Advertisements

ನಿಮ್ಮ ಮನೆಯಲ್ಲಿ ಪ್ರತಿನಿತ್ಯ ದುಡ್ಡಿನ ಸುರಿಮಳೆ ಆಗಬೇಕಾ? ಹಾಗಾದರೆ ಈಗಲೇ ಇಂತಹ ಗುಣಗಳಿರುವ ಮಹಿಳೆಯರನ್ನು ಹುಡುಕಿ ಮದುವೆಯಾಗಿ!!

Kannada News

ಪುರಾತನ ಕಾಲದಿಂದಲೂ ಹೆಣ್ಣು ಮಕ್ಕಳಿಗೆ ವಿಶೇಷವಾದ ಸ್ಥಾನ ಮಾನ ಕೊಡಲಾಗುತ್ತಿದೆ.‌ಒಂದು ಹೆಣ್ಣು ಮಗು ಹುಟ್ಟಿದರೆ ಮನೆಗೆ ಲಕ್ಷ್ಮಿ ಬಂದಳು ಎಂದೇ ಹೇಳುತ್ತಾರೆ. ಯಾವ ಮನೆಯಲ್ಲಿ ಹೆಣ್ಣು ಮಕ್ಕಳು ಇರುವುದಿಲ್ಲವೋ ಆ ಮನೆ ನರಕವೇ ಆಗಿರುತ್ತದೆ. ಅಲ್ಲಿ ಯಾವ ಖುಷಿಯೂ ಇರುವುದಿಲ್ಲ ಬದಲಾಗಿ‌ ಮನೆಯು ಸ್ಮಶಾನವಾಗಿರುತ್ತದೆ‌. ಇನ್ನು ಪ್ರತಿ ಮನೆಯಲ್ಲಿಯೂ ಮುಖ್ಯವಾಗಿ ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳಿಗೆ ಸಂಸ್ಕಾರ ಹೇಳಿಕೊಡಲಾಗುತ್ತದೆ.‌‌ ಯಾಕೆಂದರೆ ಸಂಸ್ಕಾರ ಇರುವ ಹೆಣ್ಣು ಮಗು ಮನೆಯಲ್ಲಿದ್ದರೆ ಆ ಮನೆಯು ಬೆಳಗುತ್ತದೆ.

Advertisements
Advertisements

ಅದೇ ಸಂಸ್ಕಾರ ಇಲ್ಲದ ಹೆಣ್ಣು ಒಂದು ಮನೆಗೆ ಮಾರಿ ಇದ್ದ ಹಾಗೆ ಎಂದು ಹೇಳಲಾಗುತ್ತದೆ. ‌ಇವತ್ತು ನಾವು ಕೆಲವು ಲಕ್ಷಣಗಳಿರುವ ಹೆಣ್ಣು ಮಕ್ಕಳ ಬಗ್ಗೆ ಹೇಳುತ್ತೇವೆ. ಒಂದು ಹೆಣ್ಣು ಯಾವ ರೀತಿ‌ ಇದ್ದರೆ ಆ ಮನೆಗೆ ಶ್ರೇಯಸ್ಸು ಅನ್ನುವುದನ್ನು ಹೇಳುತ್ತೇವೆ. ಹೆಣ್ಣಿನ ಮುಖ‌ ಲಕ್ಷಣ ಕೂಡ ಒಂದು‌ ಮನೆಗೆ ಅದೃಷ್ಟವೋ ಅಥವಾ ದುರಾದೃಷ್ಟವೋ ಎಂದು ಹೇಳುತ್ತದೆ.‌ ಒಂದು ಹೆಣ್ಣು ಅಗಲವಾದ ಹಣೆ, ದಪ್ಪನೆಯ ಹುಬ್ಬು ಕೆಂಪು ಛಾಯೆಯುಳ್ಳ ಮುಖ ಹಾಗೂ ಉದ್ದನೆಯ ಮೂಗು ಹೊಂದಿದ್ದರೆ ಆ‌ ಮನೆಯಲ್ಲಿ ಲಕ್ಷ್ಮಿ ನೆಲೆಯಾಗಿರುತ್ತಾಳೆ ಎಂದೇ ಅರ್ಥ.

