Advertisements

ಟೀಂ ಇಂಡಿಯಾ ಕೋಚ್ ಗೆ ನಡಿತಿದೆ ಸಕ್ಕತ್ ಪೈಪೋಟಿ..! ಆದರೆ ಮುಂಚೂಣಿಯಲ್ಲಿರೋದು ರವಿ ಶಾಸ್ತ್ರೀಯ ಆಪ್ತ..! ಅವರು ಯಾರು ಗೊತ್ತಾ..?

Sports

ನಮಸ್ತೆ ಸ್ನೇಹಿತರೆ, ಟೀಂ ಇಂಡಿಯಾ ಮುಖ್ಯ ಕೋಚ್ ರವಿ ಶಾಸ್ತ್ರೀ ಅವರ ಅಧಿಕಾರವಧಿ ಇನ್ನು ಕೆಲವು ವಾರಗಳಷ್ಟೇ ಬಾಕಿ ಉಳಿದಿದೆ. ಟಿ20 ವಿಶ್ವಕಪ್ ಬಳಿಕ ರವಿ ಶಾಸ್ತ್ರೀ ನಿವೃತ್ತಿಯಾಗಲಿದ್ದಾರೆ. ಅವರ ಸ್ಥಾನಕ್ಕೆ ಸೂಕ್ತರನ್ನು ಹುಡುಕುವ ಕೆಲಸ ಈಗಾಗಲೇ ಆರಂಭವಾಗಿದೆ. ರವಿ ಶಾಸ್ತ್ರೀಯ ಬಳಿಕ ಟೀಮ್ ಇಂಡಿಯಾವನ್ನು ಯಾರು ಮುನ್ನಡೆಸುತ್ತಾರೆ..? ಎಂದು ಎಲ್ಲರಿಗೂ ಮೂಡಿರುವ ಪ್ರಶ್ನೆಯಾಗಿದೆ.. ಮೂಲಗಳು ಹೇಳುವ ಪ್ರಕಾರ ರವಿಶಾಸ್ತ್ರಿ ಆಪ್ತರಾದ ಆ ವ್ಯಕ್ತಿನೇ ಮುಂಚೂಣಿಯಲ್ಲಿದ್ದಾರೆ. ಅಷ್ಟಕ್ಕೂ ಆ ವ್ಯಕ್ತಿ ಯಾರು ಅಂತ ನೋಡೋಣ ಬನ್ನಿ..

Advertisements
Advertisements

ಸದ್ಯ ವಿರಾಟ್ ಕೊಹ್ಲಿ ತಂಡದ ಬ್ಯಾಟಿಂಗ್ ಕೋಚ್ ಆಗಿರುವ ವಿಕ್ರಮ್ ರಾಥೋರ್ ಅವರ ಹೆಸರು ಮುಖ್ಯ ಕೋಚ್ ಹುದ್ದೆಗೆ ಬಲವಾಗಿ ಕೇಳಿಬರುತ್ತಿದೆ. ವಿಕ್ರಮ್ ರಾಥೋರ್ ಅವರು ರವಿ ಶಾಸ್ತ್ರೀ ಜೊತೆಗೆ ಕೆಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾರಂತಹ ಸೀನಿಯರ್ ಆಟಗಾರರ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಹೀಗಾಗಿ ಅವರ ಆಯ್ಕೆ ಖಚಿತವಾಗಬಹುದು ಎನ್ನುತ್ತಿವೆ ಮೂಲಗಳು.

ಪಂಜಾಬ್ ಮೂಲದ ವಿಕ್ರಮ್ ರಾಥೋರ್ 1996-1997 ಅವಧಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಭಾರತದ ಪರ ಆರು ಟೆಸ್ಟ್ ಮತ್ತು ಏಳು ಏಕದಿನ ಪಂದ್ಯಗಳನ್ನಾಡಿದ್ದಾರೆ. ಆದರೆ ದೇಶಿಯ ಕ್ರಿಕೆಟ್ ನಲ್ಲಿ ಉತ್ತಮ ಸಾಧನೆ ಮಾಡಿರುವ ವಿಕ್ರಮ್, 146 ಪ್ರಥಮ ದರ್ಜೆ ಪಂದ್ಯಗಳಲ್ಲಿ 11,473 ರನ್ ಗಳಿಸಿದ್ದಾರೆ. ಇವರು ಭಾರತದ ಕೋಚ್ ಆದರೆ ತಂಡದ ಪ್ರದರ್ಶನ ಉತ್ತಮ ಮಾಡಲಿ ಅಂತ ಆಶಿಸೋಣ. ಇದರ ಬಗ್ಗೆ ನೀವೇನಂತಿರಾ ಸ್ನೇಹಿತರೆ. ಕಮೆಂಟ್ ಮಾಡಿ ತಿಳಿಸಿ.