Advertisements

ಹಲ್ಲು ಬಿಳುಪಾಗಿಸಲು ಮೂರೇ ಮೂರು ನಿಮಿಷ ಸಾಕು.. ಹೀಗೆ ಮಾಡಿ..

Health

ನಮ್ಮ ಮುಖದ ಸೌಂದರ್ಯವನ್ನು ಹೆಚ್ಚಿಸೋದು ಯಾವುದು? ನಗು.. ಹೌದು ನಮ್ಮ ಮುಖ್ದಲ್ಲಿ ಇರುವ ಒಂದು ನಗು ಅತ್ಯಂತ ಆಕರ್ಷಣೀಯವಾಗಿರುತ್ತದೆ. ಹಾಗೇಯೆ ಇದು ಆತ್ಮವಿಶ್ವಾಸವನ್ನೂ ಕೂಡ ಹೆಚ್ಚಿಸುತ್ತದೆ. ಹಾಗಾದರೆ ನಾವು ಹೀಗೆ ನಕ್ಕಾಗ ಕಾಣುವ ಹಲ್ಲುಗಳು ಕೂಡ ನಮ್ಮ ಸೌಂದರ್ಯಕ್ಕೆ ಪೂರಕವೇ ಅಲ್ಲವೇ?

ಹೌದು. ಹಲ್ಲಿನ ಸೌಂದರ್ಯವೂ ಕೂಡ ನಮ್ಮನ್ನು ಆಕರ್ಷಣೀಯವಾಗಿ ಕಾಣುವಂತೆ ಮಾಡುತ್ತದೆ. ಬಿಳುಪಾದ ಹಲ್ಲುಗಳು ನಮ್ಮ ನಗುವಿಗೇ ಒಂದು ಕಳೆಯನ್ನು ತಂದುಕೊಡುತ್ತವೆ. ನಾವು ಇನ್ನೊಬ್ಬರೊಂದಿಗೆ ಮಾತನಾಡುವಾಗ ಹಲ್ಲು ಬಿಳುಪಾಗಿದ್ದರೆ ಹಾಗೂ ದುರ್ಗಂಧ ರಹಿತವಾಗಿದ್ದರೆ ಅದು ನಮ್ಮ ಮೇಲೆ ಇತರರ ಗೌರವವನ್ನೂ ಕೂಡ ಹೆಚ್ಚಿಸುತ್ತದೆ. ಹಾಗಾದರೆ ಬನ್ನಿ, ಪಾಚಿ ಕಟ್ಟಿದ, ಹಳದಿಯಾದ ಹಲ್ಲನ್ನೂ ಕೂಡ ಹೇಗೆ ಕೆಲವೇ ಕ್ಷಣಗಳಲ್ಲಿ ಬಿಳುಪಾಗುವಂತೆ ಮಾಡಬಹುದು ಎಂಬುದನ್ನು ತಿಳಿಯೋಣ.

ಸರಿಯಾಗಿ ಹಲ್ಲುಜ್ಜದೇ ಇದ್ದರೆ, ಆಹಾದವನ್ನು ಸೇವಿಸಿದ ಕೂಡಲೆ ಬಾಯಿ ತೊಳೆಯದೇ ಇದ್ದರೆ, ಗುಟಕಾ ಹಾಗೂ ಧೂಮಪಾನ ಮೊದಲಾದವುಗಳು ಹಲ್ಲು ಹಳದಿಯಾಗಲು ಅಥವಾ ದುರ್ಗಂಧ ಬರಲು ಪ್ರಮುಖ ಕಾರಣಗಳಾಗಿರುತ್ತವೆ. ಯಾವುದೇ ಅಡ್ಡ ಪರಿಣಾಮಗಳಿಲ್ಲದ ಒಂದು ಆಯುರ್ವೇದದ ಮನೆಮದ್ದು ಖಂಡಿಯವಾಗಿ ನಿಮ್ಮ ಈ ಸಮಸ್ಯೆಗೆ ಪರಿಹಾರ ನೀಡಬಹುದು.
ಈ ಮನೆಮದ್ದನ್ನು ತಯಾರಿಸಲು ನಿಮಗೆ ಬೇಕಾಗಿರುವ ಸಾಮಗ್ರಿಗಳು: ಕಾಲು ಚಮಚ ನಿಂಬೆ ಹಣ್ಣಿನ ರಸ, ತೆಂಗಿನ ಎಣ್ಣೆ, ಉಪ್ಪು ಹಾಗೂ ತುಳಸಿ ಎಲೆಗಳು.

