Advertisements

ಹೆಂಡತಿ ಯಾವಾಗ ನೋಡಿದ್ರೂ ಮೊಬೈಲ್ ನಲ್ಲಿ ಡಾನ್ಸ್ ಮಾಡ್ತಾಳೆ, ವಿಡಿಯೋ ಮಾಡ್ತಾಳೆ ಅಂತಾ ಈ ಭೂಪ ಮುದ್ದಾದ ಹೆಂಡತಿಗೆ ಏನು ಮಾಡಿದ ಗೊತ್ತಾ? ಇಂತವರು ಇರ್ತಾರೆ ಸ್ವಾಮಿ ನೋಡಿ!!

Kannada News

ನಮಸ್ಕಾರ ಪ್ರಿಯ ಗೆಳೆಯರೆ ಕಾಲ ಬದಲಾಗಿದೆ. ಎಲ್ಲರ ಜೀವನವು ಮೊಬೈಲ್ ಮಯವಾಗಿದೆ. ಮೊಬೈಲ್ ಬಿಟ್ಟು ಅರೆಗಳಿಗೆ ಕಳೆಯುವುದು ಕಠಿಣವಾಗಿ ಹೋಗಿದೆ ಈ ಕಾಲದಲ್ಲಿ. ಜೀವನದಲ್ಲಿ ಅತಿಯಾದರೆ ಅಮೃತ ಎನ್ನುವ ಗಾದೆಯಂತೆ ಇಲ್ಲೊಂದು ಘಟನೆ ನಡೆದು ಹೋಗಿದೆ.

ಮೊಬೈಲ್ ನಾವು ಹೆಚ್ಚಾಗಿ ಬಳಸಿದರೆ ಅದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬುವುದು ತಿಳಿದ ಮಾತು. ಆದರೆ ಇದೀಗ ಮೊಬೈಲ್ ಬಳಕೆಯ ಉದ್ದೇಶವು ಸಹ ಬದಲಾಗಿದೆ. ಹೌದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಮೊಬೈಲ್ ಫೋನ್ ಅನ್ನು ವೀಡಿಯೋ ಹಾಗೂ ಫೋಟೊಗಳಿಗಾಗಿ ಬಳಸಲಾಗುತ್ತದೆ. ಚಿಕ್ಕ ಮಕ್ಕಳಿಂದ ಮುದುಕರು ಸಹ ತಮ್ಮದೆ ಆದ ಸೋಶಿಯಲ್ ಮೀಡಿಯಾ ಕ್ರಿಯೆಟ್ ಮಾಡಿ ಅದರಲ್ಲಿ ವಿಡಿಯೋ ಗಳನ್ನು ಅಪ್ಲೋಡ್ ಮಾಡುತ್ತಾರೆ. ಇನ್ನು ಮಕ್ಕಳು ಮಾತ್ರವಲ್ಲದೆ ಮದುವೆಯಾದ ಗೃಹಿಣಿಯರು ಸಹ ಹೆಚ್ಚಾಗಿ ‌ಮೊಬೈಲ್ ಫೋನ್ ಬಳಕೆ ಮಾಡುತ್ತಾರೆ.

ಅದೆಷ್ಟೊ ಮಹಿಳೆಯರು ತಮ್ಮ ದಿನಿತ್ಯದ ಕೆಲಸಗಳು, ಹೊಸ ಕೆಲಸ ಹೀಗೆ ತಮಗೆ ಇಷ್ಟವಾದ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಾರೆ. ಹೀಗೆ ಹೆಂಡತಿಯೊಬ್ಬಳು ಮೊಬೈಲ್ ನಲ್ಲಿ ವಿಡಿಯೋ ಮಾಡಿದ್ದಕ್ಕೆ ಸಹಿಸಲಾರದ ಆಕೆಯ ಗಂಡ ಯಾವ ಕೆಲಸಕ್ಕೆ ಕೈ ಹಾಕಿದ್ದಾನೆ ಗೊತ್ತಾ?

