ನಮಸ್ತೆ ಸ್ನೇಹಿತರೆ, ಮನುಷ್ಯ ಎಂದರೆ ಕ’ಷ್ಟ ಸುಖ ಎನ್ನುವುದು ಸಹಜ. ಕಷ್ಟ ಎನ್ನುವುದು ಒಬ್ಬರಿಗೆ ಬಿಟ್ಟು ಇನ್ನೊಬ್ಬರಿಗೆ ಬರುವುದಿಲ್ಲ ಎಂದರೆ ಸುಳ್ಳು. ಎಂತಹ ಗ್ರೇಟ್ ವ್ಯಕ್ತಿ ಆದರೂ ಸಹ ಕ’ಷ್ಟವನ್ನು ನೋಡಿಯೇ ಮೇಲೆ ಬಂದಿರುತ್ತಾರೆ. ಅದೇ ರೀತಿ ಬಾಲಿವುಡ್ ಖ್ಯಾತ ಯುವ ನಟನ ಜೀವನದಲ್ಲೂ ಆಗಿತ್ತು. ಈ ನಟ ಸಾಲದ ಹೊರೆಯಿಂದ ತಪ್ಪಿಸಿಕೊಳ್ಳಲು ತನ್ನ ಮನೆಯ ವಸ್ತುಗಳನ್ನೆಲ್ಲಾ ಮಾರಾಟ ಮಾಡುವ ಸಂಧರ್ಭ ಈತನಿಗೆ ಬಂದಿತ್ತು. ನಾನು ಮಲಗುತ್ತಿದ್ದ ಹಾಸಿಗೆಯನ್ನು ಕೂಡ ಮಾರಾಟ ಮಾಡಿ, ನಾನು ನೆಲದ ಮೇಲೆ ಮಲಗುತ್ತಿದ್ದೆ ಎಂದು ತಮ್ಮ ಬಾಲ್ಯದ ದಿನಗಳಲ್ಲಿ ಎದುರಿಸಿದ ಕಷ್ಟದ ದಿನಗಳು ನನ್ನನ್ನು ಕಾಡಿತ್ತು ಎಂದು ಭಾವುಕ ನುಡಿ ನುಡಿದ್ದಾರೆ ಬಾಲಿವುಡ್ ನ ಸುಪ್ರಸಿದ್ದ ಈ ಯುವ ನಟ. ಅಷ್ಟಕ್ಕೂ ಈ ನಟ ಯಾರು ಎಂದು ನೋಡೋಣ ಬನ್ನಿ.

ಈ ಸುಪ್ರಸಿದ್ಧ ಬಾಲಿವುಡ್ ನಟ ಬೇರೆ ಯಾರು ಅಲ್ಲ ಭಾರತೀಯ ಚಿತ್ರರಂಗದ ಅತಿ ಹೆಚ್ಚು ಸಂಭಾವನೆ ಪಡೆಯುವ ಯುವ ನಟರ ಸಾಲಿನಲ್ಲಿ ಮುಂಚೂಣಿಯಲ್ಲಿರುವ ಬಾಲಿವುಡ್ ನಟರಲ್ಲಿ ಟೈಗರ್ ಶ್ರಾಫ್. ಟೈಗರ್ ಶ್ರಾಫ್ ನ ತಂದೆ ಜಾಕಿ ಶ್ರಾಫ್ ಕೂಡಾ ಬಾಲಿವುಡ್ನ ಜನಪ್ರಿಯ ನಟರು. ಟೈಗರ್ ಶ್ರಾಫ್ ನ ಬಾಲಿವುಡ್ ಎಂಟ್ರಿ ಹೂವಿನ ಹಾಸಿಗೆ ಆಗಿರಲಿಲ್ಲ, ತುಂಬಾ ಕ’ಷ್ಟಪಟ್ಟು ಬೆಳೆದು ಬಂದವರು. ಟೈಗರ್ ಶ್ರಾಫ್ ನ ತಂದೆ ಜಾಕಿ ಶ್ರಾಫ್ ಇಂದಿಗೂ ಕೂಡ ಬಾಲಿವುಡ್ ನಲ್ಲಿ ಬಹಳ ಬೇಡಿಕೆಯ ನಟರಾಗಿಯೇ ಉಳಿದಿದ್ದಾರೆ. ಇದುವರೆಗೂ 13 ಭಾಷೆಗಳಲ್ಲಿ 220 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಜಾಕಿ ಶ್ರಾಫ್ ಅವರಿಗೆ ಮೊದಮೊದಲು ಆರ್ಥಿಕ ಹೊ’ಡೆತ ಉಂಟಾಗಿತ್ತು. ಅದರಿಂದ ಅವರ ಜೀವನ ದಿಕ್ಕೇ ಇಲ್ಲದಂತಾದ ಪರಿಸ್ಥಿತಿಗೆ ಜಾರಿತು. ಒಂದೆಡೆ ಸಿನಿಮಾಗಳ ವಿ’ಫಲ, ಮತ್ತೊಂದೆಡೆ ಆರ್ಥಿಕ ಕೊ’ರತೆ. ಆರ್ಥಿಕವಾಗಿ ಹೊ’ಡೆತ ತಿಂದಿದ್ದ ಇವರ ಕುಟುಂಬಕ್ಕೆ ಆ ಸಮಯದಲ್ಲಿ ಒಂದೊತ್ತಿನ ಊಟಕ್ಕೂ ಕೂಡ ತುಂಬಾ ಕ’ಷ್ಟವಾಗಿತ್ತು.

