Advertisements

ಹೊರಗಡೆಯಿಂದ ನೋಡೋಕೆ ಐಸ್ ಕ್ರೀಮ್ ಪಾರ್ಲರ್! ಆದ್ರೆ ಬೇಸ್ಮೆಂಟ್ ನಲ್ಲಿ ಸಿಕ್ಕಿದ್ದು ಬರಿ ಕೈ ಕಾಲು ತಲೆಗಳು.. ಈ ಐಸ್ ಕ್ರೀಮ್ ಲೇಡಿ ಬಗ್ಗೆ ಕೇಳಿದ್ರೆ ಶಾಕ್ ಆಗ್ತೀರಾ..

Kannada News

ಪ್ರಿಯ ಓದುಗರೆ ಯಾರೊಬ್ಬರೂ ಮೊದಲು ಪುರುಷ ದ್ವೇಶಿ, ಸ್ತ್ರೀದ್ವೇಷ ಆಗಲಿ ಎಂದು ಇರುವುದಿಲ್ಲ. ಅವರವರ ಜೀವನದಲ್ಲಿ ಆದ ಘಟನೆಗಳಿಂದ ಅವರು ದ್ವೇಷ ಬೆಳಸಿಕೊಳ್ಳುವರು. ಇಲ್ಲೊಬ್ಬಳು ತನ್ನ ಜೀವನದಲ್ಲಿ ನಡೆದ ಘಟನೆಗಳಿಂದ ಪುರುಷ ದ್ವೇಷಿಯಾಗಿ ಕೊನೆಗೆ ನಿಜವಾದ ಪ್ರೀತಿಯನ್ನು ಅನುಭವಿಸಲೂ ಆಗದೆ ನರಳಿದಳು. ಯಾರವಳು ಅಂತೀರಾ? ಹಾಗಾದರೆ ಈ ಲೇಖನವನ್ನು ಪೂರ್ಣವಾಗಿ ಓದಿ. ಇವರು ಮೂಲತಹ ಸ್ಪೇನ್ ದೇಶದವಳು. ತಂದೆ ತುಂಬಾ ಶಿಸ್ತಿನಿಂದ ಬೆಳೆಸಿದ್ದರು. ಪ್ರೌಢಾವಸ್ಥೆಗೆ ಬಂದ ನಂತರ ತಂದೆಯ ಶಿಸ್ತುಬದ್ಧ ಜೀವನಕ್ಕೆ ಬೇಸತ್ತು ಮನೆಬಿಟ್ಟು ಜರ್ಮನಿಗೆ ಬಂದಳು. ಈಕೆಯ ಹೆಸರು ಎಸ್ಟಿಕ್ಯಾರೆಂಜ್. ಏಕೆ ಐಸ್ ಕ್ರೀಮ್ ಪ್ರಿಯರಾಗಿದ್ದಳು. ಲಭ್ಯ ಇರುವ ಎಲ್ಲರೀತಿಯ ಐಸ್ ಕ್ರೀಮ್ ಗಳನ್ನು ತಿಂದು ಸಂತೃಪ್ತ ಕೊಳ್ಳುತ್ತಿದ್ದಳು. ಅಷ್ಟೇ ಅಲ್ಲ ನೋಡಲು ಅಪ್ಪಟ ಚೆಲುವೆ ಯಾಗಿದ್ದಳು.

Advertisements
Advertisements

ಕಾಲೇಜಿನಲ್ಲಿ ಈಕೆಗೆ ಬ್ಯೂಟಿ ಕ್ವೀನ್ ಎಂಬ ಬಿರುದು ಕೂಡ ಇತ್ತು. ಹೀಗಿದ್ದಾಗ ಪಡ್ಡೆಹುಡುಗರ ಹಿಂದೆ ಬೀಳದೆ ಇರುವರೇ? ಸಾಕಷ್ಟು ಹುಡುಗರು ಹಿಂದೆ ಬಿದ್ದರು. ಆದರೆ ಕ್ಯಾರೆಂಜ್ ಮಾತ್ರ ಯಾರೊಬ್ಬರನ್ನು ಇಷ್ಟಪಡುತ್ತಿರಲಿಲ್ಲ. ಆದರೆ ಇವಳು ಇಷ್ಟಪಟ್ಟಿದ್ದು ಯಾರನ್ನು ಗೊತ್ತಾ. ಒಬ್ಬ ಐಸ್ ಕ್ರೀಮ್ ಮಾರುವವನನ್ನು. ಹೌದು ಇವಳಿಗಿರುವ ಐಸ್ಕ್ರೀಮ್ ಹುಚ್ಚು ಅವನನ್ನು ಪ್ರೀತಿಸುವಂತೆ ಮಾಡಿತ್ತು. ಕೆಲದಿನಗಳು ಅವನೊಂದಿಗೆ ಸುತ್ತಾಟ ಓಡಾಟ ಎಲ್ಲವೂ ನಡೆಯಿತು. ಆದರೆ ಮದುವೆ ವಿಷಯ ಬಂದಾಗ ಆತ ಇವಳ ಪ್ರೀತಿಗೆ ಬ್ರೇಕಪ್ ಹೇಳಿದ. ಇದರಿಂದ ಮಾನಸಿಕವಾಗಿ ನೊಂದಳು. ಅಲ್ಲಿಂದ ಜರ್ಮನಿಯ ಬರ್ಲಿನ್ ನಗರ ಕ್ಕೆ ಬಂದು ಭಾಷಾಶಾಸ್ತ್ರವನ್ನು ಕಲಿತು ಐದಾರು ಭಾಷೆಗಳನ್ನು ನಿರರ್ಗಳವಾಗಿ ಮಾತನಾಡಲು ಕಲಿತಳು. ಈ ಸಮಯದಲ್ಲಿ ಮತ್ತೋರ್ವನ ಮೇಲೆ ಪ್ರೀತಿಯಾಯಿತು. ಅವಳಿಗೆ ಯಂತೆ ವಿವಾಹ ನಡೆಯಿತು. ಆದರೆ ಮಗುವನ್ನು ನೀಡುವಲ್ಲಿ ಆತ ವಿಫಲವಾದ.

