Advertisements

ಗೋಮುತ್ರದಲ್ಲಿದೆ ದೊಡ್ಡ ದೊಡ್ಡ ರೋಗಗಳನ್ನು ವಾಸಿಮಾಡುವ ಔಷಧಿ.! ಇದನ್ನು ವಿಜ್ಞಾನಿಗಳೇ ಹೇಳಿದ್ದಾರೆ..

Health Kannada News

ನಮಸ್ತೆ ಸ್ನೇಹಿತರೆ, ಗೋವು ಹಿಂದುಗಳ ಆರಾಧ್ಯ ದೈವ, ಗೋವಿನ ಮೂತ್ರದಿಂದ ತಯಾರಿಸಿದ ಕ್ಯಾಪ್ಸುಲ್ ಮತ್ತು ಮಾತ್ರೆಗಳು ಕ್ಯಾನ್ಸರ್ ಮತ್ತು ಮೂತ್ರಪಿಂಡದ ಸಮಸ್ಯೆಗಳನ್ನು ವಾಸಿ ಮಾಡುತ್ತವೆ, ಇಷ್ಟೇ ಅಲ್ಲದೆ ಗೋಮುತ್ರದಿಂದ ತಯಾರಿಸಿದ ಔಷಧಿಯಿಂದ ಹೃದಯ ರೋಗಕ್ಕೂ ಪರಿಹಾರ ನೀಡಲಿದೆ ಎಂದು ಇತ್ತಿಚಿನ ದಿನಗಳಲ್ಲಿ ನಡೆದ ಫ್ರಿಜ್ ಫ್ಲೈಯಿಂಗ್ ತಂತ್ರಜ್ಞಾನದಿಂದ ತಿಳಿದು ಬಂದಿದೆ. ದೈನಿಕ್ ಭಾಸ್ಕರ್ ಮಾಧ್ಯಮದ ಮೂಲದ ಪ್ರಕಾರ ಗುಜರಾತ್‌ನ ಸರ್ದಾರ್ ವಲ್ಲಭಭಾಯ್ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರಾಧ್ಯಾಪಕ ಡಾ.ಭರತ್ ಧೋಲಾಕಿಯಾ ಅವರು ಸಹೋದ್ಯೋಗಿಗಳು ಈ ಔಷಧಿಯನ್ನು ಹಲವು ವರ್ಷಗಳ ಕಠಿಣ ಪರಿಶ್ರಮದ ನಂತರ ಸಿದ್ಧಪಡಿಸಿದ್ದಾರೆ.

Advertisements
Advertisements

ಗುರು ಜಂಬೇಶ್ವರ ವಿಶ್ವವಿದ್ಯಾಲಯದ ಮೂರು ದಿನಗಳ ಅಂತರರಾಷ್ಟ್ರೀಯ ಸಮ್ಮೇಳನದ ಎರಡನೇ ದಿನವಾದ ಸೋಮವಾರದಂದು ಅವರು ಈ ಸಂಶೋಧನೆಯನ್ನು ಮಂಡಿಸಿದ್ದಾರೆ. ಗೋವಿನ ಮೂತ್ರದ ವಿಶೇಷ ಗುಣಗಳಿಂದಾಗಿ ಅದರಿಂದ ಔಷಧಿ ತಯಾರಿಸುವ ಆಲೋಚನೆ ಬಂದಿದೆ ಎಂದು ಡಾ.ಭರತ್ ಹೇಳಿದರು. ಹಲವು ವರ್ಷಗಳಿಂದ ಸಂಶೋಧನೆ ನಡೆಸಲಾಗುತ್ತಿದ್ದು, ಫ್ರಿಜ್ ಡ್ರಾಯಿಂಗ್ ತಂತ್ರಜ್ಞಾನದಿಂದ 20 ರಿಂದ -30 ಡಿಗ್ರಿ ತಾಪಮಾನದಲ್ಲಿ ಹಸುವಿನ ಮೂತ್ರದ ಪುಡಿಯನ್ನು ಮೊದಲು ತಯಾರಿಸಿದರು, ನಂತರ ಅದರಿಂದ ಮಾತ್ರೆಗಳು ಮತ್ತು ಕ್ಯಾಪ್ಸುಲ್ಗಳನ್ನು ತಯಾರಿಸಿ ಕಳೆದ ಆರು ತಿಂಗಳ ಹಿಂದೆ ತಯಾರು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಈಇ ತಂತ್ರಜ್ಞಾನ ಒಂದು ವಸ್ತುವಿನಿಂದ ನೀರನ್ನು ಬೇರ್ಪಡಿಸುವ ಪ್ರಕ್ರಿಯೆ ಹೊಂದಿದ್ದು, ಇದರಲ್ಲಿ, ದ್ರವವನ್ನು ಶೂನ್ಯಕ್ಕಿಂತ ಕಡಿಮೆ ತಾಪಮಾನದಲ್ಲಿ ಕಡಿಮೆ ಒತ್ತಡದಲ್ಲಿ ಸಂಗ್ರಹಿಸಲಾಗುತ್ತದೆ. ನಂತರ ಅದನ್ನು ಕಡಿಮೆ ಒತ್ತಡದಲ್ಲಿ ಬಿಸಿಮಾಡಲಾಗುತ್ತದೆ. ಇದರಿಂದ ನೀರು ಬೇರ್ಪಡಿಸಿ ಪುಡಿ ಮಾಡಲಾಗುತ್ತದೆ, ನಂತರ ಅದನ್ನು ಮಾತ್ರೆ, ಕ್ಯಾಪ್ಸುಲ್ ಹಾಗೂ ಔಷಧಿಯಾಗಿ ತಯಾರಿಸಲಾಗುತ್ತದೆ. ಈ ಔಷಧಿಯು ಎಲ್ಲಾ ರೀತಿಯ ಕ್ಯಾನ್ಸರ್‌ಗೆ ಎರಡನೇ ಹಂತದ ಚಿಕಿತ್ಸೆಯಲ್ಲಿ ಪರಿಣಾಮಕಾರಿಯಾಗಿದೆ ಎಂದು ಪ್ರಯೋಗದಿಂದ ತಿಳಿದು ಬಂದಿದೆ. ರೋಗಿಯು ಬೆಳಿಗ್ಗೆ ಮತ್ತು ಸಂಜೆ ಈ ಟ್ಯಾಬ್ಲೆಟ್ ತೆಗೆದುಕೊಳ್ಳಬೇಕಾಗುತ್ತದೆ. ಇದರಲ್ಲಿ ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಒಮೆಗಾ 6 ಮತ್ತು ಒಮೆಗಾ 9 ಕೊಬ್ಬಿನಾಮ್ಲಗಳಿವೆ. ಇದರ ಮಾರಾಟ ಇದೀಗ ಗುಜರಾತ್‌ನಲ್ಲೂ ಪ್ರಾರಂಭವಾಗಿದೆ. ಗೋಮೂತ್ರದ ಬಗ್ಗೆ ನೀವೇನಂತಿರಾ ಸ್ನೇಹಿತರೆ. ಕಮೆಂಟ್ ಮಾಡಿ ತಿಳಿಸಿ.