ನಮಸ್ಕಾರ ವೀಕ್ಷಕರೇ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಕೊನೆಯ ಸಿನಿಮಾ ಹಾಗೂ ಅಪ್ಪು ಅವರ ಕನಸಿನ ಸಿನಿಮಾವಾಗಿತ್ತು ಜೇಮ್ಸ್ ಸಿನಿಮಾ, ಇದೀಗ ಜೇಮ್ಸ್ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು ಸೋಲ್ಜರ್ ಪಾತ್ರದಲ್ಲಿ ಪುನೀತ್ ರಾಜಕುಮಾರ್ ಅವರು ಖಡಕ್ ಆಗಿ ಮಿಂಚಿದ್ದಾರೆ. ಈ ಟೀಸರ ನೋಡಿದ ಅಭಿ ಮಾನಿಗಳು ಸಹ ಸಖತ್ ಥ್ರಿಲ್ ಆಗಿದ್ದಾರೆ ಜೊತೆಗೆ ನಗುವಿನ ಸರದಾರನನ್ನು ಮಿಸ್ ಮಾಡಿ ಕೊಳ್ಳುತ್ತಿದ್ದಾರೆ. ಇದೀಗ ಈ ಜೇಮ್ಸ್ ಟೀಸರ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು ಇಪ್ಪತ್ತು ನಾಲ್ಕು ಗಂಟೆಗಳಲ್ಲಿ ಒಂದು ಕೋಟಿ ಗಿಂತ ಹೆಚ್ಚು ವೀಕ್ಷಣೆ ಪಡೆದುಕೊಂಡು ಎಲ್ಲ ದಾಖಲೆಗಳನ್ನು ಬ್ರೇಕ್ ಮಾಡಿ ನಂಬರ್ ಒನ್ ಟ್ರೆಂಡಿಂಗ್ ನಲ್ಲಿದೆ ಜೇಮ್ಸ್ ಟೀಸರ್ ಹಾಗೂ ಸಾಕಷ್ಟು ನಟ-ನಟಿಯರು ಕೂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಪುನೀತ್ ರಾಜಕುಮಾರ್ ಅವರ ಅಭಿನಯದ ಜೇಮ್ಸ್ ಸಿನಿಮಾದ ಟೀಸರ್ ಬಗ್ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಹೇಗೆ ಪ್ರತಿಕ್ರಿಯಿಸಿದ್ದಾರೆ ನೋಡೋಣ ಬನ್ನಿ ಜೇಮ್ಸ್ ಚಿತ್ರದ ಪವರ್ ಫುಲ್ ಟೀಸರ್ ಯೂಟ್ಯೂಬ್ ನಲ್ಲಿ ಹೊಸ ದಾಖಲೆಗಳನ್ನು ಬರೆಯಲು ಮುನ್ನುಗ್ಗುತ್ತಿದೆ . ಈ ಚಿತ್ರದ ಟೀಸರ್ ಕೇವಲ ಯೂಟ್ಯೂಬ್ ಮಾತ್ರವಲ್ಲದೆ.. ಕರ್ನಾಟಕದಲ್ಲಿರುವ ಇನ್ನೂರ ಎಂಬತ್ತು ಚಿತ್ರ ಮಂದಿರಗಳು ಹಾಗೂ ಸಾವಿರದ ಇನ್ನೂರ ಮಲ್ಟಿಪ್ಲೆಕ್ಸ್ ಗಳಲ್ಲಿ ಕೂಡ ಪ್ರದರ್ಶನ ಆಗುತ್ತಿದೆ. ಇಂದಿನಿಂದ ಆರಂಭವಾಗಿ ಮಾರ್ಚ್ ಹದಿನೇಳರ ವರೆಗೂ ಜೇಮ್ಸ್ ಚಿತ್ರ ರಿಲೀಸ್ ಆಗುವವರೆಗೂ ಕೂಡ ಚಿತ್ರದ ಟೀಸರ್ ಪ್ರಸಾರವಾಗಲಿದೆ.

ಈ ಚಿತ್ರದ ಟೀಸರ್ ಅನ್ನು ಎಲ್ಲಾ ನಟ ನಟಿಯರು ಹಾಗೂ ಕಲಾವಿದರು ಅವರ ಪುನೀತ್ ರಾಜಕುಮಾರ್ ಅಭಿಮಾನಿಗಳು ಸಹ ಸೋಶಿಯಲ್ ಮೀಡಿಯಾದಲ್ಲಿ ಹಂಚಿ ಕೊಳ್ಳುತ್ತಿದ್ದಾರೆ. ಇನ್ನು ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳು ಸಹ ಅವರ ಫ್ಯಾನ್ಸ್ ಪೇಜುಗಳಲ್ಲಿ ಜೇಮ್ಸ್ ಟೀಸರ್ ನ್ನು ಶೇರ್ ಮಾಡಿ ಕೊಂಡಿದ್ದಾರೆ. ಅದೇ ರೀತಿ ನಟ ದರ್ಶನ್ ಅವರು ಕೂಡ ಈಗಾಗಲೇ ಈ ಟೀಸರ್ ನೋಡಿದ್ದು ಚಿತ್ರದ ಮೇಕಿಂಗ್ ಅನ್ನು ಇಷ್ಟಪಟ್ಟಿದ್ದಾರೆ. ಇದೊಂದು ನೆಕ್ಸ್ಟ್ ಲೇವೆಲ್ ಕನ್ನಡದ ಸಿನಿಮಾ ಅಂತ ಹೇಳಿ ಪುನೀತ್ ರಾಜಕುಮಾರ್ ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎನ್ನುವ ವಿಚಾರ ಅಭಿಮಾನಿಗಳ ವಲಯದಿಂದ ಕೇಳಿಬರುತ್ತಿದೆ.