Advertisements

ಜೈ ಜಗದೀಶ್ ಮೊದಲ ಹೆಂಡ್ತಿ ಮತ್ತು ಮಗಳ ರಹಸ್ಯ ಬಯಲು.. ಮದುವೆ ಮಾಡಿಸಿದ್ದು ವಿಷ್ಣುವರ್ಧನ್! ಮುಂದೇನಾಯ್ತು ಗೊತ್ತೇ..

Cinema

ಜೈ ಜಗದೀಶ್ ಅವರ ಪತ್ನಿ ವಿಜಯಲಕ್ಷ್ಮಿ ಹಾಗೂ ಅವರಿಗೆ ಮೂವರು ಹೆಣ್ಣುಮಕ್ಕಳಿದ್ದಾರೆ ಎಂದು ಎಲ್ಲರಿಗೂ ಗೊತ್ತಿರುವ ವಿಷಯ. ಆದ್ರೆ ಮೊದಲನೆ ಹೆಂಡತಿ ಹಾಗು ಮಗಳ ಬಗೆಗಿನ ರಹಸ್ಯವನ್ನು ಜೈ ಜಗದೀಶ್ ಅವರು ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಅನೇಕ ವರ್ಷಗಳಿಂದ ತನ್ನಲ್ಲೆ ಇಟ್ಟುಕೊಂಡು ಕೊರಗುತ್ತಿದ್ದ ನೋವನ್ನು ಬಿಚ್ಚಿಟ್ಟಿದ್ದಾರೆ. 1976 ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಜೈ ಜಗದೀಶ್ ಆಗಲೆ ಸಕ್ಸಸ್ ಕಂಡ ನಟ ಆ ಯಶಸ್ಸು ಬೇಕಾದಷ್ಟು ಹಣವನ್ನು ಸಂಪಾದನೆ ಮಾಡಿಕೊಟ್ಟಿತು. 1980 ರಲ್ಲಿ ಜೈ ಜಗದೀಶ್ ಅವರಿಗೆ ರೂಪ ಅನ್ನುವವರ ಜೊತೆ ಪರಿಚಯವಾಯಿತಂತೆ. ನಂತರ ಅವರಿಬ್ಬರ ಸ್ನೇಹ ಪ್ರೀತಿಯಾಗಿ ಬದಲಾಗಿ ಮದುವೆಯಾಗಲು ನಿರ್ಧಾರ ಮಾಡಿದ್ದರು.

[widget id=”custom_html-5″]

Advertisements
Advertisements

ಈ ವಿಷಯ ಮನೆಯವರಿಗೆ ಹೇಳಿದರೆ ಎಲ್ಲಿ ನಮ್ಮಿಬ್ಬರನ್ನು ದೂರ ಮಾಡ್ತಾರೆ ಎಂದು ಭಾವಿಸಿ ಯಾರಿಗೂ ಹೇಳದೆ ವಿಷ್ಣುವರ್ಧನ್ ಅವರ ಸಹಾಯ ಪಡೆದು ಮದುವೆಯಾದ ಜೈ ಜಗದೀಶ್ ರವರು ಒಂದಷ್ಟು ದಿನ ವಿಷ್ಣುವರ್ಧನ್ ಅವರ ಮನೆಯಲ್ಲೆ ಇದ್ದರಂತೆ. 1982 ರಲ್ಲಿ ನನ್ನ ಮಗಳು ಹುಟ್ಟಿದಳು. ಆರು ವರ್ಷದ ನಂತರ ನನಗೂ ರೂಪಾಗು ಮನಸ್ತಾಪ ಬಂತು ಆನಂತರ ಮತ್ತೆ ನಾವು ಭೇಟಿಯಾಗಲಿಲ್ಲ. ನಾನು ಮನೆ ಬಿಟ್ಟು ಹೋಟೆಲ್ ನಲ್ಲಿ ರೂಮ್ ಮಾಡಿಕೊಂಡು ಇದ್ದೆ. ಸುಮಾರು ಎಂಟು ವರ್ಷಗಳು ಹೋಟೆಲ್ ನಲ್ಲಿಯೆ ಇದ್ದೆ. ಮಗಳಿಗಾಗಿ ನಾನು ರೂಪಾಗೆ ವಿಚ್ಛೇದನ ಕೂಡ ಕೊಟ್ಟಿರಲಿಲ್ಲ. ಆದರೆ ಒಂದು ದಿನ ವಿಚ್ಛೇದನ ಬೇಕು ಅಂತ ಕೇಳಿದಳು. ನಾನು ಪೇಪರ್ ಗೆ ಸಹಿ ಮಾಡಿಕೊಟ್ಟೆ. ನಂತರ ನನ್ನ ಮಗಳನ್ನು ಕರೆದುಕೊಂಡು ಹೊರಟು ಹೋದಳು ಎಂದು ಬಿಕ್ಕಿ ಬಿಕ್ಕಿ ಅತ್ತರು ಜೈ ಜಗದೀಶ್ ಅವರು ಎಷ್ಟೋ ವರ್ಷಗಳಾದ ಮೇಲೆ ನನ್ನ ಮಗಳನ್ನು ಮತ್ತೆ ಬೇಟಿ ಮಾಡಿದೆ.

[widget id=”custom_html-5″]

ನಂತರ ಆಕೆಗೆ ಮದುವೆ ಮಾಡಿದ್ವಿ ಆರು ವರ್ಷ ಗಂಡನ ಜೊತೆ ಚೆನ್ನಾಗಿಯೆ ಇದ್ದಳು ಆದರೆ ಪ್ರತಿ ಬಾರಿ ಅವಳಿಗೆ ನನ್ನ ಅನುಪಸ್ಥಿತಿ ಕಾಡುತ್ತಿತ್ತು ಆರು ವರ್ಷಗಳಾದರೂ ಮಕ್ಕಳಾಗಲಿಲ್ಲ ಯಾಕೆ ಅಂತ ಒಂದು ದಿನ ವಿಚಾರಿಸಿದಾಗ ನನ್ನ ಮಗಳು ಹೇಳಿದ್ದು ಗಂಡನಿಗೆ ಮಗು ಬೇಡವಂತೆ ಎಂದು ಅಲ್ಲಿಗೆ ಮಗಳ ಮದುವೆ ಕೂಡ ಮುರಿದುಬಿತ್ತು. ನನ್ನ ಮಗಳಿಗೆ ಒಂದು ಕಡೆ ತಂದೆಯ ಆಸರೆ ಇರಲಿಲ್ಲ ಇನ್ನೊಂದು ಕಡೆ ಗಂಡ ಇಲ್ಲಾ, ನನ್ನ ಮತ್ತು ರೂಪಾಳ ತಪ್ಪಿನಿಂದ ನನ್ನ ಮಗಳು ಕಷ್ಟದಲ್ಲಿ ಬಳಲುವಂತೆ ಆಯ್ತು. ಈಗ ತಾಯಿ ಜೊತೆ ಇದ್ದಾಳೆ . ಅವಳ ಆದಷ್ಟು ಬೇಗ ಲೈಫ್ ನಲ್ಲಿ ಸೆಟಲ್ ಆಗಲಿ ಎಂದು ಪ್ರಾರ್ಥಿಸುತ್ತೇನೆ. ಹೀಗೆ ಎಷ್ಟೋ ವರ್ಷಗಳಿಂದ ಹಿಡಿದಿಟ್ಟುಕೊಂಡಿದ್ದ ತಮ್ಮ ನೋವನ್ನು ಹೊರಹಾಕಿದ್ದಾರೆ ಜೈಜಗದೀಶ್ ರವರು

[widget id=”custom_html-5″]