ನಟ ರಾಕ್ಷಸ ಡಾಲಿ ಧನಂಜಯ್ ಅಭಿನಯದ ಹೆಡ್ ಬುಷ್ ಸಿನಿಮಾ ತುಂಬಾ ಸಕ್ಸಸ್ ಫುಲ್ ಆಗಿ ಚಿತ್ರಮಂದಿರಗಳಲ್ಲಿ ಓಡುತ್ತಿದೆ. ಆದರೆ ಇದರ ನಡುವೆಯೇ ಹೆಡ್ ಬುಷ್ ಚಿತ್ರದಲ್ಲಿನ ದೃಶ್ಯವೊಂದು ವಿವಾದ ಆಗುವಂತೆ ಮಾಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಚರ್ಚೆ ನಡೆಯುತ್ತಿದೆ. ಹೌದು, 8oರ ದಶಕದಲ್ಲಿ ಡಾನ್ ಜಯರಾಜ್ ಇಡೀ ಬೆಂಗಳೂರನ್ನೇ ಅಲ್ಲಾಡಿಸಿದ್ದ ಕಾಲ ಆದ. ಇದೆ ಡಾನ್ ಜಯರಾಜ್ ಕುರಿತಾದ ಸಿನಿಮಾವೇ ಹೆಡ್ ಬುಷ್. ಇನ್ನು ಜಯರಾಜ್ ಪಾತ್ರದಲ್ಲಿ ಮಿಂಚಿರುವ ನಟ ಡಾಲಿ ಧನಂಜಯ್ ಅವರ ಅಭಿನಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಆದರೆ ಹೆಡ್ ಬುಷ್ ಸಿನಿಮಾದಲ್ಲಿನ ಕರಗ ಹಾಗೂ ವೀರಗಾಸೆ ಕುರಿತಾದ ದೃಶ್ಯ ಮೂಡಿಬಂದಿದ್ದು, ವೀರಗಾಸೆ ಕರಗಕ್ಕೆ ಚಿತ್ರತಂಡದಿಂದ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ಕೆಲವರು ಚಿತ್ರ ತಂಡದ ವಿರುದ್ಧ ಪ್ರಕರಣ ಕೂಡ ದಾಖಲು ಮಾಡಿದ್ದಾರೆ.

ಇನ್ನು ಈ ಪ್ರಕರಣದಿಂದ ಸಿನಿಮಾ ತಂಡ ಸಂಕಷ್ಟಕ್ಕೆ ಸಿಲುಕಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಚಿತ್ರವನ್ನ ಬಾಯ್ಕಾಟ್ ಮಾಡಬೇಕು ಎಂದು ಟ್ರೆಂಡ್ ಶುರು ಮಾಡಿದ್ದಾರೆ. ಇನ್ನು ವಿವಾದ ಸೃಷ್ಟಿ ಮಾಡಿರುವ ದೃಶ್ಯಗಳನ್ನ ತೆಗೆದುಹಾಕಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ವಿರೋಧ ವ್ಯಕ್ತವಾಗುತ್ತಿದ್ದು, ಇದೆ ವೇಳೆ ಡಾಲಿ ಧನಂಜಯ್ ಅವರ ಅಭಿಮಾನಿಗಳು ಸಿನಿಮಾದ ಪರ ನಿಂತಿದ್ದಾರೆ. ಇನ್ನು ಚರ್ಚೆ ಜೋರಾಗುತ್ತಿದ್ದಂತೆ ಇದರ ಬಗ್ಗೆ ನಟ ಧನಂಜಯ್ ಅವರು ಪ್ರತಿಕ್ರಿಯೆ ನೀಡಿದ್ದು, ಪೂರ್ತಿ ಸಿನಿಮಾ ನೋಡಿ ಮಾತಾಡಿ. ನಾವು ವೀರಗಾಸೆಗಾಗಲಿ ಕರಗಕ್ಕಾಗಲಿ ಯಾವುದೇ ರೀತಿಯ ಅವಮಾನ ಮಾಡಬೇಡಿ.
ಆದರೆ ಧನಂಜಯ್ ಅವರು ಏನೇ ಹೇಳಿದ್ರೂ ಹಲವರಿಂದ ಪ್ರತಿಭಟನೆ ಮಾತ್ರ ನಿಂತಿಲ್ಲ. ಜೊತೆಗೆ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿಯೂ ಕೂಡ ಹೆಡ್ ಬುಷ್ ಸಿನಿಮಾ ವಿರುದ್ಧ ದೂರು ದಾಖಲು ಮಾಡಿದ್ದಾರೆ. ಇದೆಲ್ಲದರ ಬಳಿಕ ತಮ್ಮ ಸಿನಿಮಾ ತಂಡದೊಂದಿಗೆ ಪ್ರೆಸ್ ಮೀಟ್ ಕರೆದು ಮಾತನಾಡಿರುವ ನಟ ಧನಂಜಯ್ ಅವರು ನಮಗೂ ಕೂಡ ಕರಗ, ವೀರಗಾಸೆ ಮೇಲೆ ಅಪಾರವಾದ ಭಕ್ತಿ ಇದೆ. ಯಾರ ಭಾವನೆಗಳಿಗೂ ದಕ್ಕೆ ತರುವ ಉದ್ದೇಶ ನಮ್ಮದಲ್ಲ. ನಿಮ್ಮ ಮನಸ್ಸಿಗೆ ಯಾವುದೇ ರೀತಿಯ ನೋವಾಗಿದ್ದಲ್ಲಿ ನಮ್ಮನ್ನ ಕ್ಷಮಿಸಿ ಎಂದು ನಟ ಡಾಲಿ ಧನಂಜಯ್ ಹಾಗೂ ಹೆಡ್ ಬುಷ್ ನಿರ್ದೇಶಕ ಕ್ಷಮೆ ಕೇಳಿದ್ದಾರೆ. ಇದ್ರೆಲ್ಲಾದರ ನಡುವೆಯೂ ಕೆಲವರು ಪ್ರಕರಣ ದಾಖಲು ಮಾಡಿದ್ದಾರೆ, ಬೆಂಗಳೂರು ಕರಗ ಸಮಿತಿಯವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಹೆಡ್ ಬುಷ್ ಸಿನಿಮಾ ಕುರಿತು ದೂರು ನೀಡಿದ್ದಾರೆ. ಮುಂದೆ ಇದು ಎಲ್ಲಿ ಹೋಗಿ ನಿಲ್ಲುತ್ತದೆಯೋ ಕಾದು ನೋಡಬೇಕಾಗಿದೆ.