Advertisements

ಭೀಮ ಸೇರಿದಂತೆ ನಾಲ್ಕು ಜನ ಪಾಂಡವರೂ ಕೂಡ ಜಯದ್ರಥನನ್ನ ಸೋಲಿಸಲಾಗಲಿಲ್ಲ ಏಕೆ ! ಕೇವಲ ಒಂದು ದಿನಕೋಸ್ಕರ ಪಡೆದಿದ್ದ ಆ ಶಕ್ತಿಯಾದರೂ ಏನು.?

Kannada News

ನಮಸ್ತೇ ಸ್ನೇಹಿತರೆ, ಹಿಂದುಗಳ ಮಹಾನ್ ಕಾವ್ಯಗಳಲ್ಲಿ ಒಂದಾಗಿರುವ ಮಹಾಭಾರತ ಸಾಗರವಿದ್ದಂತೆ. ಮಹಾಭಾರತದ ಕತೆಗಳ ಬಗ್ಗೆ ತಿಳಿದಷ್ಟು ಮತ್ತಷ್ಟು ಕತೆಗಳು ಪ್ರಶ್ನೆಗಳು ನಮ್ಮ ಮುಂದೆ ಬರುತ್ತವೆ. ಅದರಲ್ಲಿ ಒಂದು ಬಾಲಕನಾಗಿದ್ದರೂ ಮಹಾಪರಾಕ್ರಮ ತೋರಿದ ವೀರ ಅಭಿಮನ್ಯುವಿನ ಕತೆ. ಇನ್ನು ಅಭಿಮನ್ಯವಿನ ಬಗ್ಗೆ ತಿಳಿಯುವ ಸಮಯದಲ್ಲಿ ಜಯದ್ರಥನ ಕತೆಯನ್ನು ಕೂಡ ತಿಳಿಯಬೇಕಾಗುತ್ತೆ. ಒಂದು ರೀತಿಯಲ್ಲಿ ಅಭಿಮನ್ಯುವಿನ ವ’ಧೆಗೆ ಇವನೇ ಕಾರಣ ಹೌದು. ದುರ್ಯೋಧನನ ತಂಗಿ ದುಶ್ಶಲೆಯ ಪತಿ. ಸಿಂಧೂ ದೇಶದ ರಾಜನಾಗಿದ್ದರಿಂದ ಸೈಂಧವನೆಂಬ ಮತ್ತೊಂದು ಹೆಸರು ಜಯದ್ರಥನಿಗಿದೆ. ಪಾಂಡವರು ವನವಾಸದಲ್ಲಿದ್ದಾಗ ದ್ರೌಪದಿಯನ್ನ ಅ’ಪಹರಿಸಲು ಹೋಗಿ ಪಂಚ ಪಾಂಡವರಿಂದ ಅವಮಾನಿತನಾಗಿರುತ್ತಾನೆ.

