Advertisements

ತಂದೆಯನ್ನು ಹೀಯಾಳಿಸಿದವರ ಬಾಯಿ ಮುಚ್ಚಿಸಲು ಈ ರಿಕ್ಷಾ ಚಾಲಕನ ಮಗ ಏನು ಮಾಡಿದ್ದಾನೆ ಗೊತ್ತಾ.? ಕೇಳಿದರೆ ಗ್ರೇಟ್ ಅಂತೀರಾ…

Inspiration

ನಮಸ್ತೆ ಸ್ನೇಹಿತರೆ, ಐಎಎಸ್ ಪರೀಕ್ಷೆಯನ್ನು ದುಡ್ಡಿದ್ದವರು ಮಾತ್ರ ಪಾಸ್ ಮಾಡುತ್ತಾರೆ ಎನ್ನುವುದು ಸು’ಳ್ಳು. ಏಕೆಂದರೆ ಇಲ್ಲೊಬ್ಬ ವ್ಯಕ್ತಿ, ಆಟೋ ರಿಕ್ಷಾ ಚಾಲಕನ ಮಗನಾಗಿ ಐಎಎಸ್ ಪಾಸ್ ಮಾಡಿದ್ದಾನೆ. ಅವನ ಜೀವನದ ಕಥೆಯನ್ನು ತಿಳಿಯೋಣ ಬನ್ನಿ. ಈ ಹುಡುಗನ ಜೊತೆಗೆ ಅಪ್ಪ ಅಮ್ಮ ಮತ್ತು 4 ಜನ ಅಣ್ಣ ತಂಗಿಯರು 8ಕ್ಕೆ ಸೇರಿ ಪುಟ್ಟ ಮನೆಯಲ್ಲಿ ವಾಸವಾಗಿದ್ದರು. ಇವರ ಊರು ಉತ್ತರಪ್ರದೇಶದ ವಾರಣಾಸಿ. ಇವರ ಹೆಸರು ಗೋವಿಂದ ಜಯಸ್ವಾಲ್. ಇವರು ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದಾಗ ಒಂದು ದಿನ ಸ್ನೇಹಿತನ ಜೊತೆಗೆ ಆಟ ಆಡಲು ಹೋಗಿದ್ದಾಗ, ಸ್ನೇಹಿತನ ತಂದೆ ಇವನು ರಿಕ್ಷಾ ಓಡಿಸುವವನ ಮಗ. ಇನ್ನು ಮುಂದೆ ಇವನ ಜೊತೆ ಸೇರಬೇಡ ಎಂದು ಹೇಳಿ, ಗೋವಿಂದನನ್ನು ಅ’ವಮಾನ ಮಾಡಿ ಕಳುಹಿಸಿದರು. ಇದರಿಂದ ಬೇಸ’ತ್ತ ಗೋವಿಂದರವರು ಜೀವನದಲ್ಲಿ ಏನಾದರೂ ಮಾಡಿ ಸಾಧನೆ ಮಾಡಬೇಕು ಎಂದು ಅಂದುಕೊಂಡರು. ಅದು ಕಳೆದ ಒಂದು ವರ್ಷಕ್ಕೆ ತಾಯಿ ತೀರಿ ಹೋದರು. ಮುಂದೆ ಏನಾಯ್ತು ನೋಡಿ.

Advertisements
Advertisements

ಒಂದು ಕಡೆ ಬಡತನ ಇನ್ನೊಂದು ಕಡೆ ಕ’ಷ್ಟ. ಪುಸ್ತಕ ಕೊಳ್ಳಲು ಹಣವಿಲ್ಲದ ಇವರು ಕಷ್ಟದಿಂದ ಸ್ಯೆನ್ಸ್ ಡಿಗ್ರಿ ಮುಗಿಸಿಕೊಂಡರು. ಡಿಗ್ರಿ ಮಾಡಿಕೊಂಡ ನಂತರ ಸ್ನೇಹಿತರ ಬಳಿ ಐಎಎಸ್ ಮಾಡುತ್ತೇನೆ ಎಂದು ಹೇಳಿದಾಗ, ಸ್ನೇಹಿತರು “ಕೆಲಸ ಮಾಡುವುದು ಬಿಟ್ಟು ಐಎಎಸ್ ಮಾಡುತ್ತೀಯಾ” ಎಂದು ಹೀಯಾಳಿಸಿದರು. ಇವರು ಛಲ ಬಿಡದೆ ತನ್ನ ತಂದೆಯ ಬಳಿ ಬಂದು ಐಎಎಸ್ ಮಾಡುತ್ತೇನೆ ಎಂದು ಕೇಳುತ್ತಾರೆ. ಆಗ ಅವರ ತಂದೆ ತಮ್ಮ 2 ಎಕರೆ ಜಮೀನನ್ನು 10,000 ರೂಪಾಯಿಗಳಿಗೆ ಮಾರಿ ಗೋವಿಂದರಿಗೆ ದೆಹಲಿಗೆ ಹೋಗಿ ಐಎಎಸ್ ಕೋಚಿಂಗ್ ಮಾಡು ಎನ್ನುತ್ತಾರೆ. ನಂತರ ಹಣ ಸಾಕಾಗದೆ ದೆಹಲಿಯಲ್ಲಿನ ಮಕ್ಕಳಿಗೆ ಪಾಠ ಮಾಡಿ ಅದರಿಂದ ಬಂದ ಸಂಪಾದನೆಯಿಂದ ತಮ್ಮ ಖರ್ಚುಗಳನ್ನು ನಿಭಾಯಿಸಿಕೊಳ್ಳುತ್ತಿದ್ದರು.

ದೆಹಲಿಗೆ ಹೋದ ನಂತರ ಕ’ಷ್ಟಪಟ್ಟು ಓದಿದ ಗೋವಿಂದ್ ರವರು ಮೊದಲ ಪ್ರಯತ್ನದಲ್ಲೇ ಭಾರತಕ್ಕೆ 48ನೇ ರಾಂಕ್ ಬಂದು, ತಮಗೆ ಅ’ವಮಾನ ಮಾಡಿದವರಿಗೆ ಗೆದ್ದು ತೋರಿಸಿದ್ದಾರೆ. ಅವರ ತಂದೆ ಪ್ರಪಂಚವನ್ನು ಗೆದ್ದಷ್ಟು ಆನಂದ ಪಟ್ಟಿದ್ದಾರೆ. ಈಗ ಗೋವಿಂದ ಜಯಸ್ವಾಲ್ ದಿಟ್ಟ ಮತ್ತು ನಿಷ್ಠಾವಂತ ಐಎಎಸ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತನ್ನ ತಂದೆ, ಅಕ್ಕ ಎಲ್ಲರನ್ನು ಖುಷಿಯಾಗಿ ನೋಡಿಕೊಳ್ಳುವುದರ ಜೊತೆಗೆ 10 ಅನಾಥ ಮಕ್ಕಳಿಗೆ ಇವರ ಸ್ವಂತ ಹಣದಿಂದ ವಿದ್ಯಾಭ್ಯಾಸ ಕೊಡಿಸುತ್ತಿದ್ದಾರೆ. ಇವರು ಇಡೀ ದೇಶಕ್ಕೆ ಮಾದರಿ ಆಗಿದ್ದಾರೆ. ಇವರ ಈ ಸಾಧನೆಯ ಬಗ್ಗೆ ನೀವೇನಂತಿರಾ ಸ್ನೇಹಿತರೆ. ಕಮೆಂಟ್ ಮಾಡಿ ತಿಳಿಸಿ.