Advertisements

250 ಹುಡುಗಿಯರನ್ನು ಮದುವೆಯಾಗಲು 12 ಸಾವಿರ ಯುವಕರು ಸಾಲಾಗಿ ನಿಂತರು!! ಕೊನೆಗೆ ಆಗಿದ್ದೇ ಬೇರೆ!!

Kannada News

ಪ್ರೀಯ ಓದುಗರೇ ರೈತ ನಮ್ಮ ದೇಶದ ಬೆನ್ನೆಲುಬು ಎಂದು ಹೇಳುತ್ತೇವೆ. ಆದ್ರೆ ಆತನಿಗೆ ಹೆಣ್ಣು ಕೊಡಲು ನಾವು ಹಿಂದೇಟು ಹಾಕುತ್ತಿದ್ದೇವೆ. ಅಷ್ಟೇ ಅಲ್ಲ ನೀನು ಏನು ಮಾಡುತ್ತಿದ್ದೀಯಾ ಎಂದಾಗ ನಾನೊಬ್ಬ ರೈತ ಎಂದಾಗ ಹೆಮ್ಮೆ ಪಡಬೇಕಿತ್ತು. ಅದರ ಬದಲು ಆತನನ್ನು ನಾವು ನೋಡುವ ದೃಷ್ಟಿ ಕೂಡ ಬದಲಾಗುತ್ತಿದೆ. ಇದರಿಂದ ರೈತರು ತಮ್ಮ ಉದ್ಯೋಗದ ಕುರಿತು ಹೇಳಲು ಹಿಂಜೇರಿಯುತ್ತಿದ್ದಾರೆ. ಅಷ್ಟೇ ಅಲ್ಲ ಹಳ್ಳಿಯಲ್ಲಿ ಹುಟ್ಟಿ ಬೆಳೆದ ಯುವಕರ ಸಿಟಿ ಸೇರುತ್ತಿದ್ದಾರೆ.

ಅದು ಯಾಕೆ? ಹಳ್ಳಿ ತೊರೆದು ಬದುಕೋದಿಕ್ಕೆ ಕಾರಣವಾದ್ರೂ ಏನೂ ಗೊತ್ತಾ ? ಇದಕ್ಕೆ ಮಂಡ್ಯ ಜಿಲ್ಲೆಯಲ್ಲಿ ಆದ ಘಟನೆಯು ಪುಷ್ಟಿ ನೀಡಿದೆ. ಏನದು ಘಟನೆ ಅಂತಾ ಹೇಳತೀವಿ ಈ ಲೇಖನವನ್ನು ಪೂರ್ಣವಾಗಿ ಓದಿ.
ಈ ಮೊದಲು ಜೈ ಜವಾನ ಜೈ ಕಿಸಾನ್ ಎನ್ನುವ ಎನ್ನುವ ಘೋಷಣೆ ಇತ್ತು. ಆದ್ರೆ ಅದು ಈಗ ಬರಿ ಘೋಷಣೆಯಾಗಿಯೇ ಉಳಿದಿದೆ. ಯಾಕಂದ್ರೆ ಅಕಾಲಿಕ ಮಳೆಯಿಂದಾಗಿ ರೈತನ ಬೆಳೆ ಕಾಲ ಕಾಲಕ್ಕೆ ಸರಿಯಾಗಿ ಬರುತ್ತಿಲ್ಲ. ಇದರಿಂದ ರೈತ ಪದೇಪದೇ ಸಂಕಷ್ಟಕ್ಕೆ ಇಡಾಗುತ್ತಿದ್ದಾನೆ.

ಜೊತೆಗೆ ಪ್ರಕೃತಿ ವಿಕೋಪದಿಂದ ಮತ್ತಷ್ಟು ರೈತರು ಕಣ್ಣೀರಲ್ಲಿ ಕೈತೋಳಿಯುವಂತೆ ಆಗಿದೆ. ಅಷ್ಟೇ ಅಲ್ಲ ಇದೀಗ ರೈತನ ಮಕ್ಕಳಿಗೆ ಹೆಣ್ಣು ಕೂಡ ಸಿಗುತ್ತಿಲ್ಲ. ಇದು ಆಶ್ಚರ್ಯವಾದರೂ ಸತ್ಯವಾದ ಸಂಗತಿ.
ಹೌದು ಓದುಗರೇ ಇದಕ್ಕೆ ಮಂಡ್ಯದಲ್ಲಿ ನಡೆದ ಘಟನೆ ಸಾಕ್ಷಿಯಾಗಿದೆ. ಅದೇನಂದ್ರೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಕ್ಷೇತ್ರದಲ್ಲಿ ಒಕ್ಕಲಿಗ ವಧು-ವರ ಸಮಾವೇಶ ನಡೆಯಿತು.