ಒಂದು ಕಡೆ ಸಾಲ ಕೊಟ್ಟವರು ಹಣಕ್ಕಾಗಿ ತುಂಬಾ ಬೇಡಿಕೆ ಇಟ್ಟಾಗ ಅನಿವಾರ್ಯವಾಗಿ ತಮ್ಮ ಮನೆಯಲ್ಲಿದ್ದ ವಸ್ತುಗಳನ್ನೆಲ್ಲ ಮಾರಿ ಸಾಲ ಕೊಟ್ಟವರಿಗೆ ಬಡ್ಡಿ ಕಟ್ಟಿದ್ದರಂತೆ ಜಾಕಿ ಶ್ರಾಫ್. ಈ ಕ’ಷ್ಟದ ದಿನಗಳಲ್ಲಿ ಟೈಗರ್ ಶ್ರಾಫ್ ನ ವಯಸ್ಸು ಬರೀ 11 ವರ್ಷ. ತನ್ನ ಕುಟುಂಬದ ಆರ್ಥಿಕ ಪರಿಸ್ಥಿತಿ ಹೊ’ಡೆತ ತಿಂದು ತಂದೆ ತಾಯಿ ಅನುಭವಿಸುತ್ತಿದ್ದ ಸಂ’ಕಷ್ಟ ನೋಡಲಾಗದೆ ತಾನು ಕೂಡ ಕೆಲಸ ಮಾಡಲು ನಿರ್ಧಾರ ಮಾಡಿದ್ದರಂತೆ ಟೈಗರ್ ಶ್ರಾಫ್. ಆದರೆ ಕೇವಲ 11 ವರ್ಷಕ್ಕೆ ಯಾವ ಕೆಲಸ ಸಿಗದೆ, ಅವಕಾಶಗಳೂ ಇಲ್ಲದೆ ನಿರಾಸೆಯಿಂದ ಸುಮ್ಮನಾದರು. ಇದರ ನಡುವೆ ಸಾಲ ಕೊಟ್ಟವರ ಒತ್ತಡ ಹೆಚ್ಚಾಗಿ ತಾವಿದ್ದ ಬಾಂದ್ರಾ ಮನೆಯನ್ನು ಮಾರಾಟ ಮಾಡಿ, ಪುಟ್ಟ ಮನೆಗೆ ಶಿಫ್ಟ್ ಆಗಿದ್ದರಂತೆ ಇವರ ಕುಟುಂಬ.

ಹೀಗೆ ತಮ್ಮ ಬಾಲ್ಯದ ಕ’ಷ್ಟದ ದಿನಗಳಲ್ಲಿ ತಾವು ಅನುಭವಿಸಿದ ನೋ’ವನ್ನು ಮೆಲುಕು ಹಾಕಿದ್ದಾರೆ ನಟ ಟೈಗರ್ ಶ್ರಾಫ್. ಬಾಲಿವುಡ್ ರಂಗದಲ್ಲಿ ಇಂದು ತನ್ನ ಸಾಹಸ, ಅದ್ಭುತ ಡ್ಯಾನ್ಸ್, ನಟನೆಯ ಮೂಲಕ ಹಿಂದಿ ಸಿನಿ ಪ್ರೇಕ್ಷಕರಿಗೆ ಅಲ್ಲದೆ ಭಾರತದ ಎಲ್ಲಾ ಪ್ರೇಕ್ಷಕರಿಗೂ ಅಚ್ಚುಮೆಚ್ಚಿನ ನಟರಾಗಿದ್ದಾರೆ. ಟೈಗರ್ ಶ್ರಾಫ್ 2014 ರಲ್ಲಿ ಹೀರೋಪಂಥಿ ಸಿನಿಮಾ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟರು. ತದ ನಂತರ ಭಾಗಿ ಸಿನಿಮಾದಲ್ಲಿ ನಟಿಸಿದರು. 2019 ರಲ್ಲಿ ತೆರೆಕಂಡ ವಾ’ರ್ ಸಿನಿಮಾದಲ್ಲಿ ಟೈಗರ್ ಶ್ರಾಫ್ ಅವರ ನಟನೆಗೇ ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಈ ಸಿನಿಮಾದಲ್ಲಿ ಹೃತಿಕ್ ರೋಶನ್ ಕೂಡ ನಟಿಸಿದ್ದರು. ಇಂದು ಬಾಲಿವುಡ್ ಬಿಗ್ ಸ್ಟಾರ್ ನಟನಾಗಿ ಮಿಂಚುತ್ತಿರುವ ಟೈಗರ್ ಶ್ರಾಫ್ ತನ್ನ ತಾಯಿಯ ಇಚ್ಚೆಯಂತೆ ಅವರಿಗೆ ಐಷಾರಾಮಿ ಮನೆಯೊಂದನ್ನು ಗಿಫ್ಟ್ ನೀಡಿದ್ದಾರಂತೆ. 2018 ರ ಫೋರ್ಬ್ಸೊ ಸೆಲೆಬ್ರಿಟಿ 100 ರ ಪಟ್ಟಿ ಯಲ್ಲಿ ಟೈಗರ್ ಶ್ರಾಫ್ ಕೂಡ ಸ್ಥಾನ ಪಡೆದಿದ್ದರು. ಟೈಗರ್ ಶ್ರಾಫ್ ನಟನೆ ಹಾಗೂ ಸ್ಟಂಟ್ ಗಳ ಬಗ್ಗೆ ನೀವೇನಂತೀರಾ ಸ್ನೇಹಿತರೆ. ಕಮೆಂಟ್ ಮಾಡಿ ತಿಳಿಸಿ.