Advertisements

2 ತಿಂಗಳ ಹಿಂದೆ ಮದುವೆಯಾಗಿದ್ದ ಈತ! ಈ ದಿನ ಎನಾಗಿ ಹೋದ ನೋಡಿ.. ಮನಕಲಕುತ್ತದೆ..

Kannada News

ಮನುಷ್ಯ ‌ಬದುಕು ನೀರಿನ ಮೇಲಿರುವ ಗುಳಿ ಹಾಗೆ ಯಾವಾಗ, ಎಲ್ಲಿ ಹೇಗೆ ಅಂತ್ಯ ಎಂಬುವುದು ವಿಧಿ ಲಿಖಿತ. ಮದುವೆಯಾಗಿ ೪೫ ನೇ ದಿನಕ್ಕೆ ಮದುಮಗನಿಗಾದ ಗತಿ ಕೇಳಿದರೆ ನಿಜಕ್ಕೂ ವಿಧಿ ಎಷ್ಟು ಕ್ರೂರಿ ಅನಿಸಿಬಿಡುತ್ತದೆ. ಮದುವೆಯಾಗಿ ಹೊಸ ಜೀವನಕ್ಕೆ ಕಾಲಿಟ್ಟ ಆತ ಪತ್ನಿಯೊಡನೆ ಸುಖವಾಗಿ ಸಂಸಾರ ಮಾಡಿ ಬದುಕು ಸಾಗಿಸಬೇಕೆಂದು ನೂರಾರು ಕ‌ನಸ್ಸು ಕಂಡಿದ್ದವನಿಗೆ ಸಿಕ್ಕಿದ್ದು ಬರಿ ನೆನೆಪು ಮಾತ್ರ. ಹೌದು ವೀಕ್ಷಕರೆ ಮನೆಯಲ್ಲಿ ಮದುವೆಯ ಸಂಭ್ರಮ ಮನೆ ಮಾಡಿರುವಾಗಲೇ ಆ ಮನೆ ಸೂತಕ ಸರೆಮನೆಯಾಗಿಬಿಟ್ಟಿತ್ತು.

Advertisements
Advertisements

ಎಲ್ಲವು ಸುಗಮಾಗಿಯೇ ಸಾಗುತ್ತಿರುವಾಗ ಅಲ್ಲಿ‌ ನಡೆದಿದ್ದಾದ್ರು ಏನು ಅಂತೀರಾ ಹಾಗಿದ್ದರೆ ಈ ಸ್ಟೋರಿನಾ ಕೊನೆವರೆಗೂ ತಪ್ಪದೆ ಓದಿ ಹಾಗೂ ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ.. ಚಿಕ್ಕಮಗಳೂರಿನ ಮೂಡಿಗೆರೆ ನಿವಾಸಿಯಾದ ಹರೀಶ್ ಎಂಬಾತ‌ ಇತನ ವಯಸ್ಸು 28. ಮದುವೆಯ ವಯಸ್ಸಿಗೆ ಬಂದಿದ್ದ ಹರೀಶನಿಗೆ ಅದಾಗಲೇ ಬಾಳಸಂಗಾತಿಯನ್ನು ಹುಡುಕಿ ಮದುವೆಗೆ ಸಿದ್ಧತೆ ನಡೆದಿತ್ತು. ಕಾಲ ಕಳೆದಂತೆ ಹಿರಿಯರ ಸಮ್ಮುಖದಲ್ಲಿ ಹರೀಶ ಮದುವೆ ಅದ್ದೂರಿಯಾಗಿ ನೆರವೇರಿತು. ಹರೀಶ್ ಆರ್ ಆರ್ ಎಸ್ ಸಂಸ್ಥೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಟ್ರ್ಯಾಕ್ಟರ್ ಚಾಲಕನಾಗಿ ಕೆಲಸವನ್ನೂ ಮಾಡುತ್ತಿದ್ದ.

