Advertisements

ಅಜ್ಜಿ ಹತ್ತಿರ ಹಣ್ಣು ತೆಗೆದುಕೊಂಡು ಬಯ್ಯುತ್ತಿದ್ದ ವ್ಯಕ್ತಿ ಒಂದು ದಿನ ಮಾಡಿದ್ದೇನು ಗೊತ್ತಾ?

Kannada News

ನಮಸ್ಕಾರ ವೀಕ್ಷಕರೇ ಈಗಿನ ಕಾಲದಲ್ಲಿ ಮನುಷ್ಯರು ತುಂಬಾ ಸ್ವಾರ್ಥಿಗಳಾಗಿದ್ದಾರೆ ಇವಾಗ ಜನಗಳು ತಾವಾಯಿತು ತಮ್ಮ ಫ್ಯಾಮಿಲಿಯಾಯಿತು ಎಂದು ಇರುತ್ತಾರೆ ವರೆತು ಹೊರಗಿನ ಜನಗಳ ಜೀವನದ ಬಗ್ಗೆ ಯಾರು ಕೂಡ ತಲೆಕೆಡಿಸಿಕೊಳ್ಳಲ್ಲ ಆದರೆ ಇವತ್ತು ನಾವು ಹೇಳೋಕೆ ಹೊರಟಿರುವ ವಿಷಯವೇನೆಂದರೆ ಮೋಹನ್ ಎಂಬ ವ್ಯಕ್ತಿ ಕಥೆ ಕೇಳಿದರೆ ನೀವುಗಳು ಖಂಡಿತ ಆಶ್ಚರ್ಯ ಪಡುತ್ತೀರಾ, ಮೋಹನ್ ಮಾಡಿದ ಕೆಲಸ ಸರಿನಾ ಅಥವಾ ತಪ್ಪಾ ಅನ್ನೋದನ್ನು ಸಂಪೂರ್ಣ ಮಾಹಿತಿ ಓದಿನೋಡಿ , ಮೋಹನ್ ಪ್ರತಿದಿನ ಸಾವಿತ್ರಮ್ಮ ಎಂಬ ವಯಸ್ಸಾದ ಅಜ್ಜಿ ಒಬ್ಬರ ಬಳಿ ಹಣ್ಣು ಕೊಂಡುಕೊಳ್ಳಲು ಹೋಗುತ್ತಿದ್ದ ದುಡ್ಡು ಕೊಟ್ಟು ಅಜ್ಜಿಯ ಬಳಿ ಹಣ್ಣುಗಳನ್ನು ತೆಗೆದುಕೊಂಡ ನಂತರ ಅವುಗಳಲ್ಲಿ ಒಂದು ಹಣ್ಣನ್ನು ಎತ್ತಿಕೊಂಡು ಅಲ್ಲೇ ತಿಂದು ಈ ಹಣ್ಣು ತುಂಬಾ ಹುಳಿಯಾಗಿದೆ ತಿನ್ನಲು ಆಗುತ್ತಿಲ್ಲ ಎಂದು ಅಜ್ಜಿಗೆ ಬೈದು ಡೌಟ್ ಇದ್ರೆ ನೀವೇ ತಿಂದು ನೋಡಿ ಎಂದು ಅಜ್ಜಿಗೆ ತಾನು ದುಡ್ಡು ಕೊಟ್ಟು ತೆಗೆದುಕೊಂಡ ಹಣ್ಣುಗಳಲ್ಲಿ ಒಂದು ಹಣ್ಣನ್ನು ಸಾವಿತ್ರಮ್ಮ ಅಜ್ಜಿಗೆ ಪ್ರತಿದಿನ ಮೋಹನ್ ಕೊಡುತ್ತಿದ್ದ ಆ ಅಜ್ಜಿ ಮೋಹನ್ ಕೊಟ್ಟ ಹಣ್ಣನ್ನು ತಿಂದು ಚೆನ್ನಾಗಿದೆ ಅಲ್ವಾ ಎಂದು ಹೇಳುತ್ತಿದ್ದರು

