Advertisements

ಐ ಲವ್ ಯು ಚಿತ್ರಕ್ಕೆ ಅಂದು ರಚಿತಾರಾಮ್ ಪಡೆದ ಸಂಭಾವನೆ ಎಷ್ಟು ಗೊತ್ತಾ …

Kannada News

ತಮಗೆಲ್ಲರಿಗೂ ನೆನಪಿರಬಹುದು 2019 ರಲ್ಲಿ ಆರ್ ಚಂದ್ರು ನಿರ್ದೇಶನದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಡಿಂಪಲ್ ಕ್ವೀನ್ ರಚಿತ ರಾಮ್ ಅಭಿನಯದ ಐ ಲವ್ ಯೂ ಸಿನಿಮಾ ತೆರೆಕಂಡು ಶತದಿನೋತ್ಸವವನ್ನು ಬಾರಿಸುವುದರ ಜೊತೆಗೆ ಗಲ್ಲಾಪೆಟ್ಟಿಗೆಯಲ್ಲಿ ಕೂಡ ದೊಡ್ಡ ಯಶಸ್ಸನ್ನು ಕಂಡಿತು. ಸಿನಿಮಾ ದೊಡ್ಡ ಯಶಸ್ಸನ್ನು ಕಾಣುವುದರ ಜೊತೆಗೆ ದೊಡ್ಡ ವಿವಾದವನ್ನೇ ಸೃಷ್ಟಿಸಿದ್ದು ಸಿನಿಮಾದಲ್ಲಿ ರಚಿತಾ ರಾಮ್ ಮತ್ತು ಉಪೇಂದ್ರ ಹಸಿಬಿಸಿ ಹಾಡಿನಲ್ಲಿ ಕಾಣಿಸಿಕೊಂಡಿದ್ದು ರಚಿತಾ ರಾಮ್ ಹೇಳಿಕೆ ಪ್ರಿಯಾಂಕಾ ಅವರಿಗೆ ಗರಂ ಆಗುವಂತೆ ಮಾಡಿದಂತು ಸತ್ಯ. ಸದ್ಯ ಇಂದು ತಮಗೆ ಗೊತ್ತಿಲ್ಲದ ಒಂದು ಮಾಹಿತಿಯನ್ನು ಹೇಳಲು ಹೊರಟಿದ್ದು ಈ ಸಿನಿಮಾಗೆ ರಚಿತಾ ವಿಶೇಷ ಸಂಭಾವನೆಯನ್ನ ಪಡೆದುಕೊಂಡಿದ್ದರಂತೆ. ಹೌದು ಅಷ್ಟಕ್ಕೂ ಐ ಲವ್ ಯೂ ಚಿತ್ರಕ್ಕೆ ರಚಿತಾ ಪಡೆದುಕೊಂಡಿದ್ದ ಸಂಭಾವನೆ ಎಷ್ಟು ಗೊತ್ತಾ ? ಮುಂದೆ ಓದಿ.

