Advertisements

ಲಾಕ್ ಡೌನ್ ನಲ್ಲಿ ಸಾಲ ಹೆಚ್ಚಾಯಿತು ಅಂತ ಈ ಮಂಗಳಮುಖಿ ತೆಗೆದುಕೊಂಡ ನಿರ್ಧಾರವೇನು ಗೊತ್ತಾ.? ನಿಜಕ್ಕೂ ಗ್ರೇಟ್..

Inspiration Kannada News

ನಮಸ್ತೆ ಸ್ನೇಹಿತರೆ, ಚೀನಾ ರೋ’ಗ ಹಾಗೂ ಲಾಕ್ ಡೌನ್ ಈ ಎರಡು ವಿಷಯಗಳು ಅದೆಷ್ಟೋ ಜನರ ಪಾಲಿಗೆ ಕೆ’ಟ್ಟ ದಿನಗಳಾಗಿ ಮಾರ್ಪಟ್ಟಿವೆ. ಅದರಲ್ಲೂ ಮಂಗಳಮುಖಿಯರ ಪಾಲಿಗೆ ಇದು ದು’ಸ್ವಪ್ನವಾಗಿದೆ‌. ಸಮಾಜದಲ್ಲಿ ಸಹಜವಾಗಿಯೇ ಅವರ ಸ್ಥಾನ ಮಾನಕ್ಕೆ ಅಷ್ಟೊಂದು ಗೌರವ ನೀಡುವುದಿಲ್ಲ‌. ಅಂತಹುದರಲ್ಲಿ ಲಾ’ಕ್ಡೌನ್ ನಂತರವಂತೂ ಅವರ ಜೀವನ ಅ’ಸ್ತವ್ಯ’ಸ್ತವಾಗಿದೆ. ಅವರಿಗೆ ಸಹಾಯ ಅಥವಾ ನೆರವನ್ನು ನೀಡುವವರು ಸಹ ಯಾರು ಇಲ್ಲ ಎನ್ನುವಂತಾಗಿದೆ. ಆದರೆ ಇಂತಹ ಪರಿಸ್ಥಿತಿಯ ನಡುವೆ ಕೆಲವು ಮಂಗಳಮುಖಿಯರು ಆ’ತ್ಮಸ್ಥೈರ್ಯ ಕಳೆದುಕೊಳ್ಳದೆ ಆ’ತ್ಮವಿಶ್ವಾಸದೊಂದಿಗೆ ತಮ್ಮ ಕಾಲ ಮೇಲೆ ತಾವು ನಿಂತು ಸ್ವಾಭಿಮಾನಿ ಬದುಕನ್ನು ರೂಪಿಸಿಕೊಂಡಿದ್ದಾರೆ. ಅಂತಹ ಒಬ್ಬ ಸ್ವಾಭಿಮಾನಿ ಮಂಗಳಮುಖಿಯ ಕಥೆಯನ್ನು ನಾವಿಂದು ತಿಳಿಯೋಣ‌ ಬನ್ನಿ.

Advertisements
Advertisements

ಈ ಮಂಗಳಮುಖಿಯ ಹೆಸರು ರಾಜವೀ ಜಾನ್. ರಾಜವೀ ಜಾನ್ ಅವರ ಜನ್ಮ ಸೂರತ್ ನ ಠಾಕೂರ್ ಪರಿವಾರದಲ್ಲಿ ಆಯಿತು. ತಂದೆ ತಾಯಿ ಇವರಿಗೆ ಕರೆಯುವ ಹೆಸರು ಚಿತೇಯೂ ಠಾಕೂರ್. ಮಂಗಳಮುಖಿಯಾದ ಮಗುವನ್ನು ರಾಜವೀ ಅವರ ತಾಯಿ ಬಹಳ ಪ್ರೀತಿಯಿಂದ ಸಾಕಿದರು. ಸಾಮಾನ್ಯವಾಗಿ ಅಂತಹ ಮಕ್ಕಳನ್ನು ಮಂಗಳಮುಖಿಯರ ಸಮುದಾಯಕ್ಕೆ ನೀಡುತ್ತಿದ್ದರು‌, ಆದರೆ ರಾಜವೀ ಅವರ ತಂದೆ ತಾಯಿ ಆ ರೀತಿ ಮಾಡಲಿಲ್ಲ. ಐದು ವರ್ಷಗಳ ಹಿಂದೆ ರಾಜವೀ ಒಂದು ಪೆಟ್ಸ್ ಶಾಪ್ ತೆರೆದಿದ್ದರು. ಆದರೆ ಲಾಕ್ ಡೌನ್ ಅವಧಿಯಲ್ಲಿ ಅವರ ಈ ವ್ಯಾಪಾರ ಸಂಪೂರ್ಣ ಬಂದ್ ಆಯಿತು. ಸಾಲಗಳನ್ನು ಮಾಡಬೇಕಾಯಿತು. ಜೀವನದ ಕ’ಠಿಣತೆ ಕಂಡು ರಾಜವೀ ಸಾ’ಯಬೇಕು ಎಂದು ನಿರ್ಧಾರ ಮಾಡಿದ್ದರಂತೆ.