ಇನ್ನು ಕುರುಕ್ಷೇತ್ರದ ಯುದ್ಧದಲ್ಲಿ ಅಭಿಮನ್ಯುವನ್ನ ವ’ಧೆ ಮಾಡಲೆಂದು ದುರ್ಯೋಧನ ಗುರು ದ್ರೋಣಾಚಾರ್ಯರೊಂದಿಗೆ ಸಮಾಲೋಚನೆ ಮಾಡಲು ದ್ರೋಣರು ಚಕ್ರವ್ಯೂಹ ರಚಿಸುವ ಬಗ್ಗೆ ಸಲಹೆ ನೀಡುತ್ತಾರೆ. ಹಾಗೂ ಸಂಶಪ್ತಕರೊಡನೆ ಯು’ದ್ಧ ಮಾಡಲು ಬೇರೆ ದಿಕ್ಕಿಗೆ ಹೋಗುವ ಹಾಗೆ ಅರ್ಜುನನಿಗೆ ದಾರಿ ತಪ್ಪಿಸುತ್ತಾರೆ. ಇನ್ನು ಚಕ್ರವ್ಯೂಹವನ್ನ ಭೇದಿಸುವ ಹಾಗೂ ಹೊರ ಬರುವ ಬಗ್ಗೆ ಗೊತ್ತಿದ್ದವರು ಅರ್ಜುನ, ಕೃಷ್ಣ, ಪ್ರದ್ಯುಮ್ನ ಹಾಗೂ ದ್ರೋಣರಿಗೆ ಮಾತ್ರ ಎಂದು ಹೇಳಲಾಗಿದೆ. ಅಭಿಮನ್ಯುವಿಗೆ ಕೇವಲ ಚಕ್ರವ್ಯೂಹ ಭೇದಿಸುವ ಬಗ್ಗೆ ಗೊತ್ತಿತ್ತೇ ಹೊರತು ಅದರಿಂದ ಹೊರಬರುವ ಬಗ್ಗೆ ಗೊತ್ತಿರುವುದಿಲ್ಲ. ದುರ್ಯೋಧನ, ಕರ್ಣ, ದ್ರೋಣರು, ಕೃಪಾಚಾರ್ಯ,ಅಶ್ವತ್ಥಾಮ, ಶಕುನಿ ಹಾಗೂ ದುಶ್ಯಾಸನ ಈ ಎಲ್ಲಾ ಮಹಾರಥಿಗಳು ಚಕ್ರವ್ಯೂಹದ ಮಧ್ಯದಲ್ಲಿರುತ್ತಾರೆ.

ಇನ್ನು ಪಾಂಡವರನ್ನ ಒಂದು ದಿನ ಕಟ್ಟಿ ಹಾಕುವ ಸಲುವಾಗಿ ಹಾಗೂ ದ್ರೌಪದಿಯ ಅಪಹರಣದ ಸಮಯದಲ್ಲಿ ತನಗಾದ ಅವಮಾನಕ್ಕೆ ಪ್ರತಿಕಾರ ತೀರಿಸಿಕೊಳ್ಳುವ ಸಲುವಾಗಿ ಭಗವಂತ ಶಿವನ ತಪಸ್ಸು ಮಾಡಿದ್ದ ಜಯದ್ರಥನು ಒಂದು ದಿನದ ಮಟ್ಟಿಗೆ ಅರ್ಜುನನ್ನ ಬಿಟ್ಟು ಉಳಿದು ಪಾಂಡವರನ್ನ ಸೋಲಿಸುವ ಶಕ್ತಿಯನ್ನ ವರವಾಗಿ ಪಡೆದಿರುತ್ತಾನೆ. ಹಾಗಾಗಿ ಜಯದ್ರಥನನ್ನ ಚಕ್ರವ್ಯೂಹದ ಮುಂಭಾಗದಲ್ಲಿ ರಕ್ಷಣೆಗಾಗಿ ನಿಲ್ಲಿಸಿರುತ್ತಾರೆ. ಇನ್ನು ಚಕ್ರವ್ಯೂಹ ಭೇದಿಸದಿದ್ದರೆ ಪಾಂಡವರ ಅಪಾರ ಸೈನ್ಯ ಒಂದೇ ದಿನ ನಾ’ಶವಾಗಿಬಿಡುತಿತ್ತು. ಹಾಗಾಗಿ ಪರಿಸ್ಥಿತಿಯನ್ನ ಮನಗಂಡ ಅಭಿಮನ್ಯು ನನಗೆ ಚಕ್ರವ್ಯೂಹ ಭೇದಿಸಲು ತನ್ನ ದೊಡ್ಡಪ್ಪ ಯುಧಿಷ್ಠಿರನಲ್ಲಿ ಅನುಮತಿ ಪಡೆದು ಹಸಿದ ಹೆಬ್ಬುಲಿಯಂತೆ ಘರ್ಜಿಸುತ್ತಾ ಚಕ್ರವ್ಯೂಹದ ಒಳನುಗ್ಗುತ್ತಾನೆ.

