Advertisements

ಇವನ ಜನ್ಮಕ್ಕಿಷ್ಟು.. ಹೆತ್ತ ತಾಯಿ ಒಬ್ಬಳೇ ಇದ್ದಾಗ ಮಗ ಮಾಡಿದ ಕೆಲಸ ನೋಡಿ ಬೆಚ್ಚಿಬಿದ್ದರು..

Kannada News

ಅಮ್ಮ ಎಂದರೆ ಆ ಸಂಬಂಧಕ್ಕೆ ನಿಜಕ್ಕೂ ಎಂದೂ ಯಾರಿಂದಲೂ ಬೆಕೆ ಕಟ್ಟಲಾಗದು.. ಆಕೆಯ ಪ್ರೀತಿಯ ಮುಂದೆ ಮಿಕ್ಕೆಲ್ಲವೂ ಶೂನ್ಯವೇ ಸರಿ.. ಕಷ್ಟವನ್ನೆಲ್ಲಾ ತನಗೆ ಇಟ್ಟುಕೊಂಡು ಸುಖವನ್ನೆಲ್ಲಾ‌ ತನ್ನ ಮಕ್ಕಳಿಗೆ ಧಾರೆ ಎರೆದು ಮಕ್ಕಳ ಬಗ್ಗೆ ಸಾವಿರಾರು ಕನಸು ಕಂಡು ಬೆಳೆಸುವಳು.. ಆದರೆ ಮಕ್ಕಳು ದೊಡ್ಡವರಾದ ಬಳಿಕ ಅವರುಗಳಿಂದ ಕನಿಷ್ಟ ಒಂದಿಷ್ಟು ಪ್ರೀತಿಯನ್ನು ಅಪೇಕ್ಷೆ ಪಡುವಳು.. ಅವಳೂ ಮನುಷ್ಯಳೇ ಅಲ್ಲವೇ.. ಆದರೆ ಕೆಲ ಮಕ್ಕಳು ಮಾತ್ರ ತನ್ನ ಹೆತ್ತವರ ದೂರ ತಳ್ಳುವರು.. ಒಂದು ತುತ್ತು ಅನ್ನ ಹಾಕದೇ ಮುಂದೊಂದು ದಿನ ತಮಗೂ ಅದೇ ಪರಿಸ್ಥಿತಿ ಎಂಬುದ ಮರೆಯುವರು.. ಆದರೆ ಇಲ್ಲೊಬ್ಬ ಮಗ ತನ್ನ ತಾಯಿಯ ಜೊತೆ ನಡೆದುಕೊಂಡ ರೀತಿಯನ್ನು ನೋಡಿದರೆ ನಿಜಕ್ಕೂ ಈತ ಆ ತಾಯಿಯ ಮಗನೇನಾ ಎನಿಸುತ್ತಿದೆ.. ಈತನ ಮೇಲೆ ಅಸಹ್ಯವನ್ನುಂಟು ಮಾಡುತ್ತಿದೆ.. ಈತ ಮಾಡಿದ ಕೆಲಸ ಕಂಡು ಇದೀಗ ಮೈಸೂರಿಗರು ಬೆಚ್ಚಿ ಬಿದ್ದಿದ್ದಾರೆ..

Advertisements
Advertisements

ಹೌದು ತಾಯಿ ತನ್ನ‌ ಮಕ್ಕಳನ್ನು ಎಷ್ಟು ಪ್ರೀತಿ‌ ಮಾಡುವಳೋ ಅದೇ ರೀತಿ ಸಾಕಷ್ಟು ಮಕ್ಕಳು ತಮ್ಮನ್ನು ಹೆತ್ತವರನ್ನು ಅಷ್ಟೇ ಪ್ರೀತಿ ಕಾಳಜಿ ಯಿಂದ ನೋಡಿಕೊಳ್ಳುತ್ತಾರೆ.. ತಾಯಿಗಾಗಿ ಮಕ್ಕಳು ಸಹ ಎಷ್ಟೋ ತ್ಯಾಗಕ್ಕೆ ಮುಂದಾದ ಘಟನೆಗಳು.. ವಯಸ್ಸಾದಾಗ ತಾಯಿಯನ್ನು ಮಗುವಿನಂತೆ ನೋಡಿಕೊಂಡ ಘಟನೆಗಳು ಹೀಗೆ ಸಾಮಾಜಿಕ ಜಾಲತಾಣದಲ್ಲಿ, ನಮ್ಮ ಸುತ್ತ ಮುತ್ತಲಿನಲ್ಲಿ ನಾವುಗಳು ಸಾಕಷ್ಟು ವಿಚಾರಗಳನ್ನು ನೋಡಿರುತ್ತೇವೆ ಕೇಳಿರುತ್ತೇವೆ.. ಆದರೆ ಈತ ಮಾತ್ರ ಮಗ ಆಗೋದಕ್ಕೆ ಅಲ್ಲ ಒಬ್ಬ ಮನುಷ್ಯನಾಗುವುದಕ್ಕೇ ಅರ್ಹನಲ್ಲ.. ಹೌದು ಈತನ ಹೆಸರು ಹೇಮರಾಜ್ ವಯಸ್ಸು ನಲವತ್ತೈದು.. ಈ ಮಹಾನ್ ಪುರುಷನ ನತದೃಷ್ಟ ತಾಯಿಯ ಹೆಸರು ನಾಗಮ್ಮ.. ಅರವತ್ತೈದು ವರ್ಷ ವಯಸ್ಸು.. ಇವರು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಹನುಮಂತಪುರ ಗ್ರಾಮದ ನಿವಾಸಿಗಳು..

