ಪವರ್ ಸ್ಠಾರ್ ಪುನೀತ್ ರಾಜ್ ಕುಮಾರ್ ಅಪಾರ ಅಭಿಮಾನಿಗಳನ್ನು ಅದೇ ರೀತಿ ತನ್ನ ಪತ್ನಿ ಮಕ್ಕಳು ಕುಟುಂಬಸ್ಥರನ್ನು ಬಿಟ್ಟು ಬಾರದ ಲೋಕಕ್ಕೆ ಹೋಗಿ ಎರಡು ತಿಂಗಳಾಗ್ತಾ ಬಂತು. ಆದರೆ ಈಗಲೂ ಅಪ್ಪು ಇನ್ನಿಲ್ಲ ಎಂದು ಹೇಳಿಕೊಳ್ಳಲು ಮನಸ್ಸು ಒಪ್ಪುತ್ತಿಲ್ಲ. ಅಪ್ಪ ಸದಾ ಅಮರ. ಶಾರೀರಿಕವಾಗಿ ಅಪ್ಪು ನಮ್ಮಜೊತೆ ಇಲ್ಲದೆ ಹೋದರೂ ಪ್ರತಿಯೊಬ್ಬರ ಮನಸಲ್ಲೂ ಅಪ್ಪು ಚಿರಸ್ಥಾಯಿಯಾಗಿ ಉಳಿದುಕೊಂಡಿದ್ದಾರೆ. ಅಪ್ಪು ಅವರು ಇಷ್ಟೊಂದು ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಪಡೆದಿದ್ದು ಕೇವಲ ಅವರ ಸಿನಿಮಾ ನಟನೆಯಿಂದಲ್ಲ..

ನಟನೆ ಹೊರತಾಗಿಯೂ ಅವರೊಬ್ಬ ಅದ್ಭುತ ವ್ಯಕ್ತಿ. ಸಿನಿಮಾದಲ್ಲಿ ಮಾತ್ರ ಅವರು ಹೀರೋ ಆಗಿರಲಿಲ್ಲ. ರಿಯಲ್ ಲೈಫ್ ನಲ್ಲೂ ಅವರು ದೊಡ್ಡ ಹೀರೋ. ತನ್ನ ಜೀವಿತ ಅವಧಿಯಲ್ಲಿ ಯಾರಿಗೂ ಗೊತ್ತಾಗದಂತೆ ಲೆಕ್ಕಕ್ಕೂ ಮೀರಿದ ಸಹಾಯವನ್ನು ಮಾಡಿದ್ದಾರೆ. ಇದೆಲ್ಲಾ ಗೊತ್ತಾಗಿದ್ದು ಅವರ ಅಗಲಿಕೆ ನಂತರವೇ. ಒಂದು ಸಣ್ಣ ಸಹಾಯ ಮಾಡುವಾಗಲೇ ಫೋಟೋ ತೆಗೆದು ಸೋಶಿಯಲ್ ಮೀಡಿಯಾಗಳಲ್ಲಿ ಅಪ್ಲೋಡ್ ಮಾಡಿ ಪಬ್ಲಿಸಿಟಿ ತೆಗೆದುಕೊಳ್ಳುವವರ ನಡುವೆ ಅಪ್ಪು ಅವರು ದೇವರಂತೆ ಕಾಣುತ್ತಾರೆ. ಇದಕ್ಕೆ ಮತ್ತೊಂದು ಸಾಕ್ಷಿಯಾಗಿ ಅವರು ಮಾಡಿರುವ ಇನ್ನೊಂದು ಸಹಾಯ ಇದೀಗ ಬೆಳಕಿಗೆ ಬಂದಿದೆ.
ಅದು ದೊಡ್ಮನೆ ಹುಡ್ಗ ಚಿತ್ರದ ಶೂಟಿಂಗ್ ವೇಳೆ ಖೈದಿಗಳಿಗೆ ಮಾಡಿರುವ ಮಹೋಪಕಾರದ ಬಗ್ಗೆ. ಅಲ್ಲಿ ಅವರು ನಿಜಕ್ಕೂ ದೊಡ್ಮನೆ ಹುಡುಗನಾಗಿಯೇ ರಿಯಲ್ ಲೈಫ್ ನಲ್ಲಿಯೂ ಕೆಲಸ ಮಾಡಿದ್ದಾರೆ. ಆ ಸಿನಿಮಾದಲ್ಲಿ ಅಂಬರೀಷ್ ಅವರು ಜೈಲು ಸೇರುವ ಒಂದು ಸೀನ್ ಇದೆ. ಆಗ ಅಂಬರೀಷ್ ಅವರನ್ನು ಮೀಟ್ ಮಾಡೋದಕ್ಕಾಗಿ ಜೈಲಿಗೆ ಹೋಗುತ್ತಾರೆ. ಅದು ಸಿನಿಮಾದ ಕಥೆಯಾದರೆ, ಅಲ್ಲಿ ಅವರು ಜೈಲಿನಲ್ಲಿದ್ದ ಖೈದಿಗಳಿಗೆ ಸಹಾಯ ಮಾಡುತ್ತಾರೆ. ಖೈದಿಗಳಿಗೆ ಸಹಾಯ ಅಂದಕೂಡಲೇ ನಿಮಗೆ ಅಚ್ಚರಿ ಅನ್ನಿಸಬಹುದು.

ಆ ಜೈಲಿನಲ್ಲಿ ಸಣ್ಣ ಪುಟ್ಟ ತಪ್ಪು ಮಾಡಿ ಅನೇಕ ವರ್ಷಗಳಿಂದ ಜೈಲಿನಲ್ಲಿಯೇ ಕೊಳೆಯುತ್ತಿದ್ದರು. ಬಿಡುಗಡೆಯ ಸಮಯ ಆಗಿದ್ದರೂ ಜೈಲುವಾಸ ಅನುಭವಿಸುತ್ತಲೇ ಇದ್ದರು. ಇದಕ್ಕೆ ಕಾರಣ, ಅವರು ದಂಡ ಕಟ್ಟಿರಲಿಲ್ಲ. ಜೈಲು ಶಿಕ್ಷೆ ಜೊತೆ ಅವರಿಗೆ ದಂಡ ಕಟ್ಟಲು ಹೇಳಲಾಗಿತ್ತು.ಆದರೆ ಅದು ಅವರಿಂದ ಸಾಧ್ಯ ಆಗಿರಲಿಲ್ಲ. ಈ ವಿಷಯ ಪುನೀತ್ ರಾಜ ಕುಮಾರ್ ಅವರಿಗೆ ಗೊತ್ತಾದ ಕೂಡಲೇ ಅವರು ಆಖೈದಿಗಳು ಕಟ್ಟಬೇಕಾಗಿದ್ದ ದಂಡವನ್ನು ತಾನೇ ಕಟ್ಟಿ ಖೈದಿಗಳನ್ನು ಬಿಡುಗಡೆ ಮಾಡುತ್ತಾರೆ. ಈ ಸತ್ಯ ಇದೀಗ ಹೊರಬಿದ್ದು ಅಪ್ಪು ಅವರ ಅಭಿಮಾನವನ್ನು ಮತ್ತಷ್ಟು ಹೆಚ್ಚು ಮಾಡಿದೆ.