Advertisements

ಒಬ್ಬ ಆಟಗಾರನನ್ನು ಕೆಣಕಿದ್ರೆ ನಾವು 11 ಆಟಗಾರರು ತಿರುಗಿ ಬೀಳುತ್ತೇವೆ ಇಂದ ಕನ್ನಡದ ಆಟಗಾರ…! ಯಾರು ಗೊತ್ತಾ..?

Sports

ನಮಸ್ತೆ ಸ್ನೇಹಿತರೆ, ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಟೆಸ್ಟ್ ಸರಣಿಯ ಬಗ್ಗೆ ಎಲ್ಲರಿಗೂ ಗೊತ್ತಿದೆ. ಭಾರತವು ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್ ನಲ್ಲಿ ನಡೆದ ಎರಡನೇ ಟೆಸ್ಟ್ ನಲ್ಲಿ ಜಯಭೇರಿ ಬಾ’ರಿಸಿದೆ. ಲಾರ್ಡ್ಸ್ ಟೆಸ್ಟ್ ನಲ್ಲಿ ಇಂಗ್ಲೆಂಡ್ ಮತ್ತು ಭಾರತದ ನಡುವೆ ಪೈಪೋಟಿ ನಡೆಯಿತು. ಲಾರ್ಡ್ಸ್ ಟೆಸ್ಟ್‌ನ ಕೊನೆಯ ದಿನವೂ ಉಭಯ ತಂಡಗಳ ಆಟಗಾರರ ನಡುವೆ ಮಾತಿನ ಚಕಮಕಿ ಸಹ ನಡೆಯಿತು. ಜಸ್​ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಕ್ರೀಸ್ ನಲ್ಲಿದ್ದಾಗ, ಆಂಗ್ಲ ಆಟಗಾರರು ಇಬ್ಬರ ಬಗ್ಗೆ ಮೌಖಿಕ ಟೀ’ಕೆಗಳನ್ನು ಮಾಡಿದರು. ಆದರೆ, ಇವರಿಬ್ಬರು ಮಾತಿನ ಜೊತೆಗೆ ಬ್ಯಾಟ್ ಮೂಲಕ ಪ್ರತಿಕ್ರಿಯಿಸಿದರು. ಬುಮ್ರಾ ಮತ್ತು ಶಮಿ ಬಗ್ಗೆ ಮೌಖಿಕ ಟೀ’ಕೆಗಳನ್ನು ನೋಡಿದ ನಾಯಕ ವಿರಾಟ್ ಕೊಹ್ಲಿ ಕೂಡ ಡ್ರೆಸ್ಸಿಂಗ್ ರೂಮಿನಲ್ಲೇ ಅಸಮಾಧಾನಗೊಂಡಿರುವುದು ಕಂಡುಬಂತು.

Advertisements
Advertisements

ಎರಡನೇ ಟೆಸ್ಟ್‌ ಪಂದ್ಯದ ಮೂರನೇ ದಿನವೂ ಇಂಗ್ಲೆಂಡ್​ನ ಸ್ಥಳೀಯ ಅಭಿಮಾನಿಗಳ ಗುಂಪೊಂದು ಅನುಚಿತ ವರ್ತನೆ ತೋರಿತ್ತು. ಥರ್ಡ್‌ ಮ್ಯಾನ್‌ ಬೌಂಡರಿ ಬಳಿ ಕ್ಷೇತ್ರ ರಕ್ಷಣೆ ಮಾಡುತ್ತಿದ್ದ ರಾಹುಲ್‌ ಮೇಲೆ ಪ್ರೇಕ್ಷಕರು ಬಾಟಲ್‌ ಕಾರ್ಕ್‌ಗಳನ್ನು ಎ’ಸೆದು ದು’ರ್ವರ್ತನೆ ಮೆರೆದಿದ್ದರು. ಇದಕ್ಕೆ ಉತ್ತರವಾಗಿ ಭಾರತ 272 ರನ್​ಗಳ ಟಾ’ರ್ಗೆಟ್ ನೀಡಿತು. ಆದರೆ, ಇಂಗ್ಲೆಂಡ್ ಭಾರತೀಯ ಬೌಲಿಂಗ್ ದಾಳಿಗೆ ನಲುಗಿ ಹೋಯಿತು. ಕನಿಷ್ಠ ಡ್ರಾ ಮಾಡುವಲ್ಲೂ ಯಶಸ್ವಿಯಾಗದ ರೂಟ್ ಪಡೆ 120 ರನ್​ಗೆ ಸರ್ವಪ’ತನ ಕಂಡಿತು. ಭಾರತ 151 ರನ್​ಗಳ ಅಮೋಘ ಜಯದೊಂದಿಗೆ 1-0 ಮುನ್ನಡೆ ಸಾಧಿಸಿ ಲಾರ್ಡ್ಸ್​ನಲ್ಲಿ ಐತಿಹಾಸಿಕ ಜಯ ಸಾಧಿಸಿತು.

ಪಂದ್ಯ ಮುಗಿದ ಬಳಿಕ ಇಂಗ್ಲೆಂಡ್ ಆಟಗಾರರ ಸ್ಲೆ’ಡ್ಜಿಂಗ್ ಬಗ್ಗೆ ಮಾತನಾಡಿದ ಟೀಮ್ ಇಂಡಿಯಾ ಓಪನರ್ ಕೆ. ಎಲ್ ರಾಹುಲ್, “ನಮಗೆ ಇವರು ಮಾಡಿರುವ ಸ್ಲೆ’ಡ್ಜಿಂಗ್ ಬಗ್ಗೆ ಯಾವುದೇ ಭ’ಯವಿಲ್ಲ. ಇಲ್ಲಿ ನಮ್ಮ ಒಬ್ಬ ಆಟಗಾರನನ್ನು ಕೆಣಕಿದ್ರೆ ನಾವು 11 ಆಟಗಾರರು ಒಬ್ಬಬ್ಬರು ಒಬ್ಬ ಸೈನಿಕನಾಗಿ ತಿರುಗಿ ಬೀ’ಳುತ್ತೇವೆ” ಎಂದು ಖಡಕ್ ಆಗಿ ಉತ್ತರಿಸಿದ್ದಾರೆ. ಹೌದು ಇದು ನೂರಕ್ಕೂ ನೂರು ಪಾಲು ನಿಜ. ನಮ್ಮ ಭಾರತದ ಆಟಗಾರರನ್ನು ಕೆಣಕಿದರೆ. ಎಲ್ಲಾ 11 ಆಟಗಾರರು ತಿರುಗಿ ಬೀ’ಳುತ್ತಾರೆ. ಹೌದಲ್ಲ ಸ್ನೇಹಿತರೆ, ಇದರ ಬಗ್ಗೆ ನೀವೇನಂತಿರಾ.. ಕಮೆಂಟ್ ಮಾಡಿ ತಿಳಿಸಿ…