ಮಗ ಹೇಮರಾಜ್ ಗೆ ಮದುವೆಯಾದ ಕೆಲ ದಿನಗಳ ನಂತರ ಆತನ ಸಂಸಾರ ಬೇರೆಯಾಗಿ ವಾಸ ಮಾಡುತಿತ್ತು.. ಇತ್ತ ತಾಯಿ ನಾಗಮ್ಮ ಒಬ್ಬರೇ ವಯಸ್ಸಾದ ಸಮಯದಲ್ಲಿಯೂ ತಮಗೆ ತಾವೇ ಅಡುಗೆ ಮಾಡಿಕೊಂಡು ವಾಸವಿದ್ದರು.. ಆದರೆ ತನಗಂತೂ‌ ಒಂದು ತುತ್ತು ಅನ್ನ ಹಾಕುವ ಯೋಗ್ಯತೆ ಇಲ್ಲವಾದರೂ ಆಕೆಯನ್ನು ನೆಮ್ಮದಿಯಾಗಿ ಇರಲೂ ಸಹ ಈ ಮಗ ಬಿಡಲಿಲ್ಲ.. ಹೌದು ನಾಗಮ್ಮ ಮನೆಯಲ್ಲಿ ಒಬ್ಬಳೇ ಇದ್ದಾಗ ಆಗಾಗ ಹೇಮರಾಜ್ ಹೋಗಿ ಗಲಾಟೆ ಮಾಡಿ ಬರುತ್ತಿದ್ದ.. ಹಣಕಾಸಿನ ವಿಚಾರವಾಗಿ ತಾಯಿಯ ಬಳಿ ಹಣ ನೀಡುವಂತೆ ಒತ್ತಾಯ ಮಾಡುತ್ತಿದ್ದ ಎಂದು ತಿಳಿದುಬಂದಿದೆ.. ಈ ವಯಸ್ಸಿನಲ್ಲಿಯೂ ತನ್ನ ಮಗನಿಗೆ ಹಣ ಕೊಟ್ಟು ಕೊಟ್ಟು ಸಾಕಾಗಿತ್ತು ಆ ತಾಯಿಗೆ.‌.

ಇದೇ ರೀತಿ ಮೊನ್ನೆಯೂವ್ಸಹ ತಾಯಿ ನಾಗಮ್ಮ ಬಳಿ ಹಣ ಕಾಸಿನ ವಿಚಾರವಾಗಿ ಜಗಳ ಮಾಡಿಕೊಂಡಿದ್ದಾನೆ.. ತಾಯಿಯೂ ಸಹ ಮಗನ ಜೊತೆ ಹಣವಿಲ್ಲವೆಂದು ಗಲಾಟೆ ಮಾಡಿದ್ದಾರೆ.. ಆದರೆ ಇಷ್ಟಕ್ಕೆ ಆ ಮಗರಾಯ ಹೇಮರಾಜ್ ತನ್ನ ಕೊಳಕು ಮನಸ್ಸಿನಿಂದ ಬೇರೆಯದ್ದೇ ನಿರ್ಧಾರ ಮಾಡಿಬಿಟ್ಟ.. ಹೌದು ತನ್ನ ತಾಯಿ ನಾಗಮ್ಮ ರಸ್ತೆಯಲ್ಲಿ ಒಬ್ಬಳೇ ಹೋಗುವ ಸಮಯದಲ್ಲಿ ತನ್ನ ಜೀಪ್ ಬಳಸಿ ಆ ತಾಯಿಯನ್ನೇ ಇಲ್ಲವಾಗಿಸಿಬಿಟ್ಟ.. ಹೌದು ನಿನ್ನೆ ತಾಯಿಯ ಜೊತೆ ಜಗಳವಾಡಿಕೊಂಡು ಮನೆಯಿಂದ ಹೊರ ಬಂದಿದ್ದಾನೆ.. ಅತ್ತ ತಾಯಿಯೂ ಸಹ ರಸ್ತೆಯ ಒಂದು ಬದಿಯಲ್ಲಿ ಒಬ್ಬಳೇ ನಡೆದುಕೊಂಡು ಹೋಗುತ್ತಿದ್ದಳು.. ಈತ ತನ್ನ ಟ್ರಾವಲ್ ಜೀಪ್ ನಲ್ಲಿ ಬಂದು ತಾಯಿಯನ್ನೇ ಇಲ್ಲವಾಗಿಸಿಬಿಟ್ಟ.. ಆಕೆಗೆ ಡಿಕ್ಕಿಯಾಗುವಾಗಲಾದರೂ ಆತನಲ್ಲಿ ಸಂಕಟವಾಗಲಿಲ್ಲವಾ..

