ನಮಸ್ತೆ ಸ್ನೇಹಿತರೆ, ಭಾರತ ಹಾಕಿ ತಂಡ ಒಲಂಪಿಕ್ಸ್ ನಲ್ಲಿ 41 ವರ್ಷಗಳ ನಂತರ ಜಯಭೇರಿ ಸಾಧಿಸಿದೆ. ಈ ಗೆಲುವಿನ ನಂತರ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾರತೀಯ ಹಾಕಿ ತಂಡದ ಗತವೈಭವ ಮತ್ತೆ ಮರಳಿದೆ. ಜರ್ಮನಿ ಎದುರು 5-4 ಅಂತರದ ಗೆಲುವು ದಾಖಲಿಸುವ ಮೂಲಕ ಮನ್ಪ್ರೀತ್ ಸಿಂಗ್ ನೇತೃತ್ವದ ಭಾರತೀಯ ಹಾಕಿ ತಂಡವು ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದು ಬೀಗಿದೆ. ಈ ಗೆಲುವಿಗೆ ಪಾತ್ರರಾದ ಎಲ್ಲಾ ಆಟಗಾರರಿಗೂ ಹಾಗೂ ಆಟಗಾರರನ್ನು ಟ್ರೈನ್ ಮಾಡಿದ ಕೋಚ್ ಗಳಿಗೆ ಅಭಿನಂದನೆ ತಿಳಿಸಿದ್ದಾರೆ.

ಅದೇ ರೀತಿ ನಮ್ಮ ಭಾರತದ ಪ್ರಧಾನಮಂತ್ರಿ ಈ ರೀತಿ ಹೇಳಿದ್ದಾರೆ. ಪ್ರತಿ ಭಾರತೀಯನ ಮನದಲ್ಲಿ ಅಚ್ಚಳಿಯದೇ ಉಳಿಯಬಲ್ಲ ಐತಿಹಾಸಿಕ ದಿನವಿದು. ದೇಶಕ್ಕೆ ಕಂಚಿನ ಪದಕ ಗೆದ್ದ ಭಾರತೀಯ ಪುರುಷರ ಹಾಕಿ ತಂಡಕ್ಕೆ ಅಭಿನಂದನೆಗಳು. ನಿಮ್ಮ ಈ ಸಾಧನೆ ನಮ್ಮ ಯುವಕರಲ್ಲಿ ಹೊಸ ಚೈತನ್ಯ ತುಂಬಿದೆ. ನಮ್ಮ ಹಾಕಿ ತಂಡದ ಬಗ್ಗೆ ಇಡೀ ದೇಶವೇ ಹೆಮ್ಮೆ ಪಡುತ್ತಿದೆ ಅಂತ ಹೇಳಿದ್ದಾರೆ.

1980ರ ಬಳಿಕ ಭಾರತೀಯ ಹಾಕಿ ತಂಡವು ಒಲಿಂಪಿಕ್ಸ್ನಲ್ಲಿ ಪದಕ ಗೆಲ್ಲಲು ಸಾಧ್ಯವಾಗದೆ ವಿಫಲವಾಗುತ್ತಲೇ ಸಾಗಿ ಬಂದಿದೆ. ಆದರೆ 2021 ಒಲಂಪಿಕ್ಸ್ ನಲ್ಲಿ ಮನ್ಪ್ರೀತ್ ಸಿಂಗ್ ನೇತೃತ್ವದ ಭಾರತೀಯ ಹಾಕಿ ತಂಡವು ಬಲಿಷ್ಠ ಜರ್ಮನಿ ತಂಡದ ವಿರುದ್ಧ ಬಲಿಷ್ಠ ಪೈಪೋಟಿ ನೀಡುವ ಮೂಲಕ ಬರೋಬ್ಬರಿ 41 ವರ್ಷಗಳ ನಂತರ ಪದಕವನ್ನು ಸ್ವಂತ ಮಾಡಿಕೊಂಡಿದೆ. ಕಂಚಿನ ಪದಕಕ್ಕಾಗಿ ನಡೆದ ಕಾದಾಟದಲ್ಲಿ ಶಕ್ತಿಮೀರಿ ಪ್ರದರ್ಶನ ತೋರುವ ಮೂಲಕ ಪದಕ ಗೆದ್ದಿದ್ದು ಮಾತ್ರವಲ್ಲದೇ ಭಾರತೀಯರ ಹೃದಯ ಗೆಲ್ಲುವಲ್ಲಿ ಹಾಕಿ ತಂಡ ಯಶಸ್ವಿಯಾಗಿದೆ. ಹಾಕಿ ತಂಡದ ಈ ಸಾಧನೆಯ ಬಗ್ಗೆ ನೀವೇನಂತಿರಾ ಸ್ನೇಹಿತರೆ. ಕಮೆಂಟ್ ಮಾಡಿ ತಿಳಿಸಿ.