ಹ ಐ ಲವ್​ ಯು ಚಿತ್ರದ ಮಾತನಾಡಿ ಮಾಯವಾದೆ ಹಾಡು ಬಹಳ ಹಾಟ್ ಹಾಗೂ ರೊಮ್ಯಾಂಟಿಕ್​ ಆಗಿದ್ದು ಇದನ್ನು ನಿರ್ದೇಶನ ಮಾಡಿದ್ದು ಉಪೇಂದ್ರ ಎಂದು ರಚಿತಾ ಅನೇಕ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಇನ್ನು ಇದು ಪ್ರಿಯಾಂಕಾ ಕೋಪಕ್ಕೆ ಕಾರಣವಾಗಿದ್ದು ರಚಿತಾ ಪದೇ ಪದೇ ಪತಿಯ ಹೆಸರು ತರುತ್ತಿರುವುದಕ್ಕೆ ಪ್ರಿಯಾಂಕಾ ಬಹಳ ಸಿಟ್ಟಾಗಿದ್ದರು. ಅಲ್ಲದೆ ಚಿತ್ರದಲ್ಲಿ ರಚಿತಾ ಉಪೇಂದ್ರ ನಡುವಿನ ದೃಶ್ಯಗಳು ಕೆಟ್ಟ ಭಾವನೆ ಮೂಡಿಸುತ್ತಿದೆ. ರಚಿತಾ ಪ್ರತಿ ಸಂದರ್ಶನದಲ್ಲೂ ಸಹ ಉಪೇಂದ್ರ ಹೆಸರು ತರುತ್ತಿದ್ದಾರೆ. ಮೊದಲು ಚಿತ್ರದಲ್ಲಿ ಹೇಗೆ ನಟಿಸಿದ್ದಾರೆ ಎಂಬುದನ್ನು ರಚಿತಾ ಹೇಳಿಕೊಳ್ಳಲಿ. ಅದನ್ನು ಬಿಟ್ಟು ಯಾವಾಗಲೂ ಉಪ್ಪೇಂದ್ರ ಹೆಸರು ಹೇಳುವುದು ಯಾಕೆ ಎಂದು ಪ್ರಶ್ನೆ ಮಾಡಿದ್ದರು.

ಆರಂಭದಲ್ಲಿ ಸಿನಿಮಾ ಕಥೆ ಕೇಳಿದಾಗ ನನಗೆ ಏನೂ ಅನ್ನಿಸಿರಲಿಲ್ಲ. ಟ್ರೆಲರ್​ನಲ್ಲಿ ಹಾಡು ನೋಡುವವರೆಗೂ ಈ ಬಗ್ಗೆ ಗೊತ್ತಿರಲಿಲ್ಲ. ಚಿತ್ರದ ನಿರ್ದೇಶನ ಮಾಡಿದ್ದು ಚಂದ್ರು ಮತ್ತು ಕೊರಿಯೋಗ್ರಾಫರ್ ಚಿನ್ನಿ ಪ್ರಕಾಶ್ ರವರು. ಆದರೆ ರಚಿತಾ ರಾಮ್​ ಹಾಡು ಉಪೇಂದ್ರ ನಿರ್ದೇಶನ ಮಾಡಿದ್ದಾರೆ ಎನ್ನುತ್ತಿದ್ದಾರೆ ಎಂದು ಕಿಡಿಕಾರಿದ್ದು. ಇನ್ನೂ ನಟಿ ರಚಿತಾ ರಾಮ್ ಖಾಸಗಿ ಸುದ್ದಿ ವಾಹಿನಿಯಲ್ಲಿ ಐ ಲವ್ ಯು ಚಿತ್ರದ ಹಾಟ್ ಸನ್ನಿವೇಶಗಳ ಬಗ್ಗೆ ಮಾತನಾಡಿ ಮನೆಯಲ್ಲಿ ಈ ರೀತಿಯ ದೃಶ್ಯಗಳಿಗೆ ಸಾಕಷ್ಟು ವಿರೋಧ ವ್ಯಕ್ತವಾಗಿರುವುದಾಗಿ ಹೇಳಿ ಕಣ್ಣೀರಿಟ್ಟಿದ್ದು ನನ್ನ ತಂದೆ ಈಗಲೂ ಸಹ ನನ್ನನ್ನು ಚಿಕ್ಕ ಮಗುವಿನಂತೆ ನೋಡುತ್ತಾರೆ. ನನ್ನ ಅಮ್ಮ ಐ ಲವ್ ಯು ಸಿನಿಮಾ ನೋಡಿದ್ದು ಇದೇನಿದು ಚಿತ್ರದಲ್ಲಿ ಇಷ್ಟೊಂದು ಬೋಲ್ಡ್ ದೃಶ್ಯಗಳಿವೆ. ಈ ರೀತಿಯ ಪಾತ್ರವನ್ನು ಒಪ್ಪಿಕೊಳ್ಳಬಾರದಿತ್ತು ಎಂದು ಬೇಸರಕೊಂಡರು.