ಇನ್ನು ಅಭಿಮನ್ಯುವಿನ ರಕ್ಷಣೆಯ ಸಲುವಾಗಿ ಯುಧಿಷ್ಠಿರ, ಭೀಮ, ನಕುಲ, ಸಹದೇವ ಹಿಂದೆಯೇ ಹೋಗುತ್ತಾರೆ. ಆದರೆ ಮೊದಲೇ ಪ್ಲಾನ್ ಮಾಡಿದಂತೆ ಅಭಿಮನ್ಯುವನ್ನ ಒಳಹೋಗಲು ಬಿಟ್ಟು ತನ್ನೆದುರಿಗೆ ಬಂದ ಪಾಂಡವರನ್ನ ಜಯದ್ರಥ ತಡೆಯುತ್ತಾನೆ. ಮಹಾಪರಾಕ್ರಮಿ ಭೀಮ ಸೇರಿದಂತೆ ನಾಲ್ಕು ಜನ ಪಾಂಡವರು ಎಷ್ಟೇ ಪ್ರಯತ್ನ ಪಟ್ಟರೂ ಜಯದ್ರಥನನ್ನ ಸೋಲಿಸಿ ಅಭಿಮನ್ಯುವಿನ ರಕ್ಷಣೆಗಾಗಿ ಒಳಹೋಗಲು ಆಗುವುದಿಲ್ಲ. ಜಯದ್ರಥ ಮಹಾದೇವನಿಂದ ಪಡೆದಿದ್ದ ವರವೇ ಇದಕ್ಕೆ ಕಾರಣವಾಗಿರುತ್ತದೆ. ಇನ್ನು ಚಕ್ರವ್ಯೂಹ ಭೇದಿಸುತ್ತಾ ಒಳಹೋದ ಅಭಿಮನ್ಯುವಿನ ಮೇಲೆ ದ್ರೋಣ, ಕೃಪಾ, ಕರ್ಣ ಸೇರಿದಂತೆ ಮಹಾರಥಿಗಳೆಲ್ಲಾ ಒಂದೇ ಬಾರಿಗೆ ಆ ವೀರ ಬಾಲಕನ ಮೇಲೆ ಮುಗಿಬೀಳುತ್ತಾರೆ.

ಈ ವೇಳೆ ಅಭಿಮನ್ಯುವಿನ ಪರಾಕ್ರಮಕ್ಕೆ ಸಾಟಿಯೇ ಇರಲಿಲ್ಲ. ಎಲ್ಲಾ ಮಹಾರಥಿಗಳು ಸೇರಿದರೂ ಅಭಿಯಾಮನ್ಯುವನ್ನ ಎದುರಿಸಲಾಗಲಿಲ್ಲ. ದ್ರೋಣ, ಕರ್ಣರಂತಹ ಮಹಾಯೋಧರನ್ನೇ ಅಭಿಮನ್ಯು ಹಿಮ್ಮೆಟ್ಟಿಸುತ್ತಾನೆ. ಕೌರವರ ಚತುರಂಗಬಲವನ್ನೇ ನಾ’ಶಮಾಡುತ್ತಾ ಒಂಟಿಯಾಗಿ ಧೃತಿಗೆಡದೆ ಘರ್ಜಿಸುತ್ತಾ ಹೋರಾಟ ನಡೆಸುತ್ತಾನೆ. ಇನ್ನು ಇದೆ ವೇಳೆ ದುಶ್ಯಾಸನ ತನ್ನ ಅಸ್ತ್ರದಿಂದ ಅಭಿಮನ್ಯುವಿನ ಎಚ್ಚರ ತಪ್ಪಿಸುತ್ತಾನೆ ಆದರೂ ಸಾವರಿಸಿಕೊಂಡು ಎದ್ದ ಅಭಿಮನ್ಯು ಕೌರವ ಸೇನೆ ದಿಕ್ಕಾಪಾಲಾಗಿ ಓಡುವಂತೆ ಪರಾಕ್ರಮ ಮೆರೆಯುತ್ತಾನೆ. ಇನ್ನು ದುಶ್ಯಾಸನನ ಪುತ್ರನೊಡನೆ ಯು’ದ್ಧ ಮಾಡುತ್ತಿದ್ದಾಗ ಅಭಿಮನ್ಯುವಿನ ತಲೆಯ ಮೇಲೆ ಮೋಸದಿಂದ ದುಶ್ಯಾಸನ ಮಗ ಗ’ದೆಯಿಂದ ಹೊ’ಡೆಯುತ್ತಾನೆ. ಮೋಸದಿಂದ ಅಧರ್ಮ ಯು’ದ್ಧ ಮಾಡಿದ ದುಶ್ಯಾಸನನ ಪುತ್ರನನ್ನ ಅಭಿಮನ್ಯು ಸಂ’ಹಾರ ಮಾಡುತ್ತಾನೆ.