ಅದೇ ರೀತಿ ಒಂದು ಮನೆಯಲ್ಲಿರುವ ಹೆಣ್ಣು ಸದಾ ನಗುತ್ತಿದ್ದರೆ ಅದು ಆ ಮನೆಗೆ ತುಂಬಾನೇ ಒಳ್ಳೆಯದು.‌‌ ಲಕ್ಷ್ಮೀ ಕೃಪ ಕಟಾಕ್ಷ ಆ ಮನೆಯಲ್ಲಿ ಇದ್ದೇ ಇರುತ್ತದೆ.‌ ಇನ್ನು ಕೇವಲ‌ ಹೆಣ್ಣು ಸರಿಯಾಗಿ ಇದ್ದರೆ ಸಾಲದು ಆ ಮನೆಯಲ್ಲಿ ಇರುವವರು ಆ ಹೆಣ್ಣಿಗೆ ಗೌರವ ನೀಡಬೇಕು, ಎಲ್ಲಿ ಗೌರವ ನೀಡುವುದಿಲ್ಲವೋ ಅಲ್ಲಿ ಲಕ್ಷ್ಮೀ ಮುನಿಸಿಕೊಳ್ಳುತ್ತಾಳೆ. ಇನ್ನು ಯಾವುದೇ ಹೆಣ್ಣು ಸೂರ್ಯಾಸ್ತವಾದ ಬಳಿಕ ಮಲಗಬಾರದು, ಇದು ಒಳ್ಳೆಯ ಲಕ್ಷಣ ಅಲ್ಲ.‌ ಅದರ ಬದಲು ಬೆಳಗ್ಗೆ ಬೇಗ ಎದ್ದು ಅಂಗಳ ಗುಡಿಸಿ ತುಳಸಿಗೆ ನೀರು ಅರ್ಪಿಸಬೇಕು.‌

ಅದೇ ರೀತಿ‌ ಸೂರ್ಯಾಸ್ತದ ನಂತರ ಕೂದಲು ಬಿಟ್ಟು ಓಡಾಡಬಾರದು, ಮಲಗುವಾಗಲೂ ಕೂದಲು ಕಟ್ಟಿಕೊಂಡು ಮಲಗಬೇಕು ಹೀಗೆ ಮಾಡಿದರೆ ಆ ಮನೆಗೆ ಒಳ್ಳೆಯದಾಗುತ್ತದೆ.‌ ಇನ್ನು ಅದೃಷ್ಟಸೂಚಕ‌ ಹಾಗೆಯೇ ಹೆಣ್ಣಿನ‌ ಲಕ್ಷಣವಾದ ಹಣೆ ಬೊಟ್ಟು,‌ಕೈ ಬಳೆ, ತಲೆಗೆ ಹೂವು ತೊಟ್ಟು ಹೆಣ್ಣು ಮಗು ಮನೆಯಲ್ಲಿ ಓಡಾಡುತ್ತಿದ್ದರೆ ಆ ಮನೆಗೆ ದುರಾದೃಷ್ಟ ಅನ್ನುವುದೇ ಸುಳಿಯುವುದಿಲ್ಲ. ಹಾಗಾಗಿ ನಿಮ್ಮ‌ ಮನೆಯ ಹೆಣ್ಣು ಮಕ್ಕಳಲ್ಲಿ ಈ ಗುಣಗಳಿದ್ದರೆ ನೀವೇ ಅದೃಷ್ಟವಂತರು. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಏನು ಅನ್ನುವುದನ್ನು ನಮಗೇ ತಪ್ಪದೇ ಕಾಮೆಂಟ್ ಮೂಲಕ ತಿಳಿಸಿ.