ಈ ಘಟನೆ ನಡೆದಿರುವುದು ತಮಿಳುನಾಡಿನಲ್ಲಿ. ಹೆಂಡತಿ ಯಾವಾಗಲೂ ಇನ್ಸ್ಟಾ ನಲ್ಲಿ ರಿಲ್ಸ್ ಮಾಡುತ್ತಾಳೆ ಅಂತ ಗಂಡ ಸಿಟ್ಟಾಗಿ ಹೆಂತ ಕೆಲಸ ಮಾಡಿದ್ದಾನೆ ಗೊತ್ತಾ. ತಿರುಪುರ್ ಜಿಲ್ಲೆಯ ದಿಂಡುಗಲ್ ನಲ್ಲಿ ವಾಸವಾಗಿದ್ದ ಅಮೃತ ಲಿಂಗಮ್ ತನ್ನ ಪತ್ನಿಯನ್ನು ತಾನೆ ಕೈಯಾರ ಹತ್ಯ ಮಾಡಿದ್ದಾನೆ.

38 ವರ್ಷದ ಅಮೃತಲಿಂಗಂ ತೆನ್ನೆಂಪಾಳ್ಯಂ ತರಕಾರಿ ಮಾರ್ಕೆಟ್ ನಲ್ಲಿ ದಿನಗೊಲಿಗಾಗಿ ದುಡಿಯುತ್ತಾನೆ. ಆತನ ಪತ್ನಿ ಗಾರ್ಮೆಂಟ್ ಒಂದರಲ್ಲಿ ಕೆಲಸ‌ ಮಾಡುತ್ತಿದ್ದಳು. ಇಬ್ಬರ ಜೀವನ ಸರಿಯಾಗಿಯೇ ಸಾಗುತ್ತಿತ್ತು. ಅವರ ಮಧ್ಯ ಬಿರುಕು ಬಿಟ್ಟಿದೆ ಈ ಮೊಬೈಲ್ ನಿಂದಾಗಿ. ಹೌದು ಕೆಲಸದ ನಿಮಿತ್ಯ ಪೋನ್ ಕೊಂಡಿದ್ದ ಚಿತ್ರ ಹೆಚ್ಚು ಸಮಯವನ್ನು ಮೊಬೈಲ್ ನಲ್ಲಿ ರಿಲ್ಸ್ ಮಾಡುವುದರಲ್ಲೆ ಕಳೆದು ಬಿಡುತ್ತಿದ್ದಳು. ಸದ್ಯ 33.000 ಫಾಲೋವರ್ಸ ಗಳನ್ನು ಹೊಂದಿದ್ದಳು.

ಅಮೃತಲಿಂಗಂ ಹಾಗೂ ಚಿತರ ಹೊಟ್ಟೆ ಪಾಡಿಗಾಗಿ ಸೇಲಂ ನಗರದಲ್ಲಿ ವಾಸವಾವದ್ದರು. ಇನ್ನು ಮೊಬೈಲ್ ಕೊಂಡ ಬಳಿಕ ಇನ್ಸ್ಟಾ ಗ್ರಾಮ್ ಹಾಗೂ ಫೇಸ್ ಬುಕ್ ‌ನಲ್ಲಿ ಹೆಚ್ಚು ಸಮಯ ಕಳೆಯುವುದನ್ನು ಕಂಡ ಪತಿ ಆಗಾಗ ಆಕಯೊಡನೆ ಜಗಳ ಮಡುತ್ತಿದ್ದ ಆದರೆ ಚಿತ್ರ ಮಾತ್ರ ಯಾವುದಕ್ಕೊ ಕ್ಯಾರೆ ಎನ್ನುತ್ತಿರಲಿಲ್ಲ.