ಈ ಕಾರಣದಿಂದಲೇ ಕ್ಯಾರೆಂಜ್ ಆತನನ್ನು ತಿರಸ್ಕರಿಸಲು ಆರಂಭಿಸಿದಳು. ಆದ್ರೆ, ದಿನವಿಡಿ ಐಸ್ ಕ್ರೀಮ್ ಶಾಪ್ ನಿಂದ ಬಂದ ಹಣವನ್ನು ಮೋಜು ಮಸ್ತಿಗೆ ಬಲಿಸುತಿದ್ದ. ಇದರಿಂದ ಬೇಸರಗೊಂಡ ಪತ್ನಿ 1 ಗನ್ ಖರೀದಿಸಿ ಸೀದಾ ಅವನ ಹಣೆಗೆ ಗುರಿಟ್ಟು ಕೊಂದಳು. ಹೆಣವನ್ನು ಬೆಸ್ಮೆಂಟ್ ನಲ್ಲಿ ಹಾಕಿ ಫ್ರಿಜ್ ಅಲ್ಲಿ ಇಟ್ಟಳು.ಹೀಗೆ ಕೆಲ ಕಾಲ ವಂಟಿಯಾಗಿ ಕಳಕಳೆದಳು. ಸ್ವಲ್ಪ್ ಹಣವನ್ನು ಸೇವಿಂಗ ಮಾಡಿ ಬ್ಯಾಂಕ್ ಲ್ಲಿ ಇಟ್ಟಳು. ಈ ಸಮಯದಲ್ಲಿ ಕಿಂಟಬರಗರ್ ಎನ್ನುವ ಮತ್ತೊರ್ವ್ ಆಕೆಯ ಜೀವನದಲ್ಲಿ ಬಂದ. ವಿವಾಹದ ಮೇಲೆ ಆತನು ಸಹ ಮಧ್ಯವೆಸನಿಯಾಗಿದ್ದ. ದುಡಿದ ಹಣವನ್ನು ದುಂದುವೆಚ್ಚ ಮಾಡುತ್ತಿದ್ದ. ಮಗು ಬೇಕು ಎಂದ ಕ್ಯಾರೆಂಜಾಳ ಆಸೆಗೆ ನಿರಾಶಕ್ತಿ ತೋರಿಸಿದ. ಇದರಿಂದ ಮನನೊಂದವಳೇ ಆತನನ್ನು ಸಹ ಎದೆಗೆ ಗುಂಡುಹಾರಿಸಿ ಕೊಂದಳು. ಆತನನ್ನ ಸಣ್ಣ ತುಂಡುಗಳಾಗಿ ಕತ್ತರಿಸಿ ಬೇಸಮೆಂಟ್ ಅಲ್ಲಿ ತುಂಬಿ ಫ್ರಿಜ್ ಅಲ್ಲಿ ಇಟ್ಟಳು. ವಾಸನೆ ಬರದಂತೆ ರೂಮ್ ಪ್ರೆಶನ್ರ ಸಿಂಪಡಿಸುತ್ತಿದ್ದಳು. ಹೀಗೆ ಕೆಲ ಕಾಲ ಕಳೆಯಿತು.

