Advertisements

ಅಪ್ಪಿತಪ್ಪಿಯೂ ಗಂಡನ ಜೊತೆ ಮಾಡಿದ ಈ ನಾಲ್ಕು ಕೆಲಸಗಳನ್ನು, ಕನಸಲ್ಲಿ ಕೂಡ ಯಾರ ಮುಂದೆಯೂ ಹೇಳಬೇಡಿ! ಯಾವ ಕೆಲಸ ಗೊತ್ತಾ??

Kannada News

ಈ ಜೀವನ ಅನ್ನುವ ಪಾಠಶಾಲೆಯಲ್ಲಿ ನಾವು ಅನೇಕ ವಿಚಾರಗಳನ್ನು ತಿಳಿಯಲೇ ಬೇಕಾಗಿದೆ. ಅದೆಷ್ಟೋ ಮಂದಿ ಗೊತ್ತಿದ್ದೋ, ಗೊತ್ತಿಲ್ಲದೆಯೋ ಅನೇಕ ತಪ್ಪುಗಳನ್ನು ಮಾಡುತ್ತಾರೆ. ಆದರೆ ಅದರಿಂದಾಗುವ ಪರಿಣಾಮಗಳ ಬಗ್ಗೆ ಯೋಚನೆ ಮಾಡುವುದಿಲ್ಲ.‌ ಸಮಸ್ಯೆಗಳು ಎದುರಾದ ಮೇಲೆ ತಾವು ಮಾಡಿರುವ ತಪ್ಪಿನ ಅರಿವಾಗುತ್ತದೆ. ಜೀವನ ಅಂದಮೇಲೆ‌ ಅಲ್ಲಿ ಏಳು – ಬೀಳು, ಕಷ್ಟ – ನಷ್ಟ, ಸುಖ – ದುಃಖ, ಹೀಗೆ ಅನೇಕ ಅನುಭವಗಳು ಆಗಲೇ ಬೇಕು. ಜೀವನದಲ್ಲಿ ಎಲ್ಲವೂ ಸುಗಮವಾಗಿರುವುದಿಲ್ಲ, ಅದೇ ರೀತಿ ನಾವು ಅಂದು‌ ಕೊಂಡಂತೆ ಏನೂ ನಡೆಯುವುದಿಲ್ಲ.

ಇನ್ನು ನಿಮಗೆಲ್ಲಾ ಆಚಾರ್ಯ ಚಾಣಕ್ಯರ ಬಗ್ಗೆ ಗೊತ್ತಿರಲೇ ಬೇಕು. ಚಾಣಕ್ಯರ ಅನೇಕ ನೀತಿ ಕಥೆಗಳನ್ನು ನೀವು ಕೇಳಿರಬಹುದು. ಆಚಾರ್ಯ ಚಾಣಕ್ಯರು ರಾಜ ವಿಷ್ಣುಗುಪ್ತನ ಆಸ್ಥಾನದ ಅತ್ಯುತ್ತಮ ರಾಜತಾಂತ್ರಿಕರಾಗಿದ್ದರು. ಅವರು ಮಾಡಿರುವಂತಹ ನೀತಿಯಲ್ಲಿ ಜೀವನದ ಸಾಕಷ್ಟು ವಲಯಗಳನ್ನು ಅತ್ಯುತ್ತಮವಾಗಿ ಕಳೆಯಲು ಬೇಕಾದ ಸಲಹೆಗಳಿವೆ.

Advertisements
Advertisements

ಅಷ್ಟೇ ಅಲ್ಲ, ಬಹುತೇಕ ಸಮಸ್ಯೆಗಳಿಗೆ ಪರಿಹಾರಗಳನ್ನು ಒದಗಿಸುತ್ತದೆ.‌ಆಚಾರ್ಯ ಚಾಣಕ್ಯರನ್ನು ಕೌಟಿಲ್ಯ, ವಿಷ್ಣು ಗುಪ್ತ ಮತ್ತು ವಾತ್ಸಾಯನ ಎಂದು ಕೂಡ ಕರೆಯುತ್ತಾರೆ. ಈ ಆಚಾರ್ಯ ಚಾಣಕ್ಯರು ಸಾಕಷ್ಟು ಜೀವನ ಪಾಠಗಳನ್ನು ತಿಳಿಸಿದ್ದಾರೆ. ಅವರು ಹೇಳಿರುವ ಜೀವನ ಪಾಠಗಳು ಪ್ರತಿಯೊಬ್ಬರು ಪಾಲಿಸುವಂತದ್ದು. ಇವರು ತಮ್ಮ ನೀತಿಯಲ್ಲಿ ಸಂಸಾರವು ಹೇಗೆ ನಡೆಯಬೇಕು.

ಪತ್ನಿಯಾದವಳು ಗಂಡನ ಕುರಿತಾಗಿ ಹೇಗಿರಬೇಕು ಅನ್ನುವುದನ್ನು ಹೇಳಿ ಕೊಟ್ಟಿದ್ದಾರೆ. ಅದರಲ್ಲಿ ಮುಖ್ಯವಾಗಿ ಪತ್ನಿಯಾದವಳು, ತನ್ನ ಗಂಡನ‌ ಕುರಿತಾದ ಈ ನಾಲ್ಕು ವಿಷಯಗಳನ್ನು ಯಾರಲ್ಲಿಯೂ ಹೇಳಬಾರದು ಎಂದಿದ್ದಾರೆ.‌ ಆ ನಾಲ್ಕು ವಿಷಯಗಳು ಯಾವುದು ಅನ್ನುವುದನ್ನು ನಾವಿಲ್ಲಿ ಹೇಳುತ್ತೇವೆ. ಮೊದಲನೆಯದಾಗಿ, ಗಂಡನ ಜೊತೆ ನಡೆದ ಜಗಳದ ಕುರಿತಾಗಿ.‌ ಹೌದು, ಹಿಂದಿನಿಂದಲೂ ಒಂದು ಮಾತಿದೆ.‌ ಗಂಡ-ಹೆಂಡಿರ ಜಗಳ ಉಂಡು ಮಲಗುವ ತನಕ ಎಂದು.