Advertisements
Advertisements

ಮಾಡುವ ವಿಧಾನ: ಒಂದು ಚಿಕ್ಕ ಬೌಲ್ ಗೆ ಸ್ವಲ್ಪ ನಿಂಬೆರಸವನ್ನು ಹಿಂಡಿ. ಇದಕ್ಕೆ ನಾಲ್ಕು ಹನಿ ಕೊಬ್ಬರಿ ಎಣ್ಣೆಯನ್ನು ಸೇರಿಸಿ. ನಂತರ ಸ್ವಲ್ಪ ಉಪ್ಪನ್ನು ಹಾಕಿ. ಇದಕ್ಕೆ ತುಳಸಿ ಎಲೆಗಳ ಪೇಸ್ಟ್ ನ್ನು ಸೇರಿಸಿ. ತುಳಸಿ ಎಲೆಗಳನ್ನು ಚೆನ್ನಾಗಿ ತೊಳೆದು ಜಜ್ಜಿ ಪೇಸ್ಟ್ ಮಾಡಿಕೊಳ್ಳಿ. ಅಥವಾ ತುಳಸಿ ಎಲೆಗಳನ್ನು ಬಿಸಿಲಿನಲ್ಲಿ ಒಣಗಿಸಿ ಪುಡಿಯನ್ನಾಗಿ ಕೂಡ ಮಾಡಿಕೊಂಡು ಉಪಯೋಗಿಸಬಹುದು. ಈ ಎಲ್ಲಾ ಸಾಮಗ್ರಿಗಳನ್ನು ಚೆನ್ನಾಗಿ ಮಿಶ್ರಣ ಮಾಡಿ. ಆನಂತರದಲ್ಲಿ ಬ್ರೆಷ್ ಗೆ ಈ ಮಿಶ್ರಣವನ್ನು ಹಾಕಿ ಹಲ್ಲುಜ್ಜಿ.

ಸತತವಾಗಿ ಮೂರು ದಿನಗಳ ಕಾಲ ಬೆಳಗ್ಗೆ ಹಾಗೂ ಮಲಗುವ ಮುನ್ನ ರಾತ್ರಿ ಈ ರೀತಿ ಹಲ್ಲುಜ್ಜುವುದರಿಂದ ನಿಮ್ಮ ಹಲ್ಲುಗಳು ಬಿಳುಪಾಗುವುದರಲ್ಲಿ ಸಂಶಯವಿಲ್ಲ. ನಿಂಬೆ ರಸದಲ್ಲಿರುವ ಸಿಟ್ರಿಕ್ ಅಂಶ ನಿಮ್ಮ ಹಲ್ಲಿನಲ್ಲಿರುವ ಪಾಚಿಯನ್ನು ತೆಗೆದರೆ ಉಪ್ಪು ಬಾಯಿಯಲ್ಲಿನ ಕ್ರಿಮಿಗಳನ್ನು ನಾಶಮಾಡುತ್ತದೆ ಹಾಗೆಯೇ ಕೊಬ್ಬರಿ ಎಣ್ಣೆ ಹಾಗೂ ತುಳಸಿ ಎಲೆಗಳು ಹಲ್ಲನ್ನು ಬುಡದಿಂದಲೇ ಗಟ್ಟಿಗೊಳಿಸಿ ವಸಡಿನಲ್ಲಿನ ರಕ್ತಸ್ರಾವದಂಥ ಸಮಸ್ಯೆಗಳನ್ನು ಹೋಗಲಾಡಿಸುತ್ತವೆ. ಹಾಗಾಗಿ ಅತ್ಯಂತ ಪ್ರಯೋಜನಕಾರಿಯಾಗಿರುವ ಈ ಮನೆಮದ್ದು ನೂರು ಪ್ರತಿಶತ ಫಲಿತಾಂಶವನ್ನು ನೀಡುವುದರಲ್ಲಿ ಎರಡು ಮಾತಿಲ್ಲ.