ಹೀಗೆ ವಿಡಿಯೋ ಮಾಡುತ್ತಾ ದಿನದಿಂದ ದಿನಕ್ಕೆ ಫಾಲೋವರ್ಸ ಹೆಚ್ಚಾಗುತ್ತಾ ಹೋದಂತೆ ಚೈತ್ರಾ ತಾನು ನಡಿಯಾಗಬೇಕು ಎಂಬ ಕನಸ್ಸು ಕಾಣ ಗೊಡಗಿದಳು‌. ಈ ಕುರಿತು ಪತಿ ಅಮೃತ ಲಿಂಗಂ ಎಷ್ಟೆ ತಿಳಿ ಹೇಳಿದರು ಚೈತ್ರಾ ಮಾತ್ರ ತಾನು ಚೆನೈ ಗೆ ಹೋಗುವ ನಿರ್ಧಾರ ಹಿಂದೆ ತೆಗೆದುಕೊಳ್ಳಲಿಲ್ಲ. ಈ ಮಧ್ಯ ಆಕೆ ಪತಿಗೆ ತಿಳಿಸದೆ ಚನೈಗೆ ಹೋಗಿ ಬಂದಿದ್ದಳು ಎಂಬ ಮಾತು ಸಹ ಕೇಳಿ ಬಂದಿತ್ತು. ತಾನು ನಡಿಯಾಗಬೇಕು ಎಂದು ಚನೈಗೆ ಹೋಗಲು ರೆಡಿಯಾಗಿದ್ದಕೆ ಗಂಡ ವಿರೋಧಿಸಿದ್ದಾರೆ.

ಈ ಘಟನೆ ನಡೆದಾಗ ಇಬ್ಬರು ಮನೆಯಲ್ಲಿದ್ದಾರೆ.‌ಗಂಡನ ಮಾತನ್ನು ನಿರಾಕರಿಸಿ ಚನೈಗೆ ಹೋಗಲು ಸಿದ್ಧಳಾದಾಗ ಅಮೃತಲಿಂಗಂ ತನ್ನ ಶಾಲಿನಿಂದ ಚೈತ್ರಾಳ ಕತ್ತಿಗೆ ಬಿಗಿಯಾಗಿ ಹಾಕಿದ್ದಾನೆ ಹಾಗೂ ಬಲವಾಗಿ ಎಳೆದಿದ್ದಾನೆ. ಅನಂತರ ಆಕೆಯ ಕತ್ತು ಹಿಸುಕಿ ಆಕೆಯನ್ನು ಕೆಳಗೆ ಬೀಳಿಸುತ್ತಾನೆ. ಉಸಿರಾಟದ ತೊಂದರೆಯಿಂದ ನೆಲಕ್ಕೆ ಬಿದ್ದದ್ದನ್ನು ಕಂಡು ಮಗಳಿ ಈ ವಿಷಯ ತಿಳಿಸಿದ್ದಾನೆ.

ಮಗಳು ಸ್ವಲ್ಪ ಹೊತ್ತಿನ ಬಳಿಕ ಬಂದು ನೋಡಿದಾಗ ಅದಾಗಳೆ ಚೈತ್ರಾಳ ಪ್ರಾಣಪಕ್ಷಿ ಹಾರಿ ಹೋಗಿತ್ತು. ಈ ಪ್ರಕರಣವನ್ನು ಪೋಲಿಸ್ ಠಾಣೆ ಯಲ್ಲಿ ದಾಖಲಿಸಿಕೊಂಡಿದ್ದಾರೆ. ಆರೋಪಿ ಅಮೃತಲಿಂಗಂ ಅವರನ್ನು ಪೋಲಿಸರು ವಶಕ್ಕೆ ‌ಪಡೆದು ತನಿಖೆ ಪ್ರಾರಂಭಿಸಿದ್ದಾರೆ. ಇಲ್ಲಿ ಹೆಂಡತಿಯ ಅತೀಯಾದ ಮೊಬೈಲ್ ಬಳಕೆ ಹಾಗೂ ಗಂಡನ ಅತಿಯಾದ ಸಿಟ್ಟು ಎಲ್ಲವು ಒಂದು ಪ್ರಾಣವನ್ನು ಬಲಿ ತೆಗೆದುಕೊಳ್ಳಲು ಕಾರಣವಾಯಿತು. ಸದಾ ಮೊಬೈಲ್ ಒಂದನ್ನೆ ಜೀವನ ಎಂದು ಕೊಂಡವರಿಗೆ ಇದೊಂದು ಪಾಠ.