ಅನುಸರಿಕೊಂಡು ಹೋಗುವ ಹೆಂಡತಿ, ಬೆನ್ನಿಗೆ ಬೆಂಬಲವಾಗಿ ತಂದೆ ತಾಯಿ ‌ಜೀವನ‌ ನಡೆಸಲು ಕೈಲ್ಲೊಂದು ಕೆಲಸ.‌ಹೀಗೆ ಹರೀಶನ ಬಾಳು ಆನಂದ ಸಾಗರವಾಗಿತ್ತು. ಆದರೆ ಖುಷಿ ಬಹಳ ದಿನ ಅವನ‌ ಬದುಕಿನಲ್ಲಿ ಇರಲಿಲ್ಲ. ಇಷ್ಟಪಟ್ಟು ಕೈ ಹಿಡಿದ ಮಡದಿಯೂಡನೆ ಮುಂದಿನ ಜೀವನವನ್ನು ನೆಮ್ಮದಿಯಾಗಿ ಸಾಗಿಸುವ ಕನಸು ಕಂಡಿದ್ದ ಹರೀಶ್ ಮದುವೆಯಾದ ನಲವತ್ತೈದು ದಿನದಲ್ಲಿಯೇ ಜೀವ ಕಳೆದುಕೊಳ್ಳುವಂತಾಗಿ ಹೋಯ್ತು..

ಹೌದು ಹರೀಶ್ ಮದುವೆಯಾಗಿ ಶಾಸ್ತ್ರ ಸಂಪ್ರದಾಯಗಳನ್ನು ಮುಗಿಸಿಕೊಂಡು ಇನ್ನು ಜೀವನ ನಡೆಸಲು ಮತ್ತೆ ಕೆಲಸಕ್ಕೆ ಹಾಜರಾಗಬೇಕೆಂದು ಮದುವೆಯಾದ ಕೆಲವೇ ದಿನಗಳಲ್ಲಿ ಮತ್ತೆ ತನ್ನ ಕೆಲಸಕ್ಕೆ ಮರಳಿದ್ದನು.. ಜನವರಿ ತಿಂಗಳಿನ ಶನಿವಾರದಂದು ಕೆಲಸಕ್ಕೆಂದು ಹೋದ ಹರೀಶ್ ಮರಳಿ ಮನೆಗೆ ಬಾರಲೇ ಇಲ್ಲ.. ಹೌದು ಆತನಿಗೆ ಡ್ರೈವ್ ಮಾಡೊದು‌ ಎಂದರೆ ಎಲ್ಲಿಲ್ಲದ ಪ್ರೀತಿ. ನಿನ್ನೆ ಅದೇ ಕೆಲಸದಿಂದಾಗಿ ತನ್ನ ಜೀವವನ್ನೇ ಕಳೆದುಕೊಂಡುಬಿಡುವಂತಾಯಿತು.

ಹೌದು ಶನಿವಾರ ಮಧ್ಯಾಹ್ನ ಚಿಕ್ಕಮಗಳೂರು ಜಿಲ್ಲೆಯ ಹಳೇಕೋಟೆಯಿಂದ ಮೂಡಿಗೆರೆಗೆ ಬರುವ ಸಮಯದಲ್ಲಿ ಇಳಿಜಾರಿನಲ್ಲಿ ಹರೀಶ್ ಚಾಲನೆ ಮಾಡುತ್ತಿದ್ದ ಟ್ರ್ಯಾಕ್ಟರ್ ನ ಚಕ್ರ ಗುಂಡಿಗೆ ಸಿಲುಕಿಕೊಂಡಿದೆ.. ಎಷ್ಟೇ ಪ್ರಯತ್ನ ಪಟ್ಟರೂ ನಿಯಂತ್ರಣಕ್ಕೆ ಬಾರಲಿಲ್ಲ.. ಅತ್ತ ಹರೀಶ್ ಟ್ರ್ಯಾಕ್ಟರ್ ನಿಯಂತ್ರಣಕ್ಕೆ ಬಾರದಿದ್ದಾಗ ಟ್ರ್ಯಾಕ್ಟರ್ ನಿಂದ ಹಾರಿದ್ದರೆ ಬಹುಶಃ ಇಂದು ಆತನ ಜೀವವಾದರೂ ಉಳಿಯುತಿತ್ತೇನೋ.. ಆದರೆ ಟ್ರ್ಯಾಕ್ಟರ್ ನಲ್ಲಿಯೇ ಕುಳಿತು ಗುಂಡಿಯಿಂದ ಹೊರ ತರಲು ಹರೀಶ್ ಪ್ರಯತ್ನ ಪಡುತ್ತಿರುವಾಗಲೇ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಪಲ್ಟಿಯಾಗಿದೆ.. ನೋಡ ನೋಡುತ್ತಲೆ ಟ್ರ್ಯಾಕ್ಟರ್ ಪಲ್ಟಿಯಾಗಿ ಹರೀಶ್ ಟ್ರ್ಯಾಕ್ಟರ್ ಕೆಳಬಾಗದಲ್ಲಿ ಸಿಲುಕಿದ್ದ. ಮಣಬಾರದ ವಾಹನದಡಿ‌ ಸಿಲುಕಿದ ಹರೀಶನ‌ ಪ್ರಾಣ ಪಕ್ಷಿ‌ ಕೇಲವೆ ಕ್ಷಣಗಳಲ್ಲಿ ಹಾರಿ ಹೋಗಿತ್ತು.

