್ಯಕ್ತಿಗೆ 2012 ರ ಕೊನೆಯಲ್ಲಿ ಒಂದು ಉಪಾಯ ಹೊಳೆಯುತ್ತದೆ. ಅದೇನೆಂದರೆ ಚಿನ್ನದ ಷರ್ಟ್ ಧರಿಸಿ ಮೆರೆಯಬೇಕು ಎಂದು. ಈ ಕಾರಣದಿಂದ ಇವರು ತಮಗೆ ಪರಿಚಯವಿರುವ ಚಿನ್ನದ ಅಂಗಡಿ ಮಾಲೀಕರಿಗೆ ಚಿನ್ನದ ಷರ್ಟ್ ತಯಾರು ಮಾಡಿಕೊಡಲು ಬೇಡಿಕೆ ಇಡುತ್ತಾರೆ.

ಇವರ ಮಾತಿನಂತೆ 22 ಕ್ಯಾರೇಟ್ ನ 4000 ಚಿನ್ನದ ಬಿಸ್ಕೆಟ್ ಗಳಿಂದ ತಯಾರಾದ ಚಿನ್ನದ ನೂಲುಗಳನ್ನು ವೆಲ್ವೆಟ್ ಬಟ್ಟೆಯ ಮೇಲೆ ಸರಿಸುಮಾರು 15 ಅಕ್ಕಸಾಲಿಗರು 16 ದಿನಗಳಲ್ಲಿ ಚಿನ್ನದ ಷರ್ಟ್ ಮಾಡಿಕೊಡುತ್ತಾರೆ. ಇನ್ನು ಈ ಷರ್ಟನ್ನು ತಮಗೆ ಬಹುಮುಖ್ಯವಾದ ಸಮಾರಂಭಗಳಲ್ಲಿ ಧರಿಸುತ್ತಿದ್ದ ಇವರನ್ನು ಹಲವರು ದೇಶದಲ್ಲಿ ಎಷ್ಟೋ ಜನ ಹಸಿವಿನಿಂದ ಸಾ’ಯುತ್ತಿದ್ದಾರೆ ಅಂತಹದ್ದರಲ್ಲಿ ನೀವು ಚಿನ್ನದ ಷರ್ಟನ್ನು ಧರಿಸಿ ಶ್ರೀಮಂತಿಕೆ ತೋರಿಸುತ್ತಿರುವುದು ಎಷ್ಟು ಸರಿ ಎಂದು ಕೇಳುತ್ತಿದ್ದಾರು. ಅದಕ್ಕೆ ಇವರು ಕೊಡ್ತಾಯಿದ್ದ ಉತ್ತರ, ಎಷ್ಟೋ ಜನ ದುಬಾರಿ ಬೆಲೆಯ ಕಾರನ್ನು ಕೊಂಡುಕೊಳ್ಳುತ್ತಾರೆ ಅವರಿಗೆ ಕಾರಿನ ಮೇಲೆ ಆಸೆ ಇದ್ದ ಹಾಗೆ ನನಗೆ ಚಿನ್ನದ ಮೇಲಿದೆ ಎಂದು ಹೇಳುತ್ತಿದ್ದರು.

ಆದರೆ ಇವರ ಈ ಬಿಲ್ಡಪ್ ಬಹಳ ದಿನ ಉಳಿಯಲಿಲ್ಲ. ಈ ಚಿನ್ನದ ಷರ್ಟನ್ನು ಧರಿಸಲು ಆರಂಭಿಸಿ ಮೂರು ವರ್ಷವಾಗಿತ್ತಷ್ಟೆ, ಇದೇ ದತ್ತಾತ್ರೇಯ ತಮ್ಮ ಮಗನ ವಯಸ್ಸಿನವರಿಂದಲೇ ನಡು ಬೀದಿಯಲ್ಲಿ ಹ’ತ್ಯೆಗೆ ಗುರಿಯಾದರು. ಇಷ್ಟಕ್ಕೂ ಈತನ ಮೇಲೆ ಯಾರಿಗೆ ಏನು ದ್ವೇ’ಶವಿತ್ತೋ ಏನೋ ಎಂಬ ಗೊಂದಲದಲ್ಲಿದ್ದ ಪೋಲೀಸರಿಗೆ ತನಿಖೆಯ ಮೂಲಕ ಈ ಹ’ತ್ಯೆಯ ನಿಜವಾದ ಕಾರಣ ತಿಳಿಯಿತು. ಅದೇನೆಂದರೆ ಈತ ದುಡ್ಡು ಮಾಡುವ ಸಲುವಾಗಿ ಚಿಟ್ ಫಂಡ್ ಸಂಸ್ಥೆ ಒಂದನ್ನು ಸ್ಥಾಪಿಸಿ ಬಡಜನರಿಂದ ಹೂಡಿಕೆ ಮಾಡಿಸಿಕೊಂಡು ಜನ ಬಡ್ಡಿ ದುಡ್ಡನ್ನು ಕೇಳಿದಾಗ ಉಡಾಫೆಯ ಉತ್ತರಗಳನ್ನು ನೀಡುತ್ತಿದ್ದನು.

ಜನರಿಗೆ ಅವರ ದುಡ್ಡನ್ನು ನೀಡದೆ ತಾನು ಮಾತ್ರ ಚಿನ್ನದ ಷರ್ಟನ್ನು ಧರಿಸಿ ತನ್ನ ಶ್ರೀಮಂತಿಕೆಯನ್ನು ತೋರಿಸಿಕೊಳ್ಳುತ್ತಿದ್ದನು. ಈ ಕೋಪದಿಂದ ಈತನ ಮನೆಗೆ ತೆರಳಿ ಹುಟ್ಟುಹಬ್ಬದ ನೆಪ ನೀಡಿ ದತ್ತಾತ್ರೆಯನನ್ನು ಬರುವಂತೆ ಮಾಡಿ ಹುಟ್ಟುಹಬ್ಬಕ್ಕೆ ತೆರಳುವಾಗ ಮಗನನ್ನು ಉಪಾಯ ಮಾಡಿ ಅಲ್ಲಿಂದ ಕಳಿಸಿ ದತ್ತಾತ್ರೇಯ ಒಬ್ಬರೇ ಇದ್ದ ಸಮಯ ನೋಡಿ ಆತನನ್ನು ನಡು ಬೀದಿಯಲ್ಲಿ ಹೆ’ಣವಾಗಿಸಿದರು ಎಂಬುದು ತನಿಖೆಯಿಂದ ತಿಳಿದು ಬಂದಿತ್ತು… ಈ ವ್ಯಕ್ತಿಯ ಕಥೆಯನ್ನು ಕೇಳಿದ ಬಳಿಕ ನಿಮಗೇನು ಅನಿಸುತ್ತದೆ ಕಮೆಂಟ್ ಮಾಡಿ ತಿಳಿಸಿ..