ಆದರೆ ಹೆಚ್ಚಿನ ಜಗಳಗಳು ಕೆಲ‌ ದಿನಗಳ ವರೆಗೂ ಇರುತ್ತದೆ. ಆದರೆ ಈ ಜಗಳ ಕೇವಲ ಗಂಡ ಹೆಂಡಿರ ನಡುವೆ ಗೌಪ್ಯವಾಗಿರಬೇಕು, ಅದನ್ನು ಇತರರ ಮುಂದೆ ಹೇಳಿಕೊಂಡರೆ‌ ಸಮಸ್ಯೆ ಎದುರಾಗುತ್ತದೆ.‌ ಆಗದವರು ಮತ್ತೆ ಅವರಿಬ್ಬರ ಮಧ್ಯೆ ಉಪ್ಪು ಖಾರ ಸೇರಿಸಿ ವೈಮನಸ್ಸನ್ನು ಮತ್ತಷ್ಟು ಹೆಚ್ಚು ಮಾಡಬಹುದು. ಅದೇ ರೀತಿ ಎರಡನೆಯದಾಗಿ, ನಿಮ್ಮ‌ ಗಂಡನ ದೌರ್ಬಲ್ಯದ ಬಗ್ಗೆ ಯಾರ ಬಳಿಯೂ ಹೇಳಬಾರದು.

ಗಂಡನ ದೌರ್ಬಲ್ಯ ಕೇವಲ ಹೆಂಡತಿ ಆದವಳಿಗೆ ಮಾತ್ರ ತಿಳಿದಿರಬೇಕು. ಇತರರಿಗೆ ತಿಳಿದರೆ ಆ ದೌರ್ಬಲ್ಯದ ಬಗ್ಗೆ ವ್ಯಂಗ್ಯ ಆಡುವುದು ಅಥವಾ ಅದನ್ನು ದುರ್ಬಳಕೆ‌ ಮಾಡಿಕೊಳ್ಳುವ ಸಾಧ್ಯತೆ ಇದೆ. ಮೂರನೆಯದಾಗಿ, ಗಂಡನ‌ ಅನಾರೋಗ್ಯದ ಬಗ್ಗೆ ಹೇಳಬಾರದು.‌ ತನ್ನ ಗಂಡನಿಗೆ ಇರುವ ದೀರ್ಘಕಾಲದ ಸಮಸ್ಯೆ ಬಗ್ಗೆ ಇತರರಲ್ಲಿ ಹೇಳಿಕೊಂಡರೆ ಅವರು ನಿಮ್ಮ‌ ಗಂಡನನ್ನು ದೂರ ಇಡಬಹುದು, ಆಗ ಆತ ಇನ್ನಷ್ಟು ಕುಗ್ಗಿ ಹೋಗಿ ಸಂಸಾರ ಹಾಳಾಗಬಹುದು.‌

ಇನ್ನು ಕೊನೆಯದಾಗಿ ಅಂದರೆ ನಾಲ್ಕನೇ ವಿಷಯ ಅಂದರೆ ಅದು ನಿಮ್ಮ ಗಂಡನ ಆರ್ಥಿಕತೆಯ ಮಾಹಿತಿಯನ್ನು ಯಾರ ಬಳಿಯೂ ಹಂಚಕೂಡದು.‌ ಒಂದು ವೇಳೆ ನಿಮ್ಮ ಗಂಡನಿಗೆ ಹೆಚ್ಚಿನ ಸಂಬಳ ಸಿಗುತ್ತಿದ್ದರೆ ಆಗ ಆತನಿಂದ ದುಡ್ಡು ಲಪಟಾಯಿಸುವುದು, ಸಾಲ‌ ಕೇಳಿ ಆ ನಂತರ ಮರು ಪಾವತಿ ಮಾಡದೇ ಇರುವ ಸಾಧ್ಯತೆ ಇದೆ. ಅದೇ ರೀತಿ ಸಂಬಳ ಕಡಿಮೆ ಇದ್ದರೆ, ಆ ವಿಷಯ ಉಳಿದವರಿಗೆ ಗೊತ್ತಾದರೆ ಆತನನ್ನು ಹೀಯಾಳಿಸುವ ಸಾಧ್ಯತೆ ಇದೆ.‌‌ ಹೀಗಾಗಿ ಈ ನಾಲ್ಕು ವಿಷಯಗಳನ್ನು ತಪ್ಪಿಯೂ ಯಾರ ಬಳಿಯೂ ಹೇಳಬಾರದು. ಈ ಚಾಣಕ್ಯ ನೀತಿ ಬಗ್ಗೆ ನಿಮ್ಮ ಅನಿಸಿಕೆ ಏನು ಅನ್ನುವುದನ್ನು ಕಾಮೆಂಟ್ ಮೂಲಕ‌ ತಿಳಿಸಿ.