Advertisements

ಪ್ರತಿ ಸಿನಿಮಾ ಮುಂಚೆ ಬರುವ ಈ ಗುಟ್ಕ ಮುಖೇಶ್ ಯಾರು ಗೊತ್ತಾ? ಇದು ರಿಯಲ್ ವೀಡಿಯೋನಾ ಅಥವಾ ಸುಳ್ಳಾ ನೋಡಿ!

Kannada News

ಪ್ರಿಯ ಇದುಗರೇ ಪ್ರತಿ ಸಿನಿಮಾ ಮಂದಿರಗಳಲ್ಲಿ ಈಗ ಮುಖೇಷ ಎಂಬ ಯುವಕನ ಕಥೆಯನ್ನು ತೋರಿಸುತ್ತಾರೆ. ಆತ ಗುಟಕ ತಿಂದು ಸಾವನ್ನಪ್ಪಿದ ಎಂದು ಹೇಳಲಾಗುತ್ತೆ. ಇದು ನಿಜವಾದ? ಇಲ್ಲಾ ಸುಳ್ಳ? ಏನಿದು ವಿಡಿಯೋ? ಅವನನ್ನೇ ತೋರಿಸುವುದಾದರೆ ಯಾಕೆ ಅಂತ ತಿಳಸ್ತೀವಿ ಈ ಲೇಖನವನ್ನು ಪೂರ್ಣವಾಗಿ ಓದಿ. ಇತ್ತೀಚಿನ ದಿನಗಳಲ್ಲಿ ಯುವ ಜನತೆ ಕೆಟ್ಟ ಹವ್ಯಾಸ ಬೆಳಸಿಕೊಳ್ಳತಿರೋದು ಅಪಾಯಕಾರಿ ಸಂಗತಿ. 100 ರಲ್ಲಿ ಸುಮಾರು 60ರಷ್ಟು ಯುವ ಜನತೆ ಪಾನ್ ಪರಾಗ, ಗೂಟಕಾ, ಮದ್ಯ ಸೇವನೆ, ಡ್ರಗ್ಸ್ ಅಂತ ಹಾಳಾಗಿ ತಮ್ಮ ಪಾಲಕರಿಗೆ ಶಾಶ್ವತ ನೋವು ನೀಡುತ್ತಿದ್ದಾರೆ. ಮನೆಗೆ ಆಧಾರವಾಗಬೇಕಾದವರು, ಮಸಣಕ್ಕೆ ಹೆಣವಾಗುತ್ತಿದ್ದಾರೆ.

Advertisements
Advertisements

ಅಂತಹ ಯುವಕರಲ್ಲಿ ಈ ಮುಕೇಶ ಕೂಡಾ ಒಬ್ಬ. ಇತನ ಕಥೆಯೂ ಅಂತದ್ದೇ.
ಹೌದು ಇದುಗರೇ ಇತ ಮಹಾರಾಷ್ಟ್ರ ಮೂಲದ ಒಬ್ಬ ಬಡ ದಂಪತಿಯ ಮಗ. ಇತನ ಪೂರ್ಣ ಹೆಸರು ಮುಕೇಶ ಹರಾನೆ. ಈತನೇ ಮನೆಯ ಆಧಾರ ಸ್ಥಂಭವಾಗಿದ್ದ. ತಂದೆ ಕೂಡಾ ದಿನಗೂಲಿ ಮಾಡುತ್ತಿದ. ಸಹೋದರ ಸಹೋದರಿಯಾರೊಂದಿಗೆ ಬಡತನದಲ್ಲಿಯೂ ಸುಖವಾಗಿದ್ದ ಮುಕೇಶ್ ಗುಟಕ ತಿನ್ನೋ ಕೆಟ್ಟ ಹವ್ಯಾಸ ಬೆಳಸಿಕೊಂಡಿದ್ದ. ಇದಕ್ಕೆ ತಾಯಿ ಅನೇಕ ಬಾರಿ ಬಡಿದು ಬುದ್ದಿ ಹೇಳಿದ್ದರು. ಇದನ್ನು ಕೇಳದ ಮುಕೇಶ ಹಾಗೆ ಮುಂದುವರೆಸಿಕೊಂಡು ಬಂದ. ತನ್ನ 24 ನೇ ವಯಸ್ಸಿಗೆ ಕ್ಯಾನ್ಸರ್ ಗೆ ಬಲಿಯಾದ ಮುಕೇಶ್ ಹರಾನೆ ಸಾಯುವ ಕೆಲ ದಿನಗಳ ಹಿಂದೆ ಉತ್ತಮ ಸಂದೇಶವನ್ನು ಸಾರಿ ಅಕ್ಟೋಬರ್ 27 2009ರಲ್ಲಿ ಸಾವನ್ನಪ್ಪಿದ. ಅದೇ ಆ ವಿಡಿಯೋ.


ಈ ಮುಕೇಶನ ಕೊನೆಯ ಮಾತುಗಳು ಗುಟಕ ಸೇವಕರಿಗೆ ಎಚ್ಚರಿಕೆಯ ಗಂಟೆಯಾಗಿದೆ. ಈ ವಿಡಿಯೋವನ್ನು ” ರಾಷ್ಟ್ರಿಯ ಆಂಟಿ ತುಬಾಕೊ” ಅಭಿಯಾನ ಕುಟುಂಬದ ಒಪ್ಪಿಗೆ ಪಡೆದು ಇಂದು ಎಲ್ಲ ಸಿನಿಮಾ ಥಿಯಟರಗಳಲ್ಲಿ ಮೊದಲು ಪ್ರಸಾರ ಮಾಡಲಾಗುತ್ತಿದೆ. ಇದಕ್ಕಾಗಿ ಮುಕೇಶನ ಕುಟುಂಬಕ್ಕೆ ಹಣ ನೀಡಲು ಹೋದಾಗ ಅವರು ತಿರಸ್ಕರಿಸಿದರಂತೆ. ಅವನೇ ಇಲ್ಲವಾದ ಮೇಲೆ ಅವನ ಸಾವಿನ ನಂತರದ ಈ ಹಣ ನಮಗೆ ಬೇಡಾ ಎಂದರಂತೆ. ಅವನನ್ನು ನೋಡಿಯಾದ್ರು ಇಂದಿನ ಯುವ ಜನತೆ ಎಚೆತ್ತುಕೊಂಡು ಅವರ ಕುಟುಂಬವನ್ನು ಸಾಲುಹಿದ್ರೆ ಸಾಕು ಎಂದರಂತೆ.

ಇಷ್ಟಾದ್ರೂ ಇಂದಿನ ಯುವ ಜನತೆ ಗುಟುಕ, ಮಧ್ಯ, ಡ್ರಗ್ಸ್ ಸೇವಿಸುವುದು ಬಿಡುತ್ತಿಲ್ಲ. ಇನ್ನು ಹೆಚ್ಚುತ್ತಲೇ ಇರೋದು ಅಪಾಯಕಾರಿ ಸಂಗತಿ. ಇನ್ನು ಅದೇಷ್ಟೂ ಕುಟುಂಬಗಳು ಅನಾಥವಾಗುವುದು ತಿಳಿಯದು. ಇದು ಗುಟುಕ ತಯಾರಿಕೆ ಸಂಪೂರ್ಣ ನಿಂತಾಗ ಮಾತ್ರ ಈ ಕೆಟ್ಟ ಚಟಕ್ಕೆ ಯುವಕ ಯುವತಿಯರು ಬಲಿಯಾಗೋದು ತಪ್ಪುತ್ತದೆ ಎನ್ನಬಹುದು.