ಹೌದು ಬಳಿಕ ತನ್ನ ಅಪ್ಪನಿಗೂ ಈ ಸಿನಿಮಾ ಬಗ್ಗೆ ಹೇಳಿದ್ದು ಅವರು ಈ ರೀತಿಯ ದೃಶ್ಯಗಳ ಕಾರಣ ಸಿನಿಮಾ ನೋಡಲು ಒಪ್ಪಿಲ್ಲ. ತಾನೂ ಈ ರೀತಿಯ ದೃಶ್ಯಗಳಿಗೆ ಓಕೆ ಹೇಳಬಾರದಿತ್ತು ಎಂದು ಕಣ್ಣೀರಾಕಿದ್ದರು. ಹೀರೋಯಿನ್ ಆಗಿ ರಚಿತಾರಾಮ್‌ರನ್ನು ಸ್ವೀಕರಿಸಿದ್ದೇನೆ ಆದರೆ ಮಗಳಾಗಿ ಈ ಸಿನಿಮಾ ನೋಡಲು ಆಗಿಲ್ಲ ಎಂದು ಅವರ ತಂದೆ ಹೇಳಿದ್ದಾಗಿ ಹೇಳಿದ್ದರು.ನಮ್ಮ ತಂದೆತಾಯಿಗೆ ಸಾರಿ ಹೇಳಿದೆ. ಇನ್ನು ಮುಂದೆ ಈ ರೀತಿಯ ಚಿತ್ರಗಳಲ್ಲಿ ಅಭಿನಯಿಸಲ್ಲ ಎಂದು ಹೇಳಿದ್ದಾಗಿ ತಿಳಿಸಿದ್ದಾರೆ. ಚಿತ್ರದಲ್ಲಿ ಈ ರೀತಿಯ ದೃಶ್ಯಗಳಿವೆ ಎಂದು ಮೊದಲೇ ಹೇಳಿದ್ದು ಆದರೆ ಅದನ್ನು ತೆರೆಯ ಮೇಲೆ ನೋಡಿದಾಗ ಅವರಿಗೆ ಬೇಸರವಾಗಿದೆ.

ಸಿನಿಮಾ ಬಗ್ಗೆ ಅಮ್ಮನ ಬಳಿ ತಿಳಿದುಕೊಂಡು ನಮ್ಮ ತಂದೆ ಸಿನಿಮಾ ನೋಡಬಾರದು ಎಂದು ನಿರ್ಧಾರ ಮಾಡಿದ್ದು ಒಬ್ಬ ಹೀರೋಯಿನ್ ಆಗಿಯೂ ನಿನ್ನನ್ನು ಅಷ್ಟು ಬೋಲ್ಡ್ ಆಗಿ ನೋಡಲು ಸಾಧ್ಯವಿಲ್ಲ ಎಂದಿದ್ದು ನೀನು ಇಂಡಸ್ಟ್ರಿಗೆ ರಚಿತಾ ರಾಮ್ ಆದರೆ ನನಗೆ ಮಗಳು ಪುಟ್ಟ ಮಗು ಇದ್ದಂತೆ ಎಂದು ಹೇಳುವಾಗ ಅವರ ಕಣ್ಣಾಲಿಗಳು ತುಂಬಿ ಬಂದವು. ಇನ್ನು ಅಳುತ್ತಲೇ ಮಾತನಾಡಿರುವ ರಚಿತಾ ರಾಮ್ ಜೀವನದಲ್ಲಿ ತಂದೆತಾಯಿಗೆ ಹರ್ಟ್ ಮಾಡಿಬಿಟ್ಟಿದ್ದೀನಿ. ಈ ರೀತಿಯ ಚಿತ್ರವನ್ನು ಒಪ್ಪಿಕೊಳ್ಳಬಾರದಿತ್ತು. ನನ್ನ ಮೊದಲ ಆದ್ಯತೆ ಕುಟುಂಬ. ನನಗೆ ನಾಟಕ ಮಾಡಲು ಬರಲ್ಲ. ಮನಸ್ಸಲ್ಲಿ ಏನಿದೆಯೋ ಅದನ್ನೇ ಹೇಳುತ್ತಿದ್ದೇನೆ. ಅಪ್ಪನ ಮುಂದೆ ಹೋಗಲಿ ಬಿಡಪ್ಪ ಇನ್ನು ಮುಂದೆ ಮಾಡಲ್ಲ ಎಂದು ಹೇಳಿದ್ದೇನೆ. ಆದರೆ ಇಲ್ಲಿ ನನಗೆ ಅಳು ತಡೆದುಕೊಳ್ಳಲು ಆಗುತ್ತಿಲ್ಲ ಎಂದು ಕಣ್ಣೀರಿಟ್ಟಿದ್ದರು.