250 ಮಂದಿ ಹುಡುಗಿಯರು ಮಾತ್ರ ವರನಿಗಾಗಿ ರಿಜಿಸ್ಟರ್ ಮಾಡಿಕೊಂಡಿದ್ದರೇ, ಇದರಲ್ಲಿ ಹನ್ನೆರಡು ಸಾವಿರ ಮದುವೆಯಾಗದ ಹುಡುಗ ಹುಡುಗಿಯರು ರಿಜಿಸ್ಟರ್ ಮಾಡಿಕೊಂಡಿದ್ದರು. ಉಳಿದ 11,750 ಮಂದಿ ಯುವಕರು ಮದುವೆಯಾಗಲು ಹುಡುಗಿಯನ್ನು ಅರಸಿ ಬಂದು ರಿಜಿಸ್ಟರ್ ಮಾಡಿಕೊಂಡಿದ್ದರು. ಮಂಡ್ಯ ದಲ್ಲಿ ಇಷ್ಟು ಅಗಾಧ ಸಂಖ್ಯ್ರೆಯಲ್ಲಿ ಯುವಕರು ಮದುವೆಯಾಗದೇ ಉಳಿದಿದ್ದಾರೆ ಅಂದ್ರೆ ನಿಜಕ್ಕೂ ಆಶ್ಚರ್ಯದ ಸಂಗತಿಯಾಗಿದೆ.
ಇದಕ್ಕೆ ಕಾರಣ ಅವರು ರೈತ ಕೃಷಿ ಕ್ಷೇತ್ರದಲ್ಲಿಯೇ ಇರುತ್ತಾನೆ.

ಇವರನ್ನು ನಾವು ವಿವಾಹವಾದ್ರೆ ನಾವು ಕೃಷಿ ಭೂಮಿಯಲ್ಲಿಯೇ ಜೀವನ ಪೂರ್ತಿ ಇರಬೇಕು ಎನ್ನುವ ಹುಡುಗಿಯರ ಭಾವನೆಯಾಗಿದ್ದು, ರೈತರ ಮಕ್ಕಳನ್ನು ವಿವಾಹವಾಗಲು ಹಿಂದೇಟು ಹಾಕುತ್ತಿದ್ದಾರೆ. ಈ ಸಮಸ್ಯೆಯನ್ನು ಬಗೆಹರಿಸಲು ರೈತರಿಗೆ ಸರ್ಕಾರ ಸರಿಯಾದ ಮನ್ನಣೆ ನೀಡಬೇಕು. ಕೃಷಿಯನ್ನೂ ಒಂದು ಪ್ರಮುಖ ಉದ್ಯೋಗ ಎಂದು ಗುರುತಿಸಬೇಕು. ಅವರಿಗೆ ಬೇಕಾದ ಸೌಲಭ್ಯಗಳನ್ನು ನೀಡಿದ್ರೆ ಇಂಥ ಪರಿಸ್ಥಿತಿ ಎದುರಾಗುವುದಿಲ್ಲ.


ಒಂದು ವೇಳೆ ನಾವೇನಾದ್ರು ರೈತನನ್ನು ಕಡೆಗಣಿಸಿದ್ದೆ ಆದ್ರೆ ಮುಂದೊಂದು ದಿನಾ ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗುವುದರಲ್ಲಿ ಆಶ್ಚರ್ಯವೆ ಇಲ್ಲ. ರೈತರ ಮಕ್ಕಳಿಗೆ ಮದುವೆಯಾಗುವ ವಿಷಯದಲ್ಲಿಯೂ ಎಷ್ಟು ಸಮಸ್ಯೆ ಇದೆ ಅನ್ನೋದನ್ನ ನೀವು ಮಂಡ್ಯದಲ್ಲಿ ನಡೆದ ವಧು ವರರ ಸಮಾವೇಶ ನೋಡಿದ್ರೆ ಅರಿವಿಗೆ ಬರುತ್ತೆ. ಇದನ್ನು ತಪ್ಪಿಸಲು ಹುಡುಗಿಯರಿಗೆ ರೈತರ ಬಗ್ಗೆ ಇರುವ ಭಾವನೆಯನ್ನು ಬದಲಾಯಿಸಬೇಕು. ಇದಕ್ಕೆ ಸರ್ಕಾರವು ರೈತರಿಗೆ ಕೆಲವು ಘೋಷಣೆಯನ್ನು, ಸೌಲಭ್ಯಗನ್ನು ನೀಡಬೇಕಿದೆ.