Advertisements

ಬ್ಯಾಂಕ್ ನಲ್ಲಿ ದುರಹಂಕರವಾಗಿ ಮಾತನಾಡಿದ ಕ್ಯಾಷಿಯರ್ ಗೆ ಅಜ್ಜಿ ಏನು ಮಾಡಿದ್ರು ಗೊತ್ತಾ?

Kannada News

ನಮಸ್ಕಾರ ವೀಕ್ಷಕರೇ ಬ್ಯಾಂಕಿನಲ್ಲಿ ದುರಹಂಕಾರ ತೋರಿಸಿದ ಕ್ಯಾಶಿಯರ್ ಮಹಿಳೆಗೆ ತಕ್ಕ ಪಾಠ ಕಲಿಸಿದ ಅಜ್ಜಿ, ಈ ಅಜ್ಜಿ ಏನು ಮಾಡಿದರು ಅನ್ನೋದನ್ನ ಸಂಪೂರ್ಣವಾಗಿ ಮಾಹಿತಿ ಓದಿ ನೋಡಿ ಒಂದು ನ್ಯಾಷನಲ್ ಬ್ಯಾಂಕ್ ನಲ್ಲಿ ಒಬ್ಬಳು ಮಹಿಳೆ ಕ್ಯಾಶಿಯರ್ ಆಗಿ ಕೆಲಸ ಮಾಡುತ್ತಿದ್ದಳು ಈ ಕ್ಯಾಶಿಯರ್ ಮಹಿಳೆ ಯಾರೇ ಗ್ರಾಹಕರು ಬಂದು ಈಕೆಯ ಬಳಿ ಹಣ ಕೇಳಿದರೆ ಐದು ಸಾವಿರಕ್ಕೂ ಕಡಿಮೆ ಅಮೌಂಟ್ ಬೇಕಾದರೆ ಹೊರಗಡೆ ಎಟಿಎಂ ಇದೆ ಅಲ್ಲಿ ಹೋಗಿ ಡ್ರಾ ಮಾಡಿಕೊಳ್ಳಿ ಐದು ಸಾವಿರಕ್ಕೂ ಹೆಚ್ಚು ಹಣ ಬೇಕಾದರೆ ನನ್ನ ಬಳಿಗೆ ಬನ್ನಿ ಎಂದು ಹಣ ಕೇಳಲು ಬರುತ್ತಿದ್ದ ಗ್ರಾಹಕರಿಗೆಲ್ಲಾ ಹೇಳುತ್ತಿದ್ದಳು ಈ ಮಹಿಳೆ ಆರಾಮಾಗಿ ಏನು ಕೆಲಸ ಮಾಡದೆ ರೆಸ್ಟ್ ತಗೋತಿದ್ದಳು ಐದು ಸಾವಿರಕ್ಕಿಂತ ಕಡಿಮೆನಾ ಹಾಗಾದರೆ ಎಟಿಎಂಗೆ ಹೋಗಿ ತಗೊಳ್ಳಿ ಎಂದು ಈ ತರ ಹೇಳುವುದೆ ಈಕೆಯ ಕೆಲಸವಾಗಿತ್ತು ಸ್ವಲ್ಪ ಸಮಯದ ಬಳಿಕ ಒಬ್ಬ ವಯಸ್ಸಾದ ಅಜ್ಜಿ ಬ್ಯಾಂಕಿಗೆ ಬಂದು ಕ್ಯಾಶಿಯರ್ ಬಳಿ ಹೋಗಿ ನನಗೆ 500 ರೂಪಾಯಿ ಹಣಬೇಕು ಕೊಡಿ ಎಂದು..