Advertisements
Advertisements

ಅಜ್ಜಿ ಆ ಹಣ್ಣನ್ನು ಪೂರ್ತಿ ತಿಂದ ನಂತರ ಮೋಹನ್ ಏನು ಮಾತಾಡದೆ ಮಿಕ್ಕ ಹಣ್ಣುಗಳನ್ನು ತೆಗೆದುಕೊಂಡು ತನ್ನ ಮನೆಗೆ ತನ್ನಪಾಡಿಗೆ ಹೋಗುತ್ತಿದ್ದ ಈ ರೀತಿಯಾಗಿ ಒಂದು ದಿನ ಅಲ್ಲ ಪ್ರತಿದಿನ ಅಜ್ಜಿಯ ಬಳಿ ಹಣ್ಣು ತೆಗೆದುಕೊಂಡು ಹುಳಿ ಕಹಿ ಎಂದು ಹೇಳಿ ಅಜ್ಜಿಗೆ ತಿಂದು ನೋಡಲು ಮೋಹನ್ ಕೊಡುತ್ತಿದ್ದ ಒಂದು ದಿನ ಮೋಹನ್ ನ ಹೆಂಡತಿ ಏನ್ರಿ ಹಣ್ಣುಗಳು ಚೆನ್ನಾಗಿ ಇದಾವೆ ತಾನೇ ಆದರೂ ಕೂಡ ನೀವು ಏಕೆ ಚೆನ್ನಾಗಿಲ್ಲ ಎಂದು ಪ್ರತಿದಿನ ಡ್ರಾಮ ಮಾಡುತ್ತಿದ್ದೀರ ಎಂದು ಎಂದು ಕೇಳಿದಳು ಆಗ ಮೋಹನ್ ನಗುತ್ತಾ ಹೆಂಡತಿಗೆ ಈ ರೀತಿ ಹೇಳಿದ ಸಾವಿತ್ರಮ್ಮ ಅಜ್ಜಿ ಒಳ್ಳೆಯ ಹಣ್ಣುಗಳನ್ನೆ ಪ್ರತಿದಿನ ಮಾರಾಟ ಮಾಡುತ್ತಾರೆ ಆದರೆ ಅವರಿಗೆ ಅಂಥ ಅವರು ಯಾವತ್ತೂ ಕೂಡ ಒಂದು ಹಣ್ಣನ್ನು ತಿನ್ನುವುದಿಲ್ಲ ನಾನು ಈ ರೀತಿ ಹಣ್ಣು ಚೆನ್ನಾಗಿಲ್ಲ ಎಂದು ಹೇಳಿ ಅವರಿಗೆ ತಿಂದು ನೋಡಲು ಹೇಳುವುದರಿಂದ ಅಜ್ಜಿ ಒಂದು ಹಣ್ಣನ್ನು ತಿನ್ನುತ್ತಾರೆ

ವಯಸ್ಸಾದವರು ಹಣ್ಣುಗಳನ್ನು ತಿನ್ನಬೇಕು ಆಗ ಅವರ ಆರೋಗ್ಯ ಚೆನ್ನಾಗಿ ಇರುತ್ತೆ ಆದರೆ ಆ ಅಜ್ಜಿ ದುಡ್ಡು ಖರ್ಚಾಗುತ್ತೆ ಎಂದು ತಿನ್ನೋದಿಲ್ಲ ಇದೇ ಕಾರಣಕ್ಕೆ ನಾನು ಮೊದಲು ಅಜ್ಜಿ ಹತ್ತಿರ ದುಡ್ಡು ಕೊಟ್ಟು ಹಣ್ಣುಗಳು ಚೆನ್ನಾಗಿದ್ದರೂ ಹಣ್ಣುಗಳು ಚೆನ್ನಾಗಿಲ್ಲ ಎಂದು ಹೇಳಿ ಅಜ್ಜಿಗೆ ಪ್ರತಿದಿನ ಒಂದು ಹಣ್ಣು ತಿನ್ನಲು ಕೊಡುತ್ತೀನಿ ಎಂದು ಮೋಹನ್ ಹೇಳಿದ ತನ್ನ ಗಂಡನ ಈ ಒಳ್ಳೆಯ ಮನಸ್ಸನ್ನು ನೋಡಿ ಮೋಹನ್ ಹೆಂಡತಿ ಶಬಾಷ್ ರೀ ಎಂದು ಗಂಡನಿಗೆ ಹೊಗಳಿದಳು.. ಅಜ್ಜಿ ಮತ್ತು ಮೋಹನ್ ಮಧ್ಯೆ ನಡೆಯುತ್ತಿದ್ದ ಈ ಹಣ್ಣು ತಿನ್ನುವ ನಾಟಕವನ್ನು ಎದುರಿಗೆ ಇದ್ದ ತರಕಾರಿ ಅಂಗಡಿಯವರೆಲ್ಲರಿಗೂ ಈ ಮೋಹನ್ ಮಾಡುತ್ತಿದ್ದ ಈ ಒಳ್ಳೆಯ ಕೆಲಸ ಗೊತ್ತಾಗಿ ಎಲ್ಲರೂ ಪ್ರೀತಿಯಿಂದ ತಬ್ಬಿಕೊಂಡು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ ಈ ಮೋಹನ್ ಮಾಡಿದ ಕೆಲಸ ನಿಮಗೂ ಕೂಡ ಇಷ್ಟವಾಗಿದ್ದರೆ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..