ಅಥವಾ ಆತ ಸಣ್ಣವನಿದ್ದಾಗ ಆತನಿಗೆ ಆ ತಾಯಿ ಕೊಟ್ಟ ಪ್ರೀತಿಯೂ ನೆನಪಾಗದೇ ಹೋಯಿತಾ.. ಅದಕ್ಕೂ ಮೀರಿ ಹೆತ್ತು ಹೊತ್ತು ಸಾಕಿ ಎಲ್ಲವನ್ನೂ ತೊಳೆದು ಸಾಕಿ ದೊಡ್ಡವನನ್ನಾಗಿ ಮಾಡಿದ ಆ ತಾಯಿಯ ಮೇಲೆ ಒಂದಿಷ್ಟು ಕನಿಕರವೂ ಇಲ್ಲದಾಗಿ ಹೋಯ್ತಾ.. ನಿಜಕ್ಕೂ ಈತ ಮನುಷ್ಯನೇನಾ ಎನಿಸುತ್ತಿದೆ.. ಇನ್ನು ಗ್ರಾಮದಲ್ಲಿ ಇದ್ದಕಿದ್ದ ಹಾಗೆ ಹೇಮರಾಜ್ ತನ್ನ ತಾಯಿಗೆ ಈ ರೀತಿ ಮಾಡಿದ ಘಟನೆ ನೋಡುತ್ತಿದ್ದಂತೆ ಅಲ್ಲಿಯೇ ಇದ್ದ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.. ಅತ್ತ ಆತನ ಜೀಪ್ ತಾಯಿಗೆ ಡಿಕ್ಕಿಯಾದ ಕ್ಷಣವೇ ಆ ತಾಯಿ ಅದೇ ಜಾಗದಲ್ಲಿ‌ ಕೊನೆಯುಸಿರೆಳೆದಿದ್ದಾರೆ..ಹೌದು ಬಹುಶಃ ಆ ಜೀಪ್ ಡಿಕ್ಕಿಯಾದ ನೋವಿಗಿಂತ ತಾನೆತ್ತ ಮಗನೇ ತನ್ನನ್ನು ಇಲ್ಲವಾಗಿಸಲು ಬರುತ್ತಿದ್ದದ್ದನ್ನು ಕಂಡೇ ಆ ತಾಯಿ ಆ ಜಾಗದಲ್ಲಿ ಕೊನೆಯುಸಿರೆಳೆದಿರಬಹುದು..

ಯಾರಿಗೂ ಇಂತಹ ಮಕ್ಕಳು ಸಿಗದಿರಲಿ.. ತನ್ನ ಪಾಡಿಗೆ ತಾನಿದ್ದ ತಾಯಿಗೆ ಮಗನಿಂದ ಇಂತಹ ದೊಡ್ಡ ಉಡುಗೊರೆ ಬಹುಶಃ ಆ ತಾಯಿ‌ ಕನಸಿನಲ್ಲಿಯೂ ನೆನೆಸಿರುವುದಿಲ್ಲ.. ಇವನು ಜೀವನ ಪೂರ್ತಿ ಕಂಬಿಗಳ ಹಿಂದೆ ಇದ್ದರೇ ಬಹುಶಃ ಈತನಿಗೆ ತಾನು ಮಾಡಿದ ತಪ್ಪಿನ ಅರಿವಾಗಬಹುದು.. ಅತ್ತ ಬೆಟ್ಟದ ಪುರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಅದಾಗಲೇ ಹೇಮರಾಜ್ ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.. ಆದರೆ ಕೊನೆಗಾಲದಲ್ಲಿ ನೆಮ್ಮದಿಯಾಗಿ ದಿನಗಳನ್ನು ಕಳೆಯಬೇಕಾದ ಆ ತಾಯಿ ಮಾಡಿದ ತಪ್ಪಾದರು ಏನು.. ಸಂಕಟ ತರುತ್ತದೆ.. ದಯವಿಟ್ಟು ಯಾರೂ ಇಲ್ಲಿ ಶಾಶ್ವತವಲ್ಲ.. ಇದ್ದಷ್ಟು ದಿ‌ನ ಹೆತ್ತವರನ್ನು ಕುಟುಂಬವನ್ನು ಚೆನ್ನಾಗಿ ನೋಡಿಕೊಂಡು ಅವರಿಗೆ ಒಂದಿಷ್ಟು ಪ್ರೀತಿ ಕೊಟ್ಟು ಜೀವನ ಸಾಗಿಸಿ.. ಎಲ್ಲರೂ ಒಂದು ದಿನ ಹೋಗಲೇ ಬೇಕು.. ಆದರೆ ಇದ್ದಾಗ ಇಂತಹ ಕೆಲಸ ಮಾಡಿ ಆತ ಸಾಧಿಸಿದ್ದಾದರೂ ಏನು..