Advertisements
Advertisements

ಒಂದು ಐನೂರು ರೂಪಾಯಿಗೆ ಚೆಕ್ ಬರೆದುಕೊಟ್ಟಳು ಮತ್ತೆ ಕ್ಯಾಶಿಯರ್ ಮಹಿಳೆ ಅಜ್ಜಿ 5 ಸಾವಿರಕ್ಕಿಂತ ಕಡಿಮೆ ಹಣ ಬೇಕಿದ್ದರೆ ನೀವು ಹೊರಗಡೆ ಇರುವ ಎಟಿಎಂನಲ್ಲಿ ತಗೋಳಿ ಐದು ಸಾವಿರಕ್ಕಿಂತ ಹೆಚ್ಚು ಹಣ ಬೇಕಾದರೆ ಮಾತ್ರ ನಾನು ಇಲ್ಲಿ ಕೊಡುತ್ತೀನಿ ಎಂದು ಕ್ಯಾಶಿಯರ್ ಅಜ್ಜಿಗೆ ಹೇಳಿದಳು ನಾನು ಎಲ್ಲರಿಗೂ ಇದೇ ವಿಷಯ ಜೋರಾಗಿ ಕೂಗಿ ಕೂಗಿ ಹೇಳುತ್ತಿದ್ದೀನಿ ನಿಮಗೆ ಕಿವಿ ಕೇಳಿಸಲ್ವ ಎಂದು ಕೋಪದಿಂದ ದುರಹಂಕಾರ ವಾಗಿ ಕ್ಯಾಶಿಯರ್ ಮಹಿಳೆ ಆ ಅಜ್ಜಿಗೆ ರೇಗಿದಳು ಯಾಕಮ್ಮ ನಾನು ಹಿಂದಿನ ಬಾರಿ ಬಂದಾಗಲೆಲ್ಲ ಇಲ್ಲಿಂದಾನೆ ಹಣ ತೆಗೆದುಕೊಂಡು ಹೋಗುತ್ತಿದ್ದೆ ಈಗ ಯಾಕೆ ಕೊಡಲ್ಲ ಅನ್ನುತ್ತಿದ್ದೀರಾ.. ಎಂದು ಅಜ್ಜಿ ಕೇಳಿದರು ಅಯ್ಯೋ ಅಜ್ಜಿ ತಲೆ ತಿನ್ನಬೇಡಿ ಹಿಂದೆ ಜನ ಹಣಕ್ಕಾಗಿ ಕ್ಯೂನಲ್ಲಿ ನಿಂತಿದ್ದಾರೆ ಹೋಗಿ ಇಲ್ಲಿಂದ ಎಂದು ಕ್ಯಾಶಿಯರ್ ಮಹಿಳೆ ಬೈದಳು ಆಗ ಅಜ್ಜಿ ಮತ್ತೊಂದು ಖಾಲಿ ಚೆಕ್ ಗೆ ಸಹಿ ಮಾಡಿ ಕ್ಯಾಶಿಯರ್ ಕೈಗೆ ಕೊಟ್ಟು

ದಯವಿಟ್ಟು ನನ್ನ ಅಕೌಂಟ್ ನಲ್ಲಿರುವ ಸಂಪೂರ್ಣ ಹಣವನ್ನು ನನಗೆ ಕೊಟ್ಟುಬಿಡಿ ಇನ್ನೆಂದು ನಿಮ್ಮ ಬ್ಯಾಂಕಿಗೆ ನಾನು ಬರಲ್ಲ ಎಂದು ಅಜ್ಜಿ ಹೇಳಿದರು ಆಗ ಆ ಕ್ಯಾಶಿಯರ್ ಮಹಿಳೆ ಹೌದು ಹೌದು ಏನು ಈ ಮುದುಕಿ ಅಕೌಂಟ್ ನಲ್ಲಿ ಕೋಟ್ಯಂತರ ರೂಪಾಯಿ ಇಟ್ಟಿದ್ದಾಳೆ.. ಇನ್ನೆಷ್ಟಿರಬಹುದು ಐನೂರು ರುಪಾಯಿ ಬಂದು ಕೇಳಿದಳು ಅಮ್ಮಮ್ಮ ಅಂದರೆ ಈ ಮುದುಕಿ ಹತ್ತಿರ ಎರಡು ಸಾವಿರನೊ ಮೂರು ಸಾವಿರನೊ ಇರಬಹುದು ಕೊಟ್ಟು ಕಳಿಸಿ ಬಿಡೋಣ ಈ ಅಜ್ಜಿ ಇನ್ನುಮುಂದೆ ಬ್ಯಾಂಕಿಗೆ ಬಂದು ನನ್ನ ತಲೆ ತಿನ್ನೋದು ಬೇಡ ಎಂದು ಹೇಳಿ ಆಯ್ತು ಕೊಡಿ ಅಜ್ಜಿ ನಿಮ್ಮ ಅಕೌಂಟ್ ನಲ್ಲಿ ಹಣ ಎಷ್ಟು ಇದೆಯೋ ಅಷ್ಟು ಒಟ್ಟಿಗೆ ಕೊಟ್ಟುಬಿಡುತ್ತೇನೆ ಎಂದು ಹೇಳಿ ಅಜ್ಜಿ ಬಳಿ ಚೆಕ್ ತೆಗೆದುಕೊಂಡು ಅಜ್ಜಿ ಅಕೌಂಟ್ ತೆಗೆದು ಎಷ್ಟು ಹಣ ಇದೆ ಎಂದು ನೋಡಿ ಆ ಕ್ಯಾಶಿಯರ್ ಮಹಿಳೆ ಶಾಕ್ ಆಗಿ ಹೋದಳು ಈಗ ತಲೆತಗ್ಗಿಸಿಕೊಂಡು ಅಜ್ಜಿಗೆ ಅಜ್ಜಿ ನನ್ನನ್ನು ಕ್ಷಮಿಸಿಬಿಡಿ