ರಣಾಂಗಣದಲ್ಲಿ ಏಕೈಕ ವೀರನಾಗಿ ಅಬ್ಬರಿಸಿದ ಅಭಿಮನ್ಯು ದುರ್ಯೋಧನ ಮಗ ಲಕ್ಷ್ಮಣ ಸೇರಿದಂತೆ ಬೃಹದ್ಬಲನೆಂಬ ರಾಜ ಸೇರಿ ಅನೇಕರ ಸಂ’ಹಾರ ಮಾಡುತ್ತಾನೆ. ದುರ್ಯೋಧನನ್ನ ರಕ್ಷಿಸಲು ಬಂದ ದ್ರೋಣ, ಕೃಪಾ, ಕರ್ಣ, ಅಶ್ವತ್ಥಾಮ, ಶಲ್ಯ, ಶಕುನಿಯಂತಹ ವೀರಾಧಿವೀರರನ್ನ ತನ್ನ ಚಾಪವಿದ್ಯಾಬಲದಿಂದ ಮೂರ್ಛೆ ಹೋಗುವಂತೆ ಮಾಡುತ್ತಾನೆ. ಇನ್ನು ಅಭಿಮನ್ಯುವನ್ನ ತಡೆಯಲು ಅಸಾಧ್ಯ ಎನಿಸಿದಾಗ ಸೇನಾಧಿಪತಿಯಾಗಿದ್ದ ದ್ರೋಣಾಚಾರ್ಯರ ಆಜ್ಞೆಯ ಮೇರೆಗೆ ಹಿಂದೆಯಿಂದ ಬಂದ ಕರ್ಣ ಅಭಿಮನ್ಯುವಿನ ಸಾರಥಿಗೆ ಪರಲೋಕದ ದಾರಿ ತೋರಿಸಿ ಬಿಲ್ಲನ್ನ ‘ಕ’ತ್ತ’ರಿಸುತ್ತಾನೆ. ಮುಂದಿನಿಂದ ದ್ರೋಣರು ಅಭಿಮನ್ಯುವಿನ ರಥ ಹಾಗೂ ಕುದುರೆಗಳನ್ನ ತುಂಡ’ರಿಸುತ್ತಾರೆ. ಆದರೂ ಧೃತಿಗೆಡದ ಅಭಿಮನ್ಯು ತನ್ನ ರಥದ ಚಕ್ರದಿಂದ ಯು’ದ್ಧ ಮಾಡುತ್ತಾನೆ. ಕೊನೆಗೆ ಕೌರವರು ಮಾಡಿದ ಅಧರ್ಮದ ಯು’ದ್ಧ ಹಾಗು ಮೋಸದಿಂದಾಗಿ ವೀರ ಅಭಿಮನ್ಯು ವೀರಸ್ವರ್ಗವನ್ನ ಪಡೆಯುತ್ತಾನೆ