ಯಾವುದೇ ಸ’ಮಸ್ಯೆಗೆ ಸಾ’ವು ಒಂದೇ ಪರಿಹಾರವಲ್ಲ ಎಂದು ಆಲೋಚಿಸಿದ ರಾಜವೀ, ಕುರುಕಲು ತಿಂಡಿ ಸಿದ್ಧಪಡಿಸಿ ಮಾರಾಟ ಮಾಡುವ ಅಂಗಡಿಯನ್ನು ಕಳೆದ ಅಕ್ಟೋಬರ್ ನಲ್ಲಿ ತೆರೆದರು. ಅವರ ಈ ಬ್ಯುಸಿನೆಸ್ ಚೆನ್ನಾಗಿ ನಡೆಯತೊಡಗಿತು. ರಾಜವೀ ಈ ಅಂಗಡಿಯಲ್ಲಿ ದಿನವೊಂದಕ್ಕೆ ಈ ತಿಂಡಿಗಳ ಮಾರಾಟದಿಂದ 1500 ರಿಂದ 2000 ರೂ‌ಪಾಯಿಗಳನ್ನು ಗಳಿಸುತ್ತಿದ್ದಾರೆ. ರಾಜವೀ ತಾನು 18 ವರ್ಷ ವಯಸ್ಸಿನಲ್ಲಿ ಇರುವಾಗಲೇ ಮಕ್ಕಳಿಗೆ ಇಂಗ್ಲೀಷ್ ಟ್ಯೂಷನ್ ಮಾಡಲು ಆರಂಭಿಸಿದರು‌. ಸುಮಾರು 11 ವರ್ಷ ಟ್ಯೂಷನ್ ಮಾಡಿದ ರಾಜವೀ, ಮಕ್ಕಳ ಪೋಷಕರು ಎಂದಿಗೂ ನನ್ನ ಬಗ್ಗೆ ಎಂದು ಬೇ’ಸರ ಪಡುವ ಮಾತು ಆಡಲಿಲ್ಲ ಎನ್ನುತ್ತಾರೆ.

ಇಂದು ರಾಜವೀ ಒಬ್ಬ ಸ್ವಾವಲಂಬಿ ಮಂಗಳಮುಖಿಯಾಗಿ ತನ್ನ ಜೀವನವನ್ನು ನಡೆಸುತ್ತಾ ಅನೇಕರಿಗೆ ಮಾದರಿಯಾಗಿದ್ದಾರೆ. ರಸ್ತೆಗಳಲ್ಲಿ ಭಿ’ಕ್ಷೆ ಬೇಡುತ್ತಾ ಜೀವನ ನಡೆಸುವ ಮಂಗಳ ಮುಖಿಯರಿಗೆ ಸ್ವಂತ ಬದುಕನ್ನು ಕಟ್ಟಿಕೊಳ್ಳಲು ರಾಜವೀ ಸ್ಪೂರ್ತಿ ಸಹ ಆಗಿದ್ದಾರೆ‌. ರಾಜವೀ ಅವರಿಗೆ ಅವರ ಸಮಾಜದಲ್ಲಿ ವಿಶೇಷವಾದಂತಹ ಗೌರವದ ಸ್ಥಾನ ಮಾನ ದೊರೆತಿದೆ. ಇದೊಂದು ನಿಜಕ್ಕೂ ಪ್ರೇರಣಾದಾಯಕವಾದ ಕತೆಯಲ್ಲವೇ. ರಾಜವೀ ಅವರ ಬಗ್ಗೆ ನೀವೇನಂತೀರಾ ಸ್ನೇಹಿತರೆ. ಕಮೆಂಟ್ ಮಾಡಿ ತಿಳಿಸಿ.