ಆದರೆ ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಹಾಗೂ ಲವ್ ಯೂ ರಚ್ಚು ಸಿನಿಮಾ ನೋಡುತ್ತಿದ್ದರೆ ಅಂದು ರಚಿತಾ ರಾಮ್ ಹೇಳಿದ ದೃಶ್ಯಗಳಲ್ಲಿ ನಟಿಸಲ್ಲ ಎಂದು ಹೇಳಿದ್ದು ಬರೀ ಬಾಯಿ ಮಾತಿಗೆ ಎಂದೆನಿಸಿದಂತು ಸತ್ಯ. ನಟಿ ರಚಿತಾ ರಾಮ್ ಲಿಪ್ ಕಿಸ್ ದೃಶ್ಯದಲ್ಲಿ ಕಾಣಿಸಿಕೊಂಡಿದ್ದು ಏಕ್ ಲವ್ ಯಾ ಸಿನಿಮಾದ ಒಂದು ದೃಶ್ಯದಲ್ಲಿ ರಚಿತಾ ಲಿಪ್ ಕಿಸ್ ಮಾಡಿದ್ದಾರೆ. ಹೌದು ನಟಿ ರಕ್ಷಿತಾ ಪ್ರೇಮ್ ಸಹೋದರ ರಾಣಾ ಹಾಗೂ ರಚಿತಾ ನಡುವೆ ಈ ದೃಶ್ಯ ನಡೆಲಿದ್ದು ಚಿತ್ರದ ಈ ಸೀನ್ ದೊಡ್ಡ ಸುದ್ದಿ ಮಾಡಿತ್ತು. ಸದ್ಯ ಇದೆಲ್ಲದರ ನಡುವೆ ಇದೀಗ ಐ ಲವ್ ಯೂ ಚಿತ್ರಕ್ಕೆ ಎಷ್ಟು ಸಂಭಾವನೆ ಬಗ್ಗೆ ಚರ್ಚೆಯಾಗುತ್ತಿದೆ.

ಹೌದು ಐ ಲವ್ ಯೂ ಸಿನಿಮಾ ಬಿಡುಗಡೆಯಾಗುವ ಸಮಯದಲ್ಲಿ ರಚಿತಾ ರಾಮ್ ರವರು ಒಂದು ಸಿನಿಮಾಗೆ ಮೂವತ್ತೈದರಿಂದ ನಲವತ್ತು ಲಕ್ಷ ಸಂಭಾವನೆ ಪಡೆದುಕೊಳ್ಳುತ್ತಿದ್ದಾರೆ. ಆದರೆ ಏಕಾಏಕಿ ಐ ಲವ್ ಯೂ ಚಿತ್ರಕ್ಕೆ ರಚಿತಾ ರಾಮ್ ರವರು ಬರೋಬ್ಬರಿ ಅರುವತ್ತು ಲಕ್ಷ ಸಂಭಾವನೆಯನ್ನ ಪಡೆದುಕೊಂಡಿದ್ದರಂತೆ. ಸದ್ಯ ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದ್ದು ಹಾಟ್ ದೃಶ್ಯ ದಲ್ಲಿ ಕಾಣಿಸಿಕೊಳ್ಳಲು ರಚಿತಾ ರಾಮ್ ರವರು ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದರು ಎಂದು ಹಲವರು ಹೇಳುತ್ತಿದ್ದಾರೆ.