ಪ್ರೀತಿಗಾಗಿ ಹಾತೊರೆದ ಮನಸ್ಸು ಪುರುಷರನ್ನು ದ್ವೇಶಿಸಲು ಪ್ರಾರಂಭಿಸಿತು. ತದ ನಂತರ ಈಕೆಯ ಜೀವನದಲ್ಲಿ ಬಂದವನೇ ನಿಜವಾದ ಪ್ರೇಮಿ. ಈತ ಐಸ್ಕ್ರೀಮ್ ವಾಹನದ ಡಿಲೆವರಿ ಬಾಯ್ ಆಗಿ ಕಾರ್ಯ ಮಾಡಿದರೂ ಸಹೃದಯಿ, ಕರುಣಾಳು ಆಗಿದ್ದ.
ಇತ ಮಾತ್ರ ಅವಳನ್ನು ಎಲ್ಲರಿತಿಯಲ್ಲೂ ಅರ್ಥ ಮಾಡಿಕೊಂಡು ಜೊತೆಯಾದ. ಕ್ಯಾರಂಜ್ ಈತನನ್ನು ವಿವಾಹವಾದಳು. ಆತನಲ್ಲಿ ತನ್ನ ಮನೋಕಾಮನೆಗಳನ್ನು ಈಡೇರಿಸುವಂತೆ ಕೇಳಿಕೊಂಡಳು. ಇದಕ್ಕೆ ಸಮ್ಮತಿಸಿದ ಕೂಡ ಆಕೆಯನ್ನು ಅಪಾರವಾಗಿ ಪ್ರೀತಿಸಿದ. ಇವರಿಬ್ಬರ ಸುಖ ಸಂಸಾರ ಆರಂಭವಾಯಿತು. ಹೀಗಿರುವಾಗ ಒಂದು ದಿನ ಫ್ರಿಜ್ ನಲ್ಲಿ ನೀರು ಸೋರುತ್ತಿದೆ ಎಂದು ರಿಪೇರಿ ಮಾಡುವವರು ಫ್ರಿಜ್ ನು ತೆರೆದಾಗ ಅಲ್ಲಿ ಕೆಟ್ಟ ವಾಸನೆ ಹರಡಿತ್ತು. ಅಷ್ಟೇ ಅಲ್ಲ ಎರಡನೇ ವ್ಯಕ್ತಿಯ ಶವದ ತಲೆಭಾಗ ಗೋಚರವಾಯಿತು. ಕೂಡಲೇ ಆ ಕೆಲಸಗಾರರು ಪೊಲೀಸರಿಗೆ ಮಾಹಿತಿ ನೀಡಿದರು.

ಪೊಲೀಸರ ಕಂಡ ಕ್ಯಾರೇಂಜ್ ಅಲ್ಲಿಂದ ತಪ್ಪಿಸಿಕೊಳ್ಳಲು ನೋಡಿದಳು. ಆಕೆಯನ್ನು ಸೆರೆಹಿಡಿದ ಪೊಲೀಸರು ಬಂಧಿಸಿದರು. ತಮ್ಮ ಭಾಷೆಯಲ್ಲಿ ವಿಚಾರಿಸಿದಾಗ ನಡೆದ ಎಲ್ಲ ಘಟನೆಯನ್ನು ವಿವರಿಸಿ, ತಪ್ಪೊಪ್ಪಿಕೊಂಡಳು. ಆಗ ಅವಳು ಮೂರು ತಿಂಗಳು ಗರ್ಭಿಣಿಯಾಗಿದ್ದಳು. ಈ ವಿಷಯ ತಿಳಿದ ಮೂರನೆಯ ಪತಿ ಮಗುವಿನ ಸಂಪೂರ್ಣ ಜವಾಬ್ದಾರಿಯನ್ನು ನಾನು ಹೊರುತ್ತೇನೆ ಎಂದು ತಿಳಿಸಿದ. ಆದರೆ ಇಂತಹ ವ್ಯಕ್ತಿಯ ನಿಜವಾದ ಪ್ರೀತಿ ಮಮತೆ ಅನುಭವಿಸಲು ಕ್ಯಾರಂಜಳಿಗೆ ಅದೃಷ್ಟವೇ ಇಲ್ಲದಂತಾಯಿತು. ಜೊತೆಗೆ ತಾಯಿ ಇದ್ದರೂ ತಾಯಿ ಪ್ರೀತಿ ಸಿಗದೆ ಬರೀ ತಂದೆಯ ಪ್ರೀತಿಯಲ್ಲಿ ಮಗು ಬೆಳೆಯುವ ಅಂತಾಯ್ತು. ತಪ್ಪುಗಳು ಯಾವತ್ತಿದ್ದರೂ ಒಂದು ದಿನ ಹೊರಗೆ ಬಂದೇ ಬರುತ್ತವೆ. ಮಾಡಿದ್ದುಣ್ಣೋ ಮಾರಾಯ ಎನ್ನುವ ಗಾದೆಯಂತೆ ಆಯಿತು ಕ್ಯಾರೆಂಜ್ ಳ ಜನಜೀವನ.