Advertisements

ಹೊಸದಾಗಿ ಮದುವೆಯಾದ ಹೆಣ್ಣು ಮಗಳು.. ಹಬ್ಬದ ದಿನವೇ ಈಕೆಗೆ ಗಂಡ ಏನು ಕುಡಿಸಿದ್ದಾನೆ ನೋಡಿ.. ಇವನ ಜನ್ಮಕ್ಕಿಷ್ಟು..

Kannada News

ಹೊಸದಾಗಿ ಮದುವೆಯಾದ ಜೋಡಿಗಳಿಗೆ ವರ್ಷ ಪೂರ್ತಿ ಬರುವ ಮೊದಲ ಹಬ್ಬಗಳು ಬಹಳ ವಿಶೇಷ.. ಅದರಲ್ಲೂ ಮೊದಲ ವರ್ಷ ಅಳಿಯ ಮಗಳನ್ನು ಮನೆಗೆ ಕರೆದು ಅದ್ಧೂರಿಯಾಗಿ ಹಬ್ಬ ಆಚರಣೆ ಮಾಡುವ ರೂಡಿಯೂ ಇದೆ.. ಆದರೆ ಇಲ್ಲೊಬ್ಬ ಹೆಣ್ಣು ಮಗಳು ಹೊಸದಾಗಿ ಮದುವೆಯಾಗಿದ್ದ ನವ ವಿವಾಹಿತೆ ಹಬ್ಬದ ದಿನವೇ ಏನಾಗಿ ಹೋದಳು ಎಂಬುದು ತಿಳಿದರೆ ನಿಜಕ್ಕೂ ಸಂಕಟವಾಗುತ್ತದೆ.. ಹೌದು ಸುಖವಾಗಿ ಸಂತೋಷವಾಗಿ ಹುಟ್ಟಿ ಬೆಳೆದ ಮನೆಯಲ್ಲಿ ರಾಣಿಯಾಗಿ ಜೀವನ ಸಾಗಿಸುವಂತಹ ಕೆಲವು ಹೆಣ್ಣು ಮಕ್ಕಳು ತಾವು ಮದುವೆಯಾದ ಮನೆಯಲ್ಲಿಯೂ ಸಹ ಅದೇ ಪ್ರೀತಿ ಗೌರವ ಸಿಕ್ಕು ಅಲ್ಲಿಯೂ ಮನೆ ಮಗಳಾಗಿ ಜೀವನ ಕಟ್ಟಿಕೊಳ್ಳುವರು.. ಆದರೆ ಅದೆಷ್ಟೋ ಹೆಣ್ಣು ಮಕ್ಕಳ ಜೀವನ ಒಂದೇ ಒಂದು ಮದುವೆಯಿಂದ ಸಂಪೂರ್ಣ ಜೀವನವೇ ನರಕವಾಗಿ ಬಿಡೋದು ನಿಜಕ್ಕೂ ದುರ್ದೈವವೆನ್ನಬೇಕೋ ಅಥವಾ ಮತ್ತಿನ್ನೇನೋ ತಿಳಿಯದು..

ಈ ಹೆಣ್ಣು ಮಗಳ ಹೆಸರು ಗಾನವಿ.. ವಯಸ್ಸಿನ್ನು ಕೇವಲ ಇಪ್ಪತ್ತೇಳು.. ಚಿಕ್ಕಮಗಳೂರು ಜಿಲ್ಲೆಯ ಎನ್ ಆರ್ ಪುರ ತಾಲೂಕಿನ ಬನ್ನೂರು ಗ್ರಾಮದ ನಿವಾಸಿ ಲೋಕಪ್ಪ ಗೌಡ ಎಂಬುವವರ ಮಗಳು.. ಈಕೆಯನ್ನು ಕಳೆದ ವರ್ಷವಷ್ಟೇ ಗಾನವಿಯನ್ನು ಅದೇ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಾರಬೈಲು ಗ್ರಾಮದ ನಿವಾಸಿಗಳಾದ ಚಂದ್ರೇಗೌಡ ಎಂಬುವವರ ಮಗ ನಂದಿತ್ ಗೆ ಕೊಟ್ಟು ಅದ್ಧೂರಿಯಾಗಿ ಮದುವೆ ಮಾಡಲಾಗಿತ್ತು‌.. ಮಗಳು ಚೆನ್ನಾಗಿರಲಿ ಎಂದು ಎಲ್ಲವನ್ನು ಕೊಟ್ಟು ಮದುವೆ ಮಾಡಿದ್ದರು ಗಾನವಿ ತಂದೆ.. ಆದರೆ ಮದುವೆಯಾದ ಕೆಲವೇ ತಿಂಗಳುಗಳಲ್ಲಿ‌ ಮಗಳನ್ನು ಈ ರೀತಿ ನೋಡುವೆ ಎಂದುಕೊಂಡಿರಲಿಲ್ಲ..