ಸಂಜೆ ಸಮಯವಾದರೂ ಮಗ ಮನೆಗೆ ಮರಳಿ ಬಾರದಿರುವುದನ್ನು‌ ಕಂಡ ಕುಟುಂಬದವರು ಬ
ಗಾಬರಿ ಯಾಗಿ ಫೋನ್ ಮಾಡಿದರು ಹರೀಶ್ ಫೋನ್ ಗೆ ಯಾವುದೇ ಪ್ರಯಿಕ್ರಿಯೆ ಬಾರದ್ದನ್ನು .. ಅತ್ತ ಮನೆಗೂ ಬಾರದಿರುವುದನ್ನು ತಿಳಿದು ಗಾಬರಿಯಿಂದ ಟ್ರ್ಯಾಕ್ಟರ್ ಹಾಗೂ ಹರೀಶ್ ನ ಸ್ನೇಹಿತರು ಕುಟುಂಬದವರು ಎಲ್ಲರೂ ಹರೀಶ್ ನನ್ನು ಹುಡುಕಲು ಆರಂಭಿಸಿದ್ದಾರೆ. ಅಂದು‌ ರಾತ್ರಿ ಹರೀಶ್ ನ ಸ್ನೇಹಿತರು ಬಿಡದೆ ಹುಡುಕಾಟ ‌ನಡೆಸಿದಾಗ ಮಲೆನಾಡಿನ ತಿರುವುಗಳಲ್ಲಿ ಟ್ರ್ಯಾಕ್ಟರ್ ಒಂದು ಪಲ್ಟಿಯಾಗಿರುವ ಸುದ್ದಿ ಬೆಳಕಿಗೆ ಬಂದಿದೆ.

ಸ್ನೇಹಿತರೆ ಈ ವೀಡಿಯೋ ನೋಡಿ ಯುಟ್ಯೂಬ್ ಚಾನಲ್ ಅನ್ನು ದಯವಿಟ್ಟು Subscribe ಮಾಡಿ..

ಈ‌ ವಿಷಯ ತಿಳಿದ ಸ್ನೇಹಿತರು ಹತ್ತಿರ ಹೋಗಿ ನೋಡಲಾಗಿ ಅದು ಹರೀಶ್ ಎಂದು ತಿಳಿದಿದೆ.. ಕೆಲಸಕ್ಕೆಂದು ಹೋದ ಮಗ ಈ ರೀತಿಯಾದ ಸುದ್ದಿ ಕೇಳಿ ಆ ಕುಟುಂಬದ ಆಕ್ರಂದನ‌ ಮುಗಿಲು ಮುಟ್ಟಿತ್ತು.. ನಲವತ್ತೈದು ದಿನದ ಹಿಂದಷ್ಟೇ ಮದುವೆಯಾಗಿದ್ದ ಹರೀಶ್ ಇದೀಗ ಆ ಹೆಣ್ಣು ಮಗಳ ಜೀವನ ನೆನೆದರೆ ನಿಜಕ್ಕೂ ಸಂಕಟವಾಗುತ್ತದೆ.. ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಟ್ರ್ಯಾಕ್ಟರ್ ಪಲ್ಟಿಯಾಗುವ ಮೊದಲೆ ಹರೀಶ್ ವಾಹನದಿಂದ ಹಾರಿದರೆ ಇಂದು ನಮ್ಮೊಂದಿಗೆ ಇರುತ್ತಿದ್ದರು. ಆದರೆ ಎಲ್ಲವು ವಿಧಿ ಲಿಖಿತ.