ಈಗ ನಿಮ್ಮ ಅಕೌಂಟ್ ನಲ್ಲಿ ಮೂರು ಕೋಟಿ ಹಣ ಇದೆ ಈಗ ನಮ್ಮ ಬ್ಯಾಂಕಿನಲ್ಲಿ ಅಷ್ಟೊಂದು ಹಣ ಇಲ್ಲ ದಯವಿಟ್ಟು ಕ್ಷಮಿಸಿ ಈಗ ನಿಮ್ಮ ಅಕೌಂಟ್ ನಲ್ಲಿರುವ ಹಣವನ್ನೆಲ್ಲಾ ನಾವು ಕೊಡಲು ಆಗೋದಿಲ್ಲ ನಾಳೆ ನೀವು ಬರೋಕಾಗುತ್ತಾ ನಾನು ಪೂರ್ತಿ ಹಣ ಅಡ್ಜಸ್ಟ್ ಮಾಡಿಕೊಡುತ್ತೀನಿ ಎಂದು ಮೇಲು ಧ್ವನಿಯಲ್ಲಿ ನಮ್ರತೆಯಿಂದ ಅಜ್ಜಿನಾ ಕ್ಯಾಶಿಯರ್ ಕೇಳಿದಳು ಮೊದಲು ಗರ್ವದಿಂದ ಅಜ್ಜಿ ಬಳಿ ಮಾತಾಡಿದ ಕ್ಯಾಶಿಯರ್ ಮಹಿಳೆ ಈಗ ತುಂಬಾ ನಮ್ರತೆಯಿಂದ ಅಜ್ಜಿ ಬಳಿ ಮಾತಾಡುತ್ತಿದ್ದಳು ಆಗ ಅಜ್ಜಿ ಹೋಗಲಿ ಈಗ ನನ್ನ ಅಕೌಂಟ್ ನಿಂದ ಎಷ್ಟು ಹಣ ನಾನು ತೆಗೆಯಬಹುದು ಹೇಳಿ ಎಂದು ಕೇಳಿದರು ಈಗ ನಿಮ್ಮ ಅಕೌಂಟ್ ನಿಂದ ಮೂರು ಲಕ್ಷ ಹಣ ಡ್ರಾ ಮಾಡಬಹುದು ಅಜ್ಜಿ ಎಂದು ಕ್ಯಾಶಿಯರ್ ಹೇಳಿದಳು ಸರಿ ಆಯ್ತು ಕೊಡಮ್ಮ ಈಗ ಮೂರು ಲಕ್ಷ ಹಣ ಕೊಡು ಎಂದು ಅಜ್ಜಿ ಹೇಳಿದರು

ಆಗ ಕ್ಯಾಶಿಯರ್ ಚೆಕ್ ನಲ್ಲಿ ಮೂರು ಲಕ್ಷ ಅಮೌಂಟ್ ಬರೆದು ಮೂರು ಲಕ್ಷ ಹಣ ಅಜ್ಜಿಗೆ ಕೊಟ್ಟಳು ಆಗ ಮೂರು ಲಕ್ಷ ಹಣ ತೆಗೆದುಕೊಂಡ ಅಜ್ಜಿ ಆ ಮೂರು ಲಕ್ಷ ಹಣದಲ್ಲಿ ಕೇವಲ ಐನೂರು ರೂಪಾಯಿ ಮಾತ್ರ ತೆಗೆದುಕೊಂಡು ಮಿಕ್ಕ ಹಣ ಎರಡು ಲಕ್ಷದ 99 ಸಾವಿರದ ಐನೂರು ರೂಪಾಯಿಗಳನ್ನು ಮತ್ತೆ ತನ್ನ ಅಕೌಂಟ್ ನಲ್ಲಿ ಹಾಕುವಂತೆ ಅಜ್ಜಿ ವಾಪಸ್ ಹಣವನ್ನು ಆ ಕ್ಯಾಶಿಯರ್ ಕೈಗೆ ಕೊಟ್ಟರು ಆ ಕ್ಯಾಶಿಯರ್ ಮಹಿಳೆ ತನ್ನ ಬಾಯಿ ಮೇಲೆ ಬೆರಳಿಟ್ಟುಕೊಂಡು ಅಬ್ಬಬ್ಬಬ್ಬಾ ಕಿಲಾಡಿ ಅಜ್ಜಿ ಅಂದುಕೊಂಡಳು.. ಫ್ರೆಂಡ್ಸ್ ಕೆಲವೊಂದು ಬಾರಿ ರೂಲ್ಸ್ ಗಳು ಏನೇ ಇದ್ದರೂ ಒಬ್ಬರಿಗೊಬ್ಬರು ಅನುಸರಿಸಿಕೊಂಡು ಹೋಗಬೇಕು.. ಒಬ್ಬ ವ್ಯಕ್ತಿಯ ಬಟ್ಟೆ ಹಾವ ಭಾವ ನೋಡಿ ಅವರ ಯೋಗ್ಯತೆ ಅಳೆಯಬಾರದು ಎಂಬುದಕ್ಕೆ ಈ ಅಜ್ಜಿಯ ಕಥೆ ಒಂದು ಉದಾಹರಣೆ.. ಈ ಅಜ್ಜಿ ಮಾಡಿದ ಕೆಲಸ ನಿಮಗೆ ಇಷ್ಟವಾಗಿದ್ದರೆ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..