ಹೌದು ಗಾನವಿಯನ್ನು ಮದುವೆಯಾದ ನಂತರ ನಂದಿತ್ ಶುರುವಿನಲ್ಲಿ ಚೆನ್ನಾಗಿಯೇ ಇದ್ದ.. ಆದರೇ ಕೆಲವೇ ದಿನಗಳಲ್ಲಿ ಅವನ ಹಾಗೂ ಆತನ ಕುಟುಂಬದ ಅಸಲಿ ಮುಖ ಬಯಲಾಯಿತು.. ಹೌದು ಮದುವೆಯಾದ ಕೆಲವೇ ದಿನದಲ್ಲಿ ಅವನ ಚಾಳಿಯನ್ನು ಶುರು ಮಾಡಿಕೊಂಡ.. ತವರು ಮನೆಯಿಂದ ಹಣ ತರುವಂತೆ ಗಾನವಿಗೆ ಬಹಳಷ್ಟು ನೋವು ನೀಡುತ್ತಿದ್ದ.. ಮಾತಿನಲ್ಲಿ ಕೇಳಿ ಸುಮ್ಮನಾಗಿದ್ದರೆ ಏನಿಲ್ಲ.. ಆದರೆ ನಂದಿತ್ ಹಣಕ್ಕಾಗಿ ಕಟ್ಟಿಕೊಂಡ ಹೆಂಡತಿಯ ಮೇಲೇಯೇ ಪದೇ ಪದೇ ಕೈಮಾಡುತ್ತಾ ಇದ್ದ.. ಇತ್ತ ತನ್ನ ತಂದೆ ತಾಯಿಯ ಗೌರವ ಸಂಬಂಧಿಕರ ಮುಂದೆ ಹಾಳಾಗಬಾರದೆಂದು ಎಲ್ಲವನ್ನೂ ಸಹಿಸಿಕೊಂಡು ಗಾನವಿ ನೋವು ನುಂಗುತ್ತಲೇ ಬಂದಳು..

ಕೊನೆಗೆ ನಂದಿತ್ ನ ನೀಡುತ್ತಿದ್ದ ಹಿಂಸೆ ತಡೆಯಲಾಗದೇ ತನ್ನ ತವರಿನಲ್ಲಿ ಎಲ್ಲಾ ಕಷ್ಟವನ್ನು ಹೇಳಿಕೊಂಡಿದ್ದಳು.. ಮಗಳು ಚೆನ್ನಾಗಿರಲಿ ಎಂದು ಕೆಲ ದಿನಗಳ ಹಿಂದಷ್ಟೇ ಅಳಿಯನ ಕೈಗೆ ಎರಡು ಲಕ್ಷ ರೂಪಾಯಿ ಹಣ ನೀಡಿದ್ದರು.. ಆದರೆ ಅವನ ಹಣದ ದಾಹ ಅಷ್ಟಕ್ಕೆ ನೀಗಿರಲಿಲ್ಲ.. ಎರಡು ಲಕ್ಷ ಹಣ ಪಡೆದರೂ ಸಹ ಗಾನವಿಗೆ ಮತ್ತೆ ಮತ್ತೆ ಹಣಕ್ಕಾಗಿ ಹಿಂಸೆ ನೀಡುತ್ತಲೇ ಬರುತ್ತಿದ್ದ.. ಕಟ್ಟಿಕೊಂಡ ಹೆಂಡತಿಯನ್ನು ಸಾಕಲಾಗದ ಯೋಗ್ಯತೆ ಇಲ್ಲದೆ ತಾನೂ ಸಹ ಹೆಂಡತಿಯ ಅಪ್ಪನ ಹಣದಿಂದ ಜೀವನ ಮಾಡೊ ಇಂತಹ ನಾಲಾಯಕ್ ಗಂಡ ಬೇಡ ಎಂದು ಗಾನವಿ ಆತನಿಂದ ದೂರಾಗಿದ್ದರೆ ಎಷ್ಟೋ ಚೆನ್ನಾಗಿರುತ್ತಿತ್ತು.. ಆದರೆ ಕುಟುಂಬದ ಗೌರವ ಹಾಳಾಗಬಾರದೆಂದು ಗಾನವಿ ಮತ್ತೆ ಎಲ್ಲವನ್ನು ಸಹಿಸಿಕೊಂಡಳು.. ಆದರೆ ಹೊಸದಾಗಿ ಮದುವೆಯಾಗಿದ್ದ ಗಾನವಿ ನಾಗರಪಂಚಮಿ ಹಬ್ಬ ಆಚರಿಸಬೇಕಿತ್ತು.. ಆದರೆ ಹಬ್ಬದ ದಿನವೇ ಕೊನೆಯುಸಿರೆಳೆದುಬಿಟ್ಟಳು..