ನಮಸ್ತೆ ಸ್ನೇಹಿತರೆ, ಸ್ವದೇಶಿ ಉತ್ಪನ್ನ ಗಳಿಗೆ ಪ್ರಾಮುಖ್ಯತೆ ಕೊಡಿ ಎಂದು ಭಾರತದ ಪ್ರಖ್ಯಾತ ನಟ-ನಟಿಯರು ಹೇಳುತ್ತಲೇ ಬಂದಿದ್ದಾರೆ. ಈಗಾಗಲೇ ಪ್ರಧಾನಿ ಮಂತ್ರಿಗಳಾದ ನರೇಂದ್ರ ಮೋದಿಯವರು ಸಹ ಸ್ವದೇಶಿ ವಸ್ತುಗಳ ಖರೀದಿ, ಬಳಕೆ ಹೆಚ್ಚಾಗಬೇಕು ಎಂಬ ಕರೆಯನ್ನು ನೀಡಿದ್ದಾರೆ. ಭಾರತ ದೇಶ ಇಂದು ಬಹುತೇಕ ದಿನ ಬಳಕೆಯ ವಸ್ತುಗಳನ್ನು ಒಳಗೊಂಡಂತೆ ಅನೇಕ ಐಷಾರಾಮಿ ವಸ್ತುಗಳನ್ನು ವಿವಿಧ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುತ್ತಿದೆ. ರಫ್ತಿಗಿಂತ ಹೆಚ್ಚಾಗಿ ಆಮದು ಮಾಡಿಕೊಳ್ಳುತ್ತಿರುವ ನಾವು ವಿದೇಶಿ ಉತ್ಪನ್ನಗಳಿಗೆ ಮಾರು ಹೋಗಿದ್ದೇವೆ. ಸ್ವದೇಶಿ ಉತ್ಪನ್ನಗಳ ಬಗ್ಗೆ ಅಸಡ್ಡೆ ಬರಲು ಪ್ರಮುಖ ಕಾರಣ ಅಂದರೆ ಉತ್ನನ್ನಗಳ ಗುಣಮಟ್ಟ ಅಥವಾ ಅದರ ಮೌಲ್ಯ ಅಧಿಕವಾಗಿರುವುದು. ಕಡಿಮೆ ಬೆಲೆಗೆ ಆಕರ್ಷಕವಾದ ವಿಶಿಷ್ಟ ಗುಣಮಟ್ಟ, ಬಾಳಿಕೆ ಇತ್ಯಾದಿ ವಿಚಾರವಾಗಿ ಪಾಶ್ಚಾತ್ಯ ವಸ್ತುಗಳನ್ನೇ ಉಪಯೋಗಿಸುತ್ತಿದ್ದೇವೆ.

ಇದರಿಂದಾಗಿ ಹೊರ ದೇಶಗಳಿಗೆ ಭಾರತ ದೇಶದ ಸಂಪತ್ತು ಹರಿದು ಹೋಗುತ್ತದೆ. ಇದರಿಂದಾಗಿ ಪರೋಕ್ಷವಾಗಿ ದೇಶದ ಸಂಪನ್ಮೂಲ ವ್ಯರ್ಥವಾಗುತ್ತಿದೆ. ಅದರಲ್ಲಿಯೂ ಈ ಉದ್ಯಮಿಗಳು, ಖ್ಯಾತ ನಟ ನಟಿಯರು ವಿದೇಶಿ ಇಂಪೋರ್ಟೆಡ್ ಐಷಾರಾಮಿ ಕಾರುಗಳನ್ನು ಬಳಕೆ ಮಾಡುತ್ತಾರೆ. ಆದರೆ ಇವರು ಜನರಿಗೆ ಮಾತ್ರ ಸ್ವದೇಶಿ ವಸ್ತುಗಳನ್ನು ಬಳಸಿ, ಉಳಿಸಿ ಎಂದು ಕರೆ ನೀಡುತ್ತಾರೆ. ಹೇಳುವುದು ಒಂದು ಮಾಡುವುದು ಮತ್ತೊಂದು. ಆದರೆ ಇಲ್ಲೊಬ್ಬ ಖ್ಯಾತ ಬಾಲಿವುಡ್ ನಟಿಯೊಬ್ಬರು ಬರೀ ಮಾತಿಗೆ ಹೇಳುವುದಲ್ಲ, ಸ್ವತಃ ತಾವೇ ಸ್ವದೇಶಿ ಕಾರೊಂದನ್ನು ಖರೀದಿ ಮಾಡಿದ್ದಾರೆ. ತದ ನಂತರ ಇತರರಿಗೆ ಸ್ವದೇಶಿ ವಸ್ತುಗಳ ಬಳಕೆಯ ಬಗ್ಗೆ ಸಂದೇಶ ನೀಡಿದ್ದಾರೆ.

ಹೌದು ಹಿಂದಿ ಚಿತ್ರರಂಗದ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಮಿಂಚುತ್ತಿರುವ ರಂಗಭೂಮಿ ಕಲಾವಿದೆಯಾಗಿರುವ ನಟಿ ರೂಪಾಲಿ ಗಂಗೂಲಿ ಅವರು ಇತ್ತೀಚೆಗೆ ಮಹೀಂದ್ರಾ ಥಾರ್ ಕಾರ್ ವೊಂದನ್ನು ಖರೀದಿ ಮಾಡಿದ್ದಾರೆ. ಮಹೀಂದ್ರಾ ಕಾರು ಅಪ್ಪಟ ಭಾರತೀಯ ಸಂಸ್ಥೆಯಾಗಿದೆ. 14.16 ಲಕ್ಷ ಮೌಲ್ಯದ ಕಾರು ಖರೀದಿ ಮಾಡಿದ ರೂಪಾಲಿ ಗಂಗೂಲಿ ತಮ್ಮ ಪತ್ನಿ ಅಶ್ವಿನ್ ಶರ್ಮಾ ಅವರೊಂದಿಗೆ ನಿಂತು ಫೋಟೋಗೆ ಪೋಸ್ ನೀಡಿದ್ದಾರೆ. ಈ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋದ ಜೊತೆಯಲ್ಲಿ ಭಾರತೀಯರಾಗಿ ಹಾಗೂ ಭಾರತೀಯ ವಸ್ತುಗಳನ್ನೆ ಖರೀದಿ ಮಾಡಿ ಎಂದು ಬರೆದುಕೊಂಡಿದ್ದಾರೆ. ರೂಪಾಲಿ ಅವರ ಬಗ್ಗೆ ನೀವೇನಂತಿರಾ ಸ್ನೇಹಿತರೆ. ಕಮೆಂಟ್ ಮಾಡಿ